Site icon Vistara News

ICC World Cup 2023 : ಶೂನಲ್ಲಿ ಬಿಯರ್ ಹಾಕಿ ಕುಡಿದ ಆಸ್ಟ್ರೇಲಿಯಾ ಚಾಂಪಿಯನ್ನರು!

World cup 2023

ಬೆಂಗಳೂರು: ಭಾರತ ತಂಡವನ್ನು 6 ವಿಕೆಟ್​ಗಳಿಂದ ಹೀನಾಯವಾಗಿ ಸೋಲಿಸಿದ ಆಸ್ಟ್ರೇಲಿಯಾ ತಂಡ 2023ನೇ ಆವೃತ್ತಿಯ ವಿಶ್ವ ಕಪ್ (ICC World Cup 2023) ಗೆದ್ದಿದೆ. ಇದು ಆ ತಂಡದ ಪಾಲಿಗೆ ಆರನೇ ಏಕದಿನ ವಿಶ್ವ ಕಪ್​. ಈ ಮೂಲಕ ಕಾಂಗರೂ ಪಡೆ ವಿಶ್ವ ಕಪ್​ನಲ್ಲಿ ತನ್ನ ಪಾರಮ್ಯವನ್ನು ಮತ್ತೆ ಮುಂದುವರಿಸಿದೆ. ಒಟ್ಟು ಆರು ಬಾರಿ ಟ್ರೋಫಿ ಎತ್ತುವ ಮೂಲಕ ಅತ್ಯಂತ ಯಶಸ್ವಿ ತಂಡ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. ಈ ಗೆಲುವಿನ ಬಳಿಕ ಆಸ್ಟ್ರೇಲಿಯಾ ತಂಡದ ಆಟಗಾರರು ಸಂಭ್ರಮಾಚರಣೆ ಮಾಡುವ ಹಲವಾರು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಇವೆಲ್ಲದರ ನಡುವೆ ಆಸೀಸ್​ ಪಡೆಯ ಆಟಗಾರರು ಅನೇಕರು ಶೂ ಒಳಗೆ ಬಿಯರ್ ಹಾಕಿ ಕುಡಿಯುವ ವಿಡಿಯೊವೊಂದು ಮುನ್ನೆಲೆಗೆ ಬಂದಿದೆ. ಹೀಗಾಗಿ ಇದೆಂಥಾ ಸಂಭ್ರಮಾಚರಣೆ ಎಂಬ ಚರ್ಚೆ ಆರಂಭಗೊಂಡಿದೆ.

ವಾಸ್ತವದಲ್ಲಿ ಈ ವಿಡಿಯೊ 2023ರ ವಿಶ್ವ ಕಪ್ ಸಂರ್ಭದ್ದು ಅಲ್ಲ. ಇದು 2021ರ ಟಿ20 ವಿಶ್ವ ಕಪ್​ನಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿದ ಆಸ್ಟ್ರೇಲಿಯಾ ತಂಡದ ಆಟಗಾರರು ಮಾಡಿದ ಸಂಭ್ರಮಾಚರಣೆಯಾಗಿದೆ. ಜತೆಗೆ ವಿಡಿಯೊದಲ್ಲಿ ಕಾಣುವ ಮ್ಯಾಥ್ಯೂ ವೇಡ್ 2023ರ ವಿಶ್ವ ಕಪ್​ನಲ್ಲಿ ಆಸ್ಟ್ರೇಲಿಯಾ ತಂಡದ ಭಾಗವಾಗಿರಲಿಲ್ಲ. ಹೀಗಾಗಿ ಹಳೆಯದು ಎಂಬುದು ಖಚಿತವಾಗಿದೆ.

ವಿಡಿಯೊ ಬಗ್ಗೆ ಫ್ಯಾಕ್ಟ್​ ಚೆಕರ್​ಗಳು ಹುಡುಕಾಟ ನಡೆಸಿದ್ದಾರೆ. ಅದು ನವೆಂಬರ್ 15, 2021ರ ವರದಿ ಎಂಬುದು ಗೊತ್ತಾಗಿದೆ. ಆಸ್ಟ್ರೇಲಿಯಾದ ಆಟಗಾರರಾದ ಮ್ಯಾಥ್ಯೂ ವೇಡ್ ಮತ್ತು ಮಾರ್ಕಸ್ ಸ್ಟೋಯ್ನಿಸ್ ತಮ್ಮ ಚೊಚ್ಚಲ ಟಿ 20 ವಿಶ್ವಕಪ್ ವಿಜಯವನ್ನು ಶೂ ಕುಡಿದು ಆಚರಿಸುತ್ತಿರುವುದನ್ನು ಕ್ಲಿಪ್​ನಲ್ಲಿದೆ ಈ ವಿಡಿಯೋವನ್ನು ಆಸ್ಟ್ರೇಲಿಯಾದ ಡ್ರೆಸ್ಸಿಂಗ್ ರೂಮ್​​ನಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಹಂಚಿಕೊಂಡಿದೆ. ಇದು ಭಾರತದ ಆತಿಥ್ಯದಲ್ಲೇ ನಡೆದ ವಿಶ್ವ ಕಪ್​. ಆದರೆ ಕೊರೊನಾ ಕಾರಣಕ್ಕೆ ಯುಎಇನಲ್ಲಿ ನಡೆದಿತ್ತು.

ಇದನ್ನೂ ಓದಿ : Stop Clock : ಕ್ರಿಕೆಟ್​ನಲ್ಲಿ ಜಾರಿಗೆ ಬಂತು ಹೊಸ ನಿಯಮ, ತಪ್ಪಿದರೆ ಐದು ರನ್​ ದಂಡ

ನವೆಂಬರ್ 15, 2021 ರಂದು ಅಂತಾರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ನ ಅಧಿಕೃತ ಟ್ವಿಟರ್ ಖಾತೆಯಿಂದ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಆದರೆ ಈಗ ಶೇರ್ ಮಾಡಿರವ ವಿಡಿಯೊದಲ್ಲಿ ಐಸಿಸಿ ಪುರುಷರ ಟಿ 2 ವಿಶ್ವಕಪ್ 2021 ರ ಲೋಗೋವನ್ನು ಎಮೋಜಿಗಳಿಂದ ಮಸುಕು ಮಾಡಲಾಗಿದೆ. ಹೀಗಾಗಿ ಅದು ಹೊಸ ವಿಡಿಯೊ ಎಂದು ಹಲವರು ನಂಬಿದ್ದಾರೆ.

2021 ರಲ್ಲಿ, ದುಬೈ ಇಂಟರ್​ನ್ಯಾಷನಲ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಫೈನಲ್​ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ ನಂತರ ಆಸ್ಟ್ರೇಲಿಯಾ ತಂಡದ ವಿಶಿಷ್ಟ ಆಚರಣೆಯನ್ನು ತೋರಿಸುವ ಈ ವೀಡಿಯೊದ ಬಗ್ಗೆ ಹಲವಾರು ಮಾಧ್ಯಮಗಳು ವರದಿ ಮಾಡಿವೆ. ಈ ಕೃತ್ಯವನ್ನು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ “ಅಸಹ್ಯಕರ” ಎಂದು ಕರೆದಿದ್ದರು.

‘ಶೂಯಿ’; ಇದು ಆಸ್ಟ್ರೇಲಿಯಾದ ಸಂಪ್ರದಾಯ

ವರದಿಗಳ ಪ್ರಕಾರ, “ದಿ ಶೂಯಿ” ಎಂದು ಕರೆಯಲ್ಪಡುವ ಶೂನಿಂದ ಬಿಯರ್​ ಕುಡಿಯುವುದು ಆಸ್ಟ್ರೇಲಿಯಾದಲ್ಲಿ ಆಚರಿಸುವ ಜನಪ್ರಿಯ ಸಂಭ್ರಮಾಚರಣೆ ಸಂಪ್ರದಾಯ. ಆಸ್ಟ್ರೇಲಿಯಾದ ಫಾರ್ಮುಲಾ ಒನ್ ಚಾಲಕ ಡೇನಿಯಲ್ ರಿಕಿಯಾರ್ಡೊ 2016ರ ಜರ್ಮನ್ ಗ್ರಾನ್​ ಪ್ರಿನ್​ನ್ಲಿ ಗೆದ್ದ ನಂತರ ತನ್ನ ರೇಸಿಂಗ್ ಬೂಟುಗಳಿಂದ ಶಾಂಪೇನ್ ಕುಡಿದಿದ್ದರು. ಅಂದಿನಿಂದ, ಹಲವಾರು ಕ್ರೀಡಾಪಟುಗಳು, ತಾರೆಯರು ಮತ್ತು ಗಾಯಕರು ಸಹ ಶೂಯಿ ಸಂಪ್ರದಾಯ ಆಚರಣೆ ಮಾಡುತ್ತಿದ್ದಾರೆ. ಆಸ್ಟ್ರೇಲಿಯಾದ ಕ್ರಿಕೆಟಿಗರು ಶೂ ಕುಡಿಯುತ್ತಿರುವ ಹಳೆಯ ವೀಡಿಯೊವನ್ನು ಇತ್ತೀಚೆಗೆ ತಪ್ಪಾಗಿ ಹಂಚಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿದೆ.

Exit mobile version