Site icon Vistara News

Russia-Ukraine War: ಯುದ್ಧ ಭೂಮಿಯಿಂದ ಪಾರಾಗಲು 10 ಕಿ.ಮೀ ನಡೆದ 98 ವರ್ಷದ ವೃದ್ಧೆ!

Russia-Ukraine War

ಬದುಕಬೇಕು ಎನ್ನುವ ಛಲ ಇದ್ದರೆ ಎಂತಹ ಕಠಿಣ ಪರಿಸ್ಥಿತಿಯಾದರೂ ಸರಿ ನಾವು ಹೋರಾಡುತ್ತೇವೆ. ಇದಕ್ಕೆ ಒಂದು ಉತ್ತಮ ನಿದರ್ಶನ 98 ವರ್ಷ ವಯಸ್ಸಿನ ಉಕ್ರೇನಿಯನ್ ವೃದ್ಧೆ (Ukrainian woman). ಲಿಡಿಯಾ ಸ್ಟೆಪನಿವ್ನಾ ಎನ್ನುವ ವೃದ್ಧ ವೃದ್ಧೆ ರಷ್ಯಾ- ಉಕ್ರೇನ್ ಯುದ್ಧದ (Russia-Ukraine War) ಪರಿಸ್ಥಿತಿಯಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸುಮಾರು 10 ಕಿ.ಮೀ. ದೂರ ನಡೆದುಕೊಂಡೇ ಹೋಗಿ ಬಚಾವಾಗಿದ್ದಾರೆ.

ರಷ್ಯಾ ಆಕ್ರಮಿಸಿಕೊಂಡಿರುವ ಡೊನೆಟ್ಸ್ಕ್ ನಲ್ಲಿರುವ ( Donetsk) ಓಚೆರೆಟೈನ್ (Ocheretyne) ಅನ್ನು ತೊರೆದು ಕೀವ್​​ (Kyiv) ನಿಯಂತ್ರಿಸುವ ಪ್ರದೇಶಗಳನ್ನು ತಲುಪಲು ಲಿಡಿಯಾ ಸ್ಟೆಪನಿವ್ನಾ ಸುಮಾರು 6 ಮೈಲು ದೂರ ನಡೆದಿದ್ದಾರೆ. ಈ ಕುರಿತು ಸೋಮವಾರ ಉಕ್ರೇನ್‌ನ ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮನಗೆದ್ದಿರುವ ಈ ವಿಡಿಯೋದಲ್ಲಿ ಲಿಡಿಯಾ ಸ್ಟೆಪನಿವ್ನಾ, ತಾನು ಆಹಾರ ಅಥವಾ ನೀರಿಲ್ಲದೆ ನಡೆದುಕೊಂಡು ಬಂದಿದ್ದೇನೆ. ಹಲವಾರು ಬಾರಿ ಬಿದ್ದಿದ್ದೇನೆ. ಆದರೆ ನೀರಿಕ್ಷೆ ಕಳೆದುಕೊಳ್ಳಲಿಲ್ಲ. ಎದ್ದು ಮನ್ನಡೆದು ಬಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: America Shootout: ಅಮೆರಿಕದಲ್ಲಿ ಮತ್ತೆ ಶೂಟೌಟ್‌; 4 ಪೊಲೀಸರು ಬಲಿ

ಮೂರನೇ ಯುದ್ದದಿಂದಲೂ ಬದುಕಿದೆ

ಎರಡನೇ ಮಹಾಯುದ್ದದಿಂದ ನಾನು ಬದುಕುಳಿದಿದ್ದೇನೆ. ಈಗ ಮತ್ತೆ ರಷ್ಯಾ- ಉಕ್ರೇನ್ ಯುದ್ಧದಿಂದಲೂ ಬದುಕುಳಿದಿದ್ದೇನೆ ಎಂದು ಸ್ಟೆಪನಿವ್ನಾ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ನಾನಿದ್ದ ಜಾಗಕ್ಕೆ ಶೆಲ್ ದಾಳಿಯಾದಾಗ ಕೋಲುಗಳ ಸಹಾಯದಿಂದ ನೆಲದ ಮೇಲೆ ಮಲಗಿದೆ. ಬಳಿಕ ಹಾಸಿಗೆಯ ಮೇಲೆ ಕುಳಿತು ಕೋಟ್ ಹಾಕಿಕೊಂಡೆ. ತಲೆಗೆ ಸ್ಕಾರ್ಫ್ ಕಟ್ಟಿದೆ. ಕೈಯಲ್ಲಿ ಮರದ ಕೋಲು ಬಿಟ್ಟರೆ ಬೇರೇನೂ ಉಳಿದಿರಲಿಲ್ಲ. ಕಾಲುಗಳ ಮೇಲೆ ಭರವಸೆ ಇಟ್ಟುಕೊಂಡು ನಡೆದುಕೊಂಡು ಬಂದೆ ಎಂದು ಅಜ್ಜಿ ಹೇಳಿಕೊಂಡಿದ್ದಾರೆ.


ಎರಡನೇ ಮಹಾಯುದ್ಧದಂತಿಲ್ಲ

ರಷ್ಯಾ ತನ್ನ ದೇಶದ ವಿರುದ್ಧ ನಡೆಸುತ್ತಿರುವ ಯುದ್ಧವು ಎರಡನೇ ಮಹಾಯುದ್ಧದಂತಿಲ್ಲ ಎಂದು ಹೇಳಿದ ಅವರು, ಮನೆಗಳು ಸುಟ್ಟು ಕರಕಲಾಗುತ್ತಿದ್ದು, ಮರಗಳು ಉರುಳುತ್ತಿವೆ ಎಂದು ತಿಳಿಸಿದ್ದಾರೆ.

ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

ಮಹಿಳೆಯ ಕುರಿತು ಉಕ್ರೇನ್‌ನ ಆಂತರಿಕ ಸಚಿವಾಲಯವು ತನ್ನ ವೆಬ್‌ಸೈಟ್‌ನಲ್ಲಿನ ಮಾಹಿತಿ ಹಂಚಿಕೊಂಡಿದೆ. ಮಹಿಳೆಯನ್ನು ಉಕ್ರೇನ್‌ನ ಮಿಲಿಟರಿ ಪತ್ತೆ ಹಚ್ಚಿದ್ದಾರೆ. ಬಳಿಕ ಅವರು ಪೊಲೀಸರಿಗೆ ಒಪ್ಪಿಸಿದರು. ಅವರು ಆಕೆಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಮಹಿಳೆ ಯಾವಾಗ ಪತ್ತೆಯಾಗಿದ್ದಾಳೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಕಾನೂನು ಜಾರಿ ಅಧಿಕಾರಿಗಳು ಮಹಿಳೆಯ ಸಂಬಂಧಿಕರನ್ನು ಹುಡುಕುತ್ತಿದ್ದಾರೆ ಎಂದು ಸಚಿವಾಲಯ ಹೇಳಿದೆ.

ರಷ್ಯಾ- ಉಕ್ರೇನ್ ಯುದ್ಧವು ಮೂರನೇ ವರ್ಷವೂ ಮುಂದುವರಿದಿದೆ. ಈಗಾಗಲೇ ಸಾವಿರಾರು ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ. ಉಕ್ರೇನಿಯನ್ ನಗರಗಳು ಮತ್ತು ಹಳ್ಳಿಗಳು ಜನವಿಲ್ಲದೆ ಸ್ಮಶಾನದಂತಾಗಿದೆ. ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

Exit mobile version