Site icon Vistara News

Asian Games 2023: 19ನೇ ಏಷ್ಯನ್‌ ಗೇಮ್ಸ್‌ಗೆ ಅದ್ಧೂರಿ ಚಾಲನೆ; ನನಸಾಗಲಿ ಭಾರತದ ‘ಪದಕ ಶತಕ’ದ ಕನಸು…

Lovlina, Harmanpreet lead India in glittery opening ceremony

ಚೀನಾ: ಜಗತ್ತನ್ನೇ ಬೆಚ್ಚಿಬೀಳಿಸಿದ ಕೊರೊನಾ ಮಹಾ ಮಾರಿಯಿಂದಾಗಿ ಕಳೆದ ಬಾರಿ ರದ್ದುಗೊಂಡಿದ್ದ 19ನೇ ಏಷ್ಯನ್‌ ಗೇಮ್ಸ್‌ಗೆ(Asian Games 2023) ಇಂದು ಚೀನಾದ ಹ್ಯಾಂಗ್‌ಝೂನಲ್ಲಿ ಅದ್ಧೂರಿ ಚಾಲನೆ ದೊರೆತಿದೆ. ಭಾರತ ತಂಡವನ್ನು ಪಥ ಸಂಚಲನದಲ್ಲಿ ವಿಶ್ವ ಚಾಂಪಿಯನ್‌ಶಿಪ್‌ ಚಿನ್ನ, ಒಲಿಂಪಿಕ್ಸ್‌ ಕಂಚು ವಿಜೇತ ಬಾಕ್ಸರ್‌ ಲವ್ಲೀನಾ ಬೊರ್ಗೊಹೈನ್‌(Lovlina Borgohain), ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌(Harmanpreet Singh) ಧ್ವಜಧಾರಿಗಳಾಗಿ ಮುನ್ನಡೆಸಿದರು.

ಒಲಿಂಪಿಕ್ಸ್​ ಬಳಿಕ ಜಗತ್ತಿನ ಎರಡನೇ ಅತಿ ದೊಡ್ಡ ಕ್ರೀಡಾಕೂಟ ಎಂದು ಕರೆಯಲ್ಪಡುವ ಈ ಕೂಟದಲ್ಲಿ ಭಾರತ ಸೇರಿ ವಿಶ್ವದ 45 ದೇಶಗಳು ಕಣಕ್ಕಿಳಿಯಲಿವೆ. ಅಕ್ಟೋಬರ್​ 8ರ ವರೆಗೆ ಬಹುಸ್ಪರ್ಧೆಗಳ ಕ್ರೀಡಾಕೂಟ ನಡೆಯಲಿದೆ. ಮುಂದಿನ ವರ್ಷ ಪ್ಯಾರಿಸ್​ನಲ್ಲಿ ನಡೆಯಲಿರುವ ಒಲಿಂಪಿಕ್ಸ್​ ಕ್ರೀಡಾಕೂಟದ ದೃಷ್ಟಿಯಲ್ಲಿ ಇಲ್ಲಿ ಪಾಲ್ಗೊಳ್ಳಲಿರುವ ಕ್ರೀಡಾಪಟುಗಳಿಗೆ ಇದೊಂದು ಅಗ್ನಿಪರೀಕ್ಷೆಯಾಗಿದೆ. ಚೀನಾದ ಸಾಂಸ್ಕೃತಿಕ ಕಲಾ ವೈಭವದ ಅನಾವರಣದೊಂದಿಗೆ ಅತ್ಯಾಧುನಿಕ ಲೇಸರ್‌ ಶೋಗಳು, ರೋಬೋಟ್‌ಗಳ ಜತೆ ಚೀನಿ ತಾರೆಯರ ನೃತ್ಯ ಕಣ್ಮನ ಸೆಳೆಯಲಿದೆ.


ದಾಖಲೆಯ ಕ್ರೀಡಾಪಟುಗಳು

ಭಾರತ ಒಟ್ಟು 38 ವಿಭಾಗಗಳಲ್ಲಿ ಸ್ಪರ್ಧೆಗೆ ಇಳಿಯಲಿದೆ. ಈ 634 ಕ್ರೀಡಾಪಟುಗಳ(634 athletes) ಯಾದಿಯಲ್ಲಿ ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ನ ಗರಿಷ್ಠ 65 ಆ್ಯತ್ಲೀಟ್‌ಗಳಿದ್ದಾರೆ. ಇವರಲ್ಲಿ 34 ಪುರುಷರು ಹಾಗೂ 31 ವನಿತೆಯರು. ಅನಂತರದ ಸ್ಥಾನ ಫುಟ್​ಬಾಲ್​ ಮತ್ತು ಹಾಕಿ ತಂಡಗಳಿಗೆ ಸಲ್ಲುತ್ತದೆ. ಎರಡೂ ಫುಟ್​ಬಾಲ್​ ತಂಡಗಳು ಸ್ಪರ್ಧಿಸಲಿದ್ದು, ಇಲ್ಲಿನ ಆಟಗಾರರ ಸಂಖ್ಯೆ 44. ಹಾಕಿಪಟುಗಳ ಒಟ್ಟು ಸಂಖ್ಯೆ 36. ಪುರುಷರ ಹಾಗೂ ವನಿತೆಯರ ಕ್ರಿಕೆಟ್‌ ತಂಡಗಳೂ ಪದಕ ಸ್ಪರ್ಧೆಗೆ ಇಳಿಯಲಿವೆ. ಒಂದೊಂದು ತಂಡದಲ್ಲಿ 15 ಸದಸ್ಯರಿದ್ದಾರೆ. ಸೈಲಿಂಗ್‌ನಲ್ಲಿ 33, ಶೂಟಿಂಗ್‌ನಲ್ಲಿ 30 ಸ್ಪರ್ಧಿಗಳಿದ್ದಾರೆ. ಕ್ರಿಕೆಟ್​ ಟೂರ್ನಿಯಲ್ಲಿ ಭಾರತದ ಮಹಿಳೆಯರ ಮತ್ತು ಪುರುಷರ ತಂಡ ಇದೇ ಮೊದಲ ಬಾರಿಗೆ ಕಣಕ್ಕಿಳಿಯುತ್ತಿದೆ.

ಇದನ್ನೂ ಓದಿ Asian Games 2023 : ಏಷ್ಯನ್​ ಗೇಮ್ಸ್​​​ಗೆ ಅರುಣಾಚಲ ಪ್ರದೇಶದ ಅಥ್ಲಿಟ್​ಗೆ ಚೀನಾ ಪ್ರವೇಶ ನಿರಾಕರಣೆ, ಭಾರತದ ಖಂಡನೆ; ಏನಿದು ಹೊಸ ವಿವಾದ?


16 ದಿನಗಳ ಕ್ರೀಡಾಕೂಟ

16 ದಿನಗಳ ಕಾಲ ಈ ಕ್ರೀಡಾಕೂಟ ನಡೆಯಲಿದೆ. 2018ರಲ್ಲಿ ಜಕಾರ್ತದಲ್ಲಿ ನಡೆದಿದ್ದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ತಂಡವು 70 ಪದಕಗಳನ್ನು (16 ಚಿನ್ನ, 23 ಬೆಳ್ಳಿ ಹಾಗೂ 31 ಕಂಚು) ಜಯಿಸಿತ್ತು. ಈ ಬಾರಿ ನೂರರ ಗಡಿ ದಾಟುವ ಆತ್ಮವಿಶ್ವಾಸದಲ್ಲಿ,. ಈ ಬಾರಿ ದಾಖಲೆಯ 650ಕ್ಕೂ ಹೆಚ್ಚು ಕ್ರೀಡಾಪಟುಗಳನ್ನು ಕಣಕ್ಕಿಳಿದಿದ್ದಾರೆ. ಹೀಗಾಗಿ ಪದಕ ಪಟ್ಟಿಯಲ್ಲಿ ಅಗ್ರ-5ರಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ.

ಭಾರತದ ಧ್ವಜಧಾರಿಗಳಾದ ಲವ್ಲೀನಾ ಬೊರ್ಗೊಹೈನ್‌ -ಹರ್ಮನ್‌ಪ್ರೀತ್‌ ಸಿಂಗ್‌


481 ಸ್ಪರ್ಧೆಗಳು

ಕ್ರೀಡಾಕೂಟದಲ್ಲಿ ಒಟ್ಟು 40 ಕ್ರೀಡೆಗಳ 481 ಸ್ಪರ್ಧೆಗಳು ನಡೆಯಲಿವೆ. ಒಟ್ಟು 44 ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. 14 ಕ್ರೀಡಾಂಗಣಗಳನ್ನು ಹೊಸದಾಗಿ ನಿರ್ಮಿಸಲಾಗಿದೆ.

12000+ ಅಥ್ಲೀಟ್ಸ್‌!

ಒಟ್ಟು 12000ಕ್ಕೂ ಹೆಚ್ಚು ಕ್ರೀಡಾಳುಗಳು ಇಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಥಾಯ್ಲೆಂಡ್‌ ಅತಿಹೆಚ್ಚು 934 ಕ್ರೀಡಾಪಟುಗಳನ್ನು ಕಣಕ್ಕಿಳಿದರೆ, ಆತಿಥೇಯ ಚೀನಾ 887 ಕ್ರೀಡಾಪಟುಗಳು, ಜಪಾನ್‌ನ 773 ಕ್ರೀಡಾಪಟುಗಳು, ಭಾರತ 653 ಕ್ರೀಡಾಪಟುಗಳು ಪದಕಕ್ಕಾಗಿ ಸೆಣಸಾಡಲಿದ್ದಾರೆ.

ಭಾರತದ ಸ್ಪರ್ಧೆ ನಡೆಯುವ ದಿನಾಂಕಗಳು

Exit mobile version