Site icon Vistara News

Albert Einstein Birthday : ವಿಜ್ಞಾನ ಎಂದರೆ ತಟ್ಟನೆ ನೆನಪಾಗುವ ಅಕ್ಕರೆಯ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್‌

Everything to know about the father of modern physics

#image_title

ಡಾ. ಡಿ.ಸಿ.ರಾಮಚಂದ್ರ
ಐನ್‌ಸ್ಟೀನ್‌ ಹೆಸರು ವಿಜ್ಞಾನ ಲೋಕದಲ್ಲಿ ಎಲ್ಲರಿಗೂ ಪ್ರೇರಣೆ ನೀಡುವಂತಹದ್ದು. ಇಂದು ಅವರ ಹುಟ್ಟು ಹಬ್ಬ (Albert Einstein Birthday). ಶಾಲೆಯ ನಾಲ್ಕುಗೋಡೆಗಳ ನಡುವೆ ಶಿಕ್ಷಣ ಕಲಿಯದ ಬಾಲಕ ಹೊರ ಪ್ರಪಂಚದ ಅನುಭವದಿಂದಲೇ ವಿಜ್ಞಾನಿಯಾಗಿ ಬೆಳೆದು ವಿಜ್ಞಾನ ಲೋಕವೇ ಬೆರಗುಗೊಳಿಸುವಂತ ಸಾಧನೆ ಮಾಡಿದ ಮಹಾನ್ ವಿಜ್ಞಾನಿ. ಇವರು ಮಂಡಿಸಿದ ವೈಜ್ಞಾನಿಕ ಅನ್ವೇಷಣೆಗಳು ಇಂದಿಗೂ ಮನುಕುಲಕ್ಕೆ ಮಹಾ ಉಪಯೋಗ ನೀಡುತ್ತಾ ಬಂದಿವೆ.

1879 ರ ಮಾರ್ಚ್ 14 ರಂದು ಆಲ್ಬರ್ಟ್‌ ಐನ್‌ಸ್ಟೀನ್‌ ಜರ್ಮನ್ ಸಾಮ್ರಾಜ್ಯದ ಒಂದು ಭಾಗವಾದ ಉಲ್ಮನ್‌ ನಲ್ಲಿ ಜನಿಸಿದರು. ಅವರತಂದೆ ಹರ್ಮನ್‌ ಐನ್‌ಸ್ಟೀನ್‌ ಅವರು ಎಂಜಿನಿಯರ್‌ ಆಗಿದ್ದರು. ಅವರ ತಾಯಿ ಪಾಲಿನ್ ಐನ್ ಸ್ಟೀನ್‌. ಉಲ್ಮನ್‌ ಪಟ್ಟಣವು ಕೇವಲ 120,000ಕ್ಕಿಂತ ಹೆಚ್ಚು ಜನ ಸಂಖ್ಯೆಯನ್ನು ಹೊಂದಿದೆ. ಅವರ ಮನೆ ನಿಂತಿದ್ದ ಒಂದು ಸಣ್ಣ ಸ್ಮರಣಾರ್ಥ ಫಲಕವಿದೆ (ಇದು ಎರಡನೆಯ ಮಹಾಯುದ್ಧದ ಸಮಯದಲ್ಲಿ ನಾಶವಾಗಿದೆ). ಐನ್‌ಸ್ಟೀನ್‌ ಜನನದ ಸ್ವಲ್ಪ ಸಮಯದ ನಂತರ ಕುಟುಂಬವು ಮ್ಯೂನಿಚ್‌ಗೆ ಸ್ಥಳಾಂತರಗೊಂಡಿತು ನಂತರ ಇಟಲಿಗೆ ಹೋದಾಗ ಅವರ ತಂದೆ ತನ್ನ ಸ್ವಂತ ವ್ಯವಹಾರವನ್ನು ನಡೆಸುವಲ್ಲಿ ಸಮಸ್ಯೆಗಳನ್ನು ಎದುರಿಸಿದರು.

ಐನ್‌ಸ್ಟೀನ್‌ತಂದೆ ಹರ್ಮನ್‌ ಎಲೆಕ್ಟ್ರೋ ಕೆಮಿಕಲ್‌ ಕಾರ್ಖಾನೆಯನ್ನು ನಡೆಸುತ್ತಿದ್ದರು ಮತ್ತು ಅವರ ತಾಯಿ ಪಾಲಿನ್ ಆಲ್ಬರ್ಟ್ ಮತ್ತು ಅವರ ತಂಗಿ ಮಾರಿಯಾಳನ್ನು ನೋಡಿಕೊಂಡಿದ್ದರು. ಐನ್‌ಸ್ಟೀನ್‌ ತನ್ನ ಕೆಲವು ಶಿಕ್ಷಕರ ಸರ್ವಾಧಿಕಾರಿ ಧೋರಣೆಯ ವಿರುದ್ಧ ದಂಗೆ ಎದ್ದು, ಹದಿನಾರನೇ ವಯಸ್ಸಿನಲ್ಲಿ ಶಾಲೆಯಿಂದ ಹೊರಗುಳಿದನು. ನಂತರ ಅವನು ಜುರಿಚ್‌ನ ಸ್ವಿಸ್ ಫೆಡರಲ್ ಪಾಲಿಟೆಕ್ನಿಕ್ ಶಾಲೆಗೆ ಪ್ರವೇಶ ಪರೀಕ್ಷೆಯನ್ನು ತೆಗೆದುಕೊಂಡನು. ಭೌತಶಾಸ್ತ್ರ ಮತ್ತು ಗಣಿತದಲ್ಲಿ ಅವನ ಪ್ರದರ್ಶನಗಳು ಅತ್ಯುತ್ತಮವಾಗಿದ್ದರೂ, ಅವನ ಅಂಕಗಳು ಇತರ ಪ್ರದೇಶಗಳು ಸಬ್‌ಪಾರ್‌ ಆಗಿದ್ದವು ಮತ್ತು ಅವನು ಪರೀಕ್ಷೆಯಲ್ಲಿ ಉತ್ತೀರ್ಣನಾಗಿರಲಿಲ್ಲ.

ಬಾಲ್ಯದಲ್ಲೇ ಆವಿಷ್ಕಾರ

ಆಲ್ಬರ್ಟ್ ಐನ್‌ಸ್ಟೀನ್‌ ವಿದ್ವಾಂಸ ಹ್ಯಾನ್ಸ್-ಜೋಸೆಫ್‌ಕೊಪ್ಪರ್‌ ಅವರ ಪ್ರಕಾರ, ಐನ್‌ಸ್ಟೀನ್‌ ಜೀವನದಲ್ಲಿ ಎರಡು “ಅದ್ಭುತಗಳು” ನಡೆದಿವೆ. ಅವರು ಐದನೇ ವಯಸ್ಸಿನಲ್ಲಿರುವಾಗ ಬಾಹ್ಯ ಒತ್ತಡಗಳು ಸೂಜಿಯನ್ನು ತಿರುಗಿಸ ಬಲ್ಲವು ಎಂಬುದನ್ನು ಮನವರಿಕೆ ಮಾಡಿಕೊಂಡರು. ಇದು ಅವರು ಕಾಣದ ವಿಷಯಗಳ ಕುರಿತು ಕುತೂಹಲಿಯಾಗಲು ಕಾರಣವಾಯಿತು. ಇನ್ನು 12ನೇ ವಯಸ್ಸಿನಲ್ಲಿರುವಾಗಲೇ ಅವರು ಜ್ಯಾಮಿತಿಯ ಸೂತ್ರಗಳನ್ನು ಕಂಡು ಕೊಂಡರು. ಇದು ಅವರ ಜೀವನದಲ್ಲಿ ಮಹತ್ವದ ಘಟ್ಟ.

ಐನ್‌ಸ್ಟೀನ್‌ ಒಟ್ಟಾರೆ ತಮ್ಮ ಜೀವಿತಾವಧಿಯಲ್ಲಿ ಮುನ್ನೂರಕ್ಕು ಹೆಚ್ಚು ಸಂಶೋಧನಾ ಪ್ರಬಂಧಗಳು ಮತ್ತು ಇತರ 150 ಕ್ಕೂ ಹೆಚ್ಚು ಪ್ರಬಂಧಗಳನ್ನು ಬರೆದಿದ್ದಾರೆ. ಭಾರತದ ಸತ್ಯೇಂದ್ರನಾಥ್ ಬೋಸ್‌ ಜೊತೆಗೂಡಿ ನೀಡಿದ ‘ಬೋಸ್-ಐನ್ ಸ್ಟೀನ್‌ ಸ್ಟಾಟಿಸ್ಟಿಕ್ಸ್’ ಸೇರಿದಂತೆ ‘ಐನ್ ಸ್ಟೀನ್‌ ರೆಫ್ರಿಜರೇಟರ್’, ‘ಐನ್ ಸ್ಟೀನ್‌-ಕಾರ್ಟನ್ ಸಿದ್ಧಾಂತ’, ‘ಐನ್‌ಸ್ಟೀನ್‌ -ಇನ್ಫೆಲ್ಡ್-ಹಾಫ್ಮನ್‌ ಇಕ್ವೇಷನ್ಸ್’, ‘ಐನ್ ಸ್ಟೀನ್‌ -ಪೊಡೊಲೊಸ್ಕಿ-ರೋಸೆನ್ ಪ್ಯಾರಾಡಾಕ್ಸ್’ ಇವುಗಳಲ್ಲಿ ಪ್ರಮುಖವಾದವು. ಇರ್ವಿನ್ ಶ್ರೋಡಿಂಗರ್’ಗೆ ಸಂಶೋಧನೆಗೆ ಸೂಚಿಸಿದ್ದು ಐನ್‌ಸ್ಟೀನ್‌ ಹಿರಿಮೆಗಳಲ್ಲೊಂದು.

ನೊಬೆಲ್ ಸಮಿತಿಗೂ ಅರ್ಥವಾಗಿರಲಿಲ್ಲ !

ತಮ್ಮ ಅದ್ಭುತ ಸಂಶೋಧನೆಯ ಹೊರತಾಗಿಯೂ ಐನ್‌ಸ್ಟೀನ್‌ಗೆ ಸಾಪೇಕ್ಷ ಸಿದ್ಧಾಂತಕ್ಕೆ ನೊಬೆಲ್ ಪ್ರಶಸ್ತಿ ಸಿಗಲೇ ಇಲ್ಲ. ಏಕೆಂದರೆ ಸಾಪೇಕ್ಷ ಸಿದ್ಧಾಂತ ನೊಬೆಲ್ ಸಮಿತಿಯವರಿಗೂ ಅರ್ಥವಾಗಿರಲಿಲ್ಲ. ಇದರ ಬದಲಾಗಿ ಇದರ ಮುಂದೆ ಚಿಲ್ಲರೆ ಎನಿಸಬಹುದಾದ ‘ಫೋಟೋ ಎಲೆಕ್ಟ್ರಿಕ್‌ ಎಫೆಕ್ಟ್’ಗೆ ಅದೂ 16 ವರ್ಷ ಬಿಟ್ಟು, 1921ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು. ವಿಚಿತ್ರ ಎಂದರೆ ಅವರ ಕೆಲವು ಥಿಯರಿಗಳು ಸಾಕ್ಷವಿಲ್ಲದೇ ಹಾಗೇ ಉಳಿದುಕೊಂಡಿದ್ದವು. ಅವು ಸತ್ಯವೋ ಸುಳ್ಳೋ ಎಂದು ಹೇಳಲು ಸಾಮಾನ್ಯರು ಬಿಡಿ ವಿಶ್ವದಯಾವ ಘಟಾನುಘಟಿ ವಿಜ್ಞಾನಿಗಳಿಗೂ ಸಾಧ್ಯವಾಗಿರಲಿಲ್ಲ.

ಐನ್‌ಸ್ಟೀನ್‌ ಅವರ ಜನಪ್ರಿಯ ಚಿತ್ರವೆಂದರೆ ಅವರು ತಮ್ಮ ನಾಲಗೆಯನ್ನು ಹೊರಗೆಚಾಚಿ ಪೋಸು ನೀಡಿದ್ದು. ಐನ್‌ಸ್ಟೀನ್‌ ಚಿಕ್ಕ ಹುಡುಗನಂತೆ ವರ್ತಿಸಿದ್ದ ಈ ಚಿತ್ರತೆಗೆದಿದ್ದು ಐನ್ ಸ್ಟೀನ್‌ 72ನೇ ಹುಟ್ಟುಹಬ್ಬ ದಂದು. ಐನ್‌ಸ್ಟೀನ್‌ಗೆ ಗೌರವ ಸೂಚಿಸಲು ಪ್ರಿನ್ಸ್‌ಸ್ಟ್‌ ಕ್ಲಬ್‌ನಲ್ಲಿ ಸಮಾರಂಭ ಆಯೋಜನೆಯಾಗಿತ್ತು. ಅವತ್ತು ಸ್ನೇಹಿತರು, ಸಹೋದ್ಯೋಗಿಗಳೆಲ್ಲಾ ಜಮಾಯಿಸಿದ್ದರು. ಅಲ್ಲಿಯೇ ಸಾಕಷ್ಟು ಪೋಟೊಗಳಿಗೆ ಪೋಸ್ ನೀಡಿ ನಕ್ಕು ನಕ್ಕು ವಿಜ್ಞಾನಿಗೆ ಸುಸ್ತಾಗಿತ್ತು. ಪಾರ್ಟಿ ಮುಗಿದ ಬಳಿಕ ಮನೆಗೆ ಹೊರಡಲು ಸ್ನೇಹಿತರೊಬ್ಬರ ಕಾರು ಹತ್ತಿದ ಮೇಧಾವಿಯನ್ನು ಫೋಟೊಗ್ರಾಫರ್‌ಗಳು ಬಿಡಲಿಲ್ಲ. ಮತ್ತಷ್ಟು ಫೋಟೊತೆಗೆಯಲು ಮುಂದಾದಾಗ ನಕ್ಕು ಸುಸ್ತಾಗಿದ್ದ ಐನ್‌ಸ್ಟೀನ್‌ ನಾಲಗೆಯನ್ನು ಹೊರಗೆಚಾಚಿ ಪೋಸು ನೀಡಿದರು.

ಸಾಕ್ಸ್ ಹಾಕಲೇ ಇಲ್ಲ !

ಐನ್‌ಸ್ಟೀನ್‌ ಅವರ ವಿಚಿತ್ರ ಡೆಸ್ಸಿಂಗ್ ಅವರ ಹೈಲೆಟ್‌ ಆಗಿತ್ತು. ಆದರೆ ಅವರ ಕೆದರಿದ ಕೂದಲೂ ಕೂಡ ಜನರನ್ನು ಆಕರ್ಷಿಸಿದೆ. ಅಷ್ಟೇ ಅಲ್ಲ ಅವರು ಎಂದೂಕೂಡ ಶೂ ಧರಿಸುವಾಗ ಸಾಕ್ಸ್ ಹಾಕುತ್ತಿರಲಿಲ್ಲವಂತೆ…ಅದೂ ಕೂಡ ಹೆಚ್ಚಿನವರನ್ನು ಆಕರ್ಷಿಸಿದೆ. ವಿಜ್ಞಾನಿ ಐನ್‌ಸ್ಟೀನ್‌ ಅವರಿಗೆ ಸಾಕ್ಸ್ಎಂದರೆ ಕಿರಿಕಿರಿ ಮಾಡುವ ಮತ್ತು ನೋವುಂಟು ಮಾಡುವ ವಸ್ತುವಾಗಿತ್ತು.

ಐನ್‌ಸ್ಟೀನ್‌ ಅವರ ತಾಯಿ ಸಂಗೀತಗಾರ್ತಿ. ಆಕೆ ತನ್ನ ಮಗ ಮ್ಯೂಸಿಕ್‌ನ್ನು ಇಷ್ಟಪಡಬೇಕು ಮತ್ತು ಕಲಿಯಬೇಕು ಎಂದು ಬಯಸಿದ್ದರು. ಅಲ್ಬರ್ಟ್ ಐನ್‌ಸ್ಟೀನ್‌ ಚಿಕ್ಕವರಿದ್ದಾಗ ವಾಯಲಿನ್ ಕಲಿಯುವುದನ್ನು ಇಷ್ಟಪಡಲೇ ಇಲ್ಲ. ಆದರೆ ಟೀನೇಜ್‌ಗೆ ಕಾಲಿಟ್ಟ ಮೇಲೆ ಅವರು ವಯಲಿನ್ ಕಲಿತದ್ದು ಮಾತ್ರವಲ್ಲ ಹಾಡುವುದೂ ಕೂಡ ತಿಳಿದಿತ್ತು. ಸಿಕ್ ಅನ್ನು ಬಹಳವಾಗಿ ಇಷ್ಟಪಟ್ಟರು. ಐನ್‌ಸ್ಟೀನ್‌ ಗೆ ವಯೋಲಿನ್ ಮತ್ತು ಸಂಗೀತ ಎಂದರೆ ಅತೀವ ಮೋಹ. ಒಂದೊಮ್ಮೆ ನಾನು ವಿಜ್ಞಾನಿಯಾಗದಿದ್ದರೆ ಸಂಗೀತಗಾರ ನಾಗುತ್ತಿದ್ದೆ ಎಂದು ಸ್ವತಃ ಐನ್‌ಸ್ಟೀನ್‌ ಹೇಳಿಕೊಂಡಿದ್ದರು.

ನೌಕಾಯಾನ ಅಂದರೆ ಐನ್ ಸ್ಟೀನ್‌ ಅವರಿಗೆ ಇಷ್ಟವಾಗುತ್ತಿತ್ತು. ಹಾಗಂತ ಅವರು ಅಷ್ಟೇನು ಉತ್ತಮ ನಾವಿಕರಾಗಿರಲಿಲ್ಲ. ದೋಣಿ ಹಾಳಾದರೆ ಅಕ್ಕಪಕ್ಕದವರು ಅದನ್ನು ಸರಿಪಡಿಸಿಕೊಡ ಬೇಕಿತ್ತು. ಅಷ್ಟೇ ಅಲ್ಲ ಅವರು ತಮ್ಮ ಜೀವನದುದ್ದಕ್ಕೂ ಈಜುವುದನ್ನು ಕಲಿಯಲೇ ಇಲ್ಲವಂತೆ. ಹಾಗಂತ ಅವರು ನೌಕಾಯಾನ ಕೈಗೊಳ್ಳುವುದನ್ನು ತಡೆಯುವುದಕ್ಕೆ ಸಾಧ್ಯವಾಗಿಲ್ಲ.

ರೆಫ್ರಿಜರೇಟರ್ ಸಂಶೋಧನೆ

ಐನ್‌ಸ್ಟೀನ್‌ ಅವರ ಸೀನಿಯರ್ ಆಗಿದ್ದ ಲಿಯೋ ಸಿಜಾರ್ಡ್ ಅವರ ಜೊತೆಗೆ ರೆಫ್ರಿಜರೇಟರ್‌ ಅನ್ನು ಕೂಡ ಸಂಶೋಧನೆ ಮಾಡಿದ್ದರು. ಎರಡು ದಶಕಗಳ ನಂತರ ಅವರಥಿಯರಿಯನ್ನು ಅವರು ಪ್ರಕಟಿಸಿದರು. 1930 ರಲ್ಲಿ ಈ ರೆಪ್ರಿಜರೇಟರ್‌ ಅನ್ನು ಪೇಟೆಂಟ್ ಪಡೆಯಲಾಯಿತು ಮತ್ತು ಕೂಡಲೇ ಅದರ ಅಪ್‌ಡೇಟ್‌ ಆಗಿರುವ ವರ್ಷನ್‌ ಕೂಡ ಬಂತು.

ಇಸ್ರೆಲ್‌ನ ಮೊದಲ ಅಧ್ಯಕ್ಷ ಚೈಮ್ ವಿಜ್ಮನ್‌ ಅವರು 1952 ನವೆಂಬರ್ 9 ರಂದು ಮೃತಪಟ್ಟ ನಂತರ ಇಸ್ರೆಲ್‌ನ ಎರಡನೇ ಅಧ್ಯಕ್ಷರಾಗುವಂತೆ ಆಲ್ಬರ್ಟ್ ಐನ್‌ಸ್ಟೀನ್‌ ಆಫರ್‌ ಬಂದಿತ್ತು. ಆದರೆ 73 ವರ್ಷದವರಾಗಿದ್ದ ಐನ್‌ಸ್ಟೀನ್‌ ನಾಜೂಕಿ ನಿಂದಲೇ ಅವರಿಗೆ ಬಂದ ಆಫರ್‌ನ್ನು ನಿರಾಕರಿಸಿದ್ದರು. ಅದಕ್ಕೆ ಕಾರಣವನ್ನು ಕೇಳಿದಾಗ ಅವರು “ದೈಹಿಕ ಯೋಗ್ಯತೆಯ ಕೊರತೆ ಮತ್ತು ಜನರನ್ನು ಸರಿಯಾಗಿ ನಿಭಾಯಿಸುವ ತಾಕತ್ತು ಇಲ್ಲದೇ ಇರುವುರು” ಎಂದು ತಿಳಿಸಿದ್ದರು. ಅಂದರೆ ನನಗೆ ವಯಸ್ಸಾಗಿದೆ, ನಾನು ಅಧ್ಯಕ್ಷನಾಗುವುದು ಸೂಕ್ತವಲ್ಲ ಎಂದು ಹೇಳಿದ್ದರು.

ಬ್ರಿಲಿಯೆಂಟ್‌ ಬ್ರೈನ್‌

ಐನ್‌ಸ್ಟೀನ್‌ ಅವರ ಹೆಸರನ್ನೇ ತೆಗೆದುಕೊಳ್ಳಿ. ಇಂಗ್ಲೀಷ್‌ನಲ್ಲಿ ಅವರ ಹೆಸರಿನ ʻAlbert Einsteinʼ ನಲ್ಲಿರುವ ಅಕ್ಷರಗಳನ್ನು ಆಚೀಚೆ ಮಾಡಿ ಪುನಃ ಜೋಡಿಸಿದರೆ ‘Ten elite brains’ ಎಂದು ಕೂಡ ಮಾಡಬಹುದು. ಇದರರ್ಥ 10 ಶ್ರೇಷ್ಠ ಮೆದುಳುಗಳು ಎಂದಾಗುತ್ತದೆ. ಇದಷ್ಟು ಸಮಂಜಸವಾಗಿಲ್ಲವೇ ಐನ್‌ಸ್ಟೀನ್‌ ಅವರಿಗೆ ನೀವೇ ಹೇಳಿ!

ಇದನ್ನೂ ಓದಿ : Bal Puarskar: ಬೆಂಗಳೂರಿನ 8 ವರ್ಷದ ಬಾಲಕ ರಿಷಿಗೆ ರಾಷ್ಟ್ರೀಯ ಬಾಲ ಪುರಸ್ಕಾರ, ಈತನ ಐಕ್ಯು ಐನ್‌ಸ್ಟೀನ್‌ಗಿಂತ ಹೆಚ್ಚು

Exit mobile version