ರಾಮನಗರ: ಕಾಂಗ್ರೆಸ್ ಸೇರ್ಪಡೆ ಆಗುತ್ತಾರೆ ಎಂಬ ಕುರಿತು ಹಿರಿಯ ಸಚಿವ ವಿ. ಸೋಮಣ್ಣ (V. Somanna) ಮತ್ತೆ ಪ್ರತಿಕ್ರಿಯೆ ನೀಡಿದ್ದು, ನನ್ನ ಮನಸ್ಸು-ಆರೋಗ್ಯ ಸರಿಯಿಲ್ಲ ಎಂದಿದ್ದಾರೆ.
ವೈಯಕ್ತಿಕವಾಗಿ, ನನ್ನ ಅನುಭವದಲ್ಲಿ ಕೆಲವೊಂದು ಕಡೆ ನೋವು ಇರುತ್ತೆ. ಅದೆಲ್ಲವನ್ನೂ ಹೇಳಿಕೊಳ್ಳಲು ಆಗುತ್ತಾ..? ನಾನು ಓಪನ್ ಆಗಿ ಮಾತಾಡೋ ವ್ಯಕ್ತಿ. ನಾನು ಆ ರೀತಿ ಯಾವುದೇ ತೀರ್ಮಾನ ಮಾಡಿಲ್ಲ. ನನ್ಮ ಮನಸು ಮತ್ತು ಆರೋಗ್ಯ ಎರಡೂ ಸರಿ ಇಲ್ಲ ಎಂದರು.
ಈ ಕುರಿತು ಪ್ರತಿಕ್ರಿಯಿಸಿದ ಸಂಸದ ಡಿ.ಕೆ. ಸುರೇಶ್, ವಿ.ಸೋಮಣ್ಣ ಕನಕಪುರ ತಾಲೂಕಿನ ಮಗ. ತಾಲೂಕಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಪಕ್ಷ ಸೇರ್ಪಡೆ ವಿಚಾರ ನನಗೆ ಗೊತ್ತಿಲ್ಲ. ನಾವು ಅವರನ್ನ ನಮ್ಮ ಕುಟುಂಬದ ಸದಸ್ಯ ಅಂತ ತಿಳ್ಕೊಂಡಿದ್ದೀವಿ. ನಾವೆಲ್ಲ ಒಂದೇ ಕುಟುಂಬದ, ಒಂದೇ ತಾಲೂಕಿನ ಮಕ್ಕಳು. ಸೋಮಣ್ಣ ಹಾಗೂ ನಾವು ಅಣ್ಣತಮ್ಮಂದಿರಿಗಿಂತ ಹೆಚ್ಚು. ಕಾಂಗ್ರೆಸ್ ಗೆ ಯಾರೇ ಬಂದ್ರೂ ಸ್ವಾಗತ ಎಂದರು.
ಇದನ್ನೂ ಓದಿ: Lokayukta Raid : ಮಧ್ಯಂತರ ಜಾಮೀನು ಸಿಕ್ಕಿದ ಬೆನ್ನಲ್ಲೇ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪ್ರತ್ಯಕ್ಷ!
ಮಾ.9ರಂದು ಮಿನಿ ಬಂದ್ ಕರೆ ವಿಚಾರದಲ್ಲಿ ಪ್ರತಿಕ್ರಿಯಿಸಿ, ಭ್ರಷ್ಟಾಚಾರದ ವಿರುದ್ಧ ಸಾರ್ವಜನಿಕರ ಜಾಗೃತಿಗೆ ಬಂದ್ ಕರೆ ನೀಡಿದ್ದೇವೆ. ಬಿಜೆಪಿಯ 40% ಕಮಿಷನ್ ಹಾಗೂ ಮಾಡಾಳ್ ವಿರೋಪಾಕ್ಷಪ್ಪ ಪ್ರಕರಣದ ಬಗ್ಗೆ ಜನಜಾಗೃತಿ ಮೂಡಿಸುತ್ತೇವೆ. ಇದರ ನೇರ ಹೊಣೆಯನ್ನ ಸಿಎಂ ಬೊಮ್ಮಾಯಿ ಹೊರಬೇಕು.
ನಷ್ಟದಲ್ಲಿರೋ ಸಂಸ್ಥೆಯಲ್ಲಿ ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಇದಕ್ಕೆ ಬೆಂಬಲವಾಗಿ ನಿಂತಿರೋದು ಸಿಎಂ ಹಾಗೂ ಕೇಂದ್ರ ಬಿಜೆಪಿ ವರಿಷ್ಠರು. ಕೇಂದ್ರ ವರಿಷ್ಠರು ಈ ಬಗ್ಗೆ ತುಟಿಬಿಚ್ಚುತ್ತಿಲ್ಲ ಎಂದಿದ್ದಾರೆ.