ಬಾಹ್ಯಾಕಾಶ ಜೀವಿಗಳಿಂದ ಬಂದಿರಬಹುದಾದ ರೇಡಿಯೊ ಸಂಕೇತಗಳು ತಮ್ಮ ಪ್ರಬಲ ದೂರದರ್ಶಕದಲ್ಲಿ ದಾಖಲಾಗಿರುವುದಾಗಿ ಚೀನಾ ಹೇಳಿಕೊಂಡಿದೆ.
ವಿಶ್ವದ ಅತಿದೊಡ್ಡ ಎನ್ನಲಾದ ದೂರದರ್ಶಕ ʻಸ್ಕೈ-ಐʼ ಚೀನಾದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅತ್ಯಂತ ಸೀಮಿತ ಬ್ಯಾಂಡ್‌ನ ಕ್ಷೀಣ ರೇಡಿಯೋ ಸಂಕೇತಗಳನ್ನೂ ಇದರಲ್ಲಿ ದಾಖಲಿಸಬಹುದಾಗಿದೆ. ಈ ದೂರದರ್ಶಕದಲ್ಲಿ ಅನ್ಯಗ್ರಹ ಜೀವಿಗಳಿಂದ ಬಂದಿರಬಹುದಾದ ಕ್ಷೀಣ ಸಂಕೇತಗಳು ದಾಖಲಾಗಿವೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಸರಕಾರಿ ಪ್ರಾಯೋಜಿತ ವಿಜ್ಞಾನ ಮತ್ತು ತಂತ್ರಜ್ಞಾನ ದೈನಿಕವೊಂದು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ನಂತರ ಈ ವರದಿಯನ್ನು ತೆಗೆದುಹಾಕಲಾಗಿದೆ. ಈ ವರದಿಯನ್ನು ಯಾವ ಕಾರಣಕ್ಕಾಗಿ ಹಿಂಪಡೆಯಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.
ಚೀನಾದ ನೈಋತ್ಯ ಪ್ರಾಂತ್ಯದಲ್ಲಿ ಸ್ಥಿತವಾಗಿರುವ ಸ್ಕೈ-ಐ ದೂರದರ್ಶಕ 500 ಮೀ. ವ್ಯಾಸ ಹೊಂದಿದ್ದು, 2020ರ ಸೆಪ್ಟೆಂಬರ್‌ನಿಂದ ಅನ್ಯಗ್ರಹ ಜೀವಿಗಳ ಕುರುಹು ಪತ್ತೆ ಮಾಡುವ ಕಾರ್ಯದಲ್ಲಿ ನಿರತವಾಗಿದೆ. ಈಗಾಗಲೇ ಅನ್ಯಗ್ರಹ ಜೀವಿಗಳದ್ದೇ ಇರಬಹುದೆಂಬ ಸಂಶಯಕ್ಕೆ ಕಾರಣವಾಗಿರುವಂಥ ಎರಡು ಸಂಕೇತಗಳನ್ನು ಈ ಉಪಕರಣ ದಾಖಲಿಸಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು.
ಇದನ್ನೂ ಓದಿ: Dostarlimab ಕ್ಯಾನ್ಸರ್‌ಗೆ ಮಾಯಾಮದ್ದು ಆಗಬಹುದಾ? ಎಲ್ಲರ ಕೈಗೆ ಸಿಗುತ್ತಾ? ಸ್ವಲ್ಪ ತಾಳಿ!
ಈ ಹಿಂದೆ ಅಮೆರಿಕದ ಕೆಲವರು ಕೂಡ ಬಾಹ್ಯಾಕಾಶ ಜೀವಿಗಳಿಂದ ತಮಗೆ ಸಂಕೇತಗಳು ಬರುತ್ತಿವೆ ಎಂದು ಹೇಳಿಕೊಂಡಿದ್ದರು. ಆದರೆ ಇದನ್ನು ಅಮೆರಿಕ ಸರಕಾರ ಒಪ್ಪಿರಲಿಲ್ಲ. ಅಮೆರಿಕದ ಮಿಲಿಟರಿಯಲ್ಲಿ ಗುರುತು ಪತ್ತೆಯಾಗದ ಹಾರುವ ತಟ್ಟೆಗಳ (UFO) ಬಗ್ಗೆ ಅಧ್ಯಯನ ಮಾಡುವುದಕ್ಕಾಗಿಯೇ ಒಂದು ವಿಭಾಗವಿದೆ. ಬಾಹ್ಯಾಕಾಶದಲ್ಲಿ ಅನ್ಯಜೀವಿಗಳಿದ್ದರೆ ಅವರಿಗೆ ನಾವು ಇಲ್ಲಿದ್ದೇವೆ ಎಂಬುದು ತಿಳಿಯಲಿ ಎಂಬುದಕ್ಕಾಗಿ ಅನೇಕ ರೇಡಿಯೋ ಸಿಗ್ನಲ್‌ಗಳನ್ನೂ ವಿಜ್ಞಾನಿಗಳು ತೇಲಿಬಿಟ್ಟಿರುವುದನ್ನು ಇಲ್ಲಿ ನೆನೆಯಬಹುದು.
ಇದನ್ನೂ ಓದಿ: Snapping footwear: ಮಧುಮೇಹಿಗಳಿಗೆ IIScಯಿಂದ ಸ್ಪೆಷಲ್ ಪಾದರಕ್ಷೆ, ನೋವಾಗಲ್ಲ, ಕೀವಾಗಲ್ಲ!