ನವ ದೆಹಲಿ: ಇತ್ತೀಚೆಗಷ್ಟೇ ಚಂದ್ರನ ಅಂಗಳಕ್ಕೆ ಯಶಸ್ವಿಯಾಗಿ ಇಳಿದಿರುವ ನಾಸಾ(NASA)ದ ಆರ್ಟಿಮಿಸ್ I ಉಪಗ್ರಹ (Artemis I Mission) ಚಂದ್ರನ ಅದ್ಭುತ ಭಾವಚಿತ್ರಗಳನ್ನು ಸೆರೆ ಹಿಡಿಯಲು ಶುರು ಮಾಡಿದೆ. ಚಂದ್ರ ಮೇಲ್ಮೈನ ವಿವಿಧ ಭಾಗಗಳ ಒಟ್ಟು ನಾಲ್ಕು ಅದ್ಭುತ ಚಿತ್ರಗಳನ್ನು ಓರಿಯನ್ ಕ್ಯಾಪ್ಸುಲ್ ಭೂಮಿಗೆ ಕಳುಹಿಸಿದೆ.
ಈ ಫೋಟೋಗಳನ್ನು ಓರಿಯನ್ ಆಪ್ಟಿಕಲ್ ನ್ಯಾವಿಗೇಷನ್ ಸಿಸ್ಟಮ್ ಬಳಸಿಕೊಂಡು ಸೆರೆ ಹಿಡಿಯಲಾಗಿದೆ. ವಿವಿಧ ಹಂತಗಳಲ್ಲಿ ಮತ್ತು ವಿವಿಧ ಅಂತರದಲ್ಲಿ ಭೂಮಿ ಹಾಗೂ ಚಂದ್ರನ ವಿವಿಧ ಭಾಗಗಳನ್ನು ಕಪ್ಪು-ಬಿಳಿಪಿನಲ್ಲಿ ಚಿತ್ರಗಳನ್ನು ಸೆರೆ ಹಿಡಿಯು ಸಾಮರ್ಥ್ಯವನ್ನು ಈ ವ್ಯವಸ್ಥೆ ಹೊಂದಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ(ನಾಸಾ) ಹೇಳಿದೆ. ನಾಲ್ಕು ಅಧ್ಭುತ ಫೋಟೋಗಳನ್ನು ನಾಸಾ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದೆ.
1975ರಲ್ಲಿ ಅಪೋಲೋ ಪ್ರೋಗ್ರಾಮ್‌ನಲ್ಲಿ ಸೆರೆ ಹಿಡಿಯಲಾದ ಮತ್ತು ಈಗ ಆರ್ಟಿಮಿಸ್ ಮಿಷನ್‌ನಲ್ಲಿ ಸೆರೆ ಹಿಡಿಯಲಾದ ಚಂದ್ರನ ಫೋಟೋಗಳ ಮಧ್ಯೆ ಸಾಕಷ್ಟು ಸಾಮ್ಯತೆಗಳಿವೆ ಎಂದು ನಾಸಾ ಹೇಳಿಕೊಂಡಿದೆ. ಚಂದ್ರನ ನಾನಾ ಭಾಗದ ನಾಲ್ಕು ಫೋಟೋಗಳನ್ನು ನಾಸಾ ಹಂಚಿಕೊಂಡಿದೆ.
ಓರಿಯನ್ ಕ್ಯಾಪ್ಸುಲ್, ಈ ಹಿಂದೆ ಸಕ್ರಿಯವಾಗಿದ್ದ ಅಪೋಲೋ 11, 12 ಮತ್ತು 14 ಇಳಿಯುವ ಸ್ಥಳಗಳ ಮೇಲೆ ಹಾದುಹೋಯಿತು. ದೂರದ ಹಿಮ್ಮುಖ ಕಕ್ಷೆಯತ್ತ ಸಾಗುತ್ತಿದೆ. ಎತ್ತರದ ಕಕ್ಷೆಯು ಓರಿಯನ್ ಅನ್ನು ಭೂಮಿಯ ಸುತ್ತ ಚಲಿಸುವ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತದೆ ಎಂದು ನಾಸಾ ತನ್ನ ಪೋಸ್ಟ್‌ನಲ್ಲಿ ಬರೆದುಕೊಂಡಿದೆ.
ಇದನ್ನೂ ಓದಿ | NASA Artemis-1 | ತಾಂತ್ರಿಕ ಅಡಚಣೆ, ರದ್ದಾದ ನಾಸಾ ಆರ್ಟೆಮಿಸ್ 1 ಮೂನ್ ಮಿಷನ್