ನವದೆಹಲಿ: ಬಾಂಗ್ಲಾದೇಶದ ವೇಗದ ಬೌಲರ್ ತಂಜಿಮ್ ಹಸನ್ ಅವರು ವರ್ಷಗಳ ಹಿಂದೆ ಮಹಿಳೆಯರನ್ನು ನಿಂದಿಸಿ ಹಂಚಿಕೊಂಡ ಕೆಲವು ಅವಹೇಳನಕಾರಿ ಫೇಸ್ಬುಕ್ ಪೋಸ್ಟ್ಗಳಿಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (Bangladesh Cricket Team) ಗೆ ಕ್ಷಮೆಯಾಚಿಸಿದ್ದಾರೆ. ವಿಶೇಷವೆಂದರೆ, ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾ ಕಪ್ನಲ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಅಲ್ಲಿಂದ ಅವರ ಪೋಸ್ಟ್ಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡತೊಡಗಿದ್ದವು. ಅವರ ಬಗ್ಗೆ ದೊಡ್ಡ ಪ್ರಮಾಣ ಟೀಕೆಗಳು ವ್ಯಕ್ತಗೊಂಡಿದ್ದವು. ಅದರ ಬಿಸಿ ತಟ್ಟಿದ ತಕ್ಷಣ ಅವರು ಕ್ಷಮೆ ಯಾಚಿಸಿದ್ದಾರೆ.
ಬಿಸಿಬಿ ಕ್ರಿಕೆಟ್ ಕಾರ್ಯಾಚರಣೆಗಳ ಮುಖ್ಯಸ್ಥ ಜಲಾಲ್ ಯೂನುಸ್ ಮಾತನಾಡಿ, ತಂಜಿಮ್ ತನ್ನ ಕೃತ್ಯಗಳಿಗೆ ವಿಷಾದ ವ್ಯಕ್ತಪಡಿಸಿದ್ದಾರೆ. 2014 ರ ಹಿಂದೆ ಮಾಡಿರುವ ಪೋಸ್ಟ್ಗಳಿಗೆ ಸಂಪೂರ್ಣ ಜವಾಬ್ದಾರಿಯನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇದಲ್ಲದೆ, ಸೆಪ್ಟೆಂಬರ್ 15 ರಂದು ಭಾರತ ವಿರುದ್ಧ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ನಂತರ ವೈರಲ್ ಆದ ನಂತರ ಸುಮಾರು ನಾಲ್ಕು ಪೋಸ್ಟ್ಗಳನ್ನು ಅಳಿಸಿದ್ದಾರೆ.
ಏನು ಬರೆದಿದ್ದರು ತಂಜಿಮ್?
ಉದ್ಯೋಗಸ್ಥ ಮಹಿಳೆ ತನ್ನ ಪತಿ ಅಥವಾ ಮಕ್ಕಳ ಭವಿಷ್ಯ ಹಾಳು ಮಾಡುತ್ತಳೆ ; ಅವಳು ತನ್ನ ಘನತೆ ಕಳೆದುಕೊಳ್ಳುತ್ತಾಳೆ ಹಾಗೂ ಅವಳ ಕಟುಂಬವನ್ನು ನಾಶ ಮಾಡುತ್ತಾಳೆ. ಜತೆಗೆ ಅವಳು ತನ್ನ ಪರ್ದಾ ಮತ್ತು ಸಮಾಜವನ್ನೂ ನಾಶಪಡಿಸುತ್ತಾಳೆ” ಎಂದು ಅವರು ಕಳೆದ ವರ್ಷ ಸೆಪ್ಟೆಂಬರ್ 22 ರಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು.
ಏಪ್ರಿಲ್ 2023ರಲ್ಲಿ ಮತ್ತೊಂದು ಪೋಸ್ಟ್ ಹಾಕಿದ್ದರು. ಅದರಲ್ಲಿ ಅವರು 1954ರ ವೇಳೆ ಬುರ್ಖಾ ಧರಿಸಿ ರಿಕ್ಷಾದಲ್ಲಿ ಸವಾರಿ ಮಾಡುತ್ತಿರುವ ಮಹಿಳೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ಅವರು “ಸುವರ್ಣ ಕಾಲ” ಎಂದು ಶೀರ್ಷಿಕೆ ಕೊಟ್ಟಿದ್ದರು.
ಇದನ್ನೂ ಓದಿ : Virat Kohli : ಖಲಿಸ್ತಾನಿಗಳಿಗೆ ಬೆಂಬಲ ಕೊಟ್ಟ ನೆಚ್ಚಿನ ಗಾಯಕನನ್ನು ಮುಲಾಜಿಲ್ಲದೇ ಅನ್ಫಾಲೋ ಮಾಡಿದ ವಿರಾಟ್
ಹೆಣ್ಣು ಮಕ್ಕಳ ಶಿಕ್ಷಣ ವಿರೋಧಿ
ನೀವು ವಿಶ್ವವಿದ್ಯಾಲಯಗಳಲ್ಲಿ ಮುಕ್ತವಾಗಿ ಬೆರೆಯುವ ಹುಡುಗಿಯನ್ನು ಮದುವೆಯಾದರೆ, ನಿಮ್ಮ ಮಗುವಿಗೆ ಒಳ್ಳೆಯ ತಾಯಿಯನ್ನು ಪಡೆಯಲು ಸಾಧ್ಯವಿಲ್ಲ” ಎಂದು 20 ವರ್ಷದ ಅವರು ಮತ್ತೊಂದು ಪೋಸ್ಟ್ ಬರೆದಿದ್ದರು (ದಿನಾಂಕ ತಿಳಿದಿಲ್ಲ). ವಿಶೇಷವೆಂದರೆ, 2014 ರಲ್ಲಿ ತಂಜೀಮ್ ಸುಮಾರು 11 ವರ್ಷದವನಾಗಿದ್ದಾಗ, ಬಾಂಗ್ಲಾದೇಶದ ವಿಜಯ ದಿನವನ್ನು (ಡಿಸೆಂಬರ್ 16) ಗೌರವಿಸುವುದಿಲ್ಲ ಎಂದು ಪೋಸ್ಟ್ ಬರೆದಿದ್ದರು.
ತಂಜಿಮ್ಗೆ ಎಚ್ಚರಿಕೆ ನೀಡಿದ್ದೇವೆ: ಯೂನುಸ್
ಬಿಸಿಬಿ ನಿರ್ದೇಶಕ ಜಲಾಲ್ ಯೂನುಸ್ ಅವರು ಈ ವಿಷಯದ ಬಗ್ಗೆ ತಂಜಿಮ್ ಹಸನ್ ಅವರೊಂದಿಗೆ ಮಾತನಾಡಿದ್ದಾರೆ . ತಂಜಿಮ್ಗೆ ಯಾರನ್ನೂ ನೋಯಿಸುವ ಉದ್ದೇಶವನ್ನು ಇರಲಿಲ್ಲ ಎಂದು ಹೇಳಿದರು. ಕ್ರಿಕೆಟಿಗನಿಗೆ ಅವರು ಎಚ್ಚರಿಕೆ ನೀಡಿದ್ದಾರೆ. ಮಂಡಳಿಯು ಅವರ ಮೇಲೆ ನಿಗಾ ಇಡಲಿದೆ. ಅವರು ಇದೇ ರೀತಿ ಮುಂದುವರಿದರೆ ಕಠಿಣ ಕ್ರಮವನ್ನು ಅನುಭವಿಸಬೇಕಾಗುತ್ತದೆ ಎಂದು ಯೂನುಸ್ ಎಚ್ಚರಿಕೆ ನೀಡಿದ್ದಾರೆ.
ಕ್ರಿಕೆಟ್ ಕಾರ್ಯಾಚರಣೆ ಸಮಿತಿಯು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಪರವಾಗಿ ತಂಜಿಮ್ ಸಾಕಿಬ್ ಅವರೊಂದಿಗೆ ಮಾತನಾಡಿದೆ. ಮಾಧ್ಯಮ ಸಮಿತಿ ಕೂಡ ಅವರೊಂದಿಗೆ ಸಂಪರ್ಕದಲ್ಲಿದೆ. ತಂಜಿಮ್ ಅವರ ಫೇಸ್ಬುಕ್ ಪೋಸ್ಟ್ಗಳ ಸುತ್ತಲಿನ ಚರ್ಚೆಗಳ ಬಗ್ಗೆ ನಾವು ಅವರಿಗೆ ಮಾಹಿತಿ ನೀಡಿದ್ದೇವೆ. ಯಾರನ್ನೂ ನೋಯಿಸಲು ನಾನು ಆ ಪೋಸ್ಟ್ ಗಳನ್ನು ಬರೆದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಅವರು ಅದನ್ನು ಸ್ವತಃ ಬರೆದರು ಯಾರನ್ನೂ ಗುರಿಯಾಗಿಸಲಿಲ್ಲ. ಆ ಪೋಸ್ಟ್ನಲ್ಲಿ ಯಾರೊಬ್ಬರ ಭಾವನೆಗಳನ್ನು ನೋಯಿಸಿದ್ದರೆ, ಕ್ಷಮಿಸಿ ಎಂದು ಅವರು ಹೇಳಿಕೊಂಡಿದ್ದಾರೆ ಎಂದು ಯೂನುಸ್ ತಿಳಿಸಿದ್ದಾರೆ.