ಮೈಖೈಲೊ ಡೈನೋವ್ (Ukrainian Soldier) ಅವರ ದೇಹ ಬಳಲಿದೆ. ಒಂದು ಕೈ ಮುರಿದಂತೆ ಕಾಣಿಸುತ್ತಿದೆ. ಹಿಂಸೆಯಿಂದ ಬೇಸತ್ತು ಮುಖವು ಬಾಡಿಹೋಗಿದೆ. ಸದ್ಯ, ಇವರು ಚೆರ್ನಿಹಿವ್ನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕ್ಯಾನ್ಸರ್ ಚಿಕಿತ್ಸೆಯ ಹಿನ್ನೆಲೆಯಲ್ಲಿ ಅಧಿಕಾರವನ್ನು ತಾತ್ಕಾಲಿಕವಾಗಿ ನಿಕೋಲಾಯ್ ಪತ್ರುಶೇವ್ಗೆ ಹಸ್ತಾಂತರಿಸುತ್ತಿದ್ದಾರೆ. ಯಾರು ಪತ್ರುಶೇವ್?
ಕಪ್ಪು ಸಮುದ್ರದಲ್ಲಿರುವ ತಮ್ಮ ನೌಕಾಪಡೆ ನೆಲೆಗಳ ಕಾವಲು ಕಾಯಲು ಮತ್ತು ವೈರಿ ಸೇನಾಪಡೆಗಳ ಮೇಲೆ ಬೇಹುಗಾರಿಕೆ ನಡೆಸಲು ರಷ್ಯಾ ಸೈನ್ಯ ಡಾಲ್ಫಿನ್, ತಿಮಿಂಗಿಲಗಳನ್ನು ಬಳಸಿಕೊಳ್ಳುತ್ತಿದೆ ಎಂಬುದು ಬಹಿರಂಗವಾಗಿದೆ.
15ರ ಮುಂದೆ 13 ಸೊನ್ನೆ ಬರೆದು ಡಾಲರ್ ಎಂದು ಜೋಡಿಸಿದರೆ, ಅದು ಈ ವರ್ಷದ ಜಾಗತಿಕ ಸೇನಾ ವೆಚ್ಚ ಆಗಿಬಿಡುತ್ತದೆ. ಎಷ್ಟು ಹೆಚ್ಚಾಗಿದೆ, ಯಾರ್ಯಾರು ಎಷ್ಟೆಷ್ಟು ಖರ್ಚು ಮಾಡಿದ್ದಾರೆ?
ಯುದ್ಧಗ್ರಸ್ತ ಉಕ್ರೇನ್ಗೆ ರಷ್ಯಾವನ್ನು ಎದುರಿಸಲು ಇನ್ನಷ್ಟು ಶಸ್ತ್ರಾಸ್ತ್ರ ಒದಗಿಸಿಕೊಡುವುದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ.
ಎರಡು ತಿಂಗಳಿನಿಂದ ನಡೆಯುತ್ತಿರುವ ಉಕ್ರೇನ್ ಮೇಲಿನ ದಾಳಿಯಲ್ಲಿ ಪ್ರಮುಖ ಮೈಲುಗಲ್ಲನ್ನು ಸಾಧಿಸಿರುವುದಾಗಿ ಹೇಳಿಕೊಂಡಿರುವ ರಷ್ಯಾ, ಮಾರಿಯೊಪೋಲ್ ನಗರವನ್ನು ಸಂಪೂರ್ಣ ವಶಪಡಿಸಿಕೊಂಡಿರುವುದಾಗಿ ಘೋಷಿಸಿದೆ.
ಉಕ್ರೇನ್ ಮೇಲೆ ಯುದ್ಧ ಸಾರಿ ಎರಡು ತಿಂಗಳಾಗುತ್ತ ಬಂದರೂ ಪೂರ್ಣ ಜಯ ಪಡೆಯಲು ರಷ್ಯಾಗೆ ಸಾಧ್ಯವಾಗಿಲ್ಲ. ನಿಜಕ್ಕೂ ರಷ್ಯಾದ ಸೈನ್ಯಕ್ಕೆ ಏನಾಗ್ತಿದೆ ಉಕ್ರೇನ್ನಲ್ಲಿ?