ನವದೆಹಲಿ: ಚಂದ್ರಯಾನ 3 (Chandrayaan 3) ಲಾಂಚ್ ವೆಹಿಕಲ್ (Launch Vehicle) ಮೇಲ್ಭಾಗವು ಭೂಮಿಯ ವಾತಾವರಣಕ್ಕೆ ಮರು ಪ್ರವೇಶಿಸಿದ್ದು(Re Entered to Earth), ಉತ್ತರ ಫೆಸಿಪಿಕ್ ಸಮುದ್ರದಲ್ಲಿ (North Pacific Ocean) ಬಿದ್ದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಹೇಳಿದೆ. “ಎಲ್‌ವಿಎಂ3 ಎಂ4 ಉಡಾವಣಾ ವಾಹನದ ಕ್ರಯೋಜೆನಿಕ್ ಮೇಲಿನ ಹಂತವು ಭೂಮಿಯ ವಾತಾವರಣಕ್ಕೆ ಬುಧವಾರ ಮರು ಪ್ರವೇಶ ಮಾಡಿತು ಎಂದು ಇಸ್ರೋ ಹೇಳಿತು.
ಫೆಸಿಪಿಕ್ ಸಮುದ್ರದಲ್ಲಿ ಬಿದ್ದಿರುವ ಈ ರಾಕೆಟ್ ಬಾಡಿ (NORAD id 57321) ಜುಲೈ 14 ರಂದು 21.3 ಡಿಗ್ರಿ ಇಳಿಜಾರಿನೊಂದಿಗೆ 133 ಕಿಮೀ x 35823 ಕಿಮೀ ಉದ್ದೇಶಿತ ಕಕ್ಷೆಗೆ ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇಂಜೆಕ್ಟ್ ಮಾಡಿದ ವಾಹನದ ಭಾಗವಾಗಿದೆ ಎಂದು ಇಸ್ರೋ ಹೇಳಿದೆ.
ಲಾಂಚ್ ಆದ 124 ದಿನಗಳ ಬಳಿಕ ರಾಕೆಟ್ ಬಾಡಿ ವಾಪಸ್ ಭೂಮಿಯ ವಾತಾವರಣವನ್ನು ಪ್ರವೇಶಿಸಿದೆ. ಇಂಟರ್-ಏಜೆನ್ಸಿ ಸ್ಪೇಸ್ ಡೆಬ್ರಿಸ್ ಕೋಆರ್ಡಿನೇಷನ್ ಕಮಿಟಿ (ಐಎಡಿಸಿ) ಶಿಫಾರಸು ಮಾಡಿದ ಲೋ ಅರ್ಥ್ ಆರ್ಬಿಟ್ ಆಬ್ಜೆಕ್ಟ್‌ಗಳಿಗೆ 25 ವರ್ಷಗಳ ನಿಯಮವನ್ನು ಸಂಪೂರ್ಣವಾಗಿ ಅನುಸರಿಸುತ್ತಿದೆ ಎಂದು ಇಸ್ರೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಚಂದ್ರಯಾನ 3 ಭಾರತದ ಮೂರನೇ ಲೂನಾರ್ ಮಿಷನ್ ಆಘಿದ್ದು, ಜುಲೈ 14ರಂದು ಸತೀಶ್ ಧವನ್ ಸ್ಪೇಸ್ ಸೆಂಟರ್‌ನಿಂದ ಉಡಾವಣೆಯಾಗಿತ್ತು. ಒಂದು ತಿಂಗಳ ಬಳಿಕ ಚಂದ್ರಯಾನ -3ರ ವಿಕ್ರಮ್ ಲ್ಯಾಂಡರ್, ಪ್ರಜ್ಞಾನ್ ರೋವರ್‌ನೊಂದಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ 23ರಂದು ಲ್ಯಾಂಡ್ ಆಗಿತ್ತು. ಇದರೊಂದಿಗೆ ದಕ್ಷಿಣ ಧ್ರುವ ತಲುಪಿದ ಜಗತ್ತಿನ ಮೊದಲ ರಾಷ್ಟ್ರವಾಗಿದೆ.
ಲ್ಯಾಂಡ್ ಆದ 10 ದಿನಗಳ ಬಳಿಕ ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಸ್ಲೀಪ್ ಮೋಡ್‌ಗೆ ಹೋಗಿದ್ದವು. ಈ ಮಧ್ಯೆ, ಲ್ಯಾಂಡರ್‍ನಿಂದ ಬೇರ್ಪಟ್ಟ ಚಂದ್ರಯಾನ 3ರ ಪ್ರಪಲ್ಷನ್ ಮಾಡೆಲ್ ಈಗಲೂ ಚಂತ್ರದನ ಕಕ್ಷೆಯಲ್ಲಿ ಸುತ್ತುತ್ತಿದೆ. 2019ರಲ್ಲಿ ಇಸ್ರೋ ಚಂದ್ರಯಾನ 2 ಮಿಷನ್ ಅನ್ನು ಇಸ್ರೋ ಕೈಗೊಂಡಿತ್ತು. ಆದರೆ, ಚಂದ್ರನ ನಿರ್ದಿಷ್ಟ ಜಾಗದಲ್ಲಿ ಇಳಿಯಲು ವಿಫಲವಾಗಿತ್ತು. ಇದಕ್ಕೂ ಮೊದಲು ಭಾರತವು ಚಂದ್ರಯಾನ-1 ಯಶಸ್ವಿಯಾಗಿ ಕೈಗೊಂಡಿತ್ತು.
ಈ ಸುದ್ದಿಯನ್ನೂ ಓದಿ: ಚಂದ್ರಯಾನ-3 ಯಶಸ್ಸಿನ ಬಳಿಕ ಇಸ್ರೋ ಬಗ್ಗೆ ಗೌರವ ಹೆಚ್ಚಳ ಎಂದ ಅಮೆರಿಕದ ನಾಸಾ!