Site icon Vistara News

Samudrayaan: ಚಂದ್ರಯಾನ 3 ಸಕ್ಸೆಸ್ ಬೆನ್ನಲ್ಲೇ ‘ಸಮುದ್ರಯಾನ’ಕ್ಕೆ ಸಿದ್ಧವಾದ ಭಾರತ! ಏನಿದು ಮತ್ಸ್ಯ ಮಿಷನ್?

India is ready for Samudrayaan Matsya 6000 mission

ನವದೆಹಲಿ: ಚಂದ್ರಯಾನ-3 (Chandrayaan 3) ಯಶಸ್ವಿಯಾಗಿ ಕೈಗೊಂಡಿರುವ ಭಾರತ (India) ಈಗ ಸಮುದ್ರಯಾನಕ್ಕೂ (Samudrayaan) ಸಿದ್ಧವಾಗಿದೆ. ಈ ಯೋಜನೆಗೆ ಸಂಬಂದಿಸಿದಂತೆ ಕೇಂದ್ರ ಸಚಿವ ಕಿರಣ್ ರಿಜಿಜು ಸೋಮವಾರ ಸಮುದ್ರದ ಆಳವನ್ನು ಅನ್ವೇಷಿಸುವ ಮಾನವಸಹಿತ ಸಬ್‌ಮರ್ಸಿಬಲ್ ಮತ್ಸ್ಯ 6000ನ (Matsya 6000 Mission) ವೀಡಿಯೊ ಮತ್ತು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಚೆನ್ನೈನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (NIOT) ಅಭಿವೃದ್ಧಿಪಡಿಸುತ್ತಿದೆ. ಒಮ್ಮೆ ಇದು ಕಾರ್ಯಾರಂಭಗೊಂಡರೆ, ಭಾರತದ ಮೊದಲ ಮಾನವಸಹಿತ ಸಾಗರ ಪರಿಶೋಧನಾ ಮಿಷನ್ ಆಗಲಿದೆ. ಅಕ್ವಾನಾಟ್‌ಗಳನ್ನು(ಈಜುಗಾರರನ್ನು) ಸಮುದ್ರಕ್ಕೆ 6,000 ಮೀಟರ್ ಆಳಕ್ಕೆ ಕೊಂಡೊಯ್ಯಲು ಗೋಲಾಕಾರದ ನೌಕೆಯನ್ನು ನಿರ್ಮಿಸಲಾಗುವುದು ಎಂದು ಶ್ರೀ ರಿಜಿಜು ಹೇಳಿದರು.

ಭಾರತದ ಮುಂದಿನ ಗುರಿ ಸಮುದ್ರಯಾನ. ಇದು ಚೆನ್ನೈನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿಯಲ್ಲಿ ನಿರ್ಮಾಣವಾಗುತ್ತಿರುವ ‘ಮತ್ಸ್ಯ 6000’ ಸಬ್‌ಮರ್ಸಿಬಲ್ ಆಗಿದೆ. ಭಾರತದ ಮೊದಲ ಮಾನವಸಹಿತ ಡೀಪ್ ಓಷನ್ ಮಿಷನ್ ‘ಸಮುದ್ರಯಾನ’ 3 ಮಾನವರನ್ನು 6-ಕಿಮೀ ಸಮುದ್ರದ ಆಳದಲ್ಲಿ ಕಳುಹಿಸಲು ಯೋಜಿಸಲಾಗಿದೆ. ಆಳವಾದ ಸಮುದ್ರ ಸಂಪನ್ಮೂಲಗಳು ಮತ್ತು ಜೀವವೈವಿಧ್ಯತೆಯ ಮೌಲ್ಯಮಾಪನವನ್ನು ಅಧ್ಯಯನ ಮಾಡಲು ಇದರಿಂದ ಸಾಧ್ಯವಾಗಲಿದೆ. ಇದರಿಂದ ಯೋಜನೆಯು ಸಾಗರ ಪರಿಸರ ವ್ಯವಸ್ಥೆಗೆ ಯಾವುದೇ ತೊಂದರೆಯಾಗವುದಿಲ್ಲ ಎಂದು ಸಚಿವ ಕಿರೆನ್ ರಿಜಿಜು ಅವರು ಪೋಸ್ಟ್ ಮಾಡಿದ್ದಾರೆ.

ಡೀಪ್ ಓಷಿಯನ್ ಮಿಷನ್ ಪ್ರಧಾನಿ ನರೇಂದ್ರ ಮೋದಿ ಅವರ ಬ್ಲೂ ಎಕಾನಮಿಯನ್ನು ಬೆಂಬಲಿಸುತ್ತದೆ. ದೇಶದ ಆರ್ಥಿಕ ಅಭಿವೃದ್ಧಿಗೆ ಸಮುದ್ರ ಸಂಪನ್ಮೂಲ ಸುಸ್ಥಿರ ಬಳಕೆಗೆ ಅನುಕೂಲ ಮಾಡಿಕೊಡುತ್ತದೆ. ಜನರ ಬದುಕು ಸುಧಾರಣೆಯಾಗಲಿದೆ, ಉದ್ಯೋಗಗಳು ಸೃಷ್ಟಿಯಾಗಲಿವೆ ಮತ್ತು ಸಮುದ್ರ ಪರಿಸರ ವ್ಯವಸ್ಥೆಯನ್ನು ಕಾಪಾಡಲು ಸಾಧ್ಯವಾಗಲಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

ಸಮುದ್ರಯಾನದ ಮೂಲಕ ಆಳ ಸಮುದ್ರವನ್ನು ಅನ್ವೇಷಿಸಲಾಗುವುದು ಎಂದು ಇತ್ತೀಚೆಗೆ ಲೋಕಸಭೆ ಸರ್ಕಾರ ಮಾಹಿತಿ ನೀಡಿತ್ತು. ಈ ಮಿಷ್ 2026ರ ಹೊತ್ತಿಗೆ ಕಾರ್ಯಾರಂಭವಾಗಲಿದೆ ಎಂದು ಕೇಂದ್ರ ಭೂ ವಿಜ್ಞಾನ ರಾಜ್ಯ ಸ್ವತಂತ್ರ ಖಾತೆ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಮಾಹಿತಿ ನೀಡಿದ್ದರು.

ಈ ಸುದ್ದಿಯನ್ನೂ ಓದಿ: Sunday read | 110 ವರ್ಷಗಳ ಹಿಂದೆ, ಒಂದು ಹಡಗು ಮುಳುಗುವ ಮುನ್ನ

Exit mobile version