Site icon Vistara News

Gaganyaan Mission: ಶನಿವಾರ ಬೆಳಗ್ಗೆ ಗಗನಯಾನದ ‘ಅಬಾರ್ಟ್‌ ಟೆಸ್ಟ್‌ ಡೆಮೋ’! ಇಸ್ರೋ ಏನನ್ನು ಪರೀಕ್ಷಿಸಲಿದೆ?

Gaganyaan Mission test flight on Oct 21 and Check details

ನವದೆಹಲಿ: ದೇಶದ ಮೊದಲ ಗಗನಯಾನಕ್ಕೆ (Gaganyaan Mission)ಸಿದ್ಧತೆಯನ್ನು ಆರಂಭಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO), ಅಕ್ಟೋಬರ್ 21ರಂದು, ಶನಿವಾರ ಬೆಳಗ್ಗೆ 8ರಿಂದ 9 ಗಂಟೆ ನಡುವೆ ಮಾನವರಹಿತ ಪರೀಕ್ಷಾ ಹಾರಾಟ ನಡೆಸಲು ಮುಂದಾಗಿದೆ(unmanned test flight). ವಾಸ್ತವದಲ್ಲಿ ಇದು ಈ ಪರೀಕ್ಷೆಯು, ತುರ್ತು ಸಂದರ್ಭದಲ್ಲಿ ಮಿಷನ್ ಸ್ಥಗಿತಗೊಳಿಸುವ ಪರೀಕ್ಷೆಯಾಗಿರುತ್ತದೆ(abort test demo). ಅಂದರೆ, ಗಗನಯಾನ ಮಿಷನ್ ವಿಫಲಗೊಂಡರೂ ಸಿಬ್ಬಂದಿಯನ್ನು ಸುರಕ್ಷಿತವಾಗಿ ಪಾರು ಮಾಡುವ ಪರೀಕ್ಷೆ ಎಂದು ಹೇಳಬಹುದು. ಹಾಗಾಗಿ, ಮಾನವಸಹಿತ ಗಗನಯಾನದತ್ತ ಈ ಪರೀಕ್ಷೆಯ ಪ್ರಮುಖ ಹೆಜ್ಜೆಯಾಗಲಿದೆ. ಸಿಬ್ಬಂದಿ ತಪ್ಪಿಸಿಕೊಳ್ಳುವ ವ್ಯವಸ್ಥೆಯ (crew escape system) ಕಾರ್ಯಕ್ಷಮತೆಯನ್ನು ಪ್ರದರ್ಶಿಸಲು ಪರೀಕ್ಷಾ ವಾಹನವನ್ನು ಶ್ರೀಹರಿಕೋಟ ಬಾಹ್ಯಾಕಾಶ ನಿಲ್ದಾಣದಿಂದ (Sriharikota spaceport) ಉಡಾವಣೆ ಮಾಡಲಾಗುವುದು ಇಸ್ರೋ ಹೇಳಿದೆ.

ಪರೀಕ್ಷಾ ವಾಹನವು ಏಕ-ಹಂತದ ದ್ರವ ರಾಕೆಟ್ ಆಗಿದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಪೇಲೋಡ್‌ಗಳು ಸಿಎಮ್ ಫೇರಿಂಗ್ ಮತ್ತು ಇಂಟರ್‌ಫೇಸ್ ಅಡಾಪ್ಟರ್‌ಗಳ ಜೊತೆಗೆ ಅವುಗಳ ವೇಗವಾಗಿ ಕಾರ್ಯನಿರ್ವಹಿಸುವ ಘನ ಮೋಟಾರ್‌ಗಳೊಂದಿಗೆ ಸಿಬ್ಬಂದಿ ಮಾಡ್ಯೂಲ್ ಮತ್ತು ಸಿಬ್ಬಂದಿ ಪಾರಾಗುವ ವ್ಯವಸ್ಥೆಯನ್ನು(crew escape system) ಒಳಗೊಂಡಿರುತ್ತವೆ.

ಈ ಸುದ್ದಿಯನ್ನೂ ಓದಿ : Aditya-L1: ಜನವರಿ ಮಧ್ಯದಲ್ಲಿ ಹಾಲೋ ಕಕ್ಷೆ ಸೇರಲಿದೆ ಆದಿತ್ಯ ಎಲ್ 1 , ಬಳಿಕ ಸೂರ್ಯನ ಅಧ್ಯಯನ ಶುರು

ಗಗನಯಾನ ಮಿಷನ್‌ನಲ್ಲಿ ಎದುರಾಗುವ ಮ್ಯಾಕ್ ಸಂಖ್ಯೆ 1.2ಗೆ ಅನುಗುಣವಾಗಿ ಆರೋಹಣ ಪಥದ ಸಮಯದಲ್ಲಿ ವೆಹಿಕಲ್ ತನ್ನ ಕಾರ್ಯವನ್ನು ಸ್ಥಗಿತಗೊಳಿಸುವ ಸ್ಥಿತಿಯನ್ನು ಪರೀಕ್ಷಿಸಲಾಗುತ್ತದೆ ಎಂದು ಇಸ್ರೋ ತಿಳಿಸಿದೆ.

ಸಿಬ್ಬಂದಿ ಪಾರಾಗುವ ವ್ಯವಸ್ಥೆಯು, ಸಿಬ್ಬಂದಿ ಮಾಡ್ಯೂಲ್ ಅನ್ನು 17 ಕಿ.ಮೀ ಎತ್ತರದಲ್ಲಿ ಟೆಸ್ಟ್ ವೆಹಿಕಲ್‌ನಿಂದ ಪ್ರತ್ಯೇಕಗೊಳಿಸುತ್ತದೆ. ತರುವಾಯ, ಸಿಇಎಸ್‌ ಬೇರ್ಪಡುವುದು ಮತ್ತು ಪ್ಯಾರಾಚೂಟ್‌ಗಳ ಸರಣಿಯ ನಿಯೋಜನೆಯೊಂದಿಗೆ ಅಬಾರ್ಟ್ ಅನುಕ್ರಮವನ್ನು ಸ್ವಯಂವಾಗಿ ಕಾರ್ಯಗತಗೊಳಿಸಲಾಗುತ್ತದೆ. ಅಂತಿಮವಾಗಿ ಶ್ರೀಹರಿಕೋಟಾ ಕರಾವಳಿಯಿಂದ ಸುಮಾರು 10 ಕಿಮೀ ಸಮುದ್ರದಲ್ಲಿ ಸಿಬ್ಬಂದಿ ಎಸ್ಕೇಪ್ ಸಿಸ್ಟಮ್ ಮಾಡ್ಯೂಲ್ ಅನ್ನು ಸುರಕ್ಷಿತವಾಗಿ ಇಳಿಸುವ ಮೂಲಕ ಈ ಪರೀಕ್ಷೆ ಕೊನೆಗೊಳ್ಳಲಿದೆ ಎಂದು ಇಸ್ರೋ ಹೇಳಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version