ಲಂಡನ್: ಮಂಜುಗಡ್ಡೆ ಎಂದಾಕ್ಷಣ ಗಟ್ಟಿಯಾದ ದ್ರವ ರೂಪದ ವಸ್ತು ನಿಮ್ಮ ಕಣ್ಣ ಮುಂದೆ ಬರಬಹುದು. ಆದರೆ ಇದೀಗ ಅದೇ ಮಂಜುಗಡ್ಡೆಯನ್ನು ಹೊಸ ರೂಪದಲ್ಲಿ ತಯಾರಿಸಿದ್ದಾರೆ (Research) ವಿಜ್ಞಾನಿಗಳು. ನೀರಿನಂತಿರುವ ಮಧ್ಯಮ-ಸಾಂದ್ರತೆಯ ಅಸ್ಫಾಟಿಕ ಐಸ್ (ಎಂಡಿಎ) ಅನ್ನು ವಿಜ್ಞಾನಿಗಳು ತಯಾರಿಸಿದ್ದಾರೆ(Viral News).
ಯೂನಿವರ್ಸಿಟಿ ಕಾಲೇಜ್ ಲಂಡನ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಈ ರೀತಿಯ ಹೊಸ ರೂಪದ ಮಂಜುಗಡ್ಡೆಯನ್ನು ತಯಾರಿಸಿದ್ದಾರೆ. ಸಾಮಾನ್ಯ ಮಂಜುಗಡ್ಡೆಯನ್ನು ಬಾಲ್ ಮೈನಿಂಗ್ ಎನ್ನುವ ಪ್ರಕ್ರಿಯೆ ಮಾಡಿ ಈ ಎಂಡಿಎ ತಯಾರಿಸಲಾಗಿದೆ -200 ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ ಸಾಮಾನ್ಯ ಮಂಜುಗಡ್ಡೆಯನ್ನು ಸ್ಟೀಲ್ ಬಾಲ್‌ಗಳೊಂದಿಗೆ ಜೋರಾಗಿ ಅಲುಗಾಡಿಸುವ ಮೂಲಕ ಈ ಎಂಡಿಎ ಉತ್ಪಾದನೆಯಾಗಿದೆ.
ಸಾಮಾನ್ಯ ಮಂಜುಗಡ್ಡೆಯಲ್ಲಿ ಅಣುಗಳು ಅಚ್ಚುಕಟ್ಟಾಗಿ ಜೋಡಣೆಯಾಗಿರುತ್ತದೆ. ಆದರೆ ಈ ಎಂಡಿಎನಲ್ಲಿ ಅಸ್ಫಾಟಿಕ ಅಣುಗಳು ಇರುತ್ತವೆ. ಹಾಗೆಯೇ ಅವುಗಳು ಅಚ್ಚುಕಟ್ಟಾಗಿ ಸಂಘಟಿತವಾಗಿರುವುದಿಲ್ಲ. ಇದು ಶನಿಗ್ರಹ ಮತ್ತು ಗುರುವಿನ ಉಪಗ್ರಹಗಳ ಸಾಗರಗಳನ್ನು ರೂಪಿಸುವ ಪ್ರಕ್ರಿಯೆಗಳ ಒಳನೋಟಗಳನ್ನು ನೀಡುತ್ತದೆ ಎಂದಿದ್ದಾರೆ ಸಂಶೋಧಕರು.
“ನೀರು ಎಲ್ಲಾ ಜೀವಿಗಳ ಅಡಿಪಾಯ. ನಮ್ಮ ಅಸ್ತಿತ್ವವು ನೀರಿನ ಮೇಲೆ ಅವಲಂಬಿತವಾಗಿದೆ. ನಾವು ಅದನ್ನು ಹುಡುಕುವ ಕಾರ್ಯಾಚರಣೆಗಳನ್ನು ಮಾಡುತ್ತಿರುತ್ತೇವೆ, ಆದರೆ ವೈಜ್ಞಾನಿಕ ದೃಷ್ಟಿಕೋನದಿಂದ ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾಗಿಲ್ಲ. ನಾವು ಈಗಾಗಲೇ 20 ಸ್ಫಟಿಕದಂತಹ ಮಂಜುಗಡ್ಡೆ ರೂಪಗಳನ್ನು ಕಂಡುಕೊಂಡಿದ್ದೇವೆ. ಅಸ್ಫಾಟಿಕ ಮಂಜುಗಡ್ಡೆಯಲ್ಲಿ ಕೇವಲ ಎರಡು ಮುಖ್ಯ ವಿಧಗಳನ್ನು ಕಂಡುಹಿಡಿಯಲಾಗಿದೆ. ಅವುಗಳನ್ನು ಹೆಚ್ಚಿನ ಸಾಂದ್ರತೆ ಮತ್ತು ಕಡಿಮೆ ಸಾಂದ್ರತೆಯ ಅಸ್ಫಾಟಿಕ ಮಂಜುಗಡ್ಡೆ ಎಂದು ಕರೆಯಲಾಗುತ್ತಿದೆ. ಇದೀಗ ನಾವು ಮಧ್ಯಮ ಸಾಂದ್ರತೆಯ ಮಂಜುಗಡ್ಡೆಯನ್ನು ಕಂಡುಹಿಡಿದಿದೇವೆ” ಎಂದು ಲಂಡನ್ ವಿಶ್ವವಿದ್ಯಾಲಯದ ಕಾಲೇಜಿನ ಹಿರಿಯ ಲೇಖಕ, ಪ್ರೊಫೆಸರ್ ಕ್ರಿಸ್ಟೋಫ್ ಸಾಲ್ಜ್‌ಮನ್ ತಿಳಿಸಿದ್ದಾರೆ.