ನವದೆಹಲಿ: ಚಂದ್ರನ ಅಂಗಳದಲ್ಲಿ ಚಂದ್ರಯಾನ-3 (Chandrayaan 3) ಲ್ಯಾಂಡರ್ (Vikram Lander) ಅನ್ನು ಸುರಕ್ಷಿತವಾಗಿ ಇಳಿಸುವ ಮೂಲಕ ಭಾರತವು ಹೊಸ ಇತಿಹಾಸವನ್ನು ಬರೆದಿದೆ. ಈ ಸಂಭ್ರಮವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಸೆಲೆಬ್ರೇಟ್ ಮಾಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), ಚಂದ್ರಯಾನ – 3 ಮಿಷನ್; ಭಾರತ, ನಾನು ನನ್ನ ಗಮ್ಯ ಸ್ಥಾನವನ್ನು ತಲುಪಿದ್ದೇನೆ ಮತ್ತು ನೀವು ಕೂಡ!; ಚಂದ್ರನ ಮೇಲೆ ಚಂದ್ರಯಾನ – 3 ಮಿಷನ್ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ (Soft Landing on Moon) ಮಾಡಿದೆ. ಶುಭಾಶಯಗಳು ಭಾರತ ಎಂದು ಬರೆದುಕೊಂಡಿದೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ(Viral Post).
ಚಂದ್ರಯಾನ-3 ಸಕ್ಸೆಸ್ ಲ್ಯಾಂಡ್ ಆದ ಬಳಿಕ ಇಸ್ರೋ ಮಾಡಿದ ಟ್ವೀಟ್
Chandrayaan-3 Mission:
— ISRO (@isro) August 23, 2023
'India🇮🇳,
I reached my destination
and you too!'
: Chandrayaan-3
Chandrayaan-3 has successfully
soft-landed on the moon 🌖!.
Congratulations, India🇮🇳!#Chandrayaan_3#Ch3
ಚಂದ್ರನ ದಕ್ಷಿಣ ಧ್ರುವಕ್ಕೆ ಲ್ಯಾಂಡ್ ಮಾಡುವ ಮೂಲಕ ಇಂಥ ಸಾಧನೆ ಮಾಡಿದ ಜಗತ್ತಿನ ಮೊದಲ ರಾಷ್ಟ್ರ ಎಂಬ ಕೀರ್ತಿಗೆ ಭಾರತವು ಪಾತ್ರವಾಗಿದೆ. ಈ ಪ್ರದೇಶದ ಚಂದ್ರನಲ್ಲಿ ನೀರಿನ ಕುರುಹುಗಳ ಕಂಡ ಬಳಿಕ, ಜಗತ್ತಿನ ಬಹುತೇಕ ರಾಷ್ಟ್ರಗಳ ಆಸಕ್ತಿಗೆ ಕಾರಣವಾಗಿದೆ.
ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಭಾರತ
ಚಂದ್ರಯಾನ-3 ಲ್ಯಾಂಡರ್ ಸೇಫ್ ಲ್ಯಾಂಡಿಂಗ್ ಪ್ರಕ್ರಿಯೆ ಲೈವ್ ಮಾಡಲಾಗಿತ್ತು. 5.20 ನಿಮಿಷಕ್ಕೆ ಸೇಫ್ ಲ್ಯಾಂಡಿಂಗ್ ಪ್ರಕ್ರಿಯೆ ಆರಂಭಿಸಲಾಯಿತು. ಚಂದ್ರನ ಮೇಲ್ಮೈ ಮೇಲೆ ಲ್ಯಾಂಡರ್ ಇಳಿಯುವ ಮುಂಚೆ ಅದು ನಾಲ್ಕು ಕಠಿಣ ಹಂತಗಳನ್ನು ಪೂರೈಸಿತು.
ಪ್ರತಿ ಹಂತದಲ್ಲೂ ವಿಕ್ರಮ್ ಲ್ಯಾಂಡರ್ ನಿಧಾನವಾಗಿ ಚಂದ್ರನತ್ತ ತೆರಳುತ್ತಾ, ಚಂದ್ರನ ಮೇಲ್ಮೈಗೆ ಲಂಭವಾಗಿ ಇಳಿಯುವ ಪ್ರಕ್ರಿಯೆ ಆರಂಭಿಸಿತು. ಪ್ರತಿ ಹಂತದ ಯಶಸ್ಸು ವಿಜ್ಞಾನಿಗಳಲ್ಲಿ ಹುಮ್ಮಸ್ಸು ತುಂಬಿತು. ಮಿಷನ್ ಕಂಟ್ರೋಲ್ ರೂಮ್‌ನಲ್ಲಿ ಸಂಭ್ರಮ ಮನೆ ಮಾಡಿತ್ತು.
ಅಂತಿಮವಾಗಿ ಚಂದ್ರನ ಮೇಲೆ ಲ್ಯಾಂಡರ್ ಲ್ಯಾಂಡ್ ಬಳಿಕ, ವಿಜ್ಞಾನಿಗಳು ಸಂತೋಷದಿಂದ ಕುಣಿದಾಡಿದರು. ಇದೇ ವೇಳೆ, ದಕ್ಷಿಣಾ ಆಫ್ರಿಕಾದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ವಿಡಿಯೋ ಲೈವ್ ಮೂಲಕ ಮಾತನಾಡಿ, ಇಸ್ರೋ ತಂಡಕ್ಕೆ ಶುಭಾಶಯ ಕೋರಿದರು.
ಈ ಸುದ್ದಿಯನ್ನೂ ಓದಿ: Chandrayaan 3: ಚಂದ್ರಯಾನ 3 ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಸಕ್ಸೆಸ್! ಇತಿಹಾಸ ಸೃಷ್ಟಿಸಿದ ಇಸ್ರೋ
ಪ್ರಾಜೆಕ್ಟ್ ಡೈರೆಕ್ಟರ್ ಪಿ ವೀರಮುತ್ತುವೇಲ್ ಮಾತನಾಡಿ, ಲ್ಯಾಂಡರ್ ಎಲ್ಲಾ ಹಂತಗಳನ್ನು ಯಾವುದೇ ದೋಷವಿಲ್ಲದೇ ಪೂರ್ಣಗೊಳಿಸಿತು ಎಂದು ಹೇಳಿ ಸಂಭ್ರಮಪಟ್ಟರು. 2019ರಲ್ಲಿ ಚಂದ್ರಯಾನ -2 ಮಿಷನ್ ವೈಫಲ್ಯ ಕಂಡ ಬಳಿಕ ಇಸ್ರೋ ಚಂದ್ರಯಾನ-3 ಕೈಗೊಂಡಿತ್ತು. ಈ ಮಿಷನ್‌ಗದೆ ಸುಮಾರು 600 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಜುಲೈ 14ರಂದು ಮಿಷನ್‌ಗೆ ಚಾಲನೆ ನೀಡಲಾಗಿತ್ತು. ಎಲ್‌ವಿಎಂ ಮಾರ್ಕ್ 3 ರಾಕೆಟ್ ಚಂದ್ರಯಾನ ನೌಕೆಯನ್ನು ಭೂ ಕಕ್ಷೆಗೆ ಸೇರಿಸಿತ್ತು. ಅಲ್ಲಿಂದ ಈ ನೌಕೆ ತನ್ನ ಗಮ್ಯ ಸ್ಥಾನವನ್ನು ತಲುಪಲು 44 ದಿನಗಳನ್ನು ತೆಗೆದುಕೊಂಡಿತು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.