Site icon Vistara News

BBK SEASON 10 : ದೊಡ್ಮನೆಯಿಂದ ಮೈಕಲ್ ಎಲಿಮಿನೇಟ್, ಮುಳುವಾಯ್ತು ಧಿಮಾಕು

michel ajay

ಬೆಂಗಳೂರು: ಬಿಗ್​ಬಾಸ್​ ಮನೆಯಿಂದ ಈ ಬಾರಿಯೂ ವಿನಯ್​ ಟೀಮ್​ನವರೇ ಎಲಿಮಿನೇಟ್ ಆಗಿದ್ದಾರೆ. ಆಟದಲ್ಲಿ ಸ್ಥಿರತೆ ಕಾಪಾಡಿಕೊಳ್ಳದ, ವರ್ತನೆ ಬದಲಿಸಿಕೊಂಡಿದ್ದ ಮೈಕಲ್ ಅಜಯ್ (Michael) ಮನೆಯಿಂದ ಹೊರಬರುವಂತಾಗಿದೆ. ಬಿಗ್​ಬಾಸ್ ಕನ್ನಡದ 10 ನೇ ಆವೃತ್ತಿ ಆರಂಭವಾಗಿ ಈಗಾಗಲೇ 13 ವಾರಗಳು ಮುಗಿದಿತ್ತು. ಕಾರ್ತಿಕ್ ಮಹೇಶ್‌, ವರ್ತೂರು ಸಂತೋಷ್, ಮೈಕಲ್, ತುಕಾಲಿ ಸಂತು, ಡ್ರೋನ್ ಪ್ರತಾಪ್ ನಾಮಿನೇಟ್ ಆಗಿದ್ದರು. ಅದರೆ, ಕೊನೆಯಲ್ಲಿ ಮೈಕಲ್​ ಮೈಕಲ್ ತಮ್ಮ ಆಟವನ್ನು ಅಂತ್ಯಗೊಳಿಸಬೇಕಾಯಿತು ವೀಕ್ಷಕರಿಂದ ಕಡಿಮೆ ವೋಟ್​ ಪಡೆದ ಮೈಕಲ್ ಅವರನ್ನು ಶೋನಿಂದ ಎಲಿಮಿನೇಟ್ ಮಾಡಲಾಯಿತು.

ಮಾಡೆಲ್ ಆಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೈಕಲ್ ಕನ್ನಡ ಕಲಿತು ಕನ್ನಡದ ಕಂದ ಎನಿಸಿಕೊಂಡಿದ್ದರು. ಶೋದಿಂದಾಗಿಯೇ ಕನ್ನಡ ಕಲಿತೆ ಎಂಬುದಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದ ಮೈಕಲ್​ ಇಶಾನಿ ಜೊತೆಗಿನ ಪ್ರೀತಿಯಿಂದಾಗಿ ಇನ್ನಷ್ಟು ಖ್ಯಾತಿ ಪಡೆದುಕೊಂಡಿದ್ದರು. ಮೊದಲ 6 ವಾರಗಳ ಕಾಲ ಮೈಕಲ್ ಉತ್ತಮವಾಗಿ ಆಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಮೈಕಲ್ ಮನೆಯಲ್ಲಿ ತಮ್ಮ ನೈಜ ರೂಪ ತೋರಿಸುತ್ತಿದ್ದರು. ಬಿಗ್ ಬಾಸ್ ಆದೇಶಕ್ಕೆ ಮತ್ತು ಕ್ಯಾಪ್ಟನ್ ಸೂಚನೆಗೆ ಗೌರವ ಕೊಡದೇ ಧಿಮಾಕಿನ ವರ್ತನೆ ತೋರಿದ್ದರು. ಇದೇ ಕಾರಣಕ್ಕೆ ಶನಿವಾರ ಎಪಿಸೋಡ್‌ನಲ್ಲಿ ಸುದೀಪ್ ಬೆಂಡೆತ್ತಿದ್ದರು. ನನಗೆ ರೂಲ್ಸ್ ಫಾಲೋ ಮಾಡಿ ಅಭ್ಯಾಸ ಇಲ್ಲ ಎಂದು ಹೇಳಿ ಮೈಕಲ್ ಆಟಕ್ಕೆ ಇದೀಗ ಬಿಗ್ ಬಾಸ್ ಬ್ರೇಕ್ ಹಾಕಿದೆ.

ಕಾರ್ತಿಕ್ ಸೇಫ್

ಕಾರ್ತಿಕ್, ವರ್ತೂರು ಸಂತೋಷ್, ಮೈಕಲ್, ತುಕಾಲಿ ಸಂತು, ಡ್ರೋನ್ ಪ್ರತಾಪ್ ಶನಿವಾರದ ಸಂಚಿಕೆಯಲ್ಲಿ ಸೇಫ್ ಆಗಿದ್ದರು. ಭಾನುವಾರ ಆರಂಭದಲ್ಲಿ ಡ್ರೋನ್ ಪ್ರತಾಪ್ ಸೇಫ್ ಆಗಿದ್ದರು. ತುಕಾಲಿ ಸಂತು ಸೇಫ್ ಆದರು. ವರ್ತೂರು ಸಂತೋಷ್‌ & ಮೈಕಲ್ ಮಾತ್ರ ಉಳಿದುಕೊಂಡರು. ಇವರಿಬ್ಬರಲ್ಲಿ ಮೈಕಲ್‌ ಎಲಿಮಿನೇಟ್ ಆದರು.

ಮೈಕಲ್​ಗೆ ಮುಳುವಾಗಿದ್ದೇನು?

‘ಬಿಗ್ ಬಾಸ್’ ಶೋನಲ್ಲಿ ಆರಂಭದಿಂದಲೂ ಅವರನ್ನು ಕಾಪಾಡಿದ್ದು ಕನ್ನಡ ಪ್ರೀತಿ. ವಿದೇಶಿ ಪ್ರಜೆ ಆಗಿರುವ ಮೈಕಲ್, ಬಿಗ್ ಬಾಸ್ ಮನೆಯೊಳಗೆ ಸಾಧ್ಯವಾದಷ್ಟು ಕನ್ನಡ ಮಾತಾಡಲು ಪ್ರಯತ್ನಿಸುತ್ತಿದ್ದರು. ಅದಕ್ಕಾಗಿ ಕನ್ನಡದ ಕಂದ ಎಂದೇ ಪ್ರಸಿದ್ಧರಾಗಿದ್ದರು. ಏತನ್ಮಧ್ಯೆ ದಿನ ಕಳೆದಂತೆ ಅವರ ವರ್ತನೆ ಬದಲಾಗಿತ್ತು. ಇತ್ತೀಚೆಗೆ ಅವರ ಮಾತುಗಳಲ್ಲಿ ಅಹಂ ಕಾಣಿಸುತ್ತಿತ್ತು. ಟಾಸ್ಕ್‌ನಲ್ಲಿ ಡಲ್ ಆಗಿದ್ದ ಅವರಿಗೆ ಈ ವಾರ ಕಳಪೆ ಪಟ್ಟ ಬೇರೆ ಸಿಕ್ಕಿತ್ತು. ಇವೆಲ್ಲರೂ ಅವರಿಗೆ ಮುಳುವಾಯಿತು.

ಬೆಂಡೆತ್ತಿದ್ದ ಕಿಚ್ಚ

ಆಲಸ್ಯದ ವರ್ತನೆ, ಉಡಾಫೆ ಉತ್ತರಗಳನ್ನು ನೀಡುತ್ತಿದ್ದ ಮೈಕಲ್​ ವರ್ತನೆ ಕಿಚ್ಚ ಸುದೀಪ್‌ ಅವರಿಗೂ ಕೋಪ ತರಿಸಿತ್ತು. ಶನಿವಾರ ಸಂಚಿಕೆಯಲ್ಲಿ ಅವರು , “ನಾನು ಸರಿಯಿಲ್ಲ. ನನ್ನ ಹತ್ರ ಆಟಗಳು ಬೇಡ. ನನ್ನ ವ್ಯಕ್ತಿತ್ವವನ್ನು ಟೆಸ್ಟ್ ಮಾಡ್ಬೇಡಿ.. ಈ ಆಲಸ್ಯದ ಬಾಡಿ ಲ್ಯಾಂಗ್ವೇಜ್, ಪ್ರೀತಿಯಿಂದ ಮಾತಾಡಬೇಕಾ, ಮಾತನಾಡಲು ಬರುತ್ತದೆ. ನಿಮ್ಮ ಆಲಸ್ಯದ ವರ್ತನೆ ನನ್ನ ಹತ್ತಿರ ಬೇಡ” ಎಂದು ಬೆಂಡೆತ್ತಿದ್ದರು.

ಇದನ್ನೂ ಓದಿ : BBK SEASON 10: ವಿನಯ್‌ ಜತೆ ಇದ್ದವರೆಲ್ಲ ಮನೆಗೆ ಸೆರ್‌ಕೊಂಡ್ರು; ಪ್ರತಾಪ್‌ ಮಾತಿಗೆ ʻಭೇಷ್‌ʼ ಅಂದ್ರು ಪ್ರೇಕ್ಷಕರು!

ವಿನಯ್‌ಗೆ ಅಡ್ವಾಂಟೇಜ್‌ ನೀಡಿದ ಮೈಕಲ್

ಎಲಿಮಿನೇಟ್ ಆಗಿ ಮನೆಯಿಂದ ಆಚೆ ಹೋಗುವಾಗ ಮೈಕಲ್‌ಗೆ ಬಿಗ್ ಬಾಸ್ ಒಂದು ಅಧಿಕಾರ ಕೊಟ್ಟರು . ಮುಂದಿನ ವಾರ ಟಾಸ್ಕ್‌ಗಳಲ್ಲಿ ಒಬ್ಬರಿಗೆ ಅಡ್ವಾಂಟೇಜ್‌ ನೀಡಬಹುದು ಎಂದು ಹೇಳಿದರು. ಮೈಕಲ್ ತಕ್ಷಣ ವಿನಯ್ ಹೆಸರು ಸೂಚಿಸಿದರು.

Exit mobile version