Asian Games 2023: ಏಷ್ಯನ್​ ಗೇಮ್ಸ್​ನಲ್ಲಿ ಮುಂದುವರಿದ ಶೂಟರ್​ಗಳ ಪದಕ ಬೇಟೆ Vistara News

ಕ್ರೀಡೆ

Asian Games 2023: ಏಷ್ಯನ್​ ಗೇಮ್ಸ್​ನಲ್ಲಿ ಮುಂದುವರಿದ ಶೂಟರ್​ಗಳ ಪದಕ ಬೇಟೆ

25 ಮೀಟರ್ ರ್‍ಯಾಪಿಡ್‌ ಫೈರ್‌ ಸ್ಪರ್ಧೆಯಲ್ಲಿ ಆದರ್ಶ್ ಸಿಂಗ್, ಅನೀಶ್ ಭನ್ವಾಲಾ ಮತ್ತು ವಿಜಯವೀರ್ ಸಿಧು ಅವರು ಕಂಚಿನ ಪದಕಕ್ಕೆ ಗುರಿ ಇರಿಸಿದ್ದಾರೆ.

VISTARANEWS.COM


on

Aishwary Pratap Singh Tomar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹ್ಯಾಂಗ್‌ಝೂ: ಏಷ್ಯನ್​ ಗೇಮ್ಸ್​(Asian Games 2023) ಕ್ರೀಡಾಕೂಟದಲ್ಲಿ ಭಾರತದ ಶೂಟರ್​ಗಳ ಪ್ರಾಬಲ್ಯ ಮುಂದುವರಿದಿದೆ. ಸೋಮವಾರ ಚಿನ್ನ ಮತ್ತು ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಬೆಳಗಿನ ಜಾವ ನಡೆದ 10 ಮೀಟರ್ ಏರ್ ರೈಫಲ್ ಟೀಮ್ ಈವೆಂಟ್‌ನಲ್ಲಿ ಪುರುಷರ ತಂಡವು(India 10m Men’s Rifle Team) ಚಿನ್ನದ ಪದಕಕ್ಕೆ ಗುರಿ ಇರಿಸಿದ ಕೆಲವೇ ಗಂಟೆಗಳಲ್ಲಿ 25 ಮೀಟರ್ ರ್‍ಯಾಪಿಡ್‌ ಫೈರ್‌ ಸ್ಪರ್ಧೆಯಲ್ಲಿ ಆದರ್ಶ್ ಸಿಂಗ್, ಅನೀಶ್ ಭನ್ವಾಲಾ ಮತ್ತು ವಿಜಯವೀರ್ ಸಿಧು ಮತ್ತು 10 ಮೀ ಏರ್ ರೈಫಲ್ ಸಿಂಗಲ್ಸ್​ ವಿಭಾಗದಲ್ಲಿ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಕಂಚಿನ ಪದಕಕ್ಕೆ ಗುರಿ ಇರಿಸಿದ್ದಾರೆ. ಸದ್ಯ ಭಾರತ ಈ ಟೂರ್ನಿಯಲ್ಲಿ ಶೂಟಿಂಗ್​ ವಿಭಾಗದಲ್ಲಿ ಗೆದ್ದ 5ನೇ ಪದಕ ಇದಾಗಿದೆ.

ಭಾನುವಾರ ನಡೆದಿದ್ದ ಮಹಿಳೆಯರ ವಿಭಾಗದ 10 ಮೀ. ಏರ್‌ ರೈಫಲ್‌ ತಂಡ ವಿಭಾಗದಲ್ಲಿ ಭಾರತದ ರಮಿತಾ ಜಿಂದಾಲ್‌, ಮೆಹುಲಿ ಘೋಷ್‌, ಅಶಿ ಚೋಕ್ಸಿ ಅವರನ್ನೊಳಗೊಂಡ ತಂಡ ಬೆಳ್ಳಿ ಪದಕಕ್ಕೆ ಕೊರಳೊಡ್ಡಿತ್ತು. ಭಾರತ 1886 ಅಂಕ ಸಂಪಾದಿಸಿದರೆ, 1896 ಅಂಕದೊಂದಿಗೆ ಚೀನಾ ತಂಡ ಚಿನ್ನ, 1880 ಅಂಕ ಪಡೆದ ಮಂಗೋಲಿಯಾ ತಂಡ ಕಂಚು ಪಡೆದಿತ್ತು. ಇದಲ್ಲದೆ ಮಹಿಳೆಯರ 10 ಮೀ. ಏರ್‌ ರೈಫಲ್‌ ಸ್ಪರ್ಧೆಯಲ್ಲಿ ರಮಿತಾ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದರು. ಸೋಮವಾರ ಮೂರು ಪದಕ ಈ ವಿಭಾಗದಿಂದ ದಾಖಲಾಗಿದೆ.

ಫೈನಲ್​ನಲ್ಲಿ ವಿಜಯವೀರ್ ಸಿಧು, ಅನೀಶ್ ಭಾನ್ವಾಲಾ, ಮತ್ತು ಆದರ್ಶ್ ಸಿಂಗ್ ತಂಡ 1718 ಅಂಕ ಪಡೆದು ಕಂಚಿಗೆ ತೃಪ್ತಿಪಟ್ಟುಕೊಂಡಿತು. ಸದ್ಯ ಭಾರತ 10 ಪದಕಗಳನ್ನು ಜಯಿಸಿ ಪದಕ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದೆ. 45 ಪದಕ ಗೆದ್ದಿರುವ ಚೀನಾ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಇದನ್ನೂ ಓದಿ Asian Games 2023: ಚಿನ್ನದ ಖಾತೆ ತೆರೆದ ಭಾರತ; ಶೂಟಿಂಗ್​ನಲ್ಲಿ ವಿಶ್ವ ದಾಖಲೆ

ಕಂಚು ಗೆದ್ದ ಐಶ್ವರಿ ಪ್ರತಾಪ್ ಸಿಂಗ್ ತೋಮರ್ 

ಪುರುಷರ 10 ಮೀ ಏರ್ ರೈಫಲ್ ಸಿಂಗಲ್ಸ್​ ವಿಭಾಗದಲ್ಲಿ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಅವರು 228.8 ಅಂಕ ಗಳಿಸಿ ಕಂಚಿನ ಪದಕಕ್ಕೆ ಕೊರಳೊಡಿದ್ದರು. ಆದರೆ ಇದೇ ವಿಭಾಗದಲ್ಲಿ ಕಣಕ್ಕಿಳಿದ್ದ ವಿಶ್ವ ಚಾಂಪಿಯನ್‌ ರುದ್ರಾಂಕ್ಷ್ ಬಾಳಾ ಸಾಹೇಬ್‌ ಪಾಟೀಲ್‌ ಪದಕ ಗೆಲ್ಲುವಲ್ಲಿ ವಿಫಲರಾದರು.

ಇದಕ್ಕೂ ಮುನ್ನ ನಡೆದ 10 ಮೀಟರ್ ಏರ್ ರೈಫಲ್ ಟೀಮ್ ಈವೆಂಟ್‌ ಫೈನಲ್​ನಲ್ಲಿ ವಿಶ್ವ ಚಾಂಪಿಯನ್‌ ರುದ್ರಾಂಕ್ಷ್ ಬಾಳಾ ಸಾಹೇಬ್‌ ಪಾಟೀಲ್‌(Rudrankksh Patil), ಒಲಿಂಪಿಯನ್ ದಿವ್ಯಾಂಶ್‌ ಸಿಂಗ್‌ ಪನ್ವಾರ್‌ ಮತ್ತು ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಅವರನ್ನೊಳಗೊಂಡ ಭಾರತ ತಂಡವು 1893.7 ಅಂಕ ಸಂಪಾದಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Ruturaj Gaikwad : ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿ ವಿಶೇಷ ಸಾಧನೆ ಮಾಡಿದ ಋತುರಾಜ್​

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ್ದ ಋತುರಾಜ್ ಗಾಯಕ್ವಾಡ್​ (Ruturaj Gaikwad) ಈ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದಾರೆ.

VISTARANEWS.COM


on

Ruturaj Gaikwad
Koo

ಗುವಾಹಟಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಮೂರನೇ ಹಣಾಹಣಿಯಲ್ಲಿ ಭಾರತದ ಆರಂಭಿಕ ಬ್ಯಾಟರ್​ ಋತುರಾಜ್ ಗಾಯಕ್ವಾಡ್ ಅಜೇಯ ಶತಕ ಬಾರಿಸಿದ್ದಾರೆ. ಇದು ಟಿ20 ಮಾದರಿಯಲ್ಲಿ ಅವರ ಮೊಟ್ಟ ಮೊದಲ ಶತಕವಾಗಿದೆ. ಗಾಯಕ್ವಾಡ್ ಕೇವಲ 57 ಎಸೆತಗಳಲ್ಲಿ 13 ಬೌಂಡರಿ ಮತ್ತು 7 ಸಿಕ್ಸರ್ ಸೇರಿದಂತೆ 123 ರನ್ ಗಳಿಸಿದರು. ಬಲಗೈ ಬ್ಯಾಟರ್​ 215.8 ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದರು. ಅವರ ಅಬ್ಬರದ ಬ್ಯಾಟಿಂಗ್​ನಿಂದಾಗಿ ಮೆನ್​ ಇನ್ ಬ್ಲೂ ನಿಗದಿತ 20 ಓವರ್​ಗಳಲ್ಲಿ 222 ರನ್ ಗಳಿಸಿತು. ಮೊದಲ 21 ಎಸೆತಗಳಿಗೆ 21 ರನ್ ಬಾರಿಸಿದ್ದ ಋತುರಾಜ್​ ಬಳಿಕ 36 ಎಸೆತಗಳಿಗೆ 102 ರನ್ ಬಾರಿಸಿ ಅಜೇಯರಾಗಿ ಉಳಿದರು.

ಭಾರತ ತಂಡದ ಪಾಲಿಗೆ ಇದು ನೆನಪಿಡಬೇಕಾದ ಇನ್ನಿಂಗ್ಸ್ ಆಗಿದೆ. ಟಿ20ಐನಲ್ಲಿ ಭಾರತ ಮೂರನೇ ಬಾರಿ 200+ ರನ್ ಗಳಿಸಿದ ಸಾಧನೆಯನ್ನೂ ಮಾಡಿದೆ. ಇದು ಭಾರತ ತಂಡ ಪಾಲಿಗೆ ವಿಶೇಷ ಸಾಧನೆಯಾಗಿದೆ.

ಇಲ್ಲಿನ ಬರ್ಸಪಾರ ಕ್ರಿಕೆಟ್​ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಆದರೆ, 14 ರನ್​ಗಳಿಗೆ ಮೊದಲ ವಿಕೆಟ್​ ಕಳೆದುಕೊಂಡಿತು. ಹಿಂದಿನ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ್ದ ಯಶಸ್ವಿ ಜೈಸ್ವಾಲ್​ 6 ರನ್​ಗೆ ಔಟಾದರು. ಆದರೆ, ಮತ್ತೊಂದು ಬದಿಯಲ್ಲಿ ಗಟ್ಟಿಯಾಗಿ ನಿಂತಿದ್ದ ಋತುರಾಜ್ ಇನಿಂಗ್ಸ್​ ಕಟ್ಟಲು ಮುಂದುವರಿಸಿದರು.

ಕಳೆದ ಪಂದ್ಯದಲ್ಲಿ ಸ್ಫೋಟಕ ಅರ್ಧ ಶತಕ ಬಾರಿಸಿ ಮಿಂಚಿದ್ದ ಇಶಾನ್ ಕಿಶನ್ ಈ ಪಂದ್ಯದಲ್ಲಿ ಚಾಪು ಮೂಡಿಸಲು ವಿಫಲರಾದರು. ಅವರು ಶೂನ್ಯಕ್ಕೆ ಔಟಾಗುವ ಮೂಲಕ ಭಾರತಕ್ಕೆ ಆಘಾತ ಎದುರಾಯಿತು. 24 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಆ ಬಲಿಕ ಕ್ರೀಸ್​ಗೆ ಬಂದ ನಾಯಕ ಸೂರ್ಯಕುಮಾರ್ ಯಾದವ್ ಜವಾಬ್ದಾರಿಯುತವಾಗಿ ಆಡಿದರು. ಅವರು 29 ಎಸೆತಗಳಲ್ಲಿ 39 ರನ್ ಬಾರಿಸಿದರು. ಆದರೆ, 11ನೇ ಓವರ್​ನಲ್ಲಿ ಅವರು ವಿಕೆಟ್​ ಒಪ್ಪಿಸಿದಾಗ ತಂಡದ ಮೊತ್ತ 81 ಆಗಿತ್ತು. ಬಳಿಕ ಜತೆಯಾದ ತಿಲಕ್ ವರ್ಮಾ ಹಾಗೂ ಋತುರಾಜ್ ಶತಕದ ಜತೆಯಾಟವಾಡಿದರು/

ಮುಂದಿನ ನಾಯಕ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಟಿ20 ಪಂದ್ಯದಲ್ಲಿ ಶತಕ ಬಾರಿಸಿದ ಋತುರಾಜ್ ಗಾಯಕ್ವಾಡ್ ಅವರನ್ನು ಮುಂದಿನ ನಾಯಕನನ್ನಾಗಿ ಆಯ್ಕೆ ಮಾಡಬೇಕು ಎಂದು ಅಭಿಮಾನಿಗಳು ಹೇಳಿದ್ದಾರೆ. ಆರಂಭಿಕ ಆಟಗಾರ ಎರಡನೇ ಪಂದ್ಯದಲ್ಲಿ ಅರ್ಧಶತಕವನ್ನು ಗಳಿಸಿದ್ದರು ಮತ್ತು ಈಗ ದೊಡ್ಡ ಇನಿಂಗ್ಸ್ ಮೂಲಕ ಮೂರನೇ ಪಂದ್ಯದಲ್ಲಿ ಭಾರತವನ್ನು 200 ರನ್ ಗಡಿ ದಾಟುವಂತೆ ಮಾಡಿದ್ದಾರೆ.

ಬಲಗೈ ಆರಂಭಿಕ ಬ್ಯಾಟ್ಸ್ಮನ್ 57 ಎಸೆತಗಳಲ್ಲಿ 123 ರನ್ ಗಳಿಸುವ ಮೂಲಕ ಭಾರತವನ್ನು 10.2 ಓವರ್​ಗಳಲ್ಲಿ 3 ವಿಕೆಟ್​ಗೆ 81 ರನ್​ ಗಳಿಸಿದ್ದ ಭಾರತ ತಂಡವನ್ನು 20 ಓವರ್​ಗಳಲ್ಲಿ 3 ವಿಕೆಟ್ಗೆ 222 ರನ್​ನತ್ತ ಕೊಂಡೊಯ್ದಿದ್ದರು. ಐದನೇ ವಿಕೆಟ್ ಜೊತೆಯಾಟದಲ್ಲಿ ತಿಲಕ್ ವರ್ಮಾ ಕೇವಲ 31 ರನ್ ಗಳಿಸಿದರು. ಈ ವೇಳೆ ಋತುರಾಜ್ ಪಂದ್ಯದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದರು. ಆರಂಭಿಕ ಆಟಗಾರ ತಂಡದ 55% ರನ್ ಗಳಿಸಿದರು. ಉಳಿದವರು ಇತರ ಸೇರಿದಂತೆ 63 ಎಸೆತಗಳಲ್ಲಿ ಕೇವಲ 99 ರನ್ ಗಳಿಸಿದರು.

Continue Reading

ಕ್ರಿಕೆಟ್

Ind vs Aus : ಟಾಸ್ ಗೆದ್ದ ಆಸ್ಟ್ರೇಲಿಯಾ, ಭಾರತದಿಂದ ಮೊದಲು ಬ್ಯಾಟಿಂಗ್​

ind vs aus : ಐದು ಪಂದ್ಯಗಳ ಸರಣಿಯಲ್ಲಿ ಭಾರತ ಮೊದಲೆರಡು ಪಂದ್ಯಗಳನ್ನು ಗೆದ್ದು 2-0 ಮುನ್ನಡೆ ಪಡೆದುಕೊಂಡಿದೆ.

VISTARANEWS.COM


on

Suryakumar Yadav
Koo

ಗುವಾಹಟಿ: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಭಾರತ (Ind vs Aus) ತಂಡ ಟಾಸ್ ಸೋತಿದೆ. ಹೀಗಾಗಿ ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದುಕೊಂಡಿದೆ. ಹೀಗಾಗಿ ಭಾರತ ತಂಡ ಮೊದಲು ಬ್ಯಾಟ್ ಮಾಡಿ ದೊಡ್ಡ ಮೊತ್ತವನ್ನು ಪೇರಿಸಿ ಆಸ್ಟ್ರೇಲಿಯಾ ತಂಡವನ್ನು ಕಟ್ಟಿ ಹಾಕುವ ಸವಾಲನ್ನು ಪಡೆದುಕೊಂಡಿದೆ. ಭಾರತ ತಂಡ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆಯನ್ನು ಪಡೆದುಕೊಂಡಿರುವ ಕಾರಣ ಈ ಪಂದ್ಯದಲ್ಲಿ ಗೆದ್ದರೆ ಸರಣಿ ಕೈವಶವಾಗಲಿದೆ. ಏತನ್ಮಧ್ಯೆ ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಸರಣಿಯನ್ನು ಜೀವಂತವಾಗಿಡಲು ಈ ಪಂದ್ಯವನ್ನು ಗೆಲ್ಲುವ ಅನಿವಾರ್ಯತೆ ಎದುರಾಗಿದೆ.

ಐದು ಪಂದ್ಯಗಳ ಟಿ 20 ಐ ಸರಣಿಯಲ್ಲಿ ಭಾರತವು ಅಜೇಯ ಮುನ್ನಡೆ ಸಾಧಿಸಲು ಕೇವಲ ಒಂದು ಗೆಲುವಿನ ದೂರದಲ್ಲಿದೆ. ಇತ್ತೀಚಿನ 2023 ರ ವಿಶ್ವಕಪ್​​ನ ಭಾಗವಾಗಿದ್ದ ಮತ್ತು 2024ರ ಮಧ್ಯದಲ್ಲಿ ಮುಂಬರುವ ಟಿ 20 ವಿಶ್ವ ಕಪ್​ಗೆ ಸಿದ್ದತೆಗಳನ್ನು ಮಾಡುತ್ತಿರುವ ಇತ್ತಂಡಗಳು ತಮ್ಮ ಪ್ರಮುಖ ಆಟಗಾರರಿಗೆ ಉಭಯ ತಂಡಗಳು ವಿಶ್ರಾಂತಿ ನೀಡಿವೆ. ಮೊದಲ ಎರಡು ಪಂದ್ಯಗಳನ್ನು ಸೋತ ನಂತರ, ಆಸ್ಟ್ರೇಲಿಯಾ ತನ್ನ ತಂಡದಲ್ಲಿ ಮತ್ತಷ್ಟು ಬದಲಾವಣೆಗಳನ್ನು ಮಾಡಿದೆ, ಸ್ಟೀವನ್ ಸ್ಮಿತ್ ಮತ್ತು ಆಡಮ್ ಜಂಪಾ ಈಗಾಗಲೇ ಆಸ್ಟ್ತೇಲಿಯಾ ವಿಮಾನವನ್ನು ಹತ್ತಿದ್ದಾರೆ. ಅವರೊಂದಿಗೆ ಗ್ಲೆನ್ ಮ್ಯಾಕ್ಸ್ವೆಲ್, ಜೋಶ್ ಇಂಗ್ಲಿಸ್, ಮಾರ್ಕಸ್ ಸ್ಟೊಯಿನಿಸ್ ಮತ್ತು ಸೀನ್ ಅಬಾಟ್ ಸೇರಿಕೊಳ್ಳಲಿದ್ದಾರೆ.

ಇದನ್ನೂ ಓದಿ : Ind vs Aus : ತಿಲಕ್ ವರ್ಮಾಗೆ ಇದು ಕೊನೇ ಚಾನ್ಸ್​?

ಟಾಸ್​ ಸೋತ ಸೂರ್ಯಕುಮಾರ್ ಯಾದವ್ ಮಾತನಾಡಿ ಮೊದಲು ಬ್ಯಾಟಿಂಗ್ ಮಾಡಲು ಸಂತೋಷವಾಗುತ್ತಿದೆ. ಇಬ್ಬನಿ ಬೇಗನೆ ಬಂದರೂ ಆಶ್ಚರ್ಯವಿಲ್ಲ. ನಾವು ಉತ್ತಮ ಆಟದ ಯೋಜನೆಗಳನ್ನು ಹೊಂದಿದ್ದೇವೆ. ನಮ್ಮ ತಂಡದಲ್ಲಿ ಒಂದು ಬದಲಾವಣೆ ಇದೆ. ಮುಖೇಶ್ ಬದಲಿಗೆ ಅವೇಶ್ ಅವರನ್ನು ಸೇರಿಸಿಕೊಳ್ಳಲಾಗಿದೆ. ಮದುವೆಯಾಗಿ ಅವರು ತಂಡದಿಂದ ಹೊರಕ್ಕೆ ಹೋಗಿದ್ದಾರೆ. ಅವರಿಗೆ ಶುಭ ಹಾರೈಸುತ್ತೇವೆ ಎಂದು ಹೇಳಿದ್ದಾರೆ.

ಮ್ಯಾಥ್ಯೂ ವೇಡ್ ಟಾಸ್ ಗೆದ್ದ ಬಳಿಕ ಮಾತನಾಡಿ ನಾವು ಬೌಲಿಂಗ್ ಮಾಡುತ್ತೇವೆ. ಈ ನಿರ್ಧಾರ ಪ್ರಮುಖವೆಂದು ನಾನು ಭಾವಿಸುವುದಿಲ್ಲ. ಮೈದಾಣ ಈಗಾಗಲೇ ಸಾಕಷ್ಟು ಒದ್ದೆಯಾಗಿದೆ. ಟ್ರಾವಿಸ್ ಹೆಡ್, ಕೇನ್ ರಿಚರ್ಡ್ಸನ್ ಮತ್ತು ಜೇಸನ್ ಬೆಹ್ರೆನ್ಡಾರ್ಫ್ ಆಡುತ್ತಿದ್ದಾರೆ ಎಂದು ಹೇಳಿದರು.

ತಂಡಗಳು ಹೀಗಿವೆ

ಆಸ್ಟ್ರೇಲಿಯಾ ತಂಡ: ಟ್ರಾವಿಸ್ ಹೆಡ್, ಆ್ಯರೋನ್ ಹಾರ್ಡಿ, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ಸಿ & ವಿಕೆ), ನಾಥನ್ ಎಲ್ಲಿಸ್, ಜೇಸನ್ ಬೆಹ್ರೆನ್ಡಾರ್ಫ್, ತನ್ವೀರ್ ಸಂಘಾ, ಕೇನ್ ರಿಚರ್ಡ್ಸನ್.

ಭಾರತ: ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿಕೆ), ಸೂರ್ಯಕುಮಾರ್ ಯಾದವ್ (ಸಿ), ರಿಂಕು ಸಿಂಗ್, ತಿಲಕ್ ವರ್ಮಾ, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅರ್ಷ್ದೀಪ್ ಸಿಂಗ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ.

Continue Reading

ಕ್ರಿಕೆಟ್

IPL 2024 : ದುಡ್ಡು ಖಾಲಿಯಾಗಿದ್ದು ಆರ್​ಸಿಬಿಯದ್ದು, ಲಾಭ ಆಗುತ್ತಿರುವುದು ಮುಂಬೈಗೆ!

IPL 2024 : ಕ್ಯಾಮೆರೂನ್ ಗ್ರೀನ್ ಅವರನ್ನು ಪಡೆಯಲು ಆರ್​ಸಿಬಿ ತಂಡ 17.5 ಕೋಟಿ ರೂಪಾಯಿ ಮುಂಬಯಿ ತಂಡಕ್ಕೆ ನೀಡಿದೆ.

VISTARANEWS.COM


on

Cameron Green
Koo

ಬೆಂಗಳೂರು: ಗುಜರಾತ್ ಟೈಟಾನ್ಸ್ ತಂಡದ ಮಾಜಿ ನಾಯಕ ಹಾರ್ದಿಕ್ ಪಾಂಡ್ಯ ಐಪಿಎಲ್ 2024 ರಲ್ಲಿ ಆಡಲು ಮುಂಬೈ ಇಂಡಿಯನ್ಸ್ ಸೇರಲು ನಿರ್ಧರಿಸಿದಾಗಿನಿಂದ ಐಪಿಎಲ್​ 2024ನೇ ಆವೃತ್ತಿಯು ಕಳೆಗಟ್ಟುತ್ತಿದೆ. ಹೊಸ ಫ್ರಾಂಚೈಸಿ ಗುಜರಾತ್ ಟೈಟನ್ಸ್ ್ಪರ ನಾಯಕನಾಗಿ ಮತ್ತು ಆಟಗಾರನಾಗಿ ಒಂದೆರಡು ಯಶಸ್ವಿ ವರ್ಷಗಳ ಕಳೆದ ನಂತರ ಅವರು ಮುಂಬೈಗೆ ವಾಪಸಾಗಿದ್ದಾರೆ. ಅವರೀಗ , ರೋಹಿತ್ ಶರ್ಮಾ ನೇತೃತ್ವದ ತಂಡದ ಜತೆ ಹೊಸ ಒಪ್ಪಂದ ಮಾಡಿಕೊಂಡಿದ್ದಾರೆ. ಇದರಿಂದ ಅವರು ಈ ಫ್ರಾಂಚೈಸಿಯ ಭವಿಷ್ಯದ ನಾಯಕ ಎಂದೇ ಹೇಳಲಾಗುತ್ತಿದೆ. ಆದರೆ, ಈ ಟ್ರೇಡಿಂಗ್ ಡೀಲ್ ಅತ್ಯಂತ ಕುತೂಹಲಕಾರಿಯಾಗಿತ್ತು. ಅವರಿಗೆ ನೀಡಬೇಕಾದ 15 ಕೋಟಿ ರೂಪಾಯಿ ಮೊತ್ತವನ್ನು ಸಜ್ಜುಗೊಳಿಸಲು ಮುಂಬಯಿ ಇಂಡಿಯನ್ಸ್​ ತಂಡ ಹೊಸ ಐಡಿಯಾ ಮಾಡಿತ್ತು. ತನ್ನ ತಂಡದಲ್ಲಿರುವ 17.5 ಕೋಟಿ ರೂಪಾಯಿ ಮೌಲ್ಯದ ಆಸ್ಟ್ರೇಲಿಯನ್​ ಆಲ್​ರೌಂಡರ್ ಕ್ಯಾಮೆರೂನ್ ಗ್ರೀನ್ ಅವರನ್ನು ಬೆಂಗಳೂರು ತಂಡಕ್ಕೆ ಮಾರಿತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸ್ಟಾರ್ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಖರೀದಿಸಲು ಆಸಕ್ತಿ ತೋರಿಸಿದಾಗ ಮುಂಬೈ ತಕ್ಷಣವೇ ಒಪ್ಪಿಕೊಂಡಿತ್ತು. ಇತ್ತ ಆರ್​ಸಿಬಿ ಗ್ರೀನ್ ಅವರನ್ನು ಪಡೆಯಲು ಕೆಲವು ಆಟಗಾರರನ್ನು ತ್ಯಾಗ ಮಾಡಿತು. ಐಪಿಎಲ್ ಇತಿಹಾಸದಲ್ಲಿ ಆಸ್ಟ್ರೇಲಿಯಾದ ಆಟಗಾರ ಅತಿ ಹೆಚ್ಚು ಸಂಭವಾನೆ ಪಡೆಯುವ ಐಪಿಎಲ್ ಆಟಗಾರ. ಆ ಹಣವನ್ನು ಹೊಂದಿಸಲು ಆರ್​ಸಿಬಿಯೂ ಸಿಕ್ಕಾಪಟ್ಟೆ ಕಸರತ್ತು ಮಾಡಿತು. ಆದರೆ, ಈ ಪ್ರಕ್ರಿಯೆಯ ಒಟ್ಟು ಲಾಭ ಮಾತ್ರ ಮುಂಬೈ ತಂಡಕ್ಕೆ ಎಂದು ಮಾಜಿ ಕ್ರಿಕೆಟಿಗರು ಅಂದಾಜು ಮಾಡಿದ್ದಾರೆ.

ಮುಂಬೈಗೆ ಉಪಕಾರ ಮಾಡಿದ ಆರ್​ಸಿಬಿ

ಈ ವಹಿವಾಟು ಪರಿಸ್ಥಿತಿಯನ್ನು ವಿಶ್ಲೇಷಿಸಿದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ಆರ್​ಸಿಬಿ ಈ ವಿಚಾರದಲ್ಲಿ ಮುಂಬೈಗೆ ದೊಡ್ಡ ಉಪಕಾರ ಮಾಡಿದೆ ಎಂದು ಹೇಳಿದ್ದಾರೆ. ಏಕೆಂದರೆ ಆರ್​ಸಿಬಿಯ ಬೆಂಬಲವಿಲ್ಲದೆ ಐದು ಬಾರಿಯ ಚಾಂಪಿಯನ್ಸ್ ಪಾಂಡ್ಯ ಅವರನ್ನು ವ್ಯಾಪಾರದಲ್ಲಿ ಪಡೆಯುವುದು ಆ ತಂಡಕ್ಕೆ ಸುಲಭವಿರಲಿಲ್ಲ ಎಂದು ಹೇಳಿದೆ. ಒಂದು ಕಡೆ ಆಲ್​ರೌಂಡರ್​ ಸ್ಥಾನ ಭರ್ತಿ ಮಾಡುವ ಜತೆಗೆ ಮತ್ತೊಂದು ಕಡೆಗೆ ದುಡ್ಡು ಕೂಡ ಮುಂಬೈ ಉಳಿಸಿದೆ ಎಂದು ಹೇಳಿದ್ದಾರೆ ಅವರು. ಆರ್​​ಸಿಬಿ ಹರಾಜಿನ ಮೂಲಕವೇ ಗ್ರೀನ್ ಅವರನ್ನು ಪಡೆಯಬಹುದಾಗಿತ್ತು ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಚೋಪ್ರಾ ಮುಂಬೈ ತಂಡದ ವ್ಯವಹಾರ ಚಾತುರ್ಯವನ್ನು ಮೆಚ್ಚಿದ್ದಾರೆ.

ಇದನ್ನೂ ಓದಿ : IPL 2024 : ಪಾಂಡ್ಯ- ರೋಹಿತ್​; ಮುಂಬೈ ತಂಡದ ನಾಯಕ ಯಾರಾಗಬಹುದು?

“ಅವರು (ಆರ್​ಸಿಬಿ) ಮುಂಬೈಗೆ ದೊಡ್ಡ ಉಪಕಾರ ಮಾಡಿದ್ದಾರೆ. ಏಕೆಂದರೆ ಈ ಒಪ್ಪಂದ ನಡೆಯದಿದ್ದರೆ, ಹಾರ್ದಿಕ್ ಒಪ್ಪಂದವೂ ಕಷ್ಟವಿತ್ತು ವಿಷಯಗಳು ಇದ್ದಕ್ಕಿದ್ದಂತೆ ವಿಭಿನ್ನವಾಗಿರುತ್ತಿತ್ತು. ಆರ್​ಸಿಬಿ ದೃಷ್ಟಿಕೋನದಿಂದ ನೋಡಿದರೆ ಅವರು ಮುಂಬೈ ತಂಡಕ್ಕೆ ಸಹಾಯ ಮಾಡಿದ್ದಾರೆ ಎಂದು ಚೋಪ್ರಾ ಹೇಳಿದ್ದಾರೆ.

“ಮುಂಬಯಿ ತಂಡ ಪಾಂಡ್ಯಗಾಗಿ ಗ್ರೀನ್​ ಅವರನ್ನು ಬಿಡುಗಡೆ ಮಾಡುತ್ತಿದ್ದರು. ಈ ವೇಳೆ ಹರಾಜಿನಲ್ಲಿಯೇ ಅವರನ್ನು ಪಡೆಯಬಹುದಾಗಿತ್ತು. ಆರ್​ಸಿಬಿ ಬಳಿ 40 ಕೋಟಿ ರೂ.ಗಿಂತ ಹೆಚ್ಚು ಹಣವಿದ್ದ ಕಾರಣ ಹರಾಜು ಕಷ್ಟವಿರಲಿಲ್ಲ. ಇದೀಘ ಮುಂಬೈ ಇಂಡಿಯನ್ಸ್​ ತಂಡಕ್ಕೆ ಶುಭವಾಗಿದೆ , “ಎಂದು ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಹೇಳಿದ್ದಾರೆ. ಮತ್ತೊಂದೆಡೆ, ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿರುವ ಮುಂಬರುವ ಐಪಿಎಲ್ ಮಿನಿ ಹರಾಜಿನಲ್ಲಿ ಹೂಡಿಕೆ ಮಾಡಲು ಮುಂಬೈ ಬಳಿ 17.75 ಕೋಟಿ ರೂ., ಆರ್​ಸಿಬಿ ಬಳಿ 23.25 ಕೋಟಿ ರೂ. ಉಳಿದಿದೆ.

Continue Reading

ಕ್ರಿಕೆಟ್

IPL 2024 : ಪಾಂಡ್ಯ- ರೋಹಿತ್​; ಮುಂಬೈ ತಂಡದ ನಾಯಕ ಯಾರಾಗಬಹುದು?

IPL 2024: ಹಾರ್ದಿಕ್ ಪಾಂಡ್ಯ ಮುಂಬೈ ತಂಡಕ್ಕೆ ಪುನರಾಗಮನ ಮಾಡುತ್ತಿದ್ದಂತೆ ಮುಂಬೈ ಇಂಡಿಯನ್ಸ್ ನಾಯಕ ಯಾರು ಎಂಬ ಪ್ರಶ್ನೆ ಎದ್ದಿದೆ.

VISTARANEWS.COM


on

Rohit Sharma
Koo

ಮುಂಬಯಿ: ಹಾರ್ದಿಕ್ ಪಾಂಡ್ಯ ಅವರನ್ನು ಮರಳಿ ತಂಡಕ್ಕೆ ಕರೆ ತರುವಲ್ಲಿ ಐಪಿಎಲ್​ನ (IPL 2024) ಮುಂಬೈ ಇಂಡಿಯನ್ಸ್ ತಂಡ ಮಾಡಿರುವ ಪ್ರಯತ್ನ ಫಲಕೊಟ್ಟಿದೆ. ಆದರೆ ಅವರ ಮರಳುವಿಕೆಯಿಂದ ಮುಂಬೈ ಇಂಡಿಯನ್ಸ್​ ತಂಡದ ಅಭಿಮಾನಿಗಳಿಗೆ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ. ಕೆಲವರು ಸಂತೋಷಪಟ್ಟರೆ ಇನ್ನು ಕೆಲವರು ಮುಂದಿನ ಆವೃತ್ತಿಯಿಂದ ತಂಡದ ನಾಯಕ ಯಾರು ಎಂಬ ಗೊಂದಲಕ್ಕೆ ಬಿದಿದ್ದಾರೆ. ಐಪಿಎಲ್​ ಮೆಗಾ ಹರಾಜಿಗೆ ಒಂದು ವರ್ಷ ಬಾಕಿ ಇದೆ. ಹಾಲಿ ಆವೃತ್ತಿಯಲ್ಲಿ ನಡೆಯುವುದು ಕೇವಲ ಮಿನಿ ಹರಾಜು. ಹೀಗಾಗಿ ರೋಹಿತ್ ಶರ್ಮಾ ಅವರು ಇರುವ ನಡುವೆಯೇ ಪಾಂಡ್ಯ ಅವರನ್ನು ಕರೆತಂದಿದ್ದು ಯಾಕೆ ಎಂಬ ಪ್ರಶ್ನೆ ಎದ್ದಿದೆ.

ಹಾರ್ದಿಕ್ ಪಾಂಡ್ಯ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಏನು ನಡೆಯಿತು ಎಂಬುದು ಸ್ಪಷ್ಟವಾಗಿಲ್ಲ. ಆದರೆ ನಾಯಕತ್ವ ಆದ್ಯತೆ ವಿಚಾರವೇ ಆಗಿರದಿದ್ದರೆ ಅವರನ್ನು ಕರೆತರುವ ದೊಡ್ಡ ಪ್ರಯತ್ನ ನಡೆಯುತ್ತಿರಲಿಲ್ಲ. ಹೀಗಾಗಿ ಮುಂದಿನ ಆವೃತ್ತಿಗೆ ನಾಯಕ ಯಾರು ಎಂಬ ಕೌತುಕ ಸೃಷ್ಟಿಯಾಗಿದೆ.

ರೋಹಿತ್ ಶರ್ಮಾಗೆ ನಿರ್ಧಾರವೇನು ?

ರೋಹಿತ್ ಶರ್ಮಅಗೆ 36 ವರ್ಷ. ಆದರೆ ಅವರು ಐದು ಐಪಿಎಲ್ ಟ್ರೋಫಿ ಗೆದ್ದ ನಾಯಕರಾಗಿ ಇಂಡಿಯನ್ ಪ್ರೀಮಿಯರ್ ಲೀಗ್​ನ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ಲೆಜೆಂಡರಿ ನಾಯಕ ಎಂಎಸ್ ಧೋನಿ ಮಾತ್ರ ಅವರಿಗೆ ಸರಿಸಾಟಿಯಾಗಬಲ್ಲರು. ಆದಾಗ್ಯೂ, ವಿಶ್ವಕಪ್ 2023ರ ಫೈನಲ್ ಸೋಲಿನ ಬಳಿಕ ರೋಹಿತ್ ತಮ್ಮ ವೃತ್ತಿಜೀವನದ ಬಗ್ಗೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಅವರು ಸ್ಫೋಟಕ ಟಿ 20 ಬ್ಯಾಟರ್​ನಂತೆ ವಿಶ್ವಕಪ್ ಆಡಿದರೂ, 597 ರನ್ ಗಳಿಸಿದ್ದರೂ, ಟಿ 20 ಮತ್ತು ಐಪಿಎಲ್​ನಲ್ಲಿ ಅವರ ರನ್​ ಗಳಿಕೆ ಪ್ರಮಾಣ ಕುಸಿದಿದೆ. ಹೀಗಾಗಿ ಐಪಿಎಲ್ 2024 ರಲ್ಲಿ ಅವರ ಫಾರ್ಮ್​ ಬಗ್ಗೆ ಚಿಂತೆ ಶುರುವಾಗಿದೆ.

ಕಳೆದ ಮೂರು ಐಪಿಎಲ್ ಆವೃತ್ತಿಗಳಲ್ಲಿ ರೋಹಿತ್ ಶರ್ಮಾ ಕೇವಲ ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ. 2016ರಿಂದೀಚೆಗೆ ಅವರ ಬ್ಯಾಟಿಂಗ್ ಸರಾಸರಿ 30ರ ಗಡಿ ದಾಟಿಲ್ಲ. ಇದು ಕಳವಳಕಾರಿ ಸಂಗತಿ. ರೋಹಿತ್ ಶರ್ಮಾ ತಮ್ಮ ಭಾರತ ವೃತ್ತಿಜೀವನವನ್ನು ವಿಸ್ತರಿಸಲು ಕನಿಷ್ಠ ಒಂದು ಸ್ವರೂಪವನ್ನು ತ್ಯಜಿಸಲು ಯೋಚಿಸುತ್ತಿರುವುದರಿಂದ, ಮುಂಬೈ ಇಂಡಿಯನ್ಸ್ ನಾಯಕತ್ವದಿಂದ ಕೆಳಗಿಳಿಯುವ ಸಾಧ್ಯತೆಯಿದೆ. ಅವರು ಒತ್ತಡ ಕಡಿಮೆ ಮಾಡಿಕೊಳ್ಳುತ್ತಾರೆ ಮತ್ತು ವಿಶ್ವ ಕಪ್​​ನಲ್ಲಿ ಮಾಡಿದಂತೆ ಮುಕ್ತವಾಗಿ ಆಡಲಿದ್ದಾರೆ.

ಹಾರ್ದಿಕ್ ಪಾಂಡ್ಯಗೆ ಅವಕಾಶವೇನು ?

ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್​ನಲ್ಇ ಮತ್ತೆ ರೋಹಿತ್ ಶರ್ಮಾ ನಾಯಕತ್ವದ ಅಡಿಯಲ್ಲಿ ಆಡುವ ಅಗತ್ಯವಿದೆಯೇ ? ಅದಿನ್ನೂ ಸರಣಿ ಶುರುವಾಗುವ ತನಕ ಪ್ರಶ್ನಾರ್ಥಕ. ಐಪಿಎಲ್ 2024 ರ ಕೊನೆಯಲ್ಲಿ ಹಾರ್ದಿಕ್, ರೋಹಿತ್ ಅವರಿಂದ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ.

2024ರ ಟಿ20 ವಿಶ್ವಕಪ್​​ಗೆ ಮುನ್ನ ಹಾರ್ದಿಕ್ ಪಾಂಡ್ಯ ಭಾರತದ ನಿಯೋಜಿತ ನಾಯಕರಾಗಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ರೋಹಿತ್ ಶರ್ಮಾ ಆಡದಿರುವ ಸಾಧ್ಯತೆಯಿದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ಹಾರ್ದಿಕ್ ವಹಿಸಿಕೊಳ್ಳುವುದಕ್ಕಿಂತ ಉತ್ತಮ ಆಟಗಾರ ಬೇರೆ ಯಾರೂ ಇಲ್ಲ. ಎಂಐ ಪರಂಪರೆಯನ್ನು ಅವರಿಗೆ ಮುಂದುವರಿಸುವ ಅವಕಾಶವಿದೆ. ಅವರು ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು ನೀಡಿರುವುದು ಮಾತ್ರವಲ್ಲದೆ, ಚೊಚ್ಚಲ ಋತುವಿನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಐಪಿಎಲ್ ಪ್ರಶಸ್ತಿಗೆ ಮುನ್ನಡೆಸಿದ್ದರು.

ಇದನ್ನೂ ಓದಿ : IPL 2024: ಪಾಂಡ್ಯ ರೀತಿ ಮುಂಬೈಗೆ ಹಾರಲು ಯತ್ನಿಸಿ 2010ರಲ್ಲಿ ಬ್ಯಾನ್‌ ಆಗಿದ್ದ ಜಡೇಜಾ; ಏಕೆ?

ಮುಂಬೈ ಇಂಡಿಯನ್ಸ್​​ನಲ್ಲಿ ರೋಹಿತ್ ಶರ್ಮಾ ಅವರ ಉತ್ತರಾಧಿಕಾರಿ ಎಂದು ಹಿಂದೆಯೇ ಹೇಳಲಾಗಿತ್ತು. ಆದರೆ, 2022 ರಲ್ಲಿ ಮೆಗಾ ಹರಾಜಿಗೆ ಮುಂಚಿತವಾಗಿ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಕೈಬಿಟ್ಟಾಗ ಅಚ್ಚರಿ ಉಂಟಾಗಿತ್ತು. ಇದೀಗ ಅವರು ತವರಿಗೆ ಮರಳುತ್ತಿದ್ದಂತೆ ಮತ್ತೆ ನಾಯಕತ್ವದ ವಿಚಾರ ಚರ್ಚೆಗೆ ಬಂದಿದೆ.

Continue Reading
Advertisement
Uttarakhand Tunnel Collapse
EXPLAINER24 mins ago

150 ಮೀಟರ್‌ ಸುರಂಗ ಕುಸಿತ, 57 ಮೀಟರ್‌ ಕೊರೆತ! 41 ಕಾರ್ಮಿಕರನ್ನು ರಕ್ಷಿಸಿದ್ದು ಹೇಗೆ?

Uttarkashi Tunnel rescue success makes us emotional says PM Narendra Modi
ದೇಶ53 mins ago

ಕಾರ್ಮಿಕರ ರಕ್ಷಣೆಯ ಯಶಸ್ಸು ನಮ್ಮನ್ನೆಲ್ಲ ಭಾವುಕರನ್ನಾಗಿಸಿದೆ ಎಂದ ಪ್ರಧಾನಿ ಮೋದಿ

Ruturaj Gaikwad
ಕ್ರಿಕೆಟ್1 hour ago

Ruturaj Gaikwad : ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿ ವಿಶೇಷ ಸಾಧನೆ ಮಾಡಿದ ಋತುರಾಜ್​

Child trade in Bangalore
ಕರ್ನಾಟಕ1 hour ago

Child trade : IVFಗೆ ಗಾರ್ಮೆಂಟ್ಸ್‌ ಯುವತಿಯರ ಅಂಡಾಣು!; ಮಕ್ಕಳ ಮಾರಾಟ ಗ್ಯಾಂಗ್‌ ಕರಾಮತ್ತು

surprise visit by four judges to the Gangavathi boys hostel inspection
ಕೊಪ್ಪಳ1 hour ago

Koppala News: ಗಂಗಾವತಿಯ ವಸತಿ ನಿಲಯಕ್ಕೆ ನಾಲ್ವರು ನ್ಯಾಯಾಧೀಶರ ದಿಢೀರ್ ಭೇಟಿ, ಪರಿಶೀಲನೆ

MLA Gopalakrishna Belur Bhumi Pooja for drinking water work in Halugudde village
ಶಿವಮೊಗ್ಗ1 hour ago

Shivamogga News: ಹಾಲುಗುಡ್ಡೆ ಗ್ರಾಮದಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ಗೋಪಾಲಕೃಷ್ಣ ಬೇಳೂರು ಭೂಮಿಪೂಜೆ

Uttarkashi Tunnel Rescue, All trapped labor rescued and sent them to makeshift hospital
ದೇಶ1 hour ago

ಹೊರ ಬಂದರು ಸುರಂಗದಲ್ಲಿ ಸಿಲುಕಿದ್ದ ಎಲ್ಲ 41 ಕಾರ್ಮಿಕರು! ಫಲಿಸಿತು ಭಾರತೀಯರ ಪ್ರಾರ್ಥನೆ

Protest by villagers in Kolikeri demanding bus stop
ಉತ್ತರ ಕನ್ನಡ1 hour ago

Uttara Kannada News: ಬಸ್‌ಗಾಗಿ ಕೋಳಿಕೇರಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ

Dr Vishnuvardhan
ಕರ್ನಾಟಕ2 hours ago

Dr Vishnuvardhan: ಡಿ. 17 ರಂದು ಡಾ. ವಿಷ್ಣುವರ್ಧನ್‌ ಪುಣ್ಯಭೂಮಿಗಾಗಿ ಪ್ರತಿಭಟನೆ

Within 2 hours all labors will rescue from Uttarkashi Tunnel Collapse
ದೇಶ2 hours ago

ಕೊನೆಗೂ ಸುರಂಗದ ತುದಿಯಲ್ಲಿ ಕಂಡಿತು ಬೆಳಕು! ಯಶಸ್ವಿಯಾಯಿತು ಕಾರ್ಯಾಚರಣೆ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ4 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ6 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Dina Bhavishya
ಪ್ರಮುಖ ಸುದ್ದಿ17 hours ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ1 day ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

CM Siddaramaiah Janatha Darshan
ಕರ್ನಾಟಕ1 day ago

Janatha Darshan : ಸಮಸ್ಯೆಗಳ ಪರಿಹಾರಕ್ಕೆ ಹದಿನೈದು ದಿನ ಗಡುವು ಕೊಟ್ಟ ಸಿಎಂ; ಕುಳಿತಲ್ಲೇ ಸಿದ್ದು ಊಟ!

Cm Siddaramaiah in Janatha Darshan
ಕರ್ನಾಟಕ1 day ago

Janatha Darshan : ಜಿಲ್ಲಾ ಮಟ್ಟದ ಸಮಸ್ಯೆ ಬೆಂಗಳೂರಿಗೆ ಬಂದರೆ ಸಹಿಸಲ್ಲ; ಸಿಎಂ ಖಡಕ್‌ ಎಚ್ಚರಿಕೆ

CM Janatha Darshana solved mysore citizens problem
ಕರ್ನಾಟಕ1 day ago

Janatha Darshan : ಮಾಲೀಕನ ಮನೆ ಹರಾಜು; ಲೀಸ್‌ ದುಡ್ಡಿಗೆ ಯಾರು ಗ್ಯಾರಂಟಿ? ಕಂಗೆಟ್ಟ ಕುಟುಂಬಕ್ಕೆ ಸಿಎಂ ರಕ್ಷಣೆ!

Shivajingar School building collapses The children escaped unhurt
ಕರ್ನಾಟಕ1 day ago

Building collapse : ಏಕಾಏಕಿ ಕುಸಿದು ಬಿದ್ದ ಶಾಲಾ ಕಟ್ಟಡ; ಪ್ರಾಣಾಪಾಯದಿಂದ ಚಿಣ್ಣರು ಪಾರು

CM Siddaramaiah Janatha Darshan
ಕರ್ನಾಟಕ1 day ago

Janatha Darshan : ಸಿಎಂಗೆ ದೂರು ನೀಡಬೇಕೇ? ಜನತಾ ದರ್ಶನಕ್ಕೆ ಹೋಗಬೇಕಿಲ್ಲ; ಈ ನಂಬರ್‌ಗೆ ಕರೆ ಮಾಡಿ!

read your daily horoscope predictions for november 27 2023
ಪ್ರಮುಖ ಸುದ್ದಿ2 days ago

Dina Bhavishya: ನಿಮ್ಮನ್ನು ಉರುಳಿಸಲು ಪಿತೂರಿ ಮಾಡ್ತಾರೆ ಹುಷಾರ್‌!

Danger Influenza People are suffering from the flu
ಆರೋಗ್ಯ2 days ago

Viral fever: ಡೆಡ್ಲಿ ಚೀನಾ ವೈರಸ್‌; ಮಕ್ಕಳಿಗೆ ಇದರಿಂದ ಅಪಾಯ ಇದೆಯಾ?

BY Vijayendra and HD Kumarswamy
ಕರ್ನಾಟಕ2 days ago

BJP JDS Alliance: ಎಚ್‌ಡಿಕೆ-ವಿಜಯೇಂದ್ರ ಭೇಟಿ; 28ಕ್ಕೆ 28 ಸ್ಥಾನ ಗೆಲ್ಲುವ ಪಣ!

ಟ್ರೆಂಡಿಂಗ್‌