ನವದೆಹಲಿ: ಚಂದ್ರಯಾನ 3 (Chandrayaan 3) ನೌಕೆಯ ಲ್ಯಾಂಡರ್ (Vkrama Lander) ಚಂದ್ರನ ದಕ್ಷಿಣ ಧ್ರುವ (South Pole) ಪ್ರದೇಶದಲ್ಲಿ ಯಶಸ್ವಿಯಾಗಿ ಇಳಿದೆ ನಂತರ ಪ್ರಕ್ರಿಯೆಗಳು ಸುಲಲಿತವಾಗಿ ನಡೆಯುತ್ತಿವೆ. ವಿಕ್ರಮ್ ಲ್ಯಾಂಡರ್ನಿಂದ ಹೊರ ಬಂದಿರುವ ಪ್ರಜ್ಞಾನ್ ರೋವರ್ (pragyan rover) ಎಲ್ಲ ರೀತಿಯಿಂದಲೂ ಸನ್ನದ್ಧವಾಗಿದ್ದು, ಅದಕ್ಕೆ ವಹಿಸಲಾದ ಕೆಲಸವನ್ನು ಮಾಡುತ್ತಿದೆ ಎಂದು ಇಸ್ರೋ ಎಕ್ಸ್ ವೇದಿಕೆಯಲ್ಲಿ ಟ್ವೀಟ್ ಮಾಡಿ ತಿಳಿಸಿದೆ. ಈಗಾಗಲೇ ವಿಕ್ರಮ್ ಲ್ಯಾಂಡರ್ನಿಂದ ರ್ಯಾಂಪ್ ಮೂಲಕ ಪ್ರಜ್ಞಾನ್ ರೋವರ್ ಹೊರ ಬರುತ್ತಿರುವ ವಿಡಿಯೋ (Rover Video) ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಜತೆಗಿದೆ. ಅಲ್ಲದೇ, ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಯುವಾಗ ಸೆರೆ ಹಿಡಿದ ವಿಡಿಯೋ ಅದ್ಭುತವಾಗಿದೆ(Viral Video).
ಎಲ್ಲಾ ಯೋಜಿತ ರೋವರ್ ಚಲನೆಗಳನ್ನು ಪರಿಶೀಲಿಸಲಾಗಿದೆ. ರೋವರ್ ಸುಮಾರು 8 ಮೀಟರ್ ದೂರವನ್ನು ಯಶಸ್ವಿಯಾಗಿ ಕ್ರಮಿಸಿದೆ. ರೋವರ್ ಪೇಲೋಡ್ಗಳು LIBS ಮತ್ತು APXS ಅನ್ನು ಆನ್ ಮಾಡಲಾಗಿದೆ. ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮಾಡ್ಯೂಲ್ ಮತ್ತು ರೋವರ್ನಲ್ಲಿನ ಎಲ್ಲಾ ಪೇಲೋಡ್ಗಳು ಸಾಮಾನ್ಯವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಇಸ್ರೋ ಎಕ್ಸ್ ವೇದಿಕೆಯಲ್ಲಿ ಟ್ವೀಟ್ ಮಾಡಿದೆ.
Chandrayaan-3 Mission:
— ISRO (@isro) August 25, 2023
All planned Rover movements have been verified. The Rover has successfully traversed a distance of about 8 meters.
Rover payloads LIBS and APXS are turned ON.
All payloads on the propulsion module, lander module, and rover are performing nominally.…
ಲ್ಯಾಂಡರ್ನಿಂದ ಹೊರ ಬಂದ ರೋವರ್
ವಿಕ್ರಮ್ ಲ್ಯಾಂಡರ್ನಿಂದ ಪ್ರಜ್ಞಾನ್ ರೋವರ್ ಹೊರ ಬರುವ ವಿಡಿಯೋವನ್ನು ಇಸ್ರೋ ಎಕ್ಸ್ ವೇದಿಕೆಯಲ್ಲಿ ಷೇರ್ ಮಾಡಿದೆ. ಪ್ರಜ್ಞಾನ್ ರೋವರ್ ವಿಕ್ರಮ್ ಲ್ಯಾಟರ್ನಿಂದ ನಿಧಾನವಾಗಿ ಹೊರಗೆ ಬಂದು, ಚಂದ್ರನ ಮೇಲ್ಮೈನಲ್ಲಿ ಇಳಿಯುತ್ತದೆ. ಈ ಕ್ಷಣಗಳನ್ನು ವಿಕ್ರಮ್ ಲ್ಯಾಂಡರ್ ಸೆರೆ ಹಿಡಿದು ಭೂಮಿಗೆ ರವಾನಿಸಿದೆ.
… … and here is how the Chandrayaan-3 Rover ramped down from the Lander to the Lunar surface. pic.twitter.com/nEU8s1At0W
— ISRO (@isro) August 25, 2023
ಡೂಡಲ್ ಮೂಲಕ ಚಂದ್ರಯಾನ 3 ಸಕ್ಸೆಸ್ ಸೆಲೆಬ್ರೇಟ್ ಮಾಡಿದ ಗೂಗಲ್!
ಭಾರತ (India Moon Mission) ಕೈಗೊಂಡ ಚಂದ್ರಯಾನ-3 (Chandrayaan 3) ಮಿಷನ್ಗೆ ಜಗತ್ತಿನ ಎಲ್ಲ ಕಡೆಯಿಂದಲೂ ಶ್ಲಾಘನೆ ವ್ಯಕ್ತವಾಗಿದೆ. ಭಾರತೀಯರಂತೂ ಕುಣಿದು ಕುಪ್ಪಳಿಸುತ್ತಿದ್ದಾರೆ. ಈ ಮಧ್ಯೆ, ಟೆಕ್ ದೈತ್ಯ ಗೂಗಲ್(Google), ತನ್ನ ಸರ್ಚ್ ಎಂಜಿನ್ನಲ್ಲಿ (Search Engine) ಚಂದ್ರಯಾನ-3 ಯಶಸ್ಸಿನ ಪ್ರತಿ ಬಿಂಬಿಸುವ ಆ್ಯನಿಮೇಷನ್ ಡೂಡಲ್ (Doodle) ಮಾಡುವ ಮೂಲಕ, ಇಸ್ರೋಗೆ (ISRO) ಗೌರವ ಸಲ್ಲಿಸಿದೆ. ಗೂಗಲ್ ಆಗಾಗ, ಭಾರತೀಯ ಗಣ್ಯರು, ಹಬ್ಬಗಳು ಮತ್ತು ವಿಶೇಷ ಸಂದರ್ಭಗಳನ್ನು ಇದೇ ರೀತಿ ಸೆಲೆಬ್ರೆಟ್ ಮಾಡುತ್ತದೆ.
ಈ ಸುದ್ದಿಯನ್ನೂ ಓದಿ: Chandrayaan 3 : ಚಂದ್ರಯಾನ 2ರ ಆರ್ಬಿಟರ್ ಕ್ಲಿಕ್ಕಿಸಿದ ಪೋಟೊ ಏಕಾಏಕಿ ಡಿಲೀಟ್; ಇದರ ಹಿಂದಿನ ಶಕ್ತಿ ಯಾವುದು?
ಆ್ಯನಿಮೇಷನ್ ಆಗಿರುವ ಈ ಡೂಡಲ್ನ ಕಾರ್ಟೂನಿಕ್ ಶೈಲಿಯಲ್ಲಿದೆ. ಚಂದ್ರನ ಸುತ್ತ ಚಂದ್ರಯಾನ-3 ಲ್ಯಾಂಡರ್ ಮೂರ್ನಾಲ್ಕು ಸುತ್ತು ಹೊಡೆದು, ಚಂದ್ರನ ದಕ್ಷಿಣ ಭಾಗಕ್ಕೆ ಬಂದು ಕೂರುತ್ತದೆ. ಆಗ ಚಂದ್ರನ ನಗುತ್ತಾನೆ. ಬಳಿಕ ಭಾರತ ಮುಖವಾಗಿರುವ ಭೂಮಿಯ ಮೇಲಕ್ಕೆ ಎದ್ದು, ಭಾರತ ನಗುವುದನ್ನು ತೋರಿಸಲಾಗಿದೆ. ಈ ಡೂಡಲ್ಗೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಈ ಡೂಡಲ್ ಮೂಲಕ ಚಂದ್ರಯಾನ-3 ಯಶಸ್ಸಿಗೆ ಗೂಗಲ್ ಶ್ಲಾಘನೆ ವ್ಯಕ್ತಪಡಿಸಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.