Site icon Vistara News

Ball dog: ಚೆಂಡು ಹೆಕ್ಕಲು ನಿಯೋಜಿಸಿದ ನಾಯಿಗಳು ಅದನ್ನು ವಾಪಸ್‌ ಕೊಡಲೇ ಇಲ್ಲ!

ball dog

ಲಂಡನ್‌: ಟೆನಿಸ್‌ ಪಂದ್ಯದ ವೇಳೆ ಕೋರ್ಟ್‌ನಿಂದ ಹೊರಕ್ಕೆ ಹೋಗುವ ಚೆಂಡುಗಳನ್ನು ಹೆಕ್ಕಿ ತರಲೆಂದು ಬಾಲ್‌ ಬಾಯ್ಸ್‌ ಮತ್ತು ಬಾಲ್‌ ಗರ್ಲ್ಸ್‌ಗಳನ್ನು ನೇಮಕ ಮಾಡುತ್ತಾರೆ. ಮಕ್ಕಳಿಗ್ಯಾಕೆ ಕಷ್ಟ ಎಂದು ಲಂಡನ್‌ನ ಟೆನಿಸ್‌ ಕ್ಲಬ್‌ Ball dog ನಿಯೋಜಿಸುವ ಪ್ರಯತ್ನವೊಂದನ್ನು ಮಾಡಿತ್ತು. ಅದರೆ, ಚೆಂಡು ಹೆಕ್ಕುವ ನಾಯಿಗಳು ಅದನ್ನು ವಾಪಸ್‌ ಕೊಡದಿರುವ ಕಾರಣ ಅವರ ಯೋಜನೆಯೇ ವಿಫಲಗೊಂಡಂತಾಗಿದೆ!

ಲಂಡನ್‌ನ ವಿಲ್ಟನ್‌ ಟೆನಿಸ್‌ ಕ್ಲಬ್‌ ಈ ವಿಭಿನ್ನ ಯೋಜನೆ ಆರಂಭಿಸಿ ವೈಫಲ್ಯ ಕಂಡಿದೆ. ಚೆಂಡು ಹೆಕ್ಕುವ ವಿಚಾರಕ್ಕೆ ಬಂದಾಗ ನಾಯಿಗಳು ಸಾಕಷ್ಟು ಚಾಣಾಕ್ಷ ಎಂಬುದರಲ್ಲಿ ಎರಡು ಮಾತಿಲ್ಲ. ದೂರ ಬಿಸಾಡುವ ಚೆಂಡುಗಳನ್ನು ಕ್ಷಣಾರ್ಧದಲ್ಲಿ ಹೆಕ್ಕಿ ತರುವ ಹಲವು ವಿಡಿಯೊಗಳು ಸಿಗುತ್ತವೆ. ಅಂತೆಯೇ ವಿಲ್ಟನ್‌ ಕ್ಲಬ್‌ ಚತುರ ನಾಯಿಗಳನ್ನು ಒಟ್ಟು ಹಾಕಿ ತರಬೇತಿ ನೀಡಿತ್ತು. ಹಲವಾರು ಚೆಂಡುಗಳನ್ನು ಏಕಕಾಲಕ್ಕೆ ಎಸೆದು ಅವುಗಳನ್ನು ಹಿಡಿದು ತರುವಂತೆ ಹೇಳಲಾಗಿತ್ತು. ಕೋರ್ಟ್‌ನ ಹೊರಗೆ ಹೋಗಿರುವ ಚೆಂಡುಗಳನ್ನು ಹಿಡಿದು ತರುವುದಕ್ಕೆ ತರಬೇತಿ ನೀಡಿದ್ದರು. ಆದರೆ, ಆಟ ಶುರುವಾದ ತಕ್ಷಣ ನಾಯಿ ಕೀಟಲೆ ಮಾಡಲು ಆರಂಭಿಸಿತು. ಚೆಂಡನ್ನು ಹೆಕ್ಕಿಕೊಂಡು ಹೋಗಿ ಕೋರ್ಟ್‌ನ ಬದಿಯಲ್ಲಿ ಕುಳಿತಿತೇ ಹೊರತು ಆಟಗಾರನಿಗೆ ವಾಪಸ್‌ ಕೊಡಲು ಒಪ್ಪಲೇ ಇಲ್ಲ!

ವಿಂಬಲ್ಡನ್‌ನಲ್ಲಿ ಜಾರಿ ತರುವ ಯೋಜನೆ?

ಮೆನಿಪೆಟ್ಸ್‌ ಸಂಸ್ಥೆಯು ವಿಂಬಲ್ಡ್‌ನಲ್ಲಿ ಬಾಲ್‌ ಡಾಗ್‌ ಸೇವೆಯನ್ನು ಪೂರೈಸುವುದಾಗಿ ಆಯೋಜಕರ ಮುಂದೆ ಪ್ರಸ್ತಾಪ ಇಟ್ಟಿದೆ. ಒಂದು ವರ್ಷದ ಟೂರ್ನಿಗೆ ಸುಮಾರು ೨೫೦ ಬಾಲ್‌ ಬಾಯ್ಸ್‌ ಮತ್ತು ಗರ್ಲ್ಸ್‌ ಬೇಕಾಗುತ್ತಾರೆ. ಅವರ ಬದಲಿಗೆ ಬಾಲ್‌ ಡಾಗ್‌ಗಳನ್ನು ನಿಯೋಜಿಸುತ್ತೇವೆ ಎಂಬುದು ಸಂಸ್ಥೆಯ ಪ್ರಸ್ತಾಪ. ಆದರೆ, ಆಯೋಜಕರು ಈ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ: 777 ಚಾರ್ಲಿ | ಸಿನಿಮಾ ನೋಡಿ ಕಾಲಿವುಡ್‌ ನಿಂದ ಸ್ಯಾಂಡಲ್‌ವುಡ್‌ಗೆ ಬಂತು ಕಾಲ್‌!

Exit mobile version