Site icon Vistara News

1st T20| ಹಾರ್ದಿಕ್‌ ಆಲ್‌ರೌಂಡ್‌ ಆಟ, ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಗೆದ್ದ ಭಾರತ

cricket

ಸೌತಾಂಪ್ಟನ್:‌ ಇಂಗ್ಲೆಂಡ್‌ ವಿರುದ್ಧದ ಟಿ೨೦ ಸರಣಿ ಆರಂಭವಾಗಿದ್ದು, ಸೌತಾಂಪ್ಟನ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ಜಯ ಗಳಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆರಂಭಿಸಿದ ಭಾರತ ೨೦ ಓವರ್‌ಗಳಲ್ಲಿ ೮ ವಿಕೆಟ್‌ ಕಳೆದುಕೊಂಡು ೧೯೮ ರನ್‌ ದಾಖಲಿಸಿತು. ಪ್ರತಿಯಾಗಿ ಇಂಗ್ಲೆಂಡ್‌ ೧೯.೩ ಓವರ್‌ಗಳಲ್ಲಿ ೧೪೮ ರನ್ನಿಗೆ ಎಲ್ಲ ವಿಕೆಟ್‌ ಕಳೆದುಕೊಂಡು ೫೦ ರನ್‌ಗಳ ಅಂತರದಲ್ಲಿ ಸೋಲಿಗೀಡಾಯಿತು.

ಆಲ್‌ ರೌಂಡರ್‌ ಹಾರ್ದಿಕ್‌ ಪಾಂಡ್ಯ ಸ್ಫೋಟಕ ೫೦ ರನ್‌ ಗಳಿಸಿದ್ದಲ್ಲದೆ, ೩೩ ರನ್ನುಗಳಿಗೆ ೪ ವಿಕೆಟ್‌ಗಳನ್ನೂ ಕಬಳಿಸಿದರು. ೧೯೮ ರನ್‌ಗಳನ್ನು ಹಿಂಬಾಲಿಸಿದ ಇಂಗ್ಲೆಂಡ್‌ ಆರಂಭದಲ್ಲೇ ಮುಗ್ಗರಿಸಿತು. ೬.೧ ಓವರ್‌ ವೇಳೆಗೆ ೪ ವಿಕೆಟ್‌ ಕಳೆದುಕೊಂಡು ೩೩ ರನ್‌ ಗಳಿಸಿತ್ತು.

ನಾಯಕ ರೋಹಿತ್‌ ಶರ್ಮಾ ಸಾರಥ್ಯದಲ್ಲಿ ಭಾರತ ಸತತ ೧೮ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಗೆದ್ದುಕೊಂಡಿದೆ.

Exit mobile version