Site icon Vistara News

Sun Breaks off: ಸೂರ್ಯನಿಂದ ಕಳಚಿದ ಬಹುದೊಡ್ಡ ಭಾಗ, ವಿಜ್ಞಾನಿಗಳಿಗೆ ದಿಗ್ಭ್ರಮೆ

sun breaks off

#image_title

ನವದೆಹಲಿ: ಸೂರ್ಯನ ಭಾಗ ಕಳಚಿ ಬೀಳುತ್ತಿದೆಯೇ? ಹೌದು, ನಾಸಾದ ಜೇಮ್ಸ್ ವೆಬ್ ಟೆಲಿಸ್ಕೋಪ್ ಸೆರೆಹಿಡಿರುವ ಚಿತ್ರದ ಪ್ರಕಾರ, ಸೂರ್ಯನ ಒಂದು ದೊಡ್ಡ ಭಾಗವು ಅದರಮ ಮೇಲ್ಮೈಯಿಂದ ಬೇರ್ಪಟ್ಟು(Sun Breaks off), ಉತ್ತರದ ಧ್ರುವದ ಸುತ್ತ ಸುಂಟರಗಾಳಿಯಂಥ ಸುಳಿಯನ್ನು ಸೃಷ್ಟಿಸಿದೆ. ಇದು ವಿಜ್ಞಾನ ಲೋಕಕ್ಕೆ ದಿಗ್ಭ್ರಮೆಗೊಳಿಸಿದೆ.

ಬಾಹ್ಯಾಕಾಶ ಹವಾಮಾನ ಮುನ್ಸೂಚಕರಾದ ಡಾ. ತಮಿಥಾ ಸ್ಕೋವ್ ಅವರು ಈ ಮಾಹಿತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಸೂರ್ಯನು ಸೌರ ಜ್ವಾಲೆಗಳನ್ನುಹೊರಸೂಸುತ್ತಲೇ ಇರುತ್ತಾನೆ, ಅದು ಕೆಲವೊಮ್ಮೆ ಭೂಮಿಯ ಮೇಲಿನ ಸಂವಹನದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ವಿಜ್ಞಾನಿಗಳು ಇತ್ತೀಚಿನ ಈ ಬೆಳವಣಿಗೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಂತೆ ಮಾಡಲು ಕಾರಣವಾಗಿದೆ.

ಪೋಲಾರ್ ವೋರ್ಟೆಕ್ಸ್(ಧ್ರುವ ಸುಳಿಗಾಳಿ) ಬಗ್ಗೆ ಮಾತಾಡೋಣ. ಸೂರ್ಯನ ಮುಖ್ಯ ಮೇಲ್ಮೈಯಿಂದ ಭಾಗವು ಕಳಚಿಕೊಂಡು ಬಿದ್ದು, ಅದರ ಉತ್ತರ ಧ್ರುವದಲ್ಲಿ, ಬೃಹತ್ ಸುಳಿಯಲ್ಲಿ ಸುತ್ತುತ್ತಿದೆ ಎಂದು ಡಾ ಸ್ಕೋವ್ ಅವರು ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದರು. ಇದು ಸೂರ್ಯನ ಮೇಲ್ಮೈಯಿಂದ ಹೊರಕ್ಕೆ ವಿಸ್ತರಿಸುವ ದೊಡ್ಡ ಪ್ರಕಾಶಮಾನವಾದ ಲಕ್ಷಣವಾಗಿದೆ. ಈ ಹಿಂದೆ ಈ ರೀತಿಯಾದ ಅನೇಕ ಉದಾಹರಣೆಗಳಿವೆ. ಆದರೆ ಈ ಬಾರಿ ಈ ಘಟನೆಯು ವೈಜ್ಞಾನಿಕ ಸಮುದಾಯವನ್ನು ದಿಗ್ಭ್ರಮೆಗೊಳಿಸಿದೆ.

ಇದನ್ನೂ ಓದಿ: Surya Namaskar Benefits: ಸೂರ್ಯ ನಮಸ್ಕಾರ ನಿಯಮಿತವಾಗಿ ಮಾಡುವುದರ ಲಾಭಗಳೇನು?

ಈಗ ನಡೆದಿರುವ ಬೆಳವಣಿಗೆಯನ್ನು ಅವಲೋಕಿಸಿದಾಗ, ಸೂರ್ಯನಿಂದ ಹೊರ ಬಂದಿರುವ ಭಾಗವು 60 ಡಿಗ್ರಿ ಅಕ್ಷಾಂಶದಲ್ಲಿ ಸುತ್ತಲು ಸುಮಾರು 8 ಗಂಟೆಗಳನ್ನು ತೆಗೆದುಕೊಂಡಿದೆ. ಇದರರ್ಥ ಈ ಘಟನೆಯಲ್ಲಿ ಸಮತಲ ಗಾಳಿಯ ವೇಗವು ಅಂದಾಜು ಸೆಕೆಂಡ್‌ಗೆ 96 ಕಿ.ಮೀ. ಅಥವಾ ಸೆಕೆಂಡ್‌ಗೆ 60 ಮೈಲು ಇರಬಹುದು ಎಂದು ಡಾ. ಸ್ಕೋವ್ ಅವರು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಇದೇ ವೇಳೆ, ಈ ರೀತಿಯ ಸುಳಿಗಾಳಿಯನ್ನು ಎಂದೂ ಕಂಡಿಲ್ಲ. ಸೂರ್ಯನಿಂದ ಹೊರ ಬಂದ ಬೃಹತ್ ಭಾಗವು, ಸೌರ ವಾತಾವರಣದಲ್ಲಿ ಕರಗಿಹೋಯಿತು ಎಂದು ಮತ್ತೊಬ್ಬ ಸೋಲಾರ್ ಸೈಕಿಸ್ಟಿಟ್ ಸ್ಕಾಟ್ ಮ್ಯಾಕ್‌ತೋಷ್ ಅವರು ಹೇಳಿದ್ದಾರೆ.

Exit mobile version