Site icon Vistara News

Asian Games 2023: ಏಷ್ಯನ್​ ಗೇಮ್ಸ್​ನಲ್ಲಿ ಮುಂದುವರಿದ ಶೂಟರ್​ಗಳ ಪದಕ ಬೇಟೆ

Aishwary Pratap Singh Tomar

ಹ್ಯಾಂಗ್‌ಝೂ: ಏಷ್ಯನ್​ ಗೇಮ್ಸ್​(Asian Games 2023) ಕ್ರೀಡಾಕೂಟದಲ್ಲಿ ಭಾರತದ ಶೂಟರ್​ಗಳ ಪ್ರಾಬಲ್ಯ ಮುಂದುವರಿದಿದೆ. ಸೋಮವಾರ ಚಿನ್ನ ಮತ್ತು ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಬೆಳಗಿನ ಜಾವ ನಡೆದ 10 ಮೀಟರ್ ಏರ್ ರೈಫಲ್ ಟೀಮ್ ಈವೆಂಟ್‌ನಲ್ಲಿ ಪುರುಷರ ತಂಡವು(India 10m Men’s Rifle Team) ಚಿನ್ನದ ಪದಕಕ್ಕೆ ಗುರಿ ಇರಿಸಿದ ಕೆಲವೇ ಗಂಟೆಗಳಲ್ಲಿ 25 ಮೀಟರ್ ರ್‍ಯಾಪಿಡ್‌ ಫೈರ್‌ ಸ್ಪರ್ಧೆಯಲ್ಲಿ ಆದರ್ಶ್ ಸಿಂಗ್, ಅನೀಶ್ ಭನ್ವಾಲಾ ಮತ್ತು ವಿಜಯವೀರ್ ಸಿಧು ಮತ್ತು 10 ಮೀ ಏರ್ ರೈಫಲ್ ಸಿಂಗಲ್ಸ್​ ವಿಭಾಗದಲ್ಲಿ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಕಂಚಿನ ಪದಕಕ್ಕೆ ಗುರಿ ಇರಿಸಿದ್ದಾರೆ. ಸದ್ಯ ಭಾರತ ಈ ಟೂರ್ನಿಯಲ್ಲಿ ಶೂಟಿಂಗ್​ ವಿಭಾಗದಲ್ಲಿ ಗೆದ್ದ 5ನೇ ಪದಕ ಇದಾಗಿದೆ.

ಭಾನುವಾರ ನಡೆದಿದ್ದ ಮಹಿಳೆಯರ ವಿಭಾಗದ 10 ಮೀ. ಏರ್‌ ರೈಫಲ್‌ ತಂಡ ವಿಭಾಗದಲ್ಲಿ ಭಾರತದ ರಮಿತಾ ಜಿಂದಾಲ್‌, ಮೆಹುಲಿ ಘೋಷ್‌, ಅಶಿ ಚೋಕ್ಸಿ ಅವರನ್ನೊಳಗೊಂಡ ತಂಡ ಬೆಳ್ಳಿ ಪದಕಕ್ಕೆ ಕೊರಳೊಡ್ಡಿತ್ತು. ಭಾರತ 1886 ಅಂಕ ಸಂಪಾದಿಸಿದರೆ, 1896 ಅಂಕದೊಂದಿಗೆ ಚೀನಾ ತಂಡ ಚಿನ್ನ, 1880 ಅಂಕ ಪಡೆದ ಮಂಗೋಲಿಯಾ ತಂಡ ಕಂಚು ಪಡೆದಿತ್ತು. ಇದಲ್ಲದೆ ಮಹಿಳೆಯರ 10 ಮೀ. ಏರ್‌ ರೈಫಲ್‌ ಸ್ಪರ್ಧೆಯಲ್ಲಿ ರಮಿತಾ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದರು. ಸೋಮವಾರ ಮೂರು ಪದಕ ಈ ವಿಭಾಗದಿಂದ ದಾಖಲಾಗಿದೆ.

ಫೈನಲ್​ನಲ್ಲಿ ವಿಜಯವೀರ್ ಸಿಧು, ಅನೀಶ್ ಭಾನ್ವಾಲಾ, ಮತ್ತು ಆದರ್ಶ್ ಸಿಂಗ್ ತಂಡ 1718 ಅಂಕ ಪಡೆದು ಕಂಚಿಗೆ ತೃಪ್ತಿಪಟ್ಟುಕೊಂಡಿತು. ಸದ್ಯ ಭಾರತ 10 ಪದಕಗಳನ್ನು ಜಯಿಸಿ ಪದಕ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದೆ. 45 ಪದಕ ಗೆದ್ದಿರುವ ಚೀನಾ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಇದನ್ನೂ ಓದಿ Asian Games 2023: ಚಿನ್ನದ ಖಾತೆ ತೆರೆದ ಭಾರತ; ಶೂಟಿಂಗ್​ನಲ್ಲಿ ವಿಶ್ವ ದಾಖಲೆ

ಕಂಚು ಗೆದ್ದ ಐಶ್ವರಿ ಪ್ರತಾಪ್ ಸಿಂಗ್ ತೋಮರ್ 

ಪುರುಷರ 10 ಮೀ ಏರ್ ರೈಫಲ್ ಸಿಂಗಲ್ಸ್​ ವಿಭಾಗದಲ್ಲಿ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಅವರು 228.8 ಅಂಕ ಗಳಿಸಿ ಕಂಚಿನ ಪದಕಕ್ಕೆ ಕೊರಳೊಡಿದ್ದರು. ಆದರೆ ಇದೇ ವಿಭಾಗದಲ್ಲಿ ಕಣಕ್ಕಿಳಿದ್ದ ವಿಶ್ವ ಚಾಂಪಿಯನ್‌ ರುದ್ರಾಂಕ್ಷ್ ಬಾಳಾ ಸಾಹೇಬ್‌ ಪಾಟೀಲ್‌ ಪದಕ ಗೆಲ್ಲುವಲ್ಲಿ ವಿಫಲರಾದರು.

ಇದಕ್ಕೂ ಮುನ್ನ ನಡೆದ 10 ಮೀಟರ್ ಏರ್ ರೈಫಲ್ ಟೀಮ್ ಈವೆಂಟ್‌ ಫೈನಲ್​ನಲ್ಲಿ ವಿಶ್ವ ಚಾಂಪಿಯನ್‌ ರುದ್ರಾಂಕ್ಷ್ ಬಾಳಾ ಸಾಹೇಬ್‌ ಪಾಟೀಲ್‌(Rudrankksh Patil), ಒಲಿಂಪಿಯನ್ ದಿವ್ಯಾಂಶ್‌ ಸಿಂಗ್‌ ಪನ್ವಾರ್‌ ಮತ್ತು ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಅವರನ್ನೊಳಗೊಂಡ ಭಾರತ ತಂಡವು 1893.7 ಅಂಕ ಸಂಪಾದಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.

Exit mobile version