ಢಾಕಾ : ಪ್ರವಾಸಿ ಭಾರತ ತಂಡದ ವಿರುದ್ಧದ ಎರಡನೇ ಪಂದ್ಯಕ್ಕೆ (INDvsBAN) ಬಾಂಗ್ಲಾದೇಶ ತಂಡ ಭಾನುವಾರ ಪ್ರಕಟಗೊಂಡಿದೆ. ಮೊದಲ ಪಂದ್ಯ ಮುಕ್ತಾಯದ ಬೆನ್ನಲ್ಲೇ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತಂಡವನ್ನು ಪ್ರಕಟಿಸಿದೆ. ಹಿರಿಯ ಹಾಗೂ ಅನುಭವಿ ಆಲ್ರೌಂಡರ್ ಶಕಿಬ್ ಅಲ್ ಹಸನ್ ಅಲಭ್ಯರಾಗಿದ್ದು, ಯುವ ಆಲ್ರೌಂಡರ್ ನಸುಮ್ ಅಹ್ಮದ್ಗೆ ಮೊದಲ ಬಾರಿಗೆ ತಂಡದಿಂದ ಕರೆ ಹೋಗಿದೆ.
ಸರಣಿಯ ಮೊದಲ ಪಂದ್ಯದ ವೇಳೆ ಶಕಿಬ್ ಅಲ್ ಹಸನ್ ಅವರು ಭುಜದ ಗಾಯಕ್ಕೆ ಒಳಗಾಗಿದ್ದರು. ಹೀಗಾಗಿ ಎರಡನೇ ಇನಿಂಗ್ಸ್ನಲ್ಲಿ ಅವರಿಗೆ ಬೌಲಿಂಗ್ ಮಾಡಲು ಸಾಧ್ಯವಾಗಿರಲಿಲ್ಲ. ಅವರು ಮೊದಲ ಪಂದ್ಯ ಮುಗಿದ ತಕ್ಷಣ ಚಿಕಿತ್ಸೆಗಾಗಿ ತೆರಳಿದ್ದು ಹೀಗಾಗಿ ಇನ್ನೂ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವಾಡದ ನಸುಮ್ಗೆ ಅವಕಾಶ ನೀಡಲಾಗಿದೆ. ನಸುಮ್ 26 ಟಿ20 ಪಂದ್ಯ ಹಾಗೂ ನಾಲ್ಕು ಏಕ ದಿನ ಪಂದ್ಯಗಳಲ್ಲಿ ಆಡಿದ್ದಾರೆ.
ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಎರಡನೇ ಪಂದ್ಯ ಡಿಸೆಂಬರ್ 22ರಿಂದ 26ರವರೆಗೆ ಮೀರ್ಪುರದ ಶೇರ್ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆಯಲಿದೆ. ಬಾಂಗ್ಲಾದೇಶ ಮತ್ತು ಭಾರತ ನಡುವಿನ ಮೊದಲ ಪಂದ್ಯ ಚತ್ತೋಗ್ರಾಮ್ನಲ್ಲಿ ನಡೆದಿದ್ದು, ಭಾರತ 188 ರನ್ಗಳ ಭರ್ಜರಿ ಜಯ ದಾಖಲಿಸಿದ್ದು, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಎರಡನೇ ಟೆಸ್ಟ್ ಪಂದ್ಯಕ್ಕೆ ತಂಡ: ಮಹ್ಮುದುಲ್ ಹಸನ್ ಜಾಯ್, ನಜ್ಮುಲ್ ಹೊಸೈನ್ ಶಾಂಟೊ, ಮೊಮಿನುಲ್ ಹಕ್, ಯಾಸಿರ್ ಅಲಿ, ಮುಷ್ಪಿಕರ್ ರಹೀಮ್, ಶಕಿಬ್ ಅಲ್ ಹಸನ್ (ಸಿ), ಲಿಟ್ಟನ್ ದಾಸ್, ನೂರುಲ್ ಹಸನ್, ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಟಸ್ಕಿನ್ ಅಹ್ಮದ್, ಖಲೀದ್ ಅಹ್ಮದ್, ನಸುಮ್ ಅಹ್ಮದ್, ರಾಜಾರ್ ಹಸನ್, ರೆಜಾರ್ ಹಸನ್.