ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ತಮ್ಮ 15ನೇ ಬಜೆಟ್ ಅನ್ನು ಮಂಡಿಸಲು ಸಜ್ಜಾಗಿದ್ದಾರೆ. ಗ್ಯಾರಂಟಿ ಯೋಜನೆಗಳ (Congress Guarantee Scheme) ಸಹಿತ ಲೋಕಸಭಾ ಚುನಾವಣೆಯ (Lok Sabha Election) ದೃಷ್ಟಿಯನ್ನಿಟ್ಟುಕೊಂಡು ಬಜೆಟ್ ಮಂಡಿಸುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ. ಆದರೆ, ಪ್ರತಿಪಕ್ಷ ಬಿಜೆಪಿಯವರು ಕಾಂಗ್ರೆಸ್ ಸರ್ಕಾರಕ್ಕೆ ಟಕ್ಕರ್ ಕೊಡಲು ಮುಂದಾಗಿದ್ದಾರೆ. ಈ ಬಜೆಟ್‌ನಲ್ಲಿ ಏನೂ ಇಲ್ಲ ಎಂಬುದನ್ನು ನಿರೂಪಿಸಲು ಮುಂದಾಗಿದ್ದಾರೆ. ಇದಕ್ಕಾಗಿ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರ ನಟನೆಯ “ಉಪೇಂದ್ರ” ಸಿನಿಮಾದ “ಏನಿಲ್ಲ.. ಏನಿಲ್ಲ” ಹಾಡನ್ನು ರಿ ಲಿರಿಕ್ಸ್ ಅನ್ನು ಬಿಜೆಪಿ ಬರೆದಿದೆ. ಹೀಗಾಗಿ “ಏನಿಲ್ಲ.. ಏನಿಲ್ಲ.. ಈ ಬಜೆಟ್‌ನಲ್ಲಿ ಏನಿಲ್ಲ” ಎಂಬ ಹಾಡಿನ ಪ್ಲೇಕಾರ್ಡ್ ಹಿಡಿದು ವಿಧಾನಸೌಧಕ್ಕೆ ಆಗಮಿಸಿದ್ದಾರೆ.
“ಏನಿಲ್ಲ.. ಏನಿಲ್ಲ.. ಈ ಬಜೆಟ್‌ನಲ್ಲಿ ಏನಿಲ್ಲ” ಎಂಬ ಕಾರ್ಡ್ ಹಿಡಿದು ಘೋಷಣೆ ಕೂಗುತ್ತಾ ಬಂದ ಬಿಜೆಪಿ ನಾಯಕರನ್ನು ಮಾರ್ಷಲ್‌ಗಳು ಒಳಗೆ ಬಿಡಲಿಲ್ಲ. ಆ ಎಲ್ಲ ಪ್ಲೇಕಾರ್ಡ್‌ಗಳನ್ನು ವಶಕ್ಕೆ ಪಡೆದು ಒಳಗೆ ಬಿಟ್ಟಿದ್ದಾರೆ. ಸಿಎಂ ಬಜೆಟ್ ಚರ್ಚೆ ವೇಳೆ ಈ ಪ್ಲೇಕಾರ್ಡ್ ಅನ್ನು ಪ್ರದರ್ಶನ ಮಾಡಲು ಬಿಜೆಪಿ ನಿರ್ಧಾರ ಮಾಡಿತ್ತು.
ಇದನ್ನೂ ಓದಿ: Karnataka Budget Session 2024: ಗ್ಯಾರಂಟಿಗಳ ಹೆಸರಿನಲ್ಲಿ ಲೂಟಿ ಜಾತ್ರೆ! ಪಟ್ಟು, ಮಟ್ಟು ಎಂದು ಕುಟುಕಿದ ಎಚ್‌ಡಿಕೆ
ಏನು ಇರೋದಿಲ್ಲಾ,
— BJP Karnataka (@BJP4Karnataka) February 16, 2024
ಏನು ಇರೋದಿಲ್ಲಾ
ಬಜೆಟ್ ನಲ್ಲಿ "ಸಾಲ-ಸುಳ್ಳು” ಬಿಟ್ಟರೇ, ಬೇರೆ ಏನು ಇರೋದಿಲ್ಲಾ…!!#CongressBogusBudget #KhajaneKhali pic.twitter.com/x217THCn34
ಈ ಬಾರಿ ಸಿಎಂ ಸಿದ್ದರಾಮಯ್ಯ ಅವರು ಸದನದಲ್ಲಿ ಬಜೆಟ್ ಮಂಡನೆ ವೇಳೆ ಕೇಂದ್ರ ಸರ್ಕಾರದ ವಿರುದ್ಧವಾಗಿ ಮಾತನಾಡಿದರೆ ಸದನದಿಂದ ಪ್ರತಿಭಟನೆ ಮಾಡಿ ಹೊರ ಬರಲು ನಿರ್ಧಾರ ಮಾಡಲಾಗಿದೆ. ಈ ರೀತಿಯಾಗಿ ನಡೆದುಕೊಂಡರೆ ಈ ಬಜೆಟ್ ಅನ್ನು ಬಾಯ್ಕಾಟ್ ಮಾಡಲು ನಿರ್ಧಾರ ಮಾಡಲಾಗಿದೆ.