Site icon Vistara News

Chandrayaan 3: ಚಂದ್ರನ 3ಡಿ ಇಮೇಜ್ ಕ್ಲಿಕ್ಕಿಸಿದ ಪ್ರಜ್ಞಾನ್ ರೋವರ್! ಇದರಲ್ಲೇನು ವಿಶೇಷವಿದೆ?

Moon 3D Effect feel

ನವದೆಹಲಿ: ಚಂದ್ರಯಾನ-3 ಮಿಷನ್ (Chandrayaan 3) ಯಶಸ್ಸಿಗೆ ಯಾವುದೇ ಮಿತಿಗಳಿಲ್ಲ ಎಂಬುದು ಮತ್ತೆ ಸಾಬೀತಾಗಿದೆ. ಪ್ರಜ್ಞಾನ್ ರೋವರ್ (Pragyan Rover) ವಿಶಿಷ್ಟ ರೀತಿಯಲ್ಲಿ ಚಂದ್ರನ ಸೆರೆ ಹಿಡಿದು ಚಿತ್ರವನ್ನು ಭೂಮಿಗೆ ಕಳುಹಿಸಿದೆ. ಚಂದ್ರನನ್ನು ಈ ಬಾರಿ ರೋವರ್ 3ಡಿ ಎಫೆಕ್ಟ್‌ನಲ್ಲಿ (3D Effect Photo) ಕ್ಲಿಕ್ಕಿಸಿದೆ. ಅನಾಗ್ಲಿಫ್ ತಂತ್ರಜ್ಞಾನವನ್ನು (anaglyph technology) ಬಳಸಿಕೊಂಡು ಮೂರು ಆಯಾಮಗಳಲ್ಲಿ ಚಂದ್ರನ ಭೂಪ್ರದೇಶದಲ್ಲಿ ವಸ್ತುಗಳನ್ನು ನೋಡುವ ವಿಧಾನದ ಮೂಲಕ ಈ ಚಿತ್ರವನ್ನು ತೆಗೆಯಲಾಗಿದೆ.

ಯಾವುದೇ ವಸ್ತುವಿನ ಅದ್ಭುತ ನೋಟವನ್ನು ನೀಡುವ ಸ್ಟಿರಿಯೊ ಅಥವಾ ಬಹು-ವೀಕ್ಷಣೆ ಚಿತ್ರಗಳ ಸಹಾಯದಿಂದ ಈ ತಂತ್ರವನ್ನು ಬಳಸಿಕೊಂಡು 3D ಪರಿಣಾಮವನ್ನು ಸೃಷ್ಟಿಸಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಎಲೆಕ್ಟ್ರೋ-ಆಪ್ಟಿಕ್ ಸಿಸ್ಟಮ್ಸ್ (LEOS) ಪ್ರಯೋಗಾಲಯವು NavCam ಎಂಬ ತಂತ್ರಜ್ಞಾನವನ್ನು ಬಳಸಿಕೊಂಡು ರೋವರ್ ಈ ಅನಾಗ್ಲಿಫ್ ಚಿತ್ರಗಳನ್ನು ರಚಿಸಿದೆ.

ಈ ಸುದ್ದಿಯನ್ನೂ ಓದಿ: Chandrayaan 3: ಪ್ರಜ್ಞಾನ್ ಬೆನ್ನಲ್ಲೇ ನಿದ್ರೆಗೆ ಜಾರಿದ ವಿಕ್ರಮ್ ಲ್ಯಾಂಡರ್!

ಈ ತಂತ್ರದಲ್ಲಿ, ಚಂದ್ರನ 3D ಪರಿಣಾಮವನ್ನು ಎಡ ಮತ್ತು ಬಲ ಎರಡೂ ಚಿತ್ರಗಳನ್ನು ಬಳಸಿ ನೀಡಲಾಗುತ್ತದೆ ಮತ್ತು ನಂತರ ಅವುಗಳನ್ನು ವಿವಿಧ ಬಣ್ಣದ ಚಾನಲ್‌ಗಳಲ್ಲಿ ಇರಿಸಲಾಗುತ್ತದೆ. ಪರಿಣಾಮ ಇಡೀ ಚಿತ್ರಕ್ಕೆ ವಿಶಿಷ್ಟವಾದ ರಂಗು ಬಂದು ಬಿಡುತ್ತದೆ.

ಈ 3-ಚಾನೆಲ್ ಚಿತ್ರದಲ್ಲಿ, ಎಡ ಚಿತ್ರವನ್ನು ಕೆಂಪು ಚಾನಲ್‌ನಲ್ಲಿ ಇರಿಸಲಾಗಿದೆ. ಆದರೆ ಬಲ ಚಿತ್ರವನ್ನು ನೀಲಿ ಮತ್ತು ಹಸಿರು ಚಾನಲ್‌ಗಳಲ್ಲಿ ಇರಿಸಲಾಗುತ್ತದೆ (ಸಯಾನ್ ರಚಿಸುವುದು). ಈ ಎರಡು ಚಿತ್ರಗಳ ನಡುವಿನ ದೃಷ್ಟಿಕೋನದಲ್ಲಿನ ವ್ಯತ್ಯಾಸವು ಸ್ಟಿರಿಯೊ ಎಫೆಕ್ಟ್‌ಗೆ ಕಾರಣವಾಗುತ್ತದೆ. ಪರಿಣಾಮ ಇದು ಮೂರು ಆಯಾಮಗಳ (3D) ದೃಶ್ಯ ಎಂಬ ಭಾವನೆಯನ್ನು ಮೂಡಿಸುತ್ತದೆ ಎಂದು ಇಸ್ರೋ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version