ಕ್ರಿಕೆಟ್
Bangladesh Cricket Team : ಕೆಲಸಕ್ಕೆ ಹೋಗುವ ಹೆಣ್ಣು ಊರಿಗೆ ಮಾರಿ ಎಂದ ಬಾಂಗ್ಲಾ ಕ್ರಿಕೆಟಿಗನಿಂದ ಕ್ಷಮೆ ಯಾಚನೆ
ಉದ್ಯೋಗಸ್ಥ ಮಹಿಳೆ ತನ್ನ ಪತಿ ಅಥವಾ ಮಕ್ಕಳ ಭವಿಷ್ಯ ಹಾಳು ಮಾಡುತ್ತಳೆ ; ಅವಳು ತನ್ನ ಘನತೆ ಕಳೆದುಕೊಳ್ಳುತ್ತಾಳೆ ಹಾಗೂ ಅವಳ ಕಟುಂಬವನ್ನು ನಾಶ ಮಾಡುತ್ತಾಳೆ ಎಂದು ಬಾಂಗ್ಲಾದೇಶ (Bangladesh Cricket Team) ಕ್ರಿಕೆಟಿಗ ಫೇಸ್ಬುಕ್ ಪೋಸ್ಟ್ ಮಾಡಿದ್ದ.
ನವದೆಹಲಿ: ಬಾಂಗ್ಲಾದೇಶದ ವೇಗದ ಬೌಲರ್ ತಂಜಿಮ್ ಹಸನ್ ಅವರು ವರ್ಷಗಳ ಹಿಂದೆ ಮಹಿಳೆಯರನ್ನು ನಿಂದಿಸಿ ಹಂಚಿಕೊಂಡ ಕೆಲವು ಅವಹೇಳನಕಾರಿ ಫೇಸ್ಬುಕ್ ಪೋಸ್ಟ್ಗಳಿಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (Bangladesh Cricket Team) ಗೆ ಕ್ಷಮೆಯಾಚಿಸಿದ್ದಾರೆ. ವಿಶೇಷವೆಂದರೆ, ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾ ಕಪ್‌ನಲ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಅಲ್ಲಿಂದ ಅವರ ಪೋಸ್ಟ್ಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡತೊಡಗಿದ್ದವು. ಅವರ ಬಗ್ಗೆ ದೊಡ್ಡ ಪ್ರಮಾಣ ಟೀಕೆಗಳು ವ್ಯಕ್ತಗೊಂಡಿದ್ದವು. ಅದರ ಬಿಸಿ ತಟ್ಟಿದ ತಕ್ಷಣ ಅವರು ಕ್ಷಮೆ ಯಾಚಿಸಿದ್ದಾರೆ.
ಬಿಸಿಬಿ ಕ್ರಿಕೆಟ್ ಕಾರ್ಯಾಚರಣೆಗಳ ಮುಖ್ಯಸ್ಥ ಜಲಾಲ್ ಯೂನುಸ್ ಮಾತನಾಡಿ, ತಂಜಿಮ್ ತನ್ನ ಕೃತ್ಯಗಳಿಗೆ ವಿಷಾದ ವ್ಯಕ್ತಪಡಿಸಿದ್ದಾರೆ. 2014 ರ ಹಿಂದೆ ಮಾಡಿರುವ ಪೋಸ್ಟ್ಗಳಿಗೆ ಸಂಪೂರ್ಣ ಜವಾಬ್ದಾರಿಯನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇದಲ್ಲದೆ, ಸೆಪ್ಟೆಂಬರ್ 15 ರಂದು ಭಾರತ ವಿರುದ್ಧ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ನಂತರ ವೈರಲ್ ಆದ ನಂತರ ಸುಮಾರು ನಾಲ್ಕು ಪೋಸ್ಟ್ಗಳನ್ನು ಅಳಿಸಿದ್ದಾರೆ.
ಏನು ಬರೆದಿದ್ದರು ತಂಜಿಮ್?
ಉದ್ಯೋಗಸ್ಥ ಮಹಿಳೆ ತನ್ನ ಪತಿ ಅಥವಾ ಮಕ್ಕಳ ಭವಿಷ್ಯ ಹಾಳು ಮಾಡುತ್ತಳೆ ; ಅವಳು ತನ್ನ ಘನತೆ ಕಳೆದುಕೊಳ್ಳುತ್ತಾಳೆ ಹಾಗೂ ಅವಳ ಕಟುಂಬವನ್ನು ನಾಶ ಮಾಡುತ್ತಾಳೆ. ಜತೆಗೆ ಅವಳು ತನ್ನ ಪರ್ದಾ ಮತ್ತು ಸಮಾಜವನ್ನೂ ನಾಶಪಡಿಸುತ್ತಾಳೆ” ಎಂದು ಅವರು ಕಳೆದ ವರ್ಷ ಸೆಪ್ಟೆಂಬರ್ 22 ರಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು.
ಏಪ್ರಿಲ್ 2023ರಲ್ಲಿ ಮತ್ತೊಂದು ಪೋಸ್ಟ್ ಹಾಕಿದ್ದರು. ಅದರಲ್ಲಿ ಅವರು 1954ರ ವೇಳೆ ಬುರ್ಖಾ ಧರಿಸಿ ರಿಕ್ಷಾದಲ್ಲಿ ಸವಾರಿ ಮಾಡುತ್ತಿರುವ ಮಹಿಳೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ಅವರು “ಸುವರ್ಣ ಕಾಲ” ಎಂದು ಶೀರ್ಷಿಕೆ ಕೊಟ್ಟಿದ್ದರು.
ಇದನ್ನೂ ಓದಿ : Virat Kohli : ಖಲಿಸ್ತಾನಿಗಳಿಗೆ ಬೆಂಬಲ ಕೊಟ್ಟ ನೆಚ್ಚಿನ ಗಾಯಕನನ್ನು ಮುಲಾಜಿಲ್ಲದೇ ಅನ್ಫಾಲೋ ಮಾಡಿದ ವಿರಾಟ್
ಹೆಣ್ಣು ಮಕ್ಕಳ ಶಿಕ್ಷಣ ವಿರೋಧಿ
ನೀವು ವಿಶ್ವವಿದ್ಯಾಲಯಗಳಲ್ಲಿ ಮುಕ್ತವಾಗಿ ಬೆರೆಯುವ ಹುಡುಗಿಯನ್ನು ಮದುವೆಯಾದರೆ, ನಿಮ್ಮ ಮಗುವಿಗೆ ಒಳ್ಳೆಯ ತಾಯಿಯನ್ನು ಪಡೆಯಲು ಸಾಧ್ಯವಿಲ್ಲ” ಎಂದು 20 ವರ್ಷದ ಅವರು ಮತ್ತೊಂದು ಪೋಸ್ಟ್ ಬರೆದಿದ್ದರು (ದಿನಾಂಕ ತಿಳಿದಿಲ್ಲ). ವಿಶೇಷವೆಂದರೆ, 2014 ರಲ್ಲಿ ತಂಜೀಮ್ ಸುಮಾರು 11 ವರ್ಷದವನಾಗಿದ್ದಾಗ, ಬಾಂಗ್ಲಾದೇಶದ ವಿಜಯ ದಿನವನ್ನು (ಡಿಸೆಂಬರ್ 16) ಗೌರವಿಸುವುದಿಲ್ಲ ಎಂದು ಪೋಸ್ಟ್ ಬರೆದಿದ್ದರು.
ತಂಜಿಮ್ಗೆ ಎಚ್ಚರಿಕೆ ನೀಡಿದ್ದೇವೆ: ಯೂನುಸ್
ಬಿಸಿಬಿ ನಿರ್ದೇಶಕ ಜಲಾಲ್ ಯೂನುಸ್ ಅವರು ಈ ವಿಷಯದ ಬಗ್ಗೆ ತಂಜಿಮ್ ಹಸನ್ ಅವರೊಂದಿಗೆ ಮಾತನಾಡಿದ್ದಾರೆ . ತಂಜಿಮ್ಗೆ ಯಾರನ್ನೂ ನೋಯಿಸುವ ಉದ್ದೇಶವನ್ನು ಇರಲಿಲ್ಲ ಎಂದು ಹೇಳಿದರು. ಕ್ರಿಕೆಟಿಗನಿಗೆ ಅವರು ಎಚ್ಚರಿಕೆ ನೀಡಿದ್ದಾರೆ. ಮಂಡಳಿಯು ಅವರ ಮೇಲೆ ನಿಗಾ ಇಡಲಿದೆ. ಅವರು ಇದೇ ರೀತಿ ಮುಂದುವರಿದರೆ ಕಠಿಣ ಕ್ರಮವನ್ನು ಅನುಭವಿಸಬೇಕಾಗುತ್ತದೆ ಎಂದು ಯೂನುಸ್ ಎಚ್ಚರಿಕೆ ನೀಡಿದ್ದಾರೆ.
ಕ್ರಿಕೆಟ್ ಕಾರ್ಯಾಚರಣೆ ಸಮಿತಿಯು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಪರವಾಗಿ ತಂಜಿಮ್ ಸಾಕಿಬ್ ಅವರೊಂದಿಗೆ ಮಾತನಾಡಿದೆ. ಮಾಧ್ಯಮ ಸಮಿತಿ ಕೂಡ ಅವರೊಂದಿಗೆ ಸಂಪರ್ಕದಲ್ಲಿದೆ. ತಂಜಿಮ್ ಅವರ ಫೇಸ್ಬುಕ್ ಪೋಸ್ಟ್ಗಳ ಸುತ್ತಲಿನ ಚರ್ಚೆಗಳ ಬಗ್ಗೆ ನಾವು ಅವರಿಗೆ ಮಾಹಿತಿ ನೀಡಿದ್ದೇವೆ. ಯಾರನ್ನೂ ನೋಯಿಸಲು ನಾನು ಆ ಪೋಸ್ಟ್ ಗಳನ್ನು ಬರೆದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಅವರು ಅದನ್ನು ಸ್ವತಃ ಬರೆದರು ಯಾರನ್ನೂ ಗುರಿಯಾಗಿಸಲಿಲ್ಲ. ಆ ಪೋಸ್ಟ್ನಲ್ಲಿ ಯಾರೊಬ್ಬರ ಭಾವನೆಗಳನ್ನು ನೋಯಿಸಿದ್ದರೆ, ಕ್ಷಮಿಸಿ ಎಂದು ಅವರು ಹೇಳಿಕೊಂಡಿದ್ದಾರೆ ಎಂದು ಯೂನುಸ್ ತಿಳಿಸಿದ್ದಾರೆ.
ಕ್ರಿಕೆಟ್
IND vs AUS 3rd ODI: ರಾಜ್ಕೋಟ್ನ ಪಿಚ್ ರಿಪೋರ್ಟ್ ದಾಖಲೆಯೇ ವಿಚಿತ್ರ
ಈ ಸ್ಟೇಡಿಯಂನಲ್ಲಿ ಇದುವರೆಗೆ ಮೂರು ಏಕದಿನ ಪಂದ್ಯಗಳು ನಡೆದಿವೆ. ಮೂರು ಪಂದ್ಯಗಳಲ್ಲಿಯೂ ಮೊದಲು ಬ್ಯಾಟಿಂಗ್ ನಡೆಸಿದ ತಂಡವೇ ಗೆದ್ದು ಬೀಗಿದೆ.
ರಾಜ್ಕೋಟ್: ಪ್ರವಾಸಿ ಆಸ್ಟ್ರೇಲಿಯಾ ಮತ್ತು ಆತಿಥೇಯ ಭಾರತ ನಡುವಣ ಅಂತಿಮ ಏಕದಿನ ಪಂದ್ಯ ಬುಧವಾರ ರಾಜ್ಕೋಟ್ನ(Rajkot) ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ(Saurashtra Cricket Association Stadium) ನಡೆಯಲಿದೆ. ಮೊದಲೆರಡು ಪಂದ್ಯಗಳಿಗೆ ವಿಶ್ರಾಂತಿ ಪಡೆದಿದ್ದ ಖಾಯಂ ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಅವರು ಈ ಪಂದ್ಯದಲ್ಲಿ ಆಡಲು ಸಜ್ಜಾಗಿದ್ದಾರೆ. ಈಗಾಗಲೇ ಎಲ್ಲ ಆಟಗಾರರು ರಾಜ್ಕೋಟ್ ತಲುಪಿದ್ದಾರೆ. ಈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡದ ಮಾಹಿತಿ ಇಂತಿದೆ.
ಪಿಚ್ ರಿಪೋರ್ಟ್
ರಾಜ್ಕೋಟ್ನ ಪಿಚ್ ಬ್ಯಾಟಿಂಗ್ಗೆ ಹೇಳಿ ಮಾಡಿಸಿದಂತಿದೆ. ಹೋಳ್ಕರ್ ಮೈದಾನದಂತೆ ಇಲ್ಲಿನ ಬೌಂಡರಿ ಲೈನ್ಗಳು ಎರಡೂ ಬದಿಯಲ್ಲಿ ಚಿಕ್ಕದಾಗಿರುವುದರಿಂದ ರನ್ ಮಳೆಯೇ ಹರಿಯುವ ನಿರೀಕ್ಷೆ ಇದೆ. ಹೀಗಾಗಿ ಬೌಲರ್ಗಳು ಶಕ್ತಿ ಮೀರಿ ಪ್ರದರ್ಶನ ತೋರುವ ಅಗತ್ಯವಿದೆ. ಸ್ಪಿನ್ ಬೌಲಿಂಗ್ ಇಲ್ಲಿ ಕೊಂಚ ಪರಿಣಾಮಕಾರಿಯಾಗಿ ಗೋಚರಿಸುವ ಕಾರಣ ಉಭಯ ತಂಡಗಳು ಸ್ಪಿನ್ಗೆ ಹೆಚ್ಚಿನ ಪಾಮುಖ್ಯತೆ ನೀಡಬಹುದು.
ಟಾಸ್ ನಿರ್ಣಾಯಕ
ಈ ಸ್ಟೇಡಿಯಂನಲ್ಲಿ ಇದುವರೆಗೆ ಮೂರು ಏಕದಿನ ಪಂದ್ಯಗಳು ನಡೆದಿವೆ. ಮೂರು ಪಂದ್ಯಗಳಲ್ಲಿಯೂ ಮೊದಲು ಬ್ಯಾಟಿಂಗ್ ನಡೆಸಿದ ತಂಡವೇ ಗೆದ್ದು ಬೀಗಿದೆ. ಈ ಮೈದಾನದಲ್ಲಿ ದಾಖಲಾದ ಗರಿಷ್ಠ ಮೊತ್ತ 340. ಆಸ್ಟ್ರೇಲಿಯಾ ವಿರುದ್ಧವೇ ಭಾರತ ಈ ಮೊತ್ತ ಪೇರಿಸಿತ್ತು. 2020ರಲ್ಲಿ ಈ ಪಂದ್ಯ ನಡೆದಿತ್ತು. ಪಂದ್ಯದಲ್ಲಿ ರಾಹುಲ್ ಅಜೇಯ 80, ವಿರಾಟ್ ಕೊಹ್ಲಿ 78, ರೋಹಿತ್ ಶರ್ಮ 42 ರನ್ ಬಾರಿಸಿ ಮಿಂಚಿದ್ದರು. ಭಾರತ ಈ ಪಂದ್ಯವನ್ನು 36 ರನ್ಗಳಿಂದ ಗೆದ್ದು ಬೀಗಿತ್ತು. ಹೀಗಾಗಿ ಈ ಪಂದ್ಯದಲ್ಲಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಬಹುದು.
ಇದನ್ನೂ ಓದಿ IND vs AUS: ಆಸೀಸ್ ವಿರುದ್ಧದ ಅಂತಿಮ ಪಂದ್ಯಕ್ಕೆ ಶುಭಮನ್ ಗಿಲ್,ಶಾರ್ದೂಲ್ ಅಲಭ್ಯ
ಮುಖಾಮುಖಿ
ಆಸೀಸ್ ಮತ್ತು ಭಾರತ ಇದುವರೆಗೆ ಏಕದಿನ ಮಾದರಿಯಲ್ಲಿ 148 ಬಾರಿ ಮುಖಾಮುಖಿಯಾಗಿವೆ. ಭಾರತ 56 ಪಂದ್ಯ ಗೆದ್ದರೆ, ಆಸೀಸ್ 82 ಪಂದ್ಯಗಳಲ್ಲಿ ಜಯಿಸಿದೆ. ಇದರಲ್ಲಿ ಭಾರತಕ್ಕೆ ಎರಡು ಗೆಲುವು ದಕ್ಕಿದ್ದು ಈ ಸರಣಿಯಲ್ಲಿ. ಈಗಾಗಕೇ ಸರಣಿ ಗೆದ್ದಿರುವ ಭಾರತ ಈ ಪಂದ್ಯದಲ್ಲಿಯೂ ಗೆದ್ದು ಆಸೀಸ್ಗೆ ವೈಟ್ವಾಶ್ ಮುಖಭಂಗ ಮಾಡಿ ವಿಶ್ವಕಪ್ಗೆ ಭರ್ಜರಿ ತಯಾರಿ ನಡೆಸುವ ಯೋಜನೆಯಲ್ಲಿದೆ.
ಹವಾಮಾನ ವರದಿ
ಇಂದೋರ್ ಪಂದ್ಯಕ್ಕೆ ಮಳೆ ಅಡ್ಡಿಪಡಿ ಡಕ್ವರ್ತ್ ನಿಯಮವನ್ನು ಜಾರಿಗೆ ತರಲಾಗಿತ್ತು. ಆದರೆ ಈ ಪಂದ್ಯಕ್ಕೆ ಮಳೆಯ ಯಾವುದೇ ಕಾಟ ಇರದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳು ಸಂಪೂರ್ಣವಾಗಿ ಈ ಪಂದ್ಯವನ್ನು ಕಣ್ತುಂಬಿಕೊಳ್ಳಬಹುದು. ಸಣ್ಣ ಪ್ರಮಾಣದ ಮೋಡ ಕವಿದ ವಾತಾವರಣ ಕಂಡುಬಂದರೂ ಮಳೆ ಮಾತ್ರ ಇರದು.
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಆರ್.ಅಶ್ವಿನ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲಬುಶೇನ್, ಕ್ಯಾಮೆರಾನ್ ಗ್ರೀನ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ಶಾರ್ಟ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಸೀನ್ ಅಬಾಟ್, ಆಡಮ್ ಝಂಪಾ
ಕ್ರಿಕೆಟ್
Vinoo Mankad Trophy: ಅಂಡರ್ 19 ಕರ್ನಾಟಕ ತಂಡಕ್ಕೆ ದ್ರಾವಿಡ್ ಪುತ್ರ ಆಯ್ಕೆ
ರಾಹುಲ್ ದ್ರಾವಿಡ್ (Rahul Dravid) ಅವರ ಪುತ್ರ ಸಮಿತ್ ದ್ರಾವಿಡ್ (Samit Dravid) ಕರ್ನಾಟಕ ಅಂಡರ್ 19 ತಂಡದಲ್ಲಿ (Under 19 Karnataka) ಸ್ಥಾನ ಪಡೆದಿದ್ದಾರೆ.
ಬೆಂಗಳೂರು: ಟೀಮ್ ಇಂಡಿಯಾದ ಮುಖ್ಯ ಕೋಚ್ ಹಾಗೂ ಮಾಜಿ ಆಟಗಾರ ರಾಹುಲ್ ದ್ರಾವಿಡ್ (Rahul Dravid) ಅವರ ಪುತ್ರ ಸಮಿತ್ ದ್ರಾವಿಡ್ (Samit Dravid) ಕರ್ನಾಟಕ ಅಂಡರ್ 19 ತಂಡದಲ್ಲಿ (Under 19 Karnataka) ಸ್ಥಾನ ಪಡೆದಿದ್ದಾರೆ. ವಿನೂ ಮಂಕಡ್(Vinoo Mankad Trophy) ಟೂರ್ನಿಗಾಗಿ ಆಯ್ಕೆ ಮಾಡಲಾದ ಕರ್ನಾಟಕ 15 ಸದಸ್ಯರ ತಂಡದಲ್ಲಿ ಸಮಿತ್ ಸ್ಥಾನ ಪಡೆದಿದ್ದಾರೆ. ಜತೆಗೆ ತಂದೆಯಂತೆ ಕ್ರಿಕೆಟ್ನಲ್ಲಿ ಶ್ರೇಷ್ಠ ಸಾಧನೆ ಮಾಡಲು ಮುಂದಾಗಿದ್ದಾರೆ.
ತಂದೆಯಂತೆ ಕ್ರಿಕೆಟ್ ಹಾದಿ ಹಿಡಿದ ಮಕ್ಕಳು
ದ್ರಾವಿಡ್ ಅವರ ಇಬ್ಬರು ಮಕ್ಕಳು ಕೂಡ ತಂದೆಯಂತೆ ಕ್ರಿಕೆಟ್ ಹಾದಿಯನ್ನೇ ಹಿಡಿದಿದ್ದಾರೆ. ಹಿರಿಯ ಮಗ ಸಮಿತ್ ಹಾಗೂ ಕಿರಿಯ ಮಗ ಅನ್ವಯ್ ಈಗಾಗಲೇ ಕ್ರಿಕೆಟ್ನಲ್ಲಿ ಕೆಲ ಸಾಧನೆಯನ್ನು ಮಾಡಿ ಮಿಂಚಿದ್ದಾರೆ. ಸಮಿತ್ ಈ ಹಿಂದೆ ಅಂಡರ್-14 ತಂಡದಲ್ಲಿ ಆಡಿದ್ದರು. ಈ ಬಾರಿಯ ವಿನೂ ಮಂಕಡ್ (Vinoo Mankad) ಟೂರ್ನಿ ಅಕ್ಟೋಬರ್ 12 ರಿಂದ ಆರಂಭವಾಗಲಿದ್ದು, ಕರ್ನಾಟಕ ತಂಡವನ್ನು ಧೀರಜ್ ಗೌಡ ಮುನ್ನಡೆಸಲಿದ್ದಾರೆ.
ಇದೇ ವರ್ಷ ಜನವರಿಯಲ್ಲಿ ನಡೆದಿದ್ದ 14 ವರ್ಷದೊಳಗಿನವರ ಅಂತರ ವಲಯ ಟೂರ್ನಿಯಲ್ಲಿ ಅನ್ವಯ್ ದ್ರಾವಿಡ್ ಅಂಡರ್ 14 ಕರ್ನಾಟಕ ತಂಡದ ನಾಯಕರಾಗಿದ್ದರು. ಇದಲ್ಲದೆ 2019-20ರ ಅಂತರ ವಲಯ ಪಂದ್ಯಗಳಲ್ಲಿ ಅನ್ವಯ್ 2 ದ್ವಿಶತಕ ಹೊಡೆದು ಮಿಂಚಿದ್ದರು. ಅನ್ವಯ್ ಮತ್ತು ಸಮಿತ್ ಹಂತ ಹಂತವಾಗಿ ಕ್ರಿಕೆಟ್ನಲ್ಲಿ ಬೆಳೆದು ಮುಂದೊಂದು ದಿನ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡರು ಅಚ್ಚರಿಯಿಲ್ಲ.
ವಿಶ್ವಕಪ್ ಬಳಿಕ ಕೋಚಿಂಗ್ ಹುದ್ದೆಗೆ ರಾಜೀನಾಮೆ
ಏಕದಿನ ವಿಶ್ವ ಕಪ್(ICC World Cup) ಬಳಿಕ ರಾಹುಲ್ ದ್ರಾವಿಡ್ ಕೋಚಿಂಗ್ ಹುದ್ದೆಯಲ್ಲಿ(Team India Coach) ಮುಂದುವರಿಯುವುದು ಅನುಮಾನ ಎನ್ನಲಾಗಿದೆ. ವಿಶ್ವ ಕಪ್ ಬಳಿಕ ದ್ರಾವಿಡ್ ಅವರ ಗುತ್ತಿಗೆ ಅವಧಿ ಮುಕ್ತಾಯವಾಗಲಿದೆ. ಹೀಗಾಗಿ ಇದಾದ ಬಳಿಕ ಅವರು ಗುತ್ತಿಗೆ ಅವಧಿ ಮುಂದುವರಿಯುವ ಸಾಧ‍್ಯತೆ ಕಡಿಮೆ ಎನ್ನಲಾಗಿದೆ.
ರಾಹುಲ್ ದ್ರಾವಿಡ್ ಕೋಚ್ ಆದಾಗ ಅವರ ಮೇಲೆ ಅತಿಯಾದ ನಿರೀಕ್ಷೆಯಿತ್ತು. ಆದರೆ ನಿರೀಕ್ಷೆಗೆ ತಕ್ಕ ಪ್ರದರ್ಶನ ಅವರ ಕೋಚಿಂಗ್ ಅವಧಿಯಲ್ಲಿ ಕಂಡು ಬರಲಿಲ್ಲ. ಹೀಗಾಗಿ ಅವರ ಕೋಚಿಂಗ್ ಬಗ್ಗೆ ಹಲವು ಟೀಕೆಗಳು ಕೂಡ ವ್ಯಕ್ತವಾಗಿತ್ತು. ರಾಹುಲ್ ದ್ರಾವಿಡ್ ಅವರು ಭಾರತ ತಂಡದ ಹೆಡ್ ಕೋಚ್ ಆದ ಬಳಿಕ ನಿರೀಕ್ಷಿತ ಯಶಸ್ಸು ತಂಡಕ್ಕೆ ಸಿಕ್ಕಿಲ್ಲ. ಅಂಡರ್-19 ಕ್ರಿಕೆಟ್ ಮಾರ್ಗದರ್ಶನದಲ್ಲಿ ಅವರಿಗೆ ಸಿಕ್ಕಷ್ಟು ಯಶಸ್ಸು ಸೀನಿಯರ್ಸ್ ತಂಡದಲ್ಲಿ ಸಿಕ್ಕಿಲ್ಲ.
ಇದನ್ನೂ ಓದಿ Rahul Dravid: ವಿಶ್ವ ಕಪ್ ಬಳಿಕ ಭಾರತ ತಂಡಕ್ಕೆ ನೂತನ ಕೋಚ್ ಆಯ್ಕೆ!
ದ್ರಾವಿಡ್ ಮಾರ್ಗದರ್ಶನದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಾಗ ಭಾರತ ಟೆಸ್ಟ್ ಸರಣಿಯನ್ನು ಸೋತಿತ್ತು. ಇದಾದ ಬಳಿಕ ಏಷ್ಯಾಕಪ್ 2022, ಐಸಿಸಿ ಟಿ20 ವಿಶ್ವಕಪ್, ಐಸಿಸಿ ವಿಶ್ವಕಪ್ ಟೆಸ್ಟ್ ಪಂದ್ಯದಲ್ಲಿಯೂ ಕಪ್ ಗೆಲ್ಲಲು ತಂಡ ವಿಫಲವಾಗಿತ್ತು. ಹೀಗಾಗಿ ದ್ರಾವಿಡ್ ಅವರು ಏಕದಿನ ವಿಶ್ವ ಕಪ್ ಬಳಿಕ ಕೋಚಿಂಗ್ ಹುದ್ದೆಯಲ್ಲಿ ಮುಂದುವರಿಯುವುದು ಅನುಮಾನ. ದ್ರಾವಿಡ್ ಮಾರ್ಗದರ್ಶನದಲ್ಲಿ ಈ ಬಾರಿ ಭಾರತ ವಿಶ್ವಕಪ್ ಗೆಲ್ಲುವಂತಾಗಲಿ ಎನ್ನುವುದು ದ್ರಾವಿಡ್ ಮತ್ತು ಟೀಮ್ ಇಂಡಿಯಾ ಅಭಿಮಾನಿಗಳ ಆಶಯವಾಗಿದೆ.
ಕ್ರಿಕೆಟ್
Kapil Dev Kidnap: ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಕಿಡ್ನಾಪ್; ವಿಡಿಯೊ ವೈರಲ್
ಕಪಿಲ್ ದೇವ್ ಅವರ ಅಪಹರಣದ(Kapil Dev Kidnap) ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್(viral video) ಆಗುತ್ತಿದ್ದು, ಅವರ ಅಭಿಮಾನಿಗಳು ಆತಂಕ ಪಡುವಂತಾಗಿದೆ.
ಮುಂಬಯಿ: ಭಾರತ ಕ್ರಿಕೆಟ್ ತಂಡಕ್ಕೆ ಮೊದಲ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್ ಅವರ ಅಪಹರಣದ(Kapil Dev Kidnap) ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್(viral video) ಆಗುತ್ತಿದ್ದು, ಅವರ ಅಭಿಮಾನಿಗಳು ಆತಂಕ ಪಡುವಂತಾಗಿದೆ. ಕಪಿಲ್ ದೇವ್(Kapil Dev) ಅವರನ್ನು ಕಿಡ್ನಾಪ್ ಮಾಡುತ್ತಿರುವ ವಿಡಿಯೊವನ್ನು ಮಾಜಿ ಆಟಗಾರ ಗೌತಮ್ ಗಂಭಿರ್(Gautam Gambhir) ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಇಬ್ಬರು ಕಪಿಲ್ ದೇವ್ ಅವರ ಕೈಗಳನ್ನು ದಾರದಿಂದ ಹಿಂಭಾಗಕ್ಕೆ ಕಟ್ಟಿದ್ದು, ಕಿರುಚಾಡದಂತೆ ಬಾಯಿಗೆ ಬಟ್ಟೆ ತುರುಕಿ ಕಟ್ಟಡವೊಂದರ ಒಳಗಡೆಗೆ ಎಳೆದುಕೊಂಡು ಹೋಗುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಈ ವೇಳೆ ಕಪಿಲ್ ಸಹಾಯಕ್ಕಾಗಿ ಹಿಂತಿರುಗಿ ನೋಡುವ ದೃಶ್ಯವನ್ನೂ ಕಾಣಬಹುದಾಗಿದೆ.
ಗೌತಮ್ ಗಂಭೀರ್ ಅವರು ಈ ವಿಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡು ಆತಂಕ ಹೊರಹಾಕಿದ್ದಾರೆ. “ಇದು ಕಪಿಲ್ ಪಾಜಿ ಅಲ್ಲ ಎಂದು ಭಾವಿಸುವೆ, ಅವರು ಚೆನ್ನಾಗಿದ್ದಾರೆ ಎಂದುಕೊಂಡಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಅಸಲಿಗೆ ಈ ವಿಡಿಯೊ ಹಿಂದಿರುವ ಕಾರಣ ಬೇರೆಯೇ ಇದೆ. ಇದೊಂದು ಜಾಹಿರಾತಿಗಾಗಿ ಚಿತ್ರಿಸಿದ ದೃಶ್ಯವೊಂದರ ತುಣಕಾಗಿದೆ.
ಆತಂಕಪಡಬೇಕಿಲ್ಲ
ಈ ಅಪಹರಣ ದೃಶ್ಯವನ್ನು ಜಾಹೀರಾತು ಉದ್ದೇಶಕ್ಕಾಗಿ ತೆಗೆದಿದ್ದು ಪ್ರಚಾರದ ಗಿಮಿಕ್ಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿರುವ ಸಾಧ್ಯತೆ ಇದೆ. ಕಪಿಲ್ ಅಪಹರಣ ಕುರಿತು ಭಾರಿ ಪ್ರಚಾರ ಪಡೆಯಲು ಈ ರೀತಿ ಮಾಡಿರುವ ಸಾಧ್ಯತೆ ಹೆಚ್ಚು.
ವಿಶ್ವಕಪ್ ಗೆಲ್ಲಲು ಅದೃಷ್ಟ ಕೈಹಿಡಿಯಬೇಕು
ಸಂಪೂರ್ಣವಾಗಿ ಭಾರತದ ಆತಿಥ್ಯದಲ್ಲಿ ಇದೇ ಮೊದಲ ಬಾರಿಗೆ ನಡೆಯುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್ 5ರಿಂದ ಆರಂಭಗೊಳ್ಳಲಿದೆ. ಭಾರತದ ವಿಶ್ವಕಪ್ ಭವಿಷ್ಯವನ್ನು ಕಪಿಲ್ ಅವರು ನುಡಿದಿದ್ದು ಎಲ್ಲವೂ ಅದೃಷ್ಟವನ್ನು ಅವಲಂಭಿಸಿದ್ದರಿಂದ ಭಾರತ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡ ವೆಂದು ಹೇಳಲು ಬಯಸುವುದಿಲ್ಲ ಎಂದು ಹೇಳಿದ್ದರು.
ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ಒಂದು ವೇಳೆ ನಮ್ಮ ತಂಡ ಅಗ್ರ ನಾಲ್ಕರೊಳಗಿನ ಹಂತಕ್ಕೆ ಬಂದರೆ ಮತ್ತೆ ಎಲ್ಲವೂ ಅದೃಷ್ಟದ ಬಲದಿಂದ ನಡೆಯುತ್ತದೆ. ಅಗ್ರ ನಾಲ್ಕರೊಳಗಿನ ಹಂತಕ್ಕೆ ಬರುವುದು ಅತ್ಯಂತ ಪ್ರಮುಖವಾಗಿದೆ. ಭಾರತ ತಂಡ ಪ್ರಶಸ್ತಿ ಗೆಲ್ಲಲು ಸಿದ್ಧವಾಗಿದೆ. ಏಷ್ಯಾ ಕಪ್‌ನಲ್ಲಿ ತೋರಿದ ಅದ್ಭುತ ನಿರ್ವಹಣೆ ಇಲ್ಲಿಯೂ ಮುಂದುವರಿದರೆ ಕಪ್ಗೆಲ್ಲುವ ಸಾಧ್ಯತೆ ಇದೆ. ಜತೆಗೆ ಅದೃಷ್ಟವೂ ಕೈ ಹಿಡಿಯಬೇಕು” ಎಂದಿದ್ದರು.
ಇದನ್ನೂ ಓದಿ Viral News : ಕಿರುತೆರೆ ನಟಿ ಕಿರಿಕ್; ಕೆಲಸ ಕಳೆದುಕೊಂಡ ಓಲಾ ಆಟೋ ಡ್ರೈವರ್!
10 ತಾಣಗಳಲ್ಲಿ ಪಂದ್ಯವಾಳಿ
ವಿಶ್ವಕಪ್ನಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿದ್ದು 10 ತಂಡಗಳು ಸೆಣಸಾಟ ನಡೆಸಲಿವೆ. ದೇಶದ ಪ್ರಮುಖ 10 ತಾಣಗಳಲ್ಲಿ ಈ ಪಂದ್ಯ ನಡೆಯಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿವೆ. ಭಾರತ ತಂಡ ತನ್ನ ಮೊದಲ ಲೀಗ್ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8 ರಂದು ಆಡಲಿದೆ. ಅಕ್ಟೋಬರ್ 14 ರಂದು ಭಾರತ ತನ್ನ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ ಈ ಪಂದ್ಯ ಕಣ್ತುಬಿಂಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ.
ಕ್ರಿಕೆಟ್
Pakistan team: ಕೊನೆಗೂ ಬಗೆಹರಿದ ಪಾಕ್ ತಂಡದ ವೀಸಾ ಸಮಸ್ಯೆ; ಬುಧವಾರ ಭಾರತ ಪ್ರಯಾಣ
“ಪಾಕಿಸ್ತಾನ ಮತ್ತು ಕಿವೀಸ್ ನಡುವಣ ಅಭ್ಯಾಸ ಪಂದ್ಯವು ಭದ್ರತಾ ಏಜೆನ್ಸಿಗಳ ಸಲಹೆಯಂತೆ ಪ್ರೇಕ್ಷಕರಿಲ್ಲದೆ ಆಡಿಸಲಾಗುವುದು. ಈ ಪಂದ್ಯಕ್ಕಾಗಿ ಟಿಕೆಟ್ ಖರೀದಿಸಿದ ಪ್ರೇಕ್ಷಕರಿಗೆ ಹಣವನ್ನು ಸಂಪೂರ್ಣ ಮರುಪಾವತಿ ಮಾಡಲಾಗುವುದು” ಎಂದು ಬಿಸಿಸಿಐ ಪ್ರಕಟಿಸಿದೆ.
ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್(ICC World Cup) ಟೂರ್ನಿ ಆಡಲು ಭಾರತಕ್ಕೆ ಪ್ರಯಾಣ ಬೆಳೆಸಲು ಪಾಕಿಸ್ತಾನ ತಂಡಕ್ಕೆ(Pakistan team) ಕೊನೆಗೂ ವೀಸಾ ದೊರೆತಿದೆ. ವೀಸಾ ಸಮಸ್ಯೆಯಿಂದ ಭಾರತಕ್ಕೆ ಪ್ರಯಾಣಿಸಲು ಮತ್ತು ವಿಶ್ವಕಪ್ಗೆ ಪೂರ್ವ ತಯಾರಿ ನಡೆಸಲು ಸರಿಯಾದ ವ್ಯವಸ್ಥೆ ಇಲ್ಲವೆಂದು ಹೇಳಿ ಪಿಸಿಬಿ ಜಾಗತಿಕ ಸಂಸ್ಥೆಯೊಂದಿಗೆ ಕಳವಳ ವ್ಯಕ್ತಪಡಿಸಿತ್ತು. ಕೊನೆಗೆ ಐಸಿಸಿ ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಬಗೆಹರಿಸಿದ್ದು ಪಾಕಿಸ್ತಾನ ಕ್ರಿಕೆಟ್ ತಂಡದ ಸದಸ್ಯರಿಗೆ ಭಾರತೀಯ ವೀಸಾಗಳನ್ನು ನೀಡಲಾಗಿದೆ ಎಂದು ಖಚಿತಪಡಿಸಿದೆ.
ರಾಜತಾಂತ್ರಿಕವಾಗಿ ಭಾರತ ಮತ್ತು ಪಾಕ್ ಸಂಬಂಧ ಮೊದಲಿನಿಂದಲೇ ಸರಿಯಿಲ್ಲ. ಹೀಗಾಗಿ ಉಭಯ ದೇಶಗಳ ಪ್ರಯಾಣಕ್ಕೆ ವೀಸಾ ಪಡೆಯಲು ಕೂಡ ಹಲವು ನಿರ್ಬಂಧ ಮತ್ತು ಅನೇಕ ಪ್ರಕ್ರಿಯೆಗಳು ಕೂಡ ಇವೆ. ಹೀಗಾಗಿ ಪಾಕ್ಗೆ ಹಿನ್ನಡೆಯಾಗಿತ್ತು. ವಿಶ್ವಕಪ್ ಆಡಲಿರುವ 10 ತಂಡಗಳ ಪೈಕಿ 9 ದೇಶಗಳಿಗೆ ಈ ಮೊದಲೇ ವೀಸಾ ಲಭಿಸಿತ್ತು. ಆದರೆ ಪಾಕ್ ತಂಡಕ್ಕೆ ಮಾತ್ರ ವೀಸಾ ಸಿಕ್ಕಿರಲಿಲ್ಲ. ಇದೀಗ ಪಾಕ್ಗೂ ವೀಸಾ ಲಭಿಸಿದ್ದು ಬುಧವಾರ ಭಾರತಕ್ಕೆ ಆಗಮಿಸಲಿದೆ.
ಪ್ರೇಕ್ಷಕರಿಗಿಲ್ಲ ಅವಕಾಶ
ಪಾಕಿಸ್ತಾನ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಹೈದರಾಬಾದ್ನಲ್ಲಿ ಸೆಪ್ಟೆಂಬರ್ 29 ರಂದು ಕಿವೀಸ್ ವಿರುದ್ಧ ಆಡಲಿದೆ. ಆದರೆ ಈ ಪಂದ್ಯವನ್ನು ಖಾಲಿ ಸ್ಟೇಡಿಯಂನಲ್ಲಿ ನಡೆಸಲಾಗುವುದು ಎಂದು ಬಿಸಿಸಿಐ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ. ಧಾರ್ಮಿಕ ಹಬ್ಬಗಳ ಹಿನ್ನೆಲೆಯಲ್ಲಿ ಪ್ರವಾಸಿ ತಂಡಗಳಿಗೆ ಸಂಪೂರ್ಣ ಭದ್ರತೆಯನ್ನು ಒದಗಿಸಲು ಹೈದರಾಬಾದ್ ಪೊಲೀಸರು ಹಿಂದೇಟು ಹಾಕಿದ್ದರು .ಈ ವಿಚಾರವನ್ನು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ಗೆ ಇಲ್ಲಿನ ಪೊಲೀಸರು ಮಾಹಿತಿಯನ್ನು ನೀಡಿದ್ದರು. ಹೀಗಾಗಿ ಈ ಪಂದ್ಯ ಖಾಲಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಟಿಕೆಟ್ ಹಣ ಮರುಪಾವತಿ
“ಪಾಕಿಸ್ತಾನ ಮತ್ತು ಕಿವೀಸ್ ನಡುವಣ ಅಭ್ಯಾಸ ಪಂದ್ಯವು ಭದ್ರತಾ ಏಜೆನ್ಸಿಗಳ ಸಲಹೆಯಂತೆ ಪ್ರೇಕ್ಷಕರಿಲ್ಲದೆ ಆಡಿಸಲಾಗುವುದು. ಈ ಪಂದ್ಯಕ್ಕಾಗಿ ಟಿಕೆಟ್ ಖರೀದಿಸಿದ ಪ್ರೇಕ್ಷಕರಿಗೆ ಹಣವನ್ನು ಸಂಪೂರ್ಣ ಮರುಪಾವತಿ ಮಾಡಲಾಗುವುದು” ಎಂದು ಬಿಸಿಸಿಐ ಪ್ರಕಟಿಸಿದೆ.
ಇದನ್ನೂ ಓದಿ ICC World Cup: ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಟಾಪ್ 5 ಬೌಲರ್ಗಳು
ICC CWC 2023 warm-up match update.
— BCCI (@BCCI) September 25, 2023
The warm-up match between New Zealand and Pakistan scheduled to take place in Hyderabad on 29th September will now take place behind closed doors as per the advice of the local security agencies.
More details here – https://t.co/eKoFEZ4u94… pic.twitter.com/24PwvIkg7m
ಪಾಕಿಸ್ತಾನ ತಂಡ ಅಕ್ಟೋಬರ್ 6ರಂದು ನೆದರ್ಲೆಂಡ್ಸ್ ವಿರುದ್ಧ ಆಡುವ ಮೂಲಕ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಈಗಾಗಲೇ ಪಾಕ್ ಈ ಮಹತ್ವದ ಟೂರ್ನಿಗೆ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಬಾಬರ್ ಅಜಂ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಟಾರ್ ಯುವ ವೇಗಿ ನಸೀಮ್ ಶಾ ಅವರು ಏಷ್ಯಾಕಪ್ನಲ್ಲಿ ಗಾಯಗೊಂಡ ಕಾರಣ ಈ ಟೂರ್ನಿಯಿಂದ ಹೊರಬಿದ್ದಾರೆ.
ಪಾಕಿಸ್ತಾನ ತಂಡ
ಬಾಬರ್ ಅಜಂ (ನಾಯಕ), ಶದಾಬ್ ಖಾನ್ (ಉಪ ನಾಯಕ), ಫಖರ್ ಜಮಾನ್, ಇಮಾಮ್ ಉಲ್ ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್, ಇಫ್ತಿಕಾರ್ ಅಹ್ಮದ್, ಅಘಾ ಸಲ್ಮಾನ್, ಸೌದ್ ಶಕೀಲ್, ಮೊಹಮ್ಮದ್ ನವಾಜ್, ಶಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಹಸನ್ ಅಲಿ, ಉಸಾಮ ಮಿರ್, ಮೊಹಮ್ಮದ್ ವಸೀಂ. ಮೀಸಲು ಆಟಗಾರು: ಅಬ್ರಾರ್ ಅಹ್ಮದ್, ಜಮಾನ್ ಖಾನ್ ಹಾಗೂ ಮೊಹಮ್ಮದ್ ಹ್ಯಾರಿಸ್.
-
Live News4 hours ago
Bangalore Bandh Live: ಬೆಂಗಳೂರು ಬಂದ್ ಆರಂಭ; ಎಲ್ಲೆಲ್ಲಿ ಏನೇನಾಗ್ತಿದೆ?
-
ವಿದೇಶ20 hours ago
Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?
-
ಕರ್ನಾಟಕ18 hours ago
PSI Scam : ಪಿಎಸ್ಐ ನೇಮಕಾತಿ ಅಕ್ರಮ; ಕೊನೆಗೂ ಅಮೃತ್ ಪಾಲ್ಗೆ ಜಾಮೀನು
-
ದೇಶ13 hours ago
Swara Bhasker: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸ್ವರಾ ಭಾಸ್ಕರ್, ಮಗಳ ಹೆಸರು ‘ರಾಬಿಯಾ’
-
ಕರ್ನಾಟಕ14 hours ago
Weather Update: ಭಾರತದಲ್ಲಿ ಮುಗೀತು ಮಳೆಗಾಲ! ಎಷ್ಟು ಮಳೆ ಕೊರತೆ, ಬರಗಾಲ ಪಕ್ಕಾ?
-
ದೇಶ11 hours ago
Lawyer Sara Sunny: ಸುಪ್ರೀಂ ಕೋರ್ಟ್ನಲ್ಲಿ ಮೊದಲ ಬಾರಿಗೆ ಸಂಜ್ಞೆ ಭಾಷೆಯಲ್ಲಿ ವಾದ ಮಂಡನೆ! ಇತಿಹಾಸ ಸೃಷ್ಟಿಸಿದ ಸಾರಾ
-
South Cinema17 hours ago
Darshan Thoogudeepa: ನಟ ದರ್ಶನ್ ವಿರುದ್ಧ ಮಂಡ್ಯದಲ್ಲಿ ರೈತರ ಆಕ್ರೋಶ; ಕ್ಷಮೆಗೆ ಆಗ್ರಹ
-
ಅಂಕಣ21 hours ago
ವಿಧಾನಸೌಧ ರೌಂಡ್ಸ್: ಜೆಡಿಎಸ್ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ; ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ?