Site icon Vistara News

RaviShankar Guruji In Tanzania |ಆಫ್ರಿಕಾದಲ್ಲಿ ಆರ್ಟ್‌ ಆಫ್‌ ಲಿವಿಂಗ್‌ ರವಿಶಂಕರ್ ಗುರೂಜಿಗೆ ಜಲಫಿರಂಗಿ ಸ್ವಾಗತ

ರವಿಶಂಕರ್‌ ಗುರೂಜಿ

ತಾಂಜಾನಿಯಾ(ಆಫ್ರಿಕಾ): ವೈಬ್ರಂಟ್‌ ಆಫ್ರಿಕಾ ಹೆಸರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಆಧ್ಯಾತ್ಮಿಕ ಗುರು ಹಾಗೂ ಆರ್ಟ್ ಆಫ್ ಲಿವಿಂಗ್ ಸ್ಥಾಪಕ ರವಿಶಂಕರ್ ಗುರೂಜಿ (RaviShankar Guruji In Tanzania) ಅವರಿಗೆ ತಾಂಜಾನಿಯಾ ಏರ್‌ಪೋರ್ಟ್‌ನಲ್ಲಿ ಜಲಫಿರಂಗಿ ಮೂಲಕ ಸ್ವಾಗತ ಕೋರಲಾಯಿತು.

ರವಿಶಂಕರ್‌ ಗುರೂಜಿಗೆ ಜಲಫಿರಂಗಿ ಸ್ವಾಗತ

ತಾಂಜಾನಿಯಾದ ದಾರ್ ಎಸ್ ಸಲಾಂಗೆ ಆಗಮಿಸಿದ ರವಿಶಂಕರ್‌ ಗುರೂಜಿ ಅವರನ್ನು ತಾಂಜಾನಿಯಾದ ಸಂಸ್ಕೃತಿ, ಕಲೆ ಮತ್ತು ಕ್ರೀಡಾ ಸಚಿವ ಮೊಹಮ್ಮದ್ ಒಮರ್ ಚೆಂಗೆರ್ವಾ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಈ ವೇಳೆ ವಿಮಾನವು ಬರುತ್ತಿದ್ದಂತೆ ಜಲಫಿರಂಗಿ ಜತೆಗೆ ಆಫ್ರಿಕಾದ ಸಾಂಪ್ರದಾಯಿಕ ಡ್ರಮ್ಮರ್ ಗಳು ಮತ್ತು ನೃತ್ಯಗಾರರು ಅದ್ಧೂರಿಯಾಗಿ ಸ್ವಾಗತಿಸಿದರು.

ತಾಂಜಾನಿಯಾ ಸರ್ಕಾರವು ಪ್ರತಿಷ್ಠಿತ ಜೂಲಿಯಸ್ ನೈರೆರೆ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ತಾಂಜಾನಿಯಾ ಇಂಡಿಯಾ ಕಲ್ಚರಲ್ ಈವೆಂಟ್ ಅನ್ನು ಆಯೋಜಿಸಲಾಗಿತ್ತು. ಆಫ್ರಿಕನ್ ಸಾಂಪ್ರದಾಯಿಕ ನೃತ್ಯ, ಭಾರತೀಯ ಶಾಸ್ತ್ರೀಯ ನೃತ್ಯ ಮತ್ತು ಗುಜರಾತಿ ನೃತ್ಯಗಳ ಪ್ರದರ್ಶನದೊಂದಿಗೆ ಕಾರ್ಯಕ್ರಮ ವಿಶೇಷವಾಗಿ ನಡೆಯಿತು.

ಭಾರತೀಯ ಮೂಲದ ಯುವತಿಯರು ಖಡ್ಗಗಳನ್ನು ಹಿಡಿದು ವೀರ್ ನೃತ್ಯವನ್ನು ಪ್ರದರ್ಶಿಸಿದರು. ಬಳಿಕ ಧ್ಯಾನದ ಕುರಿತಾದ ಗೋಷ್ಠಿಗಳನ್ನು ನಡೆಸಿ ಧ್ಯಾನದ ಮಹತ್ವದ ಕುರಿತು ರವಿಶಂಕರ್‌ ಗುರೂಜಿ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ತಾಂಜಾನಿಯಾ ಮತ್ತು ಭಾರತೀಯ ಮೂಲದ ನಾಗರಿಕರು ಭಾಗವಹಿಸಿದ್ದರು. 

ಇದನ್ನೂ ಓದಿ | Cricket League | ಯುಎಇ ಮತ್ತು ದಕ್ಷಿಣ ಆಫ್ರಿಕಾದ ಲೀಗ್‌ಗಳಲ್ಲಿ ತಂಡ ಖರೀದಿಸಿದ ಮುಂಬಯಿ ಇಂಡಿಯನ್ಸ್

Exit mobile version