ನವದೆಹಲಿ: ಪ್ರಜ್ಞಾನ್ ರೋವರ್ (Pragyan Rover) ಕಾರ್ಯವನ್ನು ಸ್ಥಗಿತಗೊಳಿಸಿದ (Sleep Mode) ಬೆನ್ನಲ್ಲೇ ಭಾರೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO), ಚಂದ್ರನ ಮೇಲ್ಮೈನಲ್ಲಿ ನೆಲೆ ನಿಂತಿರುವ ವಿಕ್ರಮ್ ಲ್ಯಾಂಡರ್ (Vikram Lander) ಕಾರ್ಯವನ್ನೂ ಈಗ ಸ್ಥಗಿತಗೊಳಿಸಿದ್ದಾರೆ. ಸೋಮವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ವಿಕ್ರಮ್ ಲ್ಯಾಂಡರ್ ಸ್ಲೀಪ್ ಮೋಡ್ಗೆ ಜಾರಿದೆ ಎಂದು ಇಸ್ರೋ ಹೇಳಿದೆ. ಭಾರತವು ಚಂದ್ರಯಾನ- 3 (Chandrayaan 3) ಯೋಜನೆಯನ್ನು ಯಶಸ್ವಿಯಾಗಿ ಪೂರೈಸಿದೆ. ಚಂದ್ರನ ದಕ್ಷಿಣ ಧ್ರುವಕ್ಕೆ ಆಗಸ್ಟ್ 23 ಸಂಜೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿದಿತ್ತು. ಇದಾದ ಕೆಲವೇ ಗಂಟೆಗಳ ಬಳಿಕ ಪ್ರಜ್ಞಾನ್ ರೋವರ್ ಕೂಡ ಹೊರ ಬಂದು ತನ್ನ ಕಾರ್ಯವನ್ನು ಶುರು ಮಾಡಿತ್ತು.
ವಿಕ್ರಮ್ ಲ್ಯಾಂಡರ್ ಅನ್ನು 08:00 ಗಂಟೆಯ ಸುಮಾರಿಗೆ ಸ್ಲೀಪ್ ಮೋಡ್ಗೆ ತಳ್ಳಲಾಗಿದೆ.ಅದಕ್ಕೂ ಮೊದಲು, ChaSTE, RAMBHA-LP ಮತ್ತು ILSA ಪೇಲೋಡ್ಗಳಿಂದ ಸ್ಥಳದಲ್ಲೇ ಪ್ರಯೋಗಗಳನ್ನು ಹೊಸ ಸ್ಥಳದಲ್ಲಿ ನಡೆಸಲಾಗಿತ್ತು. ಸಂಗ್ರಹಿಸಿದ ಡೇಟಾವನ್ನು ಭೂಮಿಯಲ್ಲಿ ಸ್ವೀಕರಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಹೇಳಿದೆ.
ಈ ಸುದ್ದಿಯನ್ನೂ ಓದಿ: Chandrayaan 3: ಸ್ಮೈಲ್ ಪ್ಲೀಸ್; ಚಂದ್ರನೂರಿನಿಂದ ವಿಕ್ರಮ್ ಲ್ಯಾಂಡರ್ ಫೋಟೊ ಕಳುಹಿಸಿದ ಪ್ರಜ್ಞಾನ್
ಲ್ಯಾಂಡರ್ನ ಪೇಲೋಡ್ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಆದರೆ ಅದರ ರಿಸೀವರ್ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಒಮ್ಮೆ ಸೌರಶಕ್ತಿ ಖಾಲಿಯಾದಾಗ ಮತ್ತು ಬ್ಯಾಟರಿ ಖಾಲಿಯಾದ ನಂತರ ವಿಕ್ರಮ್ ಪ್ರಜ್ಞಾನ್ ರೋವರ್ ಪಕ್ಕದಲ್ಲಿ ನಿಸ್ತೇವಜಾಗಿರಲಿದೆ. ಸೆಪ್ಟೆಂಬರ್ 22, 2023 ರ ಸುಮಾರಿಗೆ ಮತ್ತೆ ಅದು ಎಂದಿನಂತೆ ಕಾರ್ಯನಿರ್ವಹಿಸಲಿ ಎಂಬ ಆಶಾ ಭಾವನೆ ಇದೆ ಎಂದು ಇಸ್ರೋ ಹೇಳಿದೆ.
ವಿಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.