Site icon Vistara News

Chandrashekhar Guruji | ವಿಡಿಯೋ ಶೇರ್‌ ಮಾಡಿ ಟ್ವೀಟ್‌ ಮಾಡಿದ ನಟಿ ರಂಜನಿ ರಾಘವನ್‌

chandrashekhar guruji hubli

ಬೆಂಗಳೂರು: ಸರಳ ವಾಸ್ತು (Sarla Vastu) ಖ್ಯಾತಿಯ ಚಂದ್ರಶೇಖರ ಗುರೂಜಿ ಅವರ (Chandrashekhar Guruji) ಅವರ ಎದೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಸಿಸಿ ಕ್ಯಾಮೆರಾ ಫೂಟೇಜ್‌ಗಳನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿರುವ ಕಿರಿತೆರೆ ನಟಿ ರಂಜನಿ ರಾಘವನ್‌, ಈ ಬಗ್ಗೆ ಟ್ವೀಟ್‌ ಮಾಡಿದ್ದಾರೆ.

ʼʼನಮ್ಮ ದೇಶದಲ್ಲಿ ಇಷ್ಚು ಸುಲಭವಾಗಿ ಒಬ್ಬರ ಜೀವ ತೆಗೆಯಬಹುದಾ! ಎಷ್ಟು ಘೋರ!! ಗುರೂಜಿಯಾದರೂ, ಟೈಲರ್ ಆದರೂ ಮೃತರ ಆತ್ಮಕ್ಕೆ ಶಾಂತಿ ಕೋರುವುದೊಂದೇ ನಮ್ಮ ಕೈಲಿರೋದು (please note – Explicit content)ʼʼ ಎಂದು ರಂಜನಿ ಟ್ವೀಟ್‌ ಮಾಡಿದ್ದರು.

ಚಂದ್ರಶೇಖರ ಗುರೂಜಿ ಅವರ ಹತ್ಯೆಯ ಕುರಿತು ಸಾರ್ವಜನಿಕರು ಹಾಗೂ ಗಣ್ಯರ ವಲಯದಲ್ಲಿ ಆಘಾತ, ಶೋಕ, ಆತಂಕದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಖ್ಯಾತ ವ್ಯಕ್ತಿಯೊಬ್ಬರನ್ನು, ಸುರಕ್ಷಿತವೆನಿಸುವ ಸ್ಥಳದಲ್ಲಿ, ಹಾಡಹಗಲಲ್ಲೇ ಕೊಲೆ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ ಎಂದಿದ್ದಾರೆ. ಪಾತಕಿಗಳನ್ನು ಬಂಧಿಸಿರುವ ಪೊಲೀಸರು, ತನಿಖೆಯನ್ನು ತೀವ್ರಗೊಳಿಸಿದ್ದಾರೆ.

Exit mobile version