Site icon Vistara News

ಚಂದ್ರನಿಂದ ಮಣ್ಣು, ಕಲ್ಲು ಸ್ಯಾಂಪಲ್ಸ್ ಭೂಮಿಗೆ ತರಲು ಸಜ್ಜಾದ ಇಸ್ರೋ!

ISRO is planning to bring soil from moon to earth, Says media reports

ನವದೆಹಲಿ: ಚಂದ್ರಯಾನ-3 ಮಿಷನ್ (Chandrayaan 3) ಯಶಸ್ವಿಯಾಗಿ ಪೂರೈಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಧೆ(ISRO), ಗಗನಯಾನಕ್ಕೆ (Gaganyaan) ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಈ ಮಧ್ಯೆ, ಮತ್ತೊಂದು ಸಾಹಸಕ್ಕೆ ಬಾಹ್ಯಾಕಾಂಶ ಸಂಸ್ಥೆ ಮುಂದಾಗಿದೆ. ಚಂದ್ರನ (Moon Surface) ಮೇಲಿರುವ ಮಣ್ಣು ಅಥವಾ ಕಲ್ಲನ್ನು (Soil or Rock) ಸಂಗ್ರಹಿಸಿ ಅದನ್ನು ಭೂಮಿಗೆ ವಾಪಸ್ ತರುಲಿದೆ. ಇಂಥೊಂದು ಪ್ರಯತ್ನ ಮಾಡುತ್ತಿರುವುದು ಇದೇ ಮೊದಲು ಎನ್ನಲಾಗುತ್ತಿದೆ. ಈ ಉದ್ದೇಶಿತ ಮಿಷನ್‌ಗೆ ಲೂನಾರ್ ಸ್ಯಾಂಪಲ್ ರಿಟರ್ನ್ ಮಿಷನ್ (Lunar Sample Return Mission – LSRM) ಎಂದು ಕರೆಯಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇಸ್ರೋ ಅತಿ ದೊಡ್ಡ ಮಿಷನ್ ಜಾರಿಗೊಳಿಸುವ ಬಗ್ಗೆ ಪ್ಲ್ಯಾನ್ ಮಾಡುತ್ತಿದೆ. ಈ ಮಿಷನ್‌ನಲ್ಲಿ ಚಂದ್ರನ ಮೇಲ್ಮೇಯಿಂದ ಮಣ್ಣು ಅಥವಾ ಕಲ್ಲನ್ನು ಭೂಮಿಗೆ ತರುವ ಪ್ರಯತ್ನವನ್ನು ಇಸ್ರೋ ಮಾಡಲಿದೆ. ಮುಂದಿನ ಐದರಿಂದ ಏಳು ವರ್ಷಗಳಲ್ಲಿ ನಾವು ಈ ಯೋಜನೆಗೆ ಸಂಬಂಧಿಸಿದಂತೆ ಅನೇಕ ಸವಾಲುಗಳನ್ನು ಮೆಟ್ಟಿ ನಿಲ್ಲಲಿದ್ದೇವೆ ಎಂದು ಇಸ್ರೋ ಸ್ಪೇಸ್ ಅಪ್ಲಿಕೇಷನ್ ಸೆಂಟರ್(SAC) ನಿರ್ದೇಶಕ ನಿಲೇಶ್ ದೇಸಾಯಿ ಅವರು ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಚಂದ್ರಯಾನ-3 ಮಿಷನ್‌ನ ವಿಕ್ರಮ್ ಲ್ಯಾಂಡರ್ ಇಳಿದಿದ್ದ ಶಿವಶಕ್ತಿ ಪಾಯಿಂಟ್‌ನಿಂದ ಮಣ್ಣು ಅಥವಾ ಕಲ್ಲು ಸ್ಯಾಂಪಲ್ಸ್ ತರುವ ಈ ಪ್ರಾಜೆಕ್ಟ್‌ ಅನ್ನು 2028ರಲ್ಲಿ ಲಾಂಚ್ ಮಾಡಲಾಗುತ್ತದೆ. ಈ ಮಿಷನ್‌ಗೆ ಎರಡು ಪ್ರತ್ಯೇಕ ಲಾಂಚ್ ವೆಹಿಕಲ್‌ಗಳನ್ನು ಬ ಳಸಲಾಗುತ್ತದೆ.

ನಿಯಮದ ಹೊರತಾಗಿ, ಎರಡು ಪ್ರತ್ಯೇಕ ಉಡಾವಣಾ ವಾಹನಗಳನ್ನು ಕಾರ್ಯಾಚರಣೆಯನ್ನು ಕೈಗೊಳ್ಳಲು ಬಳಸಲಾಗುತ್ತದೆ ಎಂದು ಇಸ್ರೋದ ದೇಸಾಯಿ ಹೇಳಿದ್ದಾರೆ. ಈ ಮಿಷನ್ ವರ್ಗಾವಣೆ, ಲ್ಯಾಂಡರ್, ಅಕ್ಸೆಂಡರ್ ಮತ್ತು ಮರು ಪ್ರವೇಶಿಸುವ ನಾಲ್ಕು ಮಾಡ್ಯೂಲ್‌ಗಳನ್ನು ಒಳಗೊಂಡಿರುತ್ತದೆ ಎಂದು ನಿಲೇಶ್ ದೇಸಾಯಿ ಅವರು ವಿವರಿಸಿದ್ದಾರೆ.

ಟ್ರಾನ್ಸ್‌ಫರ್ ಮತ್ತು ರಿ ಎಂಟ್ರಿ ಮಾಡ್ಯೂಲ್‌ಗಳಿಗಾಗಿ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (GSLV) ಮಾರ್ಕ್-II ಬಳಸಿದರೆ, ಅಕ್ಸೆಂಡರ್ ಮತ್ತು ಲ್ಯಾಂಡರ್ ಮಾಡ್ಯೂಲ್‌ಗಳಿಗಳಿಗಾಗಿ ಜಿಎಸ್ಎಲ್‌ವಿ ಮಾರ್ಕ್ 3 ರಾಕೆಟ್ ಬಳಸಲಾಗುತ್ತದೆ ಎಂದು ನಿಲೇಶ್ ದೇಸಾಯಿ ಅವರು ತಿಳಿಸಿದ್ದಾರೆ.

ಭಾರತ ಕೈಗೊಂಡ ಈವರೆಗಿನ ಮೂರು ಚಂದ್ರಯಾನ ಮಿಷನ್‌ಗಳು ಚಂದ್ರನ ಮೇಲ್ಮೈ, ಮಣ್ಣು ಮತ್ತು ಇತರ ಮಾದರಿಗಳನ್ನು ಅಧ್ಯಯನ ಮಾಡಿವೆ. ಇಸ್ರೋ ಕೈಗೊಳ್ಳುತ್ತಿರುವ ಎಲ್‌ಎಸ್‌ಆರ್‌ಎಂ ಸಹ ಭೂಮಿಯ ಸಮೀಪದಲ್ಲಿರುವ ಕ್ಷುದ್ರಗ್ರಹವಾದ ಬೆನ್ನುವಿನಿಂದ ನಾಸಾದ ಮೊದಲ ಮಾದರಿಗಳ ಸಂಗ್ರಹದಂತೆಯೇ ಇರಲಿದೆ. ಅಮೆರಿಕ ಬಾಹ್ಯಾಕಾಶ ಸಂಸ್ಥೆ ಸೆಪ್ಟೆಂಬರ್‌ನಲ್ಲಿ ತನ್ನ OSIRIS-REx ಬಾಹ್ಯಾಕಾಶ ನೌಕೆಯೊಂದಿಗೆ ಇದನ್ನು ಸಾಧಿಸಿತು ಮತ್ತು ಏಳು ವರ್ಷಗಳ ಪ್ರಯಾಣವನ್ನು ಪೂರ್ಣಗೊಳಿಸಿದ ನಂತರ ಭೂಮಿಯ ವಾತಾವರಣಕ್ಕೆ ಮರಳಿತು.

ಈ ಸುದ್ದಿಯನ್ನೂ ಓದಿ: Chandrayaan 3: ಭೂಮಿಗೆ ವಾಪಸ್ ಎಂಟ್ರಿ ಕೊಟ್ಟ ಚಂದ್ರಯಾನ 3 ರಾಕೆಟ್ ಮೇಲ್ಭಾಗ!

Exit mobile version