ನವ ದೆಹಲಿ: ಸಂಘಟಿತ ವಲಯದಲ್ಲಿ ಉದ್ಯೋಗಿಗಳ ನಿವೃತ್ತಿಯ ವಯೋಮಿತಿಯನ್ನು ಗಣನೀಯವಾಗಿ ಏರಿಸುವ ಪ್ರಸ್ತಾಪಕ್ಕೆ ಉದ್ಯೋಗಿಗಳ ಭವಿಷ್ಯನಿಧಿ ಮಂಡಳಿ (EPFO) ಬೆಂಬಲ ವ್ಯಕ್ತಪಡಿಸಿದೆ.
ಜೀವಿತಾವಧಿಯ ವಿಸ್ತರಣೆಯೊಂದಿಗೆ ಹೊಂದಾಣಿಕೆಗೆ, ಪಿಂಚಣಿ ನಿಧಿಯ ಮೇಲಿನ ಒತ್ತಡವನ್ನು ಇಳಿಸುವ ದೃಷ್ಟಿಯಿಂದ ನಿವೃತ್ತಿಯ ವಯಸ್ಸನ್ನು ಏರಿಸಲಿ ಇಪಿಎಫ್‌ಒ ಬೆಂಬಲಿಸಿದೆ.
ಭಾರತದಲ್ಲಿ 2047ರ ವೇಳೆಗೆ 60 ವರ್ಷ ಮೀರಿದವರ ಸಂಖ್ಯೆ 14 ಕೋಟಿಗೆ ಏರಿಕೆಯಾಗಲಿದೆ. ಇದು ಇಪಿಎಫ್‌ಒ ಮೇಲೆ ತೀವ್ರ ಒತ್ತಡ ಬೀರುವ ಸಾಧ್ಯತೆ ಇದೆ. ಸುಮಾರು ೭ ಕೋಟಿ ಉದ್ಯೋಗಿಗಳು ಈಗ ಇಪಿಎಫ್‌ಒ ಸೌಲಭ್ಯ ಪಡೆದಿದ್ದಾರೆ.