Site icon Vistara News

Voter ID : ನಕಲಿ Voter ID ತಯಾರಿ ಆರೋಪ; ಸಚಿವ ಬೈರತಿ ಸುರೇಶ್‌ ಆಪ್ತ ಸೇರಿ ಮೂವರು ವಶಕ್ಕೆ

Mounesg kumar and Byrati Suresh

ಬೆಂಗಳೂರು: ನಕಲಿ ಮತದಾರರ ಗುರುತಿನ ಚೀಟಿ (Fake Voter ID), ಆಧಾರ್‌ ಕಾರ್ಡ್‌, ಡ್ರೈವಿಂಗ್‌ ಲೈಸೆನ್ಸ್‌ಗಳನ್ನು ಮಾಡಿಕೊಡುತ್ತಿರುವ ಆರೋಪದಲ್ಲಿ ಸಚಿವ ಬೈರತಿ ಸುರೇಶ್‌ (Minister Byrati Suresh) ಆಪ್ತ ಸೇರಿದಂತೆ ಮೂವರ ವಿರುದ್ಧ ಕೇಸ್‌ ದಾಖಲಾಗಿದೆ.

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಕಲಿ ವೋಟರ್‌ ಐಡಿ ತಯಾರಿ ಭಾರಿ ಮಹತ್ವವನ್ನು ಪಡೆದುಕೊಂಡಿದೆ. ಕಳೆದ ವಿಧಾನಸಭಾ ಚುನಾವಣೆಯ ವೇಳೆ ಚಿಲುಮೆ ಸಂಸ್ಥೆ ಹೆಸರಿನಲ್ಲಿ ವೋಟರ್‌ ಐಡಿಯಿಂದ ಹೆಸರುಗಳನ್ನು ಡಿಲೀಟ್‌ ಮಾಡುವ ಆರೋಪ ಕೇಳಿಬಂದಿತ್ತು. ಈಗ ನಕಲಿ ವೋಟರ್‌ ಐಡಿ ಆರೋಪ ಕೇಳಿಬಂದಿದೆ.

ಬೈರತಿ ಸುರೇಶ್‌ ಜತೆ ಮೌನೇಶ್‌ ಕುಮಾರ್

ಕಾಸು ಕೊಟ್ರೆ ವೋಟರ್ ಐಡಿ, ಆಧಾರ್, ಡಿಎಲ್ ಮಾಡಿಕೊಡುತ್ತಿದ್ದ ಆರೋಪದಲ್ಲಿ ಸಿಸಿಬಿ ಪೊಲೀಸರು ಮೌನೇಶ್‌ ಕುಮಾರ್‌, ಭಗತ್‌ ಮತ್ತು ರಾಘವೇಂದ್ರ ಎಂಬವರನ್ನು ಬಂಧಿಸಿದ್ದಾರೆ. ಇವರಲ್ಲಿ ಮೌನೇಶ್‌ ಸಚಿವ ಬೈರತಿ ಸುರೇಶ್‌ ಅವರಿಗೆ ಆಪ್ತನಾಗಿದ್ದಾನೆ ಎನ್ನಲಾಗಿದೆ.

ಹೆಬ್ಬಾಳದ ಕನಕ ನಗರದಲ್ಲಿರುವ ಎಂಎಸ್ಎಲ್ ಟೆಕ್ನೊ ಸಲ್ಯೂಷನ್ ಕಂಪನಿ ಮೇಲೆ ಸಿಸಿಬಿ ದಾಳಿ ಮಾಡಿದೆ. ಇಲ್ಲಿ ಯಾವುದೇ ಕ್ಷೇತ್ರದ ವೋಟರ್ ಐಡಿ, ಯಾವುದೇ ಆಧಾರ್ ಕೇಳಿದರೂ ಮಾಡಿಕೊಡುತ್ತಾರೆ ಎಂಬ ಆರೋಪವಿತ್ತು. ಈ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿದ ಸಿಸಿಬಿ ಮೂವರನ್ನು ಬಂಧಿಸಿದೆ. ಈ ಬಗ್ಗೆ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಇವರು ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ಕಾನೂನು ಬಾಹಿರ ಕೃತ್ಯದಲ್ಲಿ ಭಾಗಿಯಾಗುವುದಕ್ಕೆ ಸಹಕಾರ ನೀಡಿದ್ದಾರೆ ಎಂಬ ಆರೋಪವಿದೆ. ಒರಿಜಿನಲ್ ಐಡಿ ಕಾರ್ಡ್ ಎಂದು ಹಣ ಪಡೆದು ಸರ್ಕಾರ ಮತ್ತು ಸಾರ್ವಜನಿಕರಿಗೆ ಮೋಸ ಮಾಡುತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Basavaraj Bommai : ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

ಕೇವಲ ಕೇಸು ದಾಖಲು, ಅರೆಸ್ಟ್‌ ಮಾಡಿಲ್ಲ!

ಸಿಸಿಬಿ ಪೊಲೀಸರು ಎಂಎಸ್ಎಲ್ ಟೆಕ್ನೊ ಸಲ್ಯೂಷನ್ ಕಂಪನಿ ಮೇಲೆ ದಾಳಿ ಮಾಡಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಬಳಸುತಿದ್ದ ಕಂಪ್ಯೂಟರ್ ಸೇರಿ ಹಲವಾರು ವಸ್ತುಗಳು ಜಪ್ತಿ ಮಾಡಿದ್ದಾರೆ. ಆದರೆ ಆರೋಪಿಗಳನ್ನು ಇನ್ನೂ ಬಂಧನ ಮಾಡಿಲ್ಲ ಎನ್ನಲಾಗಿದೆ.

ಸಚಿವರ ಕೃಪೆಯಿಂದ ಅರೆಸ್ಟ್ ಮಾಡಿಲ್ಲ ಎಂಬ ಅರೋಪ ಕೇಳಿಬಂದಿದ್ದು, ಕೇವಲ ನೋಟಿಸ್ ನೀಡಿ ವಿಚಾರಣೆ ನಡೆಸುತ್ತಿರು ಆರೋಪ ಎದುರಾಗಿದೆ. ಈ ನಡುವೆ ಬೈರತಿ ಸುರೇಶ್‌ ಅವರ ಆಪ್ತರು ಸಿಕ್ಕಿಬಿದ್ದಿರುವ ವಿಚಾರಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿದರೆ, ನನಗೆ ಏನು ಗೊತ್ತಿಲ್ಲ ಎಂದು ಹೇಳಿದರು.

Exit mobile version