Site icon Vistara News

Asian Games 2023: ಏಷ್ಯನ್‌ ಗೇಮ್ಸ್;‌ ಮೊದಲ ದಿನವೇ ಭಾರತ 5 ಪದಕ ಬೇಟೆ, ಇಲ್ಲಿದೆ ವಿಜೇತರ ಮಾಹಿತಿ

Indian Shooter Ramita

Asian Games 2023: India bag silver medals in shooting, rowing; overall medal tally up to 5

ಹ್ಯಾಂಗ್ಝೌ: ಚೀನಾದ ಹ್ಯಾಂಗ್ಝೌನಲ್ಲಿ ಏಷ್ಯನ್‌ ಗೇಮ್ಸ್‌ಗೆ (Asian Games 2023) ಅದ್ಧೂರಿಯಾಗಿ ಚಾಲನೆ ನೀಡಿದ್ದು, ಮೊದಲ ದಿನವೇ ಭಾರತದ ಅಥ್ಲೀಟ್‌ಗಳು (Indian Athletes) ಐದು ಪದಕ ಗೆಲ್ಲುವ ಮೂಲಕ ಹೆಚ್ಚಿನ ಪದಕಗಳ ಭರವಸೆ ಮೂಡಿಸಿದ್ದಾರೆ. ಶೂಟಿಂಗ್‌, ರೋಯಿಂಗ್‌ನಲ್ಲಿ ಭಾರತವು ಮೂರು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಗೆದ್ದಿದ್ದು, ಇನ್ನಷ್ಟು ಪದಕಗಳ ನಿರೀಕ್ಷೆ ಇದೆ.

ಮಹಿಳೆಯರ 10 ಮೀಟರ್‌ ಏರ್‌ ರೈಫಲ್‌ (ಟೀಮ್)‌ ವಿಭಾಗದಲ್ಲಿ ಭಾರತದ ರಮಿತಾ, ಮೆಹುಲಿ ಘೋಷ್‌ ಹಾಗೂ ಚೌಕ್ಸೆ ಅವರು ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಪದಕ ತಂದುಕೊಟ್ಟರು. ಭಾರತ ಗೆದ್ದ ಐದು ಪದಕಗಳಲ್ಲಿ ಯಾರು ಯಾವ ಪದಕ ಗೆದ್ದರು ಎಂಬುದರ ಸಂಕ್ಷಿಪ್ತ ಮಾಹಿತಿ ಹೀಗಿದೆ.

ಇದನ್ನೂ ಓದಿ: Asian Games 2023: ಬಾಂಗ್ಲಾ ತಂಡವನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟ ಸ್ಮೃತಿ ಮಂಧಾನಾ ಪಡೆ

ಮಹಿಳಾ ಕ್ರಿಕೆಟ್‌ನಲ್ಲಿ ಪದಕ ಖಚಿತ

ಮತ್ತೊಂದೆಡೆ, ಭಾರತದ ಮಹಿಳಾ ಕ್ರಿಕೆಟ್‌ ತಂಡವು ಏಷ್ಯನ್‌ ಗೇಮ್ಸ್‌ ಫೈನಲ್‌ ತಲುಪುವ ಮೂಲಕ ಪದಕ ಖಚಿತಪಡಿಸಿಕೊಂಡಿದೆ. ಚೀನಾದ ಹ್ಯಾಂಗ್ಝೌನಲ್ಲಿರುವ ಝಡ್‌ಜೆಯುಟಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಭಾರತದ ಮಹಿಳಾ ಕ್ರಿಕೆಟ್‌ ತಂಡವು ಬಾಂಗ್ಲಾದೇಶ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಬಾಂಗ್ಲಾ ತಂಡವು 17.5 ಓವರ್‌ಗಳಲ್ಲಿ ಕೇವಲ 51 ರನ್‌ ಗಳಿಸಲಷ್ಟೇ ಶಕ್ತವಾಯಿತು. ಸುಲಭದ ಗುರಿ ಬೆನ್ನತ್ತಿದ ಸ್ಮೃತಿ ಮಂಧಾನಾ ಬಳಗವು ಕೇವಲ 8.2 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ಗುರಿ ತಲುಪುವ ಮೂಲಕ ಗೆಲುವಿನ ನಗೆ ಬೀರಿತು. ಆ ಮೂಲಕ ಫೈನಲ್‌ ತಲುಪಿತು.

Exit mobile version