ನವದೆಹಲಿ: ವಿರಾಟ್ ಕೊಹ್ಲಿ (Virat Kohli) ಕ್ರಿಕೆಟ್ ಕ್ಷೇತ್ರ ಸ್ಟೈಲಿಸ್ಟ್ ಆಟಗಾರ. ಸುರದ್ರೂಪಿಯಾಗಿರುವ ಅವರು ಅದೇ ಕಾರಣಕ್ಕೆ ಜಾಹೀರಾತುಗಳಲ್ಲೂ ಹೆಚ್ಚು ಹೆಚ್ಚು ಚಾನ್ಸ್ ಪಡೆಯುತ್ತಾರೆ. ಜತೆಗೆ ಅವರಿಗೆ ದೊಡ್ಡ ಸಂಖ್ಯೆಯ ಮಹಿಳಾ ಅಭಿಮಾನಿಗಳೂ ಇದ್ದಾರೆ. ಕೊಹ್ಲಿಯೂ ಅಷ್ಟೇ ವಿಭಿನ್ನ ಗೆಟ್ಅಪ್ನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಾರೆ. ಪ್ರಮುಖವಾಗಿ ಅವರು ತಮ್ಮ ಹೇರ್ಸ್ಟೈಲಿಂಗ್ ಅನ್ನು ಅತ್ಯಂತ ಸುಂದರವಾಗಿ ಮಾಡಿಸಿಕೊಳ್ಳುತ್ತಾರೆ. ಈ ಸ್ಟೈಲಿಂಗ್ ಮೂಲಕವೇ ತಮ್ಮ ಗೆಟ್ಅಪ್ ಅನ್ನು ಆಗಾಗ ಚೇಂಜ್ ಮಾಡಿಕೊಳ್ಳುತ್ತಾರೆ. ಸಿಕ್ಕಾಪಟ್ಟೆ ಆಸ್ತಿ ಹೊಂದಿರುವ ವಿರಾಟ್ ಕೊಹ್ಲಿ ತಮ್ಮ ಹೇರ್ ಸ್ಟೈಲ್ಗಾಗಿ (Hair Styling) ಎಷ್ಟು ಖರ್ಚು ಮಾಡುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿಗಳಿಗೆ ಇದೆ. ಅದಕ್ಕೆ ಈಗ ಉತ್ತರ ಸಿಕ್ಕಿದೆ.
ಕೊಹ್ಲಿಗೆ ಹೇರ್ ಸ್ಟೈಲಿಂಗ್ ಮಾಡುವವರು ಸೆಲೆಬ್ರಿಟಿ ಹೇರ್ಸ್ಟೈಲಿಸ್ಟ್ ಆಲಿಮ್ ಹಕೀಮ್. ಬಾಲಿವುಡ್ ಹಾಗೂ ಕ್ರೀಡಾ ಐಕಾನ್ಗಳ ವಿಭಿನ್ನ ಶೈಲಿಗಳನ್ನು ರೂಪಿಸುವಲ್ಲಿ ಅವರು ಹೆಸರುವಾಸಿ. ಅವರೀಗ ಕೊಹ್ಲಿಯ ಹೇರ್ಕಟ್ಗೆ ಎಷ್ಟು ಚಾರ್ಜ್ ಎಂಬುದನ್ನು ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.
ಹೃತಿಕ್ ರೋಷನ್, ರಣಬೀರ್ ಕಪೂರ್ ಮತ್ತು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರಂತಹ ಗ್ರಾಹಕರನ್ನು ಹೊಂದಿರುವ ಹಕೀಮ್, ದೇಶದ ಅತ್ಯಂತ ಬೇಡಿಕೆಯ ಸ್ಟೈಲಿಸ್ಟ್ಗಳಲ್ಲಿ ಒಬ್ಬರಾಗಿ ಖ್ಯಾತಿಯನ್ನು ಗಳಿಸಿದ್ದಾರೆ. ಸೆಲೆಬ್ರಿಟಿಗಳು ಮತ್ತು ಕ್ರೀಡಾ ಐಕಾನ್ ಗಳ ಲುಕ್ ಬದಲಾಯಿಸುವ ಅವರ ಸಾಮರ್ಥ್ಯವು ಉದ್ಯಮದಲ್ಲಿ ಅವರ ಸ್ಥಾನಮಾನವನ್ನು ಇನ್ನಷ್ಟು ಗಟ್ಟಿ ಮಾಡಿದೆ.
ವಿರಾಟ್ ಯಾವಾಗಲೂ ವಿಶೇಷ : ಆಲಿಮ್ ಹಕೀಮ್
ಇತ್ತೀಚಿನ ಸಂದರ್ಶನವೊಂದರಲ್ಲಿ, ಹಕೀಮ್ ತನ್ನ ಕರಕುಶಲತೆಗೆ ಇರುವ ಸವಾಲನ್ನು ಬಹಿರಂಗಪಡಿಸಿದ್ದಾರೆ. ಆದಾಗ್ಯೂ ತಮ್ಮ ಬಳಿ ಒಂದು ಬಾರಿ ಹೇರ್ ಸ್ಟೈಲಿಂಗ್ ಮಾಡಿಕೊಂಡರೆ ಕನಿಷ್ಠ ಬೆಲೆ 1 ಲಕ್ಷ ರೂಪಾಯಿ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಸ್ಟಾರ್ ಆಟಗಾರ 1 ಲಕ್ಷ ರೂಪಾಯಿಗಿಂತಲೂ ಹೆಚ್ಚು ತಮ್ಮ ಹೇರ್ ಸ್ಟೈಲಿಂಗ್ಗೆ ವಿನಿಯೋಗಿಸುತ್ತಾರೆ ಎಂಬುದು ಬಹಿರಂಗಗೊಂಡಿದೆ.
ಇದನ್ನೂ ಓದಿ: Prithvi Shaw : ಯಾರಿವಳು ಪೃಥ್ವಿ ಶಾ ಜತೆ ಓಡಾಡುತ್ತಿರುವ ಸುಂದರಿ? ಚರ್ಚೆ ಹುಟ್ಟುಹಾಕಿದ ಹೊಸ ವಿಡಿಯೊ
“ನನ್ನ ಶುಲ್ಕ ತುಂಬಾ ಸರಳವಾಗಿದೆ, ಮತ್ತು ನಾನು ಎಷ್ಟು ಶುಲ್ಕ ವಿಧಿಸುತ್ತೇನೆ ಎಂದು ಎಲ್ಲರಿಗೂ ತಿಳಿದಿದೆ. ಇದು 1 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. ಅದು ಕನಿಷ್ಠ” ಎಂದು ಹಕೀಮ್ ಬ್ರೂಟ್ಗೆ ತಿಳಿಸಿದರು.
ಕೊಹ್ಲಿ ಅವರೊಂದಿಗಿನ ಒಡನಾಟದ ಬಗ್ಗೆ ಮಾತನಾಡಿದ ಹಕೀಮ್. ಕ್ರಿಕೆಟಿಗನ ಇತ್ತೀಚಿನ ಹೇರ್ ಕಟ್ ಬಗ್ಗೆ ಒಳನೋಟಗಳನ್ನು ಹಂಚಿಕೊಂಡಿದ್ದಾರೆ.
ಐಪಿಎಲ್ ಬರುತ್ತಿರುವುದರಿಂದ, ನಾವು ಕೂಲ್ ಆಗಿರುವ ಮತ್ತು ವಿಭಿನ್ನವಾದದ್ದನ್ನು ಮಾಡಲು ನಿರ್ಧರಿಸಿದೆವು. ವಿರಾಟ್ ಯಾವಾಗಲೂ ಪ್ರಯೋಗಕ್ಕೆ ಆಸ್ಪದ ಕೊಡುತ್ತಾರೆ.’ ನಾವು ಇದನ್ನು ಪ್ರಯತ್ನಿಸುತ್ತೇವೆ, ನಾವು ಅದನ್ನು ಪ್ರಯತ್ನಿಸುತ್ತೇವೆ, ಮುಂದಿನ ಬಾರಿ ನಾವು ಇದನ್ನು ಪ್ರಯತ್ನಿಸುತ್ತೇವೆ’ ಎಂಬಂತಹ ಆಲೋಚನೆಗೆ ಸ್ಫೂರ್ತಿಯಾಗಿದ್ದಾರೆ. ಹೀಗಾಗಿ ಈ ಬಾರಿ, ನಾವು ಏನಾದರೂ ಹೊಸದಾಗಿ ಮಾಡಲು ನಿರ್ಧರಿಸಿದೆವು. ಅದಕ್ಕಾಗಿ ಅವನ ಹುಬ್ಬುಗಳಲ್ಲಿ ಸೀಳಿದ ವಿನ್ಯಾಸ ಮಾಡಿದೆವು ಎಂದು ಹೇಳಿದ್ದಾರೆ.
ತಾರೆಗಳಿಗೆ ವಿಭಿನ್ನ ಲುಕ್ ನೀಡುವ ಹಕೀಮ್
ಖ್ಯಾತ ನಟರಾದ ಹೃತಿಕ್ ರೋಷನ್, ರಣಬೀರ್ ಕಪೂರ್, ಶಾಹಿದ್ ಕಪೂರ್, ರಜನಿಕಾಂತ್ ಮತ್ತು ಪ್ರಭಾಸ್ ಸೇರಿದಂತೆ ಅವರ ಹೇರ್ಸ್ಟೈಲ್ ಬಗ್ಗೆಯೂ ಹಲೀಮ್ ಹಕೀಮ್ ಮಾಡನಾಡಿಕೊಂಡಿದ್ದಾರೆ.
ವಾರ್ ಚಿತ್ರದಲ್ಲಿ ಹೃತಿಕ್ ರೋಷನ್ ಲುಕ್, ಅನಿಮಲ್ ಚಿತ್ರದಲ್ಲಿ ರಣಬೀರ್ ಕಪೂರ್ ಲುಕ್, ಕಬೀರ್ ಸಿಂಗ್ ನಲ್ಲಿ ಶಾಹಿದ್ ಕಪೂರ್ ಲುಕ್, ಸ್ಯಾಮ್ ಬಹದ್ದೂರ್ ನಲ್ಲಿ ವಿಕ್ಕಿ ಕೌಶಲ್ ಲುಕ್, ಅನಿಮಲ್ ನಲ್ಲಿ ಬಾಬಿ ಲುಕ್, ಜೈಲರ್ ನಲ್ಲಿ ರಜನಿಕಾಂತ್ ಲುಕ್, ಬಾಹುಬಲಿಯಲ್ಲಿ ಪ್ರಭಾಸ್ ಲುಕ್ ಜನರಿಗೆ ಇಷ್ಟವಾಗಿದೆ. ದಕ್ಷಿಣ ಅಥವಾ ಉತ್ತರ ಯಾವುದೇ ಆಗಿರಲಿ, ಶೇ.98ರಷ್ಟು ಭಾರತೀಯ ಚಲನಚಿತ್ರಗಳನ್ನು ನಾನೇ ವಿನ್ಯಾಸಗೊಳಿಸಿದ್ದೇನೆ ಎಂದು ಹಕೀಮ್ ಹೇಳಿಕೊಂಡಿದ್ದಾರೆ.