Albert Einstein Birthday : ವಿಜ್ಞಾನ ಎಂದರೆ ತಟ್ಟನೆ ನೆನಪಾಗುವ ಅಕ್ಕರೆಯ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್‌ - Vistara News

ವಿಜ್ಞಾನ

Albert Einstein Birthday : ವಿಜ್ಞಾನ ಎಂದರೆ ತಟ್ಟನೆ ನೆನಪಾಗುವ ಅಕ್ಕರೆಯ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್‌

ಇಂದು ಮಹಾ ವಿಜ್ಞಾನಿ ಆಲ್ಬರ್ಟ್‌ ಐನ್‌ಸ್ಟೀನ್‌ ಅವರ ಹುಟ್ಟುಹಬ್ಬ (Albert Einstein Birthday). ಈ ವಿಜ್ಞಾನಿಯ ಸಾಧನೆ, ವ್ಯಕ್ತಿತ್ವವನ್ನು ಪರಿಚಯಿಸುವ ಲೇಖನ ಇಲ್ಲಿದೆ.

VISTARANEWS.COM


on

Everything to know about the father of modern physics
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
albert einstein

ಡಾ. ಡಿ.ಸಿ.ರಾಮಚಂದ್ರ
ಐನ್‌ಸ್ಟೀನ್‌ ಹೆಸರು ವಿಜ್ಞಾನ ಲೋಕದಲ್ಲಿ ಎಲ್ಲರಿಗೂ ಪ್ರೇರಣೆ ನೀಡುವಂತಹದ್ದು. ಇಂದು ಅವರ ಹುಟ್ಟು ಹಬ್ಬ (Albert Einstein Birthday). ಶಾಲೆಯ ನಾಲ್ಕುಗೋಡೆಗಳ ನಡುವೆ ಶಿಕ್ಷಣ ಕಲಿಯದ ಬಾಲಕ ಹೊರ ಪ್ರಪಂಚದ ಅನುಭವದಿಂದಲೇ ವಿಜ್ಞಾನಿಯಾಗಿ ಬೆಳೆದು ವಿಜ್ಞಾನ ಲೋಕವೇ ಬೆರಗುಗೊಳಿಸುವಂತ ಸಾಧನೆ ಮಾಡಿದ ಮಹಾನ್ ವಿಜ್ಞಾನಿ. ಇವರು ಮಂಡಿಸಿದ ವೈಜ್ಞಾನಿಕ ಅನ್ವೇಷಣೆಗಳು ಇಂದಿಗೂ ಮನುಕುಲಕ್ಕೆ ಮಹಾ ಉಪಯೋಗ ನೀಡುತ್ತಾ ಬಂದಿವೆ.

1879 ರ ಮಾರ್ಚ್ 14 ರಂದು ಆಲ್ಬರ್ಟ್‌ ಐನ್‌ಸ್ಟೀನ್‌ ಜರ್ಮನ್ ಸಾಮ್ರಾಜ್ಯದ ಒಂದು ಭಾಗವಾದ ಉಲ್ಮನ್‌ ನಲ್ಲಿ ಜನಿಸಿದರು. ಅವರತಂದೆ ಹರ್ಮನ್‌ ಐನ್‌ಸ್ಟೀನ್‌ ಅವರು ಎಂಜಿನಿಯರ್‌ ಆಗಿದ್ದರು. ಅವರ ತಾಯಿ ಪಾಲಿನ್ ಐನ್ ಸ್ಟೀನ್‌. ಉಲ್ಮನ್‌ ಪಟ್ಟಣವು ಕೇವಲ 120,000ಕ್ಕಿಂತ ಹೆಚ್ಚು ಜನ ಸಂಖ್ಯೆಯನ್ನು ಹೊಂದಿದೆ. ಅವರ ಮನೆ ನಿಂತಿದ್ದ ಒಂದು ಸಣ್ಣ ಸ್ಮರಣಾರ್ಥ ಫಲಕವಿದೆ (ಇದು ಎರಡನೆಯ ಮಹಾಯುದ್ಧದ ಸಮಯದಲ್ಲಿ ನಾಶವಾಗಿದೆ). ಐನ್‌ಸ್ಟೀನ್‌ ಜನನದ ಸ್ವಲ್ಪ ಸಮಯದ ನಂತರ ಕುಟುಂಬವು ಮ್ಯೂನಿಚ್‌ಗೆ ಸ್ಥಳಾಂತರಗೊಂಡಿತು ನಂತರ ಇಟಲಿಗೆ ಹೋದಾಗ ಅವರ ತಂದೆ ತನ್ನ ಸ್ವಂತ ವ್ಯವಹಾರವನ್ನು ನಡೆಸುವಲ್ಲಿ ಸಮಸ್ಯೆಗಳನ್ನು ಎದುರಿಸಿದರು.

ಐನ್‌ಸ್ಟೀನ್‌ತಂದೆ ಹರ್ಮನ್‌ ಎಲೆಕ್ಟ್ರೋ ಕೆಮಿಕಲ್‌ ಕಾರ್ಖಾನೆಯನ್ನು ನಡೆಸುತ್ತಿದ್ದರು ಮತ್ತು ಅವರ ತಾಯಿ ಪಾಲಿನ್ ಆಲ್ಬರ್ಟ್ ಮತ್ತು ಅವರ ತಂಗಿ ಮಾರಿಯಾಳನ್ನು ನೋಡಿಕೊಂಡಿದ್ದರು. ಐನ್‌ಸ್ಟೀನ್‌ ತನ್ನ ಕೆಲವು ಶಿಕ್ಷಕರ ಸರ್ವಾಧಿಕಾರಿ ಧೋರಣೆಯ ವಿರುದ್ಧ ದಂಗೆ ಎದ್ದು, ಹದಿನಾರನೇ ವಯಸ್ಸಿನಲ್ಲಿ ಶಾಲೆಯಿಂದ ಹೊರಗುಳಿದನು. ನಂತರ ಅವನು ಜುರಿಚ್‌ನ ಸ್ವಿಸ್ ಫೆಡರಲ್ ಪಾಲಿಟೆಕ್ನಿಕ್ ಶಾಲೆಗೆ ಪ್ರವೇಶ ಪರೀಕ್ಷೆಯನ್ನು ತೆಗೆದುಕೊಂಡನು. ಭೌತಶಾಸ್ತ್ರ ಮತ್ತು ಗಣಿತದಲ್ಲಿ ಅವನ ಪ್ರದರ್ಶನಗಳು ಅತ್ಯುತ್ತಮವಾಗಿದ್ದರೂ, ಅವನ ಅಂಕಗಳು ಇತರ ಪ್ರದೇಶಗಳು ಸಬ್‌ಪಾರ್‌ ಆಗಿದ್ದವು ಮತ್ತು ಅವನು ಪರೀಕ್ಷೆಯಲ್ಲಿ ಉತ್ತೀರ್ಣನಾಗಿರಲಿಲ್ಲ.

ಬಾಲ್ಯದಲ್ಲೇ ಆವಿಷ್ಕಾರ

ಆಲ್ಬರ್ಟ್ ಐನ್‌ಸ್ಟೀನ್‌ ವಿದ್ವಾಂಸ ಹ್ಯಾನ್ಸ್-ಜೋಸೆಫ್‌ಕೊಪ್ಪರ್‌ ಅವರ ಪ್ರಕಾರ, ಐನ್‌ಸ್ಟೀನ್‌ ಜೀವನದಲ್ಲಿ ಎರಡು “ಅದ್ಭುತಗಳು” ನಡೆದಿವೆ. ಅವರು ಐದನೇ ವಯಸ್ಸಿನಲ್ಲಿರುವಾಗ ಬಾಹ್ಯ ಒತ್ತಡಗಳು ಸೂಜಿಯನ್ನು ತಿರುಗಿಸ ಬಲ್ಲವು ಎಂಬುದನ್ನು ಮನವರಿಕೆ ಮಾಡಿಕೊಂಡರು. ಇದು ಅವರು ಕಾಣದ ವಿಷಯಗಳ ಕುರಿತು ಕುತೂಹಲಿಯಾಗಲು ಕಾರಣವಾಯಿತು. ಇನ್ನು 12ನೇ ವಯಸ್ಸಿನಲ್ಲಿರುವಾಗಲೇ ಅವರು ಜ್ಯಾಮಿತಿಯ ಸೂತ್ರಗಳನ್ನು ಕಂಡು ಕೊಂಡರು. ಇದು ಅವರ ಜೀವನದಲ್ಲಿ ಮಹತ್ವದ ಘಟ್ಟ.

ಐನ್‌ಸ್ಟೀನ್‌ ಒಟ್ಟಾರೆ ತಮ್ಮ ಜೀವಿತಾವಧಿಯಲ್ಲಿ ಮುನ್ನೂರಕ್ಕು ಹೆಚ್ಚು ಸಂಶೋಧನಾ ಪ್ರಬಂಧಗಳು ಮತ್ತು ಇತರ 150 ಕ್ಕೂ ಹೆಚ್ಚು ಪ್ರಬಂಧಗಳನ್ನು ಬರೆದಿದ್ದಾರೆ. ಭಾರತದ ಸತ್ಯೇಂದ್ರನಾಥ್ ಬೋಸ್‌ ಜೊತೆಗೂಡಿ ನೀಡಿದ ‘ಬೋಸ್-ಐನ್ ಸ್ಟೀನ್‌ ಸ್ಟಾಟಿಸ್ಟಿಕ್ಸ್’ ಸೇರಿದಂತೆ ‘ಐನ್ ಸ್ಟೀನ್‌ ರೆಫ್ರಿಜರೇಟರ್’, ‘ಐನ್ ಸ್ಟೀನ್‌-ಕಾರ್ಟನ್ ಸಿದ್ಧಾಂತ’, ‘ಐನ್‌ಸ್ಟೀನ್‌ -ಇನ್ಫೆಲ್ಡ್-ಹಾಫ್ಮನ್‌ ಇಕ್ವೇಷನ್ಸ್’, ‘ಐನ್ ಸ್ಟೀನ್‌ -ಪೊಡೊಲೊಸ್ಕಿ-ರೋಸೆನ್ ಪ್ಯಾರಾಡಾಕ್ಸ್’ ಇವುಗಳಲ್ಲಿ ಪ್ರಮುಖವಾದವು. ಇರ್ವಿನ್ ಶ್ರೋಡಿಂಗರ್’ಗೆ ಸಂಶೋಧನೆಗೆ ಸೂಚಿಸಿದ್ದು ಐನ್‌ಸ್ಟೀನ್‌ ಹಿರಿಮೆಗಳಲ್ಲೊಂದು.

ನೊಬೆಲ್ ಸಮಿತಿಗೂ ಅರ್ಥವಾಗಿರಲಿಲ್ಲ !

ತಮ್ಮ ಅದ್ಭುತ ಸಂಶೋಧನೆಯ ಹೊರತಾಗಿಯೂ ಐನ್‌ಸ್ಟೀನ್‌ಗೆ ಸಾಪೇಕ್ಷ ಸಿದ್ಧಾಂತಕ್ಕೆ ನೊಬೆಲ್ ಪ್ರಶಸ್ತಿ ಸಿಗಲೇ ಇಲ್ಲ. ಏಕೆಂದರೆ ಸಾಪೇಕ್ಷ ಸಿದ್ಧಾಂತ ನೊಬೆಲ್ ಸಮಿತಿಯವರಿಗೂ ಅರ್ಥವಾಗಿರಲಿಲ್ಲ. ಇದರ ಬದಲಾಗಿ ಇದರ ಮುಂದೆ ಚಿಲ್ಲರೆ ಎನಿಸಬಹುದಾದ ‘ಫೋಟೋ ಎಲೆಕ್ಟ್ರಿಕ್‌ ಎಫೆಕ್ಟ್’ಗೆ ಅದೂ 16 ವರ್ಷ ಬಿಟ್ಟು, 1921ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು. ವಿಚಿತ್ರ ಎಂದರೆ ಅವರ ಕೆಲವು ಥಿಯರಿಗಳು ಸಾಕ್ಷವಿಲ್ಲದೇ ಹಾಗೇ ಉಳಿದುಕೊಂಡಿದ್ದವು. ಅವು ಸತ್ಯವೋ ಸುಳ್ಳೋ ಎಂದು ಹೇಳಲು ಸಾಮಾನ್ಯರು ಬಿಡಿ ವಿಶ್ವದಯಾವ ಘಟಾನುಘಟಿ ವಿಜ್ಞಾನಿಗಳಿಗೂ ಸಾಧ್ಯವಾಗಿರಲಿಲ್ಲ.

ಐನ್‌ಸ್ಟೀನ್‌ ಅವರ ಜನಪ್ರಿಯ ಚಿತ್ರವೆಂದರೆ ಅವರು ತಮ್ಮ ನಾಲಗೆಯನ್ನು ಹೊರಗೆಚಾಚಿ ಪೋಸು ನೀಡಿದ್ದು. ಐನ್‌ಸ್ಟೀನ್‌ ಚಿಕ್ಕ ಹುಡುಗನಂತೆ ವರ್ತಿಸಿದ್ದ ಈ ಚಿತ್ರತೆಗೆದಿದ್ದು ಐನ್ ಸ್ಟೀನ್‌ 72ನೇ ಹುಟ್ಟುಹಬ್ಬ ದಂದು. ಐನ್‌ಸ್ಟೀನ್‌ಗೆ ಗೌರವ ಸೂಚಿಸಲು ಪ್ರಿನ್ಸ್‌ಸ್ಟ್‌ ಕ್ಲಬ್‌ನಲ್ಲಿ ಸಮಾರಂಭ ಆಯೋಜನೆಯಾಗಿತ್ತು. ಅವತ್ತು ಸ್ನೇಹಿತರು, ಸಹೋದ್ಯೋಗಿಗಳೆಲ್ಲಾ ಜಮಾಯಿಸಿದ್ದರು. ಅಲ್ಲಿಯೇ ಸಾಕಷ್ಟು ಪೋಟೊಗಳಿಗೆ ಪೋಸ್ ನೀಡಿ ನಕ್ಕು ನಕ್ಕು ವಿಜ್ಞಾನಿಗೆ ಸುಸ್ತಾಗಿತ್ತು. ಪಾರ್ಟಿ ಮುಗಿದ ಬಳಿಕ ಮನೆಗೆ ಹೊರಡಲು ಸ್ನೇಹಿತರೊಬ್ಬರ ಕಾರು ಹತ್ತಿದ ಮೇಧಾವಿಯನ್ನು ಫೋಟೊಗ್ರಾಫರ್‌ಗಳು ಬಿಡಲಿಲ್ಲ. ಮತ್ತಷ್ಟು ಫೋಟೊತೆಗೆಯಲು ಮುಂದಾದಾಗ ನಕ್ಕು ಸುಸ್ತಾಗಿದ್ದ ಐನ್‌ಸ್ಟೀನ್‌ ನಾಲಗೆಯನ್ನು ಹೊರಗೆಚಾಚಿ ಪೋಸು ನೀಡಿದರು.

Everything to know about the father of modern physics

ಸಾಕ್ಸ್ ಹಾಕಲೇ ಇಲ್ಲ !

ಐನ್‌ಸ್ಟೀನ್‌ ಅವರ ವಿಚಿತ್ರ ಡೆಸ್ಸಿಂಗ್ ಅವರ ಹೈಲೆಟ್‌ ಆಗಿತ್ತು. ಆದರೆ ಅವರ ಕೆದರಿದ ಕೂದಲೂ ಕೂಡ ಜನರನ್ನು ಆಕರ್ಷಿಸಿದೆ. ಅಷ್ಟೇ ಅಲ್ಲ ಅವರು ಎಂದೂಕೂಡ ಶೂ ಧರಿಸುವಾಗ ಸಾಕ್ಸ್ ಹಾಕುತ್ತಿರಲಿಲ್ಲವಂತೆ…ಅದೂ ಕೂಡ ಹೆಚ್ಚಿನವರನ್ನು ಆಕರ್ಷಿಸಿದೆ. ವಿಜ್ಞಾನಿ ಐನ್‌ಸ್ಟೀನ್‌ ಅವರಿಗೆ ಸಾಕ್ಸ್ಎಂದರೆ ಕಿರಿಕಿರಿ ಮಾಡುವ ಮತ್ತು ನೋವುಂಟು ಮಾಡುವ ವಸ್ತುವಾಗಿತ್ತು.

ಐನ್‌ಸ್ಟೀನ್‌ ಅವರ ತಾಯಿ ಸಂಗೀತಗಾರ್ತಿ. ಆಕೆ ತನ್ನ ಮಗ ಮ್ಯೂಸಿಕ್‌ನ್ನು ಇಷ್ಟಪಡಬೇಕು ಮತ್ತು ಕಲಿಯಬೇಕು ಎಂದು ಬಯಸಿದ್ದರು. ಅಲ್ಬರ್ಟ್ ಐನ್‌ಸ್ಟೀನ್‌ ಚಿಕ್ಕವರಿದ್ದಾಗ ವಾಯಲಿನ್ ಕಲಿಯುವುದನ್ನು ಇಷ್ಟಪಡಲೇ ಇಲ್ಲ. ಆದರೆ ಟೀನೇಜ್‌ಗೆ ಕಾಲಿಟ್ಟ ಮೇಲೆ ಅವರು ವಯಲಿನ್ ಕಲಿತದ್ದು ಮಾತ್ರವಲ್ಲ ಹಾಡುವುದೂ ಕೂಡ ತಿಳಿದಿತ್ತು. ಸಿಕ್ ಅನ್ನು ಬಹಳವಾಗಿ ಇಷ್ಟಪಟ್ಟರು. ಐನ್‌ಸ್ಟೀನ್‌ ಗೆ ವಯೋಲಿನ್ ಮತ್ತು ಸಂಗೀತ ಎಂದರೆ ಅತೀವ ಮೋಹ. ಒಂದೊಮ್ಮೆ ನಾನು ವಿಜ್ಞಾನಿಯಾಗದಿದ್ದರೆ ಸಂಗೀತಗಾರ ನಾಗುತ್ತಿದ್ದೆ ಎಂದು ಸ್ವತಃ ಐನ್‌ಸ್ಟೀನ್‌ ಹೇಳಿಕೊಂಡಿದ್ದರು.

ನೌಕಾಯಾನ ಅಂದರೆ ಐನ್ ಸ್ಟೀನ್‌ ಅವರಿಗೆ ಇಷ್ಟವಾಗುತ್ತಿತ್ತು. ಹಾಗಂತ ಅವರು ಅಷ್ಟೇನು ಉತ್ತಮ ನಾವಿಕರಾಗಿರಲಿಲ್ಲ. ದೋಣಿ ಹಾಳಾದರೆ ಅಕ್ಕಪಕ್ಕದವರು ಅದನ್ನು ಸರಿಪಡಿಸಿಕೊಡ ಬೇಕಿತ್ತು. ಅಷ್ಟೇ ಅಲ್ಲ ಅವರು ತಮ್ಮ ಜೀವನದುದ್ದಕ್ಕೂ ಈಜುವುದನ್ನು ಕಲಿಯಲೇ ಇಲ್ಲವಂತೆ. ಹಾಗಂತ ಅವರು ನೌಕಾಯಾನ ಕೈಗೊಳ್ಳುವುದನ್ನು ತಡೆಯುವುದಕ್ಕೆ ಸಾಧ್ಯವಾಗಿಲ್ಲ.

ರೆಫ್ರಿಜರೇಟರ್ ಸಂಶೋಧನೆ

ಐನ್‌ಸ್ಟೀನ್‌ ಅವರ ಸೀನಿಯರ್ ಆಗಿದ್ದ ಲಿಯೋ ಸಿಜಾರ್ಡ್ ಅವರ ಜೊತೆಗೆ ರೆಫ್ರಿಜರೇಟರ್‌ ಅನ್ನು ಕೂಡ ಸಂಶೋಧನೆ ಮಾಡಿದ್ದರು. ಎರಡು ದಶಕಗಳ ನಂತರ ಅವರಥಿಯರಿಯನ್ನು ಅವರು ಪ್ರಕಟಿಸಿದರು. 1930 ರಲ್ಲಿ ಈ ರೆಪ್ರಿಜರೇಟರ್‌ ಅನ್ನು ಪೇಟೆಂಟ್ ಪಡೆಯಲಾಯಿತು ಮತ್ತು ಕೂಡಲೇ ಅದರ ಅಪ್‌ಡೇಟ್‌ ಆಗಿರುವ ವರ್ಷನ್‌ ಕೂಡ ಬಂತು.

ಇಸ್ರೆಲ್‌ನ ಮೊದಲ ಅಧ್ಯಕ್ಷ ಚೈಮ್ ವಿಜ್ಮನ್‌ ಅವರು 1952 ನವೆಂಬರ್ 9 ರಂದು ಮೃತಪಟ್ಟ ನಂತರ ಇಸ್ರೆಲ್‌ನ ಎರಡನೇ ಅಧ್ಯಕ್ಷರಾಗುವಂತೆ ಆಲ್ಬರ್ಟ್ ಐನ್‌ಸ್ಟೀನ್‌ ಆಫರ್‌ ಬಂದಿತ್ತು. ಆದರೆ 73 ವರ್ಷದವರಾಗಿದ್ದ ಐನ್‌ಸ್ಟೀನ್‌ ನಾಜೂಕಿ ನಿಂದಲೇ ಅವರಿಗೆ ಬಂದ ಆಫರ್‌ನ್ನು ನಿರಾಕರಿಸಿದ್ದರು. ಅದಕ್ಕೆ ಕಾರಣವನ್ನು ಕೇಳಿದಾಗ ಅವರು “ದೈಹಿಕ ಯೋಗ್ಯತೆಯ ಕೊರತೆ ಮತ್ತು ಜನರನ್ನು ಸರಿಯಾಗಿ ನಿಭಾಯಿಸುವ ತಾಕತ್ತು ಇಲ್ಲದೇ ಇರುವುರು” ಎಂದು ತಿಳಿಸಿದ್ದರು. ಅಂದರೆ ನನಗೆ ವಯಸ್ಸಾಗಿದೆ, ನಾನು ಅಧ್ಯಕ್ಷನಾಗುವುದು ಸೂಕ್ತವಲ್ಲ ಎಂದು ಹೇಳಿದ್ದರು.

ಬ್ರಿಲಿಯೆಂಟ್‌ ಬ್ರೈನ್‌

ಐನ್‌ಸ್ಟೀನ್‌ ಅವರ ಹೆಸರನ್ನೇ ತೆಗೆದುಕೊಳ್ಳಿ. ಇಂಗ್ಲೀಷ್‌ನಲ್ಲಿ ಅವರ ಹೆಸರಿನ ʻAlbert Einsteinʼ ನಲ್ಲಿರುವ ಅಕ್ಷರಗಳನ್ನು ಆಚೀಚೆ ಮಾಡಿ ಪುನಃ ಜೋಡಿಸಿದರೆ ‘Ten elite brains’ ಎಂದು ಕೂಡ ಮಾಡಬಹುದು. ಇದರರ್ಥ 10 ಶ್ರೇಷ್ಠ ಮೆದುಳುಗಳು ಎಂದಾಗುತ್ತದೆ. ಇದಷ್ಟು ಸಮಂಜಸವಾಗಿಲ್ಲವೇ ಐನ್‌ಸ್ಟೀನ್‌ ಅವರಿಗೆ ನೀವೇ ಹೇಳಿ!

ಇದನ್ನೂ ಓದಿ : Bal Puarskar: ಬೆಂಗಳೂರಿನ 8 ವರ್ಷದ ಬಾಲಕ ರಿಷಿಗೆ ರಾಷ್ಟ್ರೀಯ ಬಾಲ ಪುರಸ್ಕಾರ, ಈತನ ಐಕ್ಯು ಐನ್‌ಸ್ಟೀನ್‌ಗಿಂತ ಹೆಚ್ಚು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Ancient snake: ಭಾರತದಲ್ಲಿತ್ತು 1000 ಕಿಲೋ ತೂಕ, 50 ಅಡಿ ಉದ್ದದ ʼವಾಸುಕಿʼ ಹಾವು!

Ancient snake: 2005ರಲ್ಲಿ ಗುಜರಾತ್‌ನಲ್ಲಿ ಪತ್ತೆಯಾದ ಪಳೆಯುಳಿಕೆಗಳು, ಭೂಮಿಯ ಮೇಲೆ ಅಸ್ತಿತ್ವದಲ್ಲಿದ್ದ ಅತಿದೊಡ್ಡ ಹಾವಿನದ್ದು ಆಗಿವೆ. ಇದನ್ನು ಸಂಶೋಧಕರು “ವಾಸುಕಿ ಇಂಡಿಕಸ್” ಎಂದು ಹೆಸರಿಸಿದ್ದಾರೆ. ಇದು 4.7 ಕೋಟಿ ವರ್ಷಗಳ ಹಿಂದೆ ಕಚ್‌ನ ಜವುಗು ಪ್ರದೇಶಗಳಲ್ಲಿ ವಾಸಿಸಿತ್ತು.

VISTARANEWS.COM


on

Ancient snake vasuki indicus
Koo

ಹೊಸದಿಲ್ಲಿ: ಜಗತ್ತಿನ ಅತೀ ದೊಡ್ಡ, ಭಾರೀ ಗಾತ್ರದ ಹಾವು (big snake) ಭಾರತದಲ್ಲಿ ಬದುಕಿತ್ತು ಎಂಬುದು ಇದೀಗ ಸಂಶೋಧನೆಯಿಂದ ಗೊತ್ತಾಗಿದೆ. ಗುಜರಾತ್‌ನಲ್ಲಿ ಪತ್ತೆಯಾದ ಪ್ರಾಚೀನ ಹಾವೊಂದರ (Ancient snake) ಪಳೆಯುಳಿಕೆಗಳು (follisls) ಅದರ ಭಾರೀ ಗಾತ್ರ ಹಾಗೂ ತೂಕವನ್ನು ತಿಳಿಯಪಡಿಸಿವೆ. ಅದು ಸುಮಾರು 50 ಅಡಿ ಉದ್ದ ಹಾಗೂ 1,000 ಕೆಜಿ ತೂಕವಿತ್ತಂತೆ!

2005ರಲ್ಲಿ ಗುಜರಾತ್‌ನಲ್ಲಿ ಪತ್ತೆಯಾದ ಪಳೆಯುಳಿಕೆಗಳು, ಭೂಮಿಯ ಮೇಲೆ ಅಸ್ತಿತ್ವದಲ್ಲಿದ್ದ ಅತಿದೊಡ್ಡ ಹಾವಿನದ್ದು ಆಗಿವೆ. ಇದನ್ನು ಸಂಶೋಧಕರು “ವಾಸುಕಿ ಇಂಡಿಕಸ್” ಎಂದು ಹೆಸರಿಸಿದ್ದಾರೆ. ಇದು 4.7 ಕೋಟಿ ವರ್ಷಗಳ ಹಿಂದೆ ಕಚ್‌ನ ಜವುಗು ಪ್ರದೇಶಗಳಲ್ಲಿ ವಾಸಿಸಿತ್ತು. ನಿನ್ನೆ ವಿಜ್ಞಾನ ಪತ್ರಿಕೆಗಳಲ್ಲಿ ಇದು ವರದಿಯಾಗಿದೆ. ಈ ಜಾತಿಯ ಹಾವು 36ರಿಂದ ಸುಮಾರು 50 ಅಡಿ ಉದ್ದದವರೆಗೂ ಬೆಳೆಯುತ್ತಿತ್ತು.

ಗಾತ್ರದಲ್ಲಿ ʼವಾಸುಕಿʼಯ ಗಾತ್ರ ಹಾಗೂ ತೂಕ ಈಗ ಅಳಿವಿನಂಚಿನಲ್ಲಿರುವ ʼಟೈಟಾನೊಬೊವಾʼವನ್ನು ಮೀರಿರಬಹುದು. ಇದು 42 ಅಡಿ ಅಳತೆಯ ಅತಿದೊಡ್ಡ ಹಾವು. ಇದು 1 ಟನ್ ಅಥವಾ 1,000 ಕಿಲೋಗ್ರಾಂಗಳಷ್ಟು ತೂಕವನ್ನು ಹೊಂದಿರಬಹುದು ಎಂದು ಸಂಶೋಧಕರು ಹೇಳುತ್ತಾರೆ. ಇಂದು ಜೀವಂತವಾಗಿರುವ ಅತಿದೊಡ್ಡ ಹಾವೆಂದರೆ ಏಷ್ಯಾದ 33 ಅಡಿ ಉದ್ದದ ರೆಟಿಕ್ಯುಲೇಟೆಡ್ ಹೆಬ್ಬಾವು.

“ಅದರ ದೊಡ್ಡ ಗಾತ್ರವನ್ನು ಪರಿಗಣಿಸಿದರೆ, ವಾಸುಕಿಯು ನಿಧಾನವಾಗಿ ಚಲಿಸುವ ಹೊಂಚುದಾಳಿ ಪರಭಕ್ಷಕವಾಗಿತ್ತು. ಅದು ಅನಕೊಂಡಗಳು ಮತ್ತು ಹೆಬ್ಬಾವುಗಳಂತೆ ಸುತ್ತುವರಿದು ಬಿಗಿಯುವಿಕೆಯ ಮೂಲಕ ತನ್ನ ಬೇಟೆಯನ್ನು ಪಡೆಯುತ್ತಿತ್ತು” ಎಂದು ಐಐಟಿ-ರೂರ್ಕಿಯಲ್ಲಿ ಪ್ಯಾಲಿಯಂಟಾಲಜಿಯ ಪೋಸ್ಟ್‌ ಡಾಕ್ಟರಲ್ ಸಂಶೋಧಕ ಮತ್ತು ಅಧ್ಯಯನದ ಪ್ರಮುಖ ಲೇಖಕ ದೇಬಜಿತ್ ದತ್ತಾ ಹೇಳುತ್ತಾರೆ. “ಈ ಹಾವು ಕರಾವಳಿಯ ಸಮೀಪವಿರುವ ಜೌಗು ಪ್ರದೇಶದಲ್ಲಿ ಜಾಗತಿಕ ತಾಪಮಾನವು ಇಂದಿನಕ್ಕಿಂತ ಹೆಚ್ಚಿರುವ ಸಮಯದಲ್ಲಿ ವಾಸಿಸುತ್ತಿತ್ತು” ಎಂದಿದ್ದಾರೆ.

ಹಿಂದೂ ಪುರಾಣಗಳಲ್ಲಿ ʼವಾಸುಕಿʼ ಎಂಬ ಭಾರೀ ನಾಗರಾಜನ ಕತೆಗಳು ಇವೆ. ಇದನ್ನು ಸಾಮಾನ್ಯವಾಗಿ ಶಿವನ ಕುತ್ತಿಗೆಗೆ ಸುತ್ತುವಂತೆ ಚಿತ್ರಿಸಲಾಗುತ್ತದೆ. ಸಮುದ್ರ ಮಥನಕ್ಕೆ ಈ ಹಾವನ್ನು ಬಳಸಿಕೊಳ್ಳಲಾಗಿತ್ತು ಎಂದು ಕತೆಯಿದೆ. ಈ ಹಿನ್ನೆಲೆಯಲ್ಲಿ ಸಂಶೋಧಕರು ಇದಕ್ಕೆ ʼವಾಸುಕಿ ಇಂಡಿಕಸ್ʼ ಎಂಬ ಹೆಸರನ್ನು ನೀಡಿದ್ದಾರೆ.

“ಇದು ಬಹಳ ಸಾಂಕೇತಿಕವಾಗಿದೆ” ಎಂದು ನಾಮಕರಣದ ನಂತರ ದತ್ತ ಹೇಳಿದ್ದಾರೆ. “ವಾಸುಕಿ ನಮ್ಮ ಸರ್ಪರಾಜ. ಹೀಗಾಗಿ ಇಲ್ಲಿರುವ ಅಸಾಧಾರಣವಾದ ದೊಡ್ಡ ಗಾತ್ರದ ಹಾವೂ ಅದೇ” ಎಂದು ಅವರು ವಿವರಿಸಿದರು.

ವಾಸುಕಿ ಇಂಡಿಕಸ್‌ನ ಪಳೆಯುಳಿಕೆಯನ್ನು IIT-ರೂರ್ಕಿಯ ಪ್ರಾಗ್ಜೀವಶಾಸ್ತ್ರದ ಪ್ರಾಧ್ಯಾಪಕ ಸುನಿಲ್ ಬಾಜಪೇಯಿ ಅವರು 2005ರಲ್ಲಿ ಕಂಡುಹಿಡಿದರು. ಅವರು ಕಚ್‌ನಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಅವಶೇಷಗಳನ್ನು ಪತ್ತೆಹಚ್ಚಿದರು.

ಆ ಸಮಯದಲ್ಲಿ, ʼಸೈಂಟಿಫಿಕ್ ಅಮೇರಿಕನ್ʼ ಪ್ರಕಾರ, ಅವಶೇಷಗಳು ಈಗಾಗಲೇ ತಿಳಿದಿರುವ ಇತಿಹಾಸಪೂರ್ವ ಜಾತಿಯ ಮೊಸಳೆಗೆ ಸೇರಿವೆ ಎಂದು ಬಾಜಪೇಯಿ ನಂಬಿದ್ದರು. 2022ರವರೆಗೆ ಪಳೆಯುಳಿಕೆ ಅವರ ಪ್ರಯೋಗಾಲಯದಲ್ಲಿ ಇತ್ತು. ಅದೇ ವರ್ಷ ಪ್ರಯೋಗಾಲಯಕ್ಕೆ ಸೇರಿದ ದತ್ತಾ ಅವುಗಳನ್ನು ಪರೀಕ್ಷಿಸಲು ಪ್ರಾರಂಭಿಸಿದರು. ಆ ಚೂರುಗಳು ಬೇರೆ ಜಾತಿಗೆ ಸೇರಿದವು ಎಂದು ಇಬ್ಬರಿಗೂ ಅರಿವಾಯಿತು.

“ಪಳೆಯುಳಿಕೆಯು 2005ರಲ್ಲಿ ಕಂಡುಬಂದಿದೆ, ಆದರೆ ನಾನು ಬೇರೆ ಬೇರೆ ಪಳೆಯುಳಿಕೆಗಳ ಮೇಲೆ ಕೆಲಸ ಮಾಡುತ್ತಿರುವುದರಿಂದ, ಅದು ಹಾಗೇ ಉಳಿಯಿತು. 2022ರಲ್ಲಿ ನಾವು ಪಳೆಯುಳಿಕೆಯನ್ನು ಮರು-ಪರಿಶೀಲಿಸಲು ಪ್ರಾರಂಭಿಸಿದ್ದೇವೆ. ಆರಂಭದಲ್ಲಿ ಅದರ ಗಾತ್ರದಿಂದಾಗಿ, ಇದು ಮೊಸಳೆ ಎಂದು ನಾನು ಭಾವಿಸಿದೆ. ಆದರೆ ನಂತರ ಅದು ಹಾವಿನದ್ದಾಗಿದೆ ಎಂದು ಅರಿತುಕೊಂಡೆವು” ಎಂದು ಬಾಜಪೇಯಿ ತಿಳಿಸಿದರು.

ಇದನ್ನೂ ಓದಿ: Hottest Year: 1.25 ಲಕ್ಷ ವರ್ಷಗಳಲ್ಲೇ 2023 ಅತಿ ಬಿಸಿಯಾದ ವರ್ಷ, ಕಾರಣ ಏನು?

Continue Reading

ದೇಶ

Chandrayaan-3 mission: ಇಸ್ರೋದ ಚಂದ್ರಯಾನ-3 ಟೀಮ್‌ಗೆ ಅಮೆರಿಕದ ಪ್ರಶಸ್ತಿ: ʼಸ್ಫೂರ್ತಿʼ ಎಂದ ಸ್ಪೇಸ್‌ ಫೌಂಡೇಶನ್

Chandrayaan-3 mission: ಬಾಹ್ಯಾಕಾಶ ಪರಿಶೋಧನೆಯ ಸಾಧ್ಯತೆಯನ್ನು ಹೆಚ್ಚಿಸುವಲ್ಲಿ ಚಂದ್ರಯಾನದ ಕೊಡುಗೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ, ಚಂದ್ರಯಾನ-3 ಮಿಷನ್ ನಡೆಸಲಾಗಿತ್ತು. ಅದು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿ ಲ್ಯಾಂಡಿಂಗ್ ಮಾಡಿತ್ತು.

VISTARANEWS.COM


on

vikram lander pragyan rover
Koo

ಹೊಸದಿಲ್ಲಿ: ಚಂದ್ರಯಾನ-3 ಮಿಷನ್‌ನ (Chandrayaan-3 mission)‌ ಯಶಸ್ಸಿಗೆ ಕಾರಣವಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO – ಇಸ್ರೋ) ತಂಡವನ್ನು ಸೋಮವಾರ ʼ2024ರ ಜಾನ್ ಎಲ್. ಜಾಕ್ ಸ್ವಿಗರ್ಟ್ ಜೂನಿಯರ್ʼ ಪ್ರಶಸ್ತಿಯನ್ನು (US Award) ಬಾಹ್ಯಾಕಾಶ ಪರಿಶೋಧನೆಗಾಗಿ (space exploration) ನೀಡಿ ಗೌರವಿಸಲಾಗಿದೆ. ಸ್ಪೇಸ್ ಫೌಂಡೇಶನ್ (Space Foundation) ಇದನ್ನು ನೀಡುತ್ತಿದೆ.

ಬಾಹ್ಯಾಕಾಶ ಪರಿಶೋಧನೆಯ ಸಾಧ್ಯತೆಯನ್ನು ಹೆಚ್ಚಿಸುವಲ್ಲಿ ಚಂದ್ರಯಾನದ ಕೊಡುಗೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ, ಚಂದ್ರಯಾನ-3 ಮಿಷನ್ ನಡೆಸಲಾಗಿತ್ತು. ಅದು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿ ಲ್ಯಾಂಡಿಂಗ್ ಮಾಡಿತ್ತು. ಈ ಸಾಧನೆಯನ್ನು ಸಾಧಿಸಿದ ಮೊದಲ ದೇಶವಾಗಿ ಭಾರತ ಹೊರಹೊಮ್ಮಿತ್ತು. ನಂತರ ಚಂದ್ರಯಾನ 3ರ ಮೂನ್ ಲ್ಯಾಂಡರ್ ಲ್ಯಾಂಡಿಂಗ್ ಸೈಟ್ ಅನ್ನು ʼಶಿವಶಕ್ತಿʼ ಎಂದು ಹೆಸರಿಸಲಾಗುವುದು ಎಂದು ಪ್ರಧಾನಿ ಮೋದಿ ಘೋಷಿಸಿದ್ದರು.

ಕೊಲೊರಾಡೋದಲ್ಲಿ ವಾರ್ಷಿಕ ಬಾಹ್ಯಾಕಾಶ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ನೀಡಲಾದ ಪ್ರಶಸ್ತಿಯನ್ನು ಇಸ್ರೋ ಪರವಾಗಿ ಹ್ಯೂಸ್ಟನ್‌ನಲ್ಲಿರುವ ಭಾರತದ ಕಾನ್ಸುಲ್ ಜನರಲ್ ಡಿಸಿ ಮಂಜುನಾಥ್ ಅವರು ಸ್ವೀಕರಿಸಿದರು.

“ಬಾಹ್ಯಾಕಾಶದಲ್ಲಿ ಭಾರತದ ನಾಯಕತ್ವವು ಜಗತ್ತಿಗೆ ಸ್ಫೂರ್ತಿಯಾಗಿದೆ” ಎಂದು ಸ್ಪೇಸ್ ಫೌಂಡೇಶನ್ ಸಿಇಒ ಹೀದರ್ ಪ್ರಿಂಗಲ್ ಜನವರಿಯಲ್ಲಿ ಪ್ರಶಸ್ತಿಯನ್ನು ಘೋಷಿಸಿದಾಗ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಇಡೀ ಚಂದ್ರಯಾನ-3 ತಂಡದ ಪ್ರವರ್ತಕ ಕೆಲಸವು ಬಾಹ್ಯಾಕಾಶ ಪರಿಶೋಧನೆಯ ಸಾಧ್ಯತೆಯನ್ನು ಹೆಚ್ಚಿಸಿದೆ. ಅವರ ಗಮನಾರ್ಹವಾದ ಚಂದ್ರನ ಲ್ಯಾಂಡಿಂಗ್ ನಮಗೆಲ್ಲರಿಗೂ ಮಾದರಿಯಾಗಿದೆ. ಅಭಿನಂದನೆಗಳು. ನೀವು ಮುಂದೆ ಏನು ಮಾಡುತ್ತೀರಿ ಎಂದು ನೋಡಲು ನಾವು ಕಾಯುತ್ತಿದ್ದೇವೆ” ಎಂದು ಅವರು ಹೇಳಿದರು.

ಸ್ಪೇಸ್‌ ಫೌಂಡೇಶನ್, ಪತ್ರಿಕಾ ಪ್ರಕಟಣೆಯಲ್ಲಿ, ಇಸ್ರೋ ಅಭಿವೃದ್ಧಿಪಡಿಸಿದ ಚಂದ್ರಯಾನ-3 ಮಿಷನ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಮೂಲಕ ಮನುಕುಲದ ಬಾಹ್ಯಾಕಾಶ ಪರಿಶೋಧನೆಯ ಪರಿಧಿಯನ್ನು ವಿಸ್ತರಿಸಿದೆ ಎಂದು ಹೈಲೈಟ್ ಮಾಡಿದೆ.

ಜಾನ್ ಎಲ್. ʼಜ್ಯಾಕ್’ ಸ್ವಿಗರ್ಟ್ ಜೂನಿಯರ್ ಪ್ರಶಸ್ತಿ ಎಂದರೇನು?

ಬಾಹ್ಯಾಕಾಶ ಪರಿಶೋಧನೆಗಾಗಿ ಜಾನ್ L. “ಜ್ಯಾಕ್” ಸ್ವಿಗರ್ಟ್ ಜೂನಿಯರ್ ಪ್ರಶಸ್ತಿ ನೀಡಲಾಗುತ್ತದೆ. ಬಾಹ್ಯಾಕಾಶ ಸಂಸ್ಥೆ ಅಥವಾ ಸಂಸ್ಥೆಗಳ ಒಕ್ಕೂಟದಿಂದ ಬಾಹ್ಯಾಕಾಶ ಪರಿಶೋಧನೆ ಮತ್ತು ಅನ್ವೇಷಣೆಯಲ್ಲಿ ಆಗುವ ಗಮನಾರ್ಹ ಸಾಧನೆಗಳನ್ನು ಗುರುತಿಸುತ್ತದೆ.

ಈ ಪ್ರಶಸ್ತಿಯು ಗಗನಯಾತ್ರಿ ಜಾನ್ L. “ಜ್ಯಾಕ್” ಸ್ವಿಗರ್ಟ್ ಜೂನಿಯರ್ ಅವರ ಗೌರವಾರ್ಥ ಸ್ಥಾಪಿಸಲ್ಪಟ್ಟಿದೆ. ಅವರ ಕೊಡುಗೆಗಳು “ಸ್ಪೇಸ್ ಫೌಂಡೇಶನ್ʼʼ ಸ್ಥಾಪನೆಗೆ ಸ್ಫೂರ್ತಿ ನೀಡಿವೆ. ಕೊಲೊರಾಡೋ ಮೂಲದ ಸ್ವಿಗರ್ಟ್, ನಿವೃತ್ತ US ನೌಕಾಪಡೆಯ ಕ್ಯಾಪ್ಟನ್ ಜೇಮ್ಸ್ A. ಲೊವೆಲ್ ಜೂನಿಯರ್ ಮತ್ತು ಫ್ರೆಡ್ ಹೈಸ್ ಜೊತೆಗೆ ಅಪೊಲೊ 13 ಚಂದ್ರನ ಕಾರ್ಯಾಚರಣೆಯ ಭಾಗವಾಗಿದ್ದರು. ಈ ಕಾರ್ಯಾಚರಣೆಯು ಚಂದ್ರನ ಮಾರ್ಗದಲ್ಲಿ ನಿರ್ಣಾಯಕ ಆಮ್ಲಜನಕ ಟ್ಯಾಂಕ್ ವೈಫಲ್ಯವನ್ನು ಎದುರಿಸಿತ್ತು. ಪರಿಣಾಮವಾಗಿ ಭೂಮಿಗೆ ಸಾಹಸಪೂರ್ವಕವಾಗಿ, ನಾಟಕೀಯವಾಗಿ ಮರಳಿತ್ತು.

ಚಂದ್ರಯಾನ-3

ಭಾರತವು ತನ್ನ ಚಂದ್ರಯಾನ-3 ಮಿಷನ್‌ನೊಂದಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಮೊದಲ ಬಾರಿಗೆ ಇಳಿಯುವಿಕೆಯನ್ನು ಸಾಧಿಸುವ ಮೂಲಕ ಇತಿಹಾಸವನ್ನು ಬರೆದಿದೆ. ಈ ಮೈಲಿಗಲ್ಲನ್ನು ಚಂದ್ರಯಾನ-3 ರ ವಿಕ್ರಮ್ ಎಂಬ ಲ್ಯಾಂಡರ್, ಪ್ರಗ್ಯಾನ್ ರೋವರ್ ಮೂಲಕ ಕಳೆದ ಆಗಸ್ಟ್ 23ರಂದು ಸಂಜೆ 6.04ಕ್ಕೆ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸುವ ಮೂಲಕ ಸಾಧಿಸಲಾಯಿತು.

US, ಚೀನಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟದ ನಂತರ ಚಂದ್ರನ ಮೇಲೆ “ಸಾಫ್ಟ್ ಲ್ಯಾಂಡಿಂಗ್” ಅನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದ ನಾಲ್ಕನೇ ದೇಶವಾಗಿ ಭಾರತ ಗುರುತಿಸಲ್ಪಟ್ಟಿದೆ. ಈ ಸಾಧನೆಯನ್ನು ಗುರುತಿಸಿ, ಪ್ರಧಾನಿ ನರೇಂದ್ರ ಮೋದಿ ಅವರು ಚಂದ್ರಯಾನ 3ರ ಚಂದ್ರನ ಲ್ಯಾಂಡಿಂಗ್ ಯಶಸ್ಸಿನ ಸ್ಮರಣಾರ್ಥ ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಿಸಿದರು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಚಂದ್ರಯಾನ 3 ಇಳಿದ ಜಾಗವೀಗ ‘ಶಿವಶಕ್ತಿ’;‌ ದೇಶದ ಸಾಧನೆ ಚಿರಾಯು

Continue Reading

Latest

Water From Air: ಗಾಳಿಯಿಂದಲೇ ನೀರು ಉತ್ಪಾದನೆ! ಬೆಂಗಳೂರು ಸ್ಟಾರ್ಟಪ್‌ನ ಕ್ರಾಂತಿಕಾರಿ ಹೆಜ್ಜೆ!

Water From Air: ಕುಡಿಯುವ ನೀರಿನ ಸಮಸ್ಯೆ ಈಗ ವಿಶ್ವವನ್ನೇ ಬಾಧಿಸುತ್ತಿದೆ. ಆದರೆ ಇದಕ್ಕೆ ಈಗ ಬೆಂಗಳೂರಿನ ಸ್ಟಾರ್ಟ್ ಅಪ್ ವೊಂದು ಪರಿಹಾರ ಕಂಡುಕೊಂಡಿದೆ. ಗಾಳಿಯಿಂದ ಶುದ್ಧ ಕುಡಿಯುವ ನೀರನ್ನು ಪಡೆಯುವ ಬಾಟಲಿಗಳನ್ನು ಇದು ಪರಿಚಯಿಸಿದೆ. ಇದು ನಡೆದು ಬಂದ ಹಾದಿ ಹೇಗಿತ್ತು ಗೊತ್ತೇ? ಇಲ್ಲಿದೆ ಕುತೂಹಲಕರ ಮಾಹಿತಿ.

VISTARANEWS.COM


on

By

Water From Air
Koo

ಬೆಂಗಳೂರು: ಕುಡಿಯುವ ನೀರಿನ ಸಮಸ್ಯೆ ಈಗ ವಿಶ್ವವನ್ನೇ ಕಾಡುತ್ತಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಇದೀಗ ಒಂದು ಆಶಾಕಿರಣ ಗೋಚರಿಸಿದೆ. ಅದೂ ನಮ್ಮ ಬೆಂಗಳೂರಿನಲ್ಲಿ. ನದಿ ಅಥವಾ ನೆಲದೊಳಗಿನ ಜಲ ಸಂಪನ್ಮೂಲ ಬಳಸಿಕೊಳ್ಳದೆ ಗಾಳಿಯಿಂದ ಶುದ್ಧ ಕುಡಿಯುವ ನೀರನ್ನು (Water From Air) ಉತ್ಪಾದಿಸುವ ವಿಶೇಷ ಬಾಟಲಿಗಳನ್ನು (Bottles) ಬೆಂಗಳೂರು ಸ್ಟಾರ್ಟ್‌ಅಪ್ (Bengaluru Startup) ಕಂಪನಿಯೊಂದು ಪರಿಚಯಿಸಿದೆ. ಜಾಗತಿಕವಾಗಿ ಕುಡಿಯುವ ನೀರಿನ ಸಮಸ್ಯೆಗೆ ಇದು ಸೂಕ್ತ ಪರಿಹಾರವಾಗುವ ಭರವಸೆ ಮೂಡಿಸಿದೆ.

ಬೆಂಗಳೂರಿನ ಉರವು ಲ್ಯಾಬ್ (Uravu Labs) ಗಾಳಿಯಿಂದ ನೀರನ್ನು ಉತ್ಪಾದಿಸುವ ವಿಶೇಷ ಬಾಟಲಿಗಳನ್ನು ಪರಿಚಯಿಸಿದ್ದು, ಈ ಕುರಿತು ಲ್ಯಾಬ್ಸ್‌ನ ಸಿಇಒ ಮತ್ತು ಸಹ-ಸಂಸ್ಥಾಪಕರಾದ ಸ್ವಪ್ನಿಲ್ ಶ್ರೀವಾಸ್ತವ್ ಸಂದರ್ಶನವೊಂದರಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಗಾಳಿಯಿಂದ ನೀರಿನ ಉತ್ಪಾದನೆ ಹೇಗೆ?

ಉರವುನ ಕೋರ್ ತಂತ್ರಜ್ಞಾನವು ಶುಷ್ಕ ವಸ್ತುಗಳಿಂದ ಪ್ರೇರಿತವಾದ ವಿಶಿಷ್ಟ ಪ್ರಕ್ರಿಯೆಯನ್ನು ಬಳಸಿಕೊಂಡು ಗಾಳಿಯಿಂದ ನೀರನ್ನು ಹೊರತೆಗೆಯುತ್ತದೆ.

ಸುತ್ತಲಿನ ಗಾಳಿಯಿಂದ ತೇವಾಂಶವನ್ನು ಹೀರಿಕೊಳ್ಳುವ ವಸ್ತುವನ್ನು ಬಳಸಿ ಅದರಲ್ಲಿ ಸಂಗ್ರಹಿಸಿ ಆವಿಯನ್ನು ಬಿಡುಗಡೆ ಮಾಡಲು ಬಿಸಿ ಮಾಡಲಾಗುತ್ತದೆ. ಈ ಆವಿಯನ್ನು ಘನೀಕರಿಸಿ ನಿಯಂತ್ರಿತ ತಾಪಮಾನದಲ್ಲಿ ತಂಪಾಗಿಸಿ ಶುದ್ಧ ಕುಡಿಯುವ ನೀರನ್ನು ಪಡೆಯಲಾಗುತ್ತದೆ.

ಇದನ್ನೂ ಓದಿ: karnataka Weather : ಬೆಂಗಳೂರು ಸೇರಿ ಹಲವೆಡೆ ಸುಡುತ್ತಿದೆ ಉರಿ ಬಿಸಿಲು; ಮತ್ಯಾವಾಗ ಮಳೆ

ಯಾಕಾಗಿ ಈ ಯೋಜನೆ?

ಜನಸಂಖ್ಯೆಯ ಬೆಳವಣಿಗೆ, ಅಂತರ್ಜಲದ ಕೊರತೆ ಮತ್ತು ಹವಾಮಾನ ಬದಲಾವಣೆಯಿಂದ ಉಲ್ಬಣಗೊಂಡಿರುವ ನೀರಿನ ಕೊರತೆಯನ್ನು ನಿವಾರಿಸುವುದು ಈಗ ವಿಶ್ವಾದ್ಯಂತ ಇರುವ ಬಹುದೊಡ್ಡ ಸವಾಲು. ಅದರಲ್ಲೂ ಭಾರತದಲ್ಲಿ ನೀರಿನ ಬೇಡಿಕೆ ದಿನೇದಿನೇ ಹೆಚ್ಚಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ನೀರಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕಿದೆ. ಇದಕ್ಕಾಗಿ ಉರವು ತಂತ್ರಜ್ಞಾನ ಇದನ್ನು ಪ್ರಯೋಗ ಮಾಡಿದೆ.

ಹೇಗಿದೆ ಪ್ರಗತಿ?

ಉರವು ಲ್ಯಾಬ್ಸ್ ನಲ್ಲಿ ತಯಾರಿಸಲಾದ ಈ ಬಾಟಲುಗಳು ಗಾಜಿನದ್ದಾಗಿದೆ. ಇದರಲ್ಲಿರುವ ನವೀನ ರಿವರ್ಸ್ ಲಾಜಿಸ್ಟಿಕ್ಸ್ ಮಾದರಿಯು ಗಾಜಿನ ಬಾಟಲಿಗಳನ್ನು ಸ್ವಚ್ಛಗೊಳಿಸಲು, ಮರುಪೂರಣಗೊಳಿಸಲು ಮತ್ತು ಮರುಬಳಕೆಗಾಗಿ ಉಪಯುಕ್ತವಾಗಿದೆ. ಈ ಮಾದರಿಯ ಬಾಟಲಿಗಳನ್ನು ಕೋಕ್ ಅಥವಾ ಪೆಪ್ಸಿಯಂತಹ ಪಾನೀಯ ಕಂಪನಿಗಳು ಮಾತ್ರ ಬಳಸುತ್ತವೆ ಎಂದು ಶ್ರೀವಾಸ್ತವ್ ತಿಳಿಸಿದ್ದಾರೆ.

ಮಾರುಕಟ್ಟೆಯಲ್ಲಿ ಲಭ್ಯ

ಉತ್ತಮ ರುಚಿ ಮತ್ತು ಪರಿಸರ ಸ್ನೇಹಿ ಕಾಳಜಿಯನ್ನು ಹೊಂದಿರುವ ಉರವು ಈ ಬಾಟಲುಗಳಲ್ಲಿ ಗ್ರಾಹಕರಿಗೆ ಅವರ ಆಯ್ಕೆಯ ಭರವಸೆ ನೀಡುತ್ತಿದೆ. ಕಳೆದ 8 ತಿಂಗಳಿನಿಂದ ಬೆಂಗಳೂರಿನಲ್ಲಿ ಸುಮಾರು 3.5 ಲಕ್ಷ ಬಾಟಲಿಗಳನ್ನು ಮಾರಾಟ ಮಾಡಲಾಗಿದೆ. ಮಾರುಕಟ್ಟೆಗೆ ಇದನ್ನು ತರುವಾಗ, ವಿತರಣಾ ಜಾಲಗಳೊಂದಿಗೆ ಪಾಲುದಾರಿಕೆ ಮಾಡುವಾಗ ನೀರಿನ ಹೊರತೆಗೆಯುವಿಕೆ ಮತ್ತು ಪ್ಯಾಕೇಜಿಂಗ್‌ನ ಬ್ಯಾಕೆಂಡ್ ಕಾರ್ಯಾಚರಣೆಗಳ ಬಗ್ಗೆಯೂ ಸಂಪೂರ್ಣವಾಗಿ ವಿವರಿಸಲಾಗುತ್ತದೆ ಎಂದು ಹೇಳಿರುವ ಶ್ರೀವಾಸ್ತವ್, ಗ್ರಾಹಕರ ನಂಬಿಕೆಯನ್ನು ಗಳಿಸುವುದು ಮುಖ್ಯ ಎಂದಿದ್ದಾರೆ.

ಔಜಸ್ಯ ಎಂಬ ಲೇಬಲ್‌ನೊಂದಿಗೆ ‘ಫ್ರಮ್ ಏರ್’ ಟ್ರೇಡ್‌ಮಾರ್ಕ್ ಆಗಿ ಬರುವ ಬಾಟಲ್ ಗಳಲ್ಲಿ ಉರವು ಕಂಪನಿ ರಚಿಸಿದ್ದು ಎಂಬ ಉಲ್ಲೇಖವಿದೆ. ಈ ತಂತ್ರವು ಇಂಟೆಲ್‌ನಂತಹ ಪ್ರಸಿದ್ಧ ಬ್ರ್ಯಾಂಡ್‌ಗಳ ವಿಧಾನವನ್ನು ಹೋಲುತ್ತದೆ ಎಂದು ಅವರು ಹೇಳಿದರು.

ಉದ್ಯೋಗ ಭರವಸೆ

ಪ್ರಸ್ತುತ 70 ಮಂದಿ ಇದರಲ್ಲಿ ತೊಡಗಿಕೊಂಡಿದ್ದು, ಮುಂದೆ ಉರವು ಲ್ಯಾಬ್ಸ್, ವಿಸ್ತರಣೆ ಮತ್ತು ನಾವೀನ್ಯತೆಗಾಗಿ ಹೊಸ ಯೋಜನೆಗಳನ್ನು ಹಾಕಲಾಗುತ್ತಿದೆ. ಪ್ರಸ್ತುತ ಅಬುಧಾಬಿಯಲ್ಲಿ ಹೈಡ್ರೋಪೋನಿಕ್ಸ್ ಯೋಜನೆಯಲ್ಲಿ ತೊಡಗಿಸಿಕೊಂಡಿರುವ ಉರವು, ಅಲ್ಲಿ ದೊಡ್ಡ ದೊಡ್ಡ ಫಾರ್ಮ್‌ಗಳಿಂದ ನೀರನ್ನು ಹೊರತೆಗೆಯುವ ತಂತ್ರಜ್ಞಾನವನ್ನು ತಮ್ಮ ದೈನಂದಿನ ಅಗತ್ಯಗಳಿಗಾಗಿ ಬಳಸಿಕೊಳ್ಳುವುದನ್ನು ಪರಿಚಯಿಸಲಾಗುತ್ತಿದೆ ಎಂದು ಶ್ರೀವಾಸ್ತವ್ ತಿಳಿಸಿದ್ದಾರೆ.

ಮುಂದೇನು?

ಉರವು ಡೇಟಾ ಸೆಂಟರ್‌ಗಳಿಗಾಗಿ ಅಪ್ಲಿಕೇಶನ್‌ಗಳನ್ನು ಅನ್ವೇಷಿಸುತ್ತಿದ್ದು, ಒಂದು ಮೆಗಾವ್ಯಾಟ್ ಡೇಟಾ ಸೆಂಟರ್‌ಗೆ ಸಾಮಾನ್ಯವಾಗಿ ದಿನಕ್ಕೆ ಸುಮಾರು 80,000 ಲೀಟರ್ ನೀರು ಬೇಕಾಗುತ್ತದೆ. ಉರವು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಡೇಟಾ ಕೇಂದ್ರಗಳು ತಮ್ಮ ನೀರಿನ ಬಳಕೆಯನ್ನು ಕಡಿಮೆ ಮಾಡಬಹುದು. ಇದರಿಂದ ಶೇ. 90ರಷ್ಟು, ಸಮುದಾಯದ ನೀರಿನ ಮೂಲಗಳು ಮತ್ತು ಅಂತರ್ಜಲ ಜಲಾಶಯಗಳ ಮೇಲಿನ ಒತ್ತಡವನ್ನು ಇದು ಕಡಿಮೆ ಮಾಡುತ್ತದೆ ಎಂದು ಹೇಳಿದರು.

ಗಾಳಿಯಿಂದ ನೀರಿನ ತಂತ್ರಜ್ಞಾನವನ್ನು ಕೈಗೆಟುಕುವಂತೆ ಮಾಡುವುದು ಉರವು ಕಂಪನಿಯ ಅಂತಿಮ ಉದ್ದೇಶವಾಗಿದೆ ಎಂದು ಹೇಳಿರುವ ಶ್ರೀವಾಸ್ತವ್, ನೀರು ಭೂಮಿಯ ಮೇಲೆ ಹೆಚ್ಚು ಬಳಸುವ ವಸ್ತು. ಇದು ಭೌತಿಕ ಪ್ರಮಾಣದಲ್ಲಿ ಮತ್ತು ಗುಣಮಟ್ಟದ ಅಂಶಗಳಲ್ಲಿ ವೇಗವಾಗಿ ಕಡಿಮೆಯಾಗುತ್ತಿದೆ ಎಂದು ಕಾಳಜಿ ವ್ಯಕ್ತಪಡಿಸಿದ್ದಾರೆ.

ಎಷ್ಟು ವೆಚ್ಚ?

ಸಾಮಾನ್ಯವಾಗಿ ಶುದ್ಧೀಕರಣ ಪ್ರಕ್ರಿಯೆಗಳು ಮತ್ತು ಮೂಲದ ಗುಣಮಟ್ಟವನ್ನು ಅವಲಂಬಿಸಿ ನೀರಿನ ವೆಚ್ಚವು ಲೀಟರ್‌ಗೆ 20ರಿಂದ 60 ಪೈಸೆಗಳವರೆಗೆ ಇರುತ್ತದೆ. ಉರವು ಲ್ಯಾಬ್‌ಗಳಲ್ಲಿ ನೀರಿನ ಉತ್ಪಾದನೆಯ ವೆಚ್ಚ ಪ್ರತಿ ಲೀಟರ್‌ಗೆ ಸುಮಾರು 4 ರಿಂದ 5 ರೂಪಾಯಿಗಳು ಎಂದು
ಶ್ರೀವಾಸ್ತವ್ ಮಾಹಿತಿ ನೀಡಿದ್ದಾರೆ.

ನೀರಿನ ಕೊರತೆ ಇದ್ದಾಗ ಜನರು ನೀರಿಗಾಗಿ ಹೆಚ್ಚು ಬೆಲೆ ಕೊಡುತ್ತಾರೆ. ಆದರೆ ಗಾಳಿಯಿಂದ ನೀರಿನಂತಹ ಸ್ಥಿರ ತಂತ್ರಜ್ಞಾನದಲ್ಲಿ ಪ್ರತಿ ಲೀಟರ್‌ ನೀರಿಗೆ ಆರಂಭದಲ್ಲಿ ದುಬಾರಿಯಂತೆ ಕಂಡರೂ ನೀರಿನ ಬಿಕ್ಕಟ್ಟಿನ ಸಮಯದಲ್ಲಿ ದುಬಾರಿಯಾಗುವ ನೀರಿನ ಮೌಲ್ಯವನ್ನು ಗಮನಿಸಿದರೆ ಇದು ದುಬಾರಿಯಲ್ಲ. ಈ ತಂತ್ರಜ್ಞಾನ ಸರಳವಾದಂತೆ ಈ ಮಾದರಿಯ ನೀರು ಉತ್ಪಾದನೆ ವೆಚ್ಚವೂ ಕಡಿಮೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

Continue Reading

ವೈರಲ್ ನ್ಯೂಸ್

Viral Video: ಸೂರ್ಯಗ್ರಹಣದ ವೇಳೆ ಭೂಮಿ ಕಪ್ಪಾದದ್ದು ಹೀಗೆ! ಇದು ಬಾಹ್ಯಾಕಾಶದಿಂದ ಬಂದ ವಿಡಿಯೋ!

ಚಂದಿರನ (moon) ನೆರಳಿನ ಪರಿಣಾಮ ಭೂಮಿಯ ಒಂದು ಭಾಗವು ಹೇಗೆ ಕಪ್ಪಾಗಿ ಕಾಣುತ್ತದೆ ಎಂಬ ಈ ಬೆರಗುಗೊಳಿಸುವ ವೀಡಿಯೊ (viral video) ನೆಟಿಜನ್‌ಗಳನ್ನು ಮಂತ್ರಮುಗ್ಧರನ್ನಾಗಿಸಿದೆ.

VISTARANEWS.COM


on

ISS viral video solar eclipse
Koo

ಹೊಸದಿಲ್ಲಿ: ಯುಗಾದಿಯ (Ugadi 2024) ಹಿಂದಿನ ದಿನ (ಏಪ್ರಿಲ್ 8) ಸಂಭವಿಸಿದ ಸೂರ್ಯಗ್ರಹಣವು (Solar Eclipse 2024) ಪ್ರಪಂಚದಾದ್ಯಂತದ ಬಾಹ್ಯಾಕಾಶ (Space) ಪ್ರೇಮಿಗಳನ್ನು ತನ್ನ ಸುಂದರ ದೃಶ್ಯದಿಂದ ಮೂಕವಿಸ್ಮಿತರನ್ನಾಗಿಸಿತು. ಅನೇಕ ಜನರು ತಮ್ಮ ಮನೆಗಳಿಂದಲೇ ಗ್ರಹಣವನ್ನು ನೋಡಿದರೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (international space station – ಐಎಸ್ಎಸ್) ಕೂಡ ಬಾಹ್ಯಾಕಾಶದಿಂದ ಕಂಡ ಗ್ರಹಣದ ನೋಟವನ್ನು ಹಂಚಿಕೊಂಡಿದೆ. ಚಂದಿರನ (moon) ನೆರಳಿನ ಪರಿಣಾಮ ಭೂಮಿಯ ಒಂದು ಭಾಗವು ಹೇಗೆ ಕಪ್ಪಾಗಿ ಕಾಣುತ್ತದೆ ಎಂಬ ಈ ಬೆರಗುಗೊಳಿಸುವ ವೀಡಿಯೊ (viral video) ನೆಟಿಜನ್‌ಗಳನ್ನು ಮಂತ್ರಮುಗ್ಧರನ್ನಾಗಿಸಿದೆ.

ವೀಡಿಯೊವನ್ನು ಹಂಚಿಕೊಂಡಿರುವ ISS, ಪೋಸ್ಟ್‌ನ ಶೀರ್ಷಿಕೆಯಲ್ಲಿ ಹೀಗೆ ಮಾಹಿತಿ ನೀಡಿದೆ: “ಸೋಮವಾರ ಮಧ್ಯಾಹ್ನ ಸೂರ್ಯಗ್ರಹಣದ ಸಮಯದಲ್ಲಿ ಎಕ್ಸ್‌ಪೆಡಿಶನ್ 71 ಸಿಬ್ಬಂದಿಯು ಚಂದ್ರನ ನೆರಳು (ಅಥವಾ ಅಂಬ್ರಾ- Umbra) ಅನ್ನು ಸೆರೆಹಿಡಿದರು. ಸಿಬ್ಬಂದಿ ಇಲ್ಲಿ ಸರಕು ವರ್ಗಾವಣೆ, ಬಾಹ್ಯಾಕಾಶ ಸೂಟ್‌ಗಳು ಮತ್ತು ವಿಜ್ಞಾನದ ಕೆಲಸದಲ್ಲಿ ತೊಡಗಿದ್ದರು. ಆಗ್ನೇಯ ಕೆನಡಾದ ಮೇಲೆ ಚಾಚಿದ್ದ ಸೂರ್ಯಗ್ರಹಣದ ನೆರಳಿನ ಹಾದಿಯಲ್ಲಿ ಬಾಹ್ಯಾಕಾಶ ನಿಲ್ದಾಣ ಸುತ್ತುತ್ತಿರುವಾಗ ಇದು ಭೂಮಿಯ ಮೇಲೆ ಗೋಚರಿಸಿತು.”

ಈ ವೀಡಿಯೊ ಭೂಮಿಯ ಮೇಲಿನ ಗ್ರಹಣದ ನೆರಳನ್ನು ತೋರಿಸಿದೆ. ಆಕಾಶದ ಘಟನೆ ನಡೆಯುವಾಗ ನಮ್ಮ ನೀಲಿ ಗ್ರಹ ಭೂಮಿಯ ಒಂದು ಭಾಗ ಕಪ್ಪು ಬಣ್ಣಕ್ಕೆ ತಿರುಗಿದೆ. ಈ ವೀಡಿಯೊವನ್ನು ಕೆಲವು ಗಂಟೆಗಳ ಹಿಂದೆ ಪೋಸ್ಟ್ ಮಾಡಲಾಗಿದೆ. ಹಂಚಿಕೊಂಡ ನಂತರ ಇದು ಸುಮಾರು ಇಪ್ಪತ್ತು ಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ಸಾವಿರಾರು ಲೈಕ್ಸ್‌ಗಳು ಮತ್ತು ಕಾಮೆಂಟ್‌ಗಳನ್ನು ಗಳಿಸಿದೆ. ಅನೇಕ ಜನರು ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ.

“ಅದ್ಭುತ!” “ಬಾಹ್ಯಾಕಾಶದಿಂದ ಬಂದ ನೋಟ ಅದ್ಭುತವಾಗಿದೆ” “ಸೂರ್ಯನ ಕರೋನಾವನ್ನು ನೋಡುವುದು ಅದ್ಭುತ ದೃಶ್ಯ” “ಚಂದ್ರನ ನೆರಳು ಎಷ್ಟು ವೇಗವಾಗಿ ಚಲಿಸುತ್ತಿದೆ ಎಂದು ನೋಡಲು ಅದ್ಭುತವಾಗಿದೆ!” ಎಂದೆಲ್ಲ ವೀವರ್ಸ್‌ ಕಾಮೆಂಟ್‌ ಮಾಡಿದ್ದಾರೆ.

ಸೋಮವಾರ ಉತ್ತರ ಅಮೆರಿಕಾದಲ್ಲಿ ಸಂಪೂರ್ಣ ಸೂರ್ಯಗ್ರಹಣ ಕಾಣಿಸಿಕೊಂಡಿದ್ದು, ಮೆಕ್ಸಿಕೋ, ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ಲಕ್ಷಾಂತರ ಜನರನ್ನು ಆಕರ್ಷಿಸಿತು. ಈ ಇವೆಂಟ್ ಈ ಖಂಡಗಳ ಹೆಚ್ಚಿನ ವೀಕ್ಷಕರನ್ನು ಸೆಳೆಯಿತು. ಪ್ರಪಂಚದಾದ್ಯಂತದ ನಕ್ಷತ್ರ ವೀಕ್ಷಕರು ಈ ಬಾನಿನ ಚಮತ್ಕಾರವನ್ನು ನೋಡಲು ಜಮಾಯಿಸಿದರು.

ಇದನ್ನೂ ನೋಡಿ: Aditya L1: ಇಂದು ಸೂರ್ಯಗ್ರಹಣ; ಇಸ್ರೋದ ಆದಿತ್ಯ ಎಲ್‌ 1 ಮಿಷನ್‌ ಏನು ಮಾಡಲಿದೆ?

Continue Reading
Advertisement
Virat kohli
ಪ್ರಮುಖ ಸುದ್ದಿ10 mins ago

Virat Kohli : ವಿರಾಟ್ ಕೊಹ್ಲಿಯ 50ನೇ ಏಕದಿನ ಕ್ರಿಕೆಟ್​ ಶತಕಕ್ಕೆ ಅಂತಾರಾಷ್ಟ್ರೀಯ ಗೌರವ

Job Alert
ಉದ್ಯೋಗ11 mins ago

Job Alert: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಮೇ 4ರೊಳಗೆ ಅಪ್ಲೈ ಮಾಡಿ

Murder case In Bengaluur
ಬೆಂಗಳೂರು12 mins ago

Murder Case : ಕೊಲೆಯಾದ ಮಹಿಳೆಗೆ 20 ಹುಡುಗರ ಸಹವಾಸ! ಅವರಿಗೆ ಆಕೆ ಇಟ್ಟಿದ್ದ ಹೆಸರು ಆರೆಂಜ್, ಆ್ಯಪಲ್, ಬನಾನಾ ಇತ್ಯಾದಿ!

Summer Hairstyles
ಫ್ಯಾಷನ್12 mins ago

Summer Hairstyles: ಸೆಕೆಗಾಲದಲ್ಲಿ ಟ್ರೆಂಡಿಯಾದ 3 ಮಿಕ್ಸ್‌ ಮ್ಯಾಚ್‌ ಹೇರ್‌ಸ್ಟೈಲ್ಸ್!

hardik pandya
ಕ್ರೀಡೆ13 mins ago

IPL 2024: ಹಾರ್ದಿಕ್​ ಪಾಂಡ್ಯ ನಿಜವಾಗಿಯೂ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರಾ?; ವಿಚಿತ್ರ ವರ್ತನೆಯ ವಿಡಿಯೊ ವೈರಲ್​

Yuzvendra Chahal
ಪ್ರಮುಖ ಸುದ್ದಿ41 mins ago

Yuzvendra Chahal : ​ ಚಾಹಲ್ ಕೈಬಿಟ್ಟಿರುವುದರ ಹಿಂದಿನ ಕಾರಣ ಬಹಿಂಗ ಮಾಡಿದ ಆರ್​ಸಿಬಿ ಮಾಜಿ ಡೈರೆಕ್ಟರ್​

Three boys drown
ಕರ್ನಾಟಕ47 mins ago

Yadgir News: ಕೆರೆಯಲ್ಲಿ ಈಜಾಡಲು ಹೋಗಿ ಮೂವರು ಬಾಲಕರ ದುರ್ಮರಣ

Fraud case
ಬೆಂಗಳೂರು52 mins ago

Fraud Case : ಗುಜರಿ ಅಂಗಡಿ ಮಾಲೀಕನಿಗೆ ಬೆದರಿಸಿ ಹಣ ಪೀಕಿದ ಪೊಲೀಸ್‌ ಹಾಗೂ ಇನ್ಫಾರ್ಮರ್

Uttarakaanda Movie
ಸಿನಿಮಾ53 mins ago

Uttarakaanda Movie: ʼಉತ್ತರಕಾಂಡʼ ಚಿತ್ರಕ್ಕೆ ನಾಯಕಿ ಎಂಟ್ರಿ; ಮೋಹಕ ತಾರೆ ರಮ್ಯಾ ಜಾಗಕ್ಕೆ ಕಾಲಿವುಡ್‌ ನಟಿ

Lok Sabha Election 2024 BJP released Pick pocket Congress poster
Lok Sabha Election 20241 hour ago

LoK Sabha Election 2024: ಚೊಂಬು ಆರೋಪಕ್ಕೆ ಚಿಪ್ಪು ಕೊಟ್ಟ ಬಿಜೆಪಿ! ಪಿಕ್‌ ಪಾಕೆಟ್‌ ಕಾಂಗ್ರೆಸ್‌ ಪೋಸ್ಟರ್‌ ಬಿಡುಗಡೆ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ12 hours ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು24 hours ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ1 day ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು1 day ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು1 day ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

ಟ್ರೆಂಡಿಂಗ್‌