INDvsBAN | ಎರಡನೇ ಟೆಸ್ಟ್​ ಪಂದ್ಯಕ್ಕೆ ಬಾಂಗ್ಲಾ ತಂಡ ಪ್ರಕಟ; ಶಕಿಬ್ ಅಲಭ್ಯ, ಯುವ ಆಟಗಾರನ ಸೇರ್ಪಡೆ - Vistara News

ಕ್ರಿಕೆಟ್

INDvsBAN | ಎರಡನೇ ಟೆಸ್ಟ್​ ಪಂದ್ಯಕ್ಕೆ ಬಾಂಗ್ಲಾ ತಂಡ ಪ್ರಕಟ; ಶಕಿಬ್ ಅಲಭ್ಯ, ಯುವ ಆಟಗಾರನ ಸೇರ್ಪಡೆ

ಪ್ರವಾಸಿ ಭಾರತ ತಂಡದ ವಿರುದ್ಧದ ಎರಡನೇ ಟೆಸ್ಟ್​​ಗೆ (INDvsBAN) ಬಾಂಗ್ಲಾದೇಶ ತಂಡ ಹೊಸ ತಂಡವನ್ನು ಪ್ರಕಟಿಸಿದೆ.

VISTARANEWS.COM


on

INDvsBAN
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಢಾಕಾ : ಪ್ರವಾಸಿ ಭಾರತ ತಂಡದ ವಿರುದ್ಧದ ಎರಡನೇ ಪಂದ್ಯಕ್ಕೆ (INDvsBAN) ಬಾಂಗ್ಲಾದೇಶ ತಂಡ ಭಾನುವಾರ ಪ್ರಕಟಗೊಂಡಿದೆ. ಮೊದಲ ಪಂದ್ಯ ಮುಕ್ತಾಯದ ಬೆನ್ನಲ್ಲೇ ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿ ತಂಡವನ್ನು ಪ್ರಕಟಿಸಿದೆ. ಹಿರಿಯ ಹಾಗೂ ಅನುಭವಿ ಆಲ್​ರೌಂಡರ್​ ಶಕಿಬ್​ ಅಲ್​ ಹಸನ್​ ಅಲಭ್ಯರಾಗಿದ್ದು, ಯುವ ಆಲ್​ರೌಂಡರ್​ ನಸುಮ್​ ಅಹ್ಮದ್​​ಗೆ ಮೊದಲ ಬಾರಿಗೆ ತಂಡದಿಂದ ಕರೆ ಹೋಗಿದೆ.

ಸರಣಿಯ ಮೊದಲ ಪಂದ್ಯದ ವೇಳೆ ಶಕಿಬ್​ ಅಲ್​ ಹಸನ್ ಅವರು ಭುಜದ ಗಾಯಕ್ಕೆ ಒಳಗಾಗಿದ್ದರು. ಹೀಗಾಗಿ ಎರಡನೇ ಇನಿಂಗ್ಸ್​ನಲ್ಲಿ ಅವರಿಗೆ ಬೌಲಿಂಗ್​ ಮಾಡಲು ಸಾಧ್ಯವಾಗಿರಲಿಲ್ಲ. ಅವರು ಮೊದಲ ಪಂದ್ಯ ಮುಗಿದ ತಕ್ಷಣ ಚಿಕಿತ್ಸೆಗಾಗಿ ತೆರಳಿದ್ದು ಹೀಗಾಗಿ ಇನ್ನೂ ಅಂತಾರಾಷ್ಟ್ರೀಯ ಟೆಸ್ಟ್​ ಪಂದ್ಯವಾಡದ ನಸುಮ್​ಗೆ ಅವಕಾಶ ನೀಡಲಾಗಿದೆ. ನಸುಮ್​ 26 ಟಿ20 ಪಂದ್ಯ ಹಾಗೂ ನಾಲ್ಕು ಏಕ ದಿನ ಪಂದ್ಯಗಳಲ್ಲಿ ಆಡಿದ್ದಾರೆ.

ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಎರಡನೇ ಪಂದ್ಯ ಡಿಸೆಂಬರ್​ 22ರಿಂದ 26ರವರೆಗೆ ಮೀರ್​ಪುರದ ಶೇರ್​ ಬಾಂಗ್ಲಾ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆಯಲಿದೆ. ಬಾಂಗ್ಲಾದೇಶ ಮತ್ತು ಭಾರತ ನಡುವಿನ ಮೊದಲ ಪಂದ್ಯ ಚತ್ತೋಗ್ರಾಮ್​ನಲ್ಲಿ ನಡೆದಿದ್ದು, ಭಾರತ 188 ರನ್​ಗಳ ಭರ್ಜರಿ ಜಯ ದಾಖಲಿಸಿದ್ದು, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಎರಡನೇ ಟೆಸ್ಟ್​ ಪಂದ್ಯಕ್ಕೆ ತಂಡ: ಮಹ್ಮುದುಲ್ ಹಸನ್ ಜಾಯ್, ನಜ್ಮುಲ್ ಹೊಸೈನ್ ಶಾಂಟೊ, ಮೊಮಿನುಲ್ ಹಕ್, ಯಾಸಿರ್ ಅಲಿ, ಮುಷ್ಪಿಕರ್​ ರಹೀಮ್, ಶಕಿಬ್ ಅಲ್ ಹಸನ್ (ಸಿ), ಲಿಟ್ಟನ್ ದಾಸ್, ನೂರುಲ್ ಹಸನ್, ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಟಸ್ಕಿನ್ ಅಹ್ಮದ್, ಖಲೀದ್ ಅಹ್ಮದ್, ನಸುಮ್​ ಅಹ್ಮದ್​, ರಾಜಾರ್ ಹಸನ್, ರೆಜಾರ್ ಹಸನ್.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Team India Coach Applications: ಭಾರತ ತಂಡದ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ ಸಾವಿರಾರು ಅಭಿಮಾನಿಗಳು; ಪಜೀತಿಗೆ ಸಿಲುಕಿದ ಬಿಸಿಸಿಐ

Team India Coach Applications: ಸೋಮವಾರವಷ್ಟೇ ಬಿಸಿಸಿಐ(BCCI) ತನ್ನ ಅಧಿಕೃತ ಪ್ರಕಟನೆ ಮೂಲಕ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಅರ್ಜಿ ಸಲ್ಲಿಸಲು ಮೇ 27 ಅಂತಿಮ ಗಡುವಾಗಿದೆ. ಬಿಸಿಸಿಐ ಆನ್​ಲೈನ್​ ಮೂಲಕ ಈ ಅರ್ಜಿ ಆಹ್ವಾನಿಸಿ ಇದೀಗ ಪಜೀತಿಗೆ ಸಿಲುಕಿದೆ. ಹೌದು, ಅನೇಕ ಕ್ರಿಕೆಟ್​ ಅಭಿಮಾನಿಗಳು(Cricket Fans Apply For India’s Head Coach) ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತ ಟ್ವೀಟ್​ಗಳು ವೈರಲ್​ ಆಗಿದೆ.

VISTARANEWS.COM


on

Team India Coach Applications
Koo

ಮುಂಬಯಿ: ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಹುದ್ದೆಗೆ(Team India Coach Applications) ಅರ್ಜಿ ಆಹ್ವಾನಿಸಿರುವ ಬಿಸಿಸಿಐಗೆ ಇದೀಗ ದೊಡ್ಡ ತಲೆನೋವೊಂದು ಎದುರಾಗಿದೆ. ಸೋಮವಾರವಷ್ಟೇ ಬಿಸಿಸಿಐ(BCCI) ತನ್ನ ಅಧಿಕೃತ ಪ್ರಕಟನೆ ಮೂಲಕ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಅರ್ಜಿ ಸಲ್ಲಿಸಲು ಮೇ 27 ಅಂತಿಮ ಗಡುವಾಗಿದೆ. ಬಿಸಿಸಿಐ ಆನ್​ಲೈನ್​ ಮೂಲಕ ಈ ಅರ್ಜಿ ಆಹ್ವಾನಿಸಿ ಇದೀಗ ಪಜೀತಿಗೆ ಸಿಲುಕಿದೆ. ಹೌದು, ಅನೇಕ ಕ್ರಿಕೆಟ್​ ಅಭಿಮಾನಿಗಳು(Cricket Fans Apply For India’s Head Coach) ಗೂಗಲ್​ ಅರ್ಜಿ ಪಡೆದುಕೊಂಡು ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತ ಟ್ವೀಟ್​ಗಳು ವೈರಲ್​ ಆಗಿದೆ.

ಶುಕ್ರವಾರ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರು ಮುಖ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ನಾವು 3 ವರ್ಷಗಳ ದೀರ್ಘ ಅವಧಿಗಾಗಿ ಕೋಚ್​ ಹುಡುಕಾಟದಲ್ಲಿದ್ದೇವೆ ಎಂದು ಹೇಳಿದ್ದರು. ಜತೆಗೆ ದ್ರಾವಿಡ್ ಅವರಿಗೂ​ ಮರು ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದರು. ಆದರೆ, ದ್ರಾವಿಡ್​ ಕೋಚ್​ ಹುದ್ದೆಯಲ್ಲಿ ಮುಂದುವರಿಯಲು ಆಸಕ್ತಿ ಹೊಂದಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಬಿಸಿಸಿಐ ನೂತನ ಕೋಚ್​ ಹುಡುಕಾಟದಲ್ಲಿದೆ.

ಇದನ್ನೂ ಓದಿ Team India Coach: ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಹುದ್ದೆಗೆ ಅರ್ಜಿ ಆಹ್ವಾನ; ಮೇ 27 ಕೊನೆಯ ದಿನ

2011ರಲ್ಲಿ ಗ್ಯಾರಿ ಕಸ್ಟನ್ ಮಾರ್ಗದರ್ಶನದಲ್ಲಿ ಭಾರತ 2ನೇ ಬಾರಿಗೆ ವಿಶ್ವಕಪ್​ ಗೆದ್ದಿತ್ತು. ಬಳಿಕ 2013ರಲ್ಲಿ ಡಂಕನ್​ ಪ್ಲೆಚರ್​ ಮಾರ್ಗದರ್ಶನದಲ್ಲಿ ಭಾರತ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಜಯಿಸಿತ್ತು. ಇದಾದ ಬಳಿಕ ಭಾರತ ಇದುವರೆಗೂ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ರವಿಶಾಸ್ತ್ರಿ ಮತ್ತು ರಾಹುಲ್​ ದ್ರಾವಿಡ್​ ಮಾರ್ಗದರ್ಶನಲ್ಲಿ 2 ಏಕದಿನ ವಿಶ್ವಕಪ್​ ಆಡಿದರೂ ಭಾರತ ಕಪ್​ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ವಿದೇಶಿ ಕೋಚ್​ ಆಯ್ಕೆಯೇ ಉತ್ತಮ ಎಂದು ಬಿಸಿಸಿಐ ಯೋಚಿಸಿದೆ ಎನ್ನಲಾಗಿದೆ.

ಸದ್ಯ ಪ್ಲೆಮಿಂಗ್​ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಕಂಡ ಯಶಸ್ವಿ ಕೋಚ್ ಗಳಲ್ಲಿ ಒಬ್ಬರಾದ ಜಸ್ಟಿನ್ ಲ್ಯಾಂಗರ್ ಹೆಸರು ಕೇಳಿ ಬಂದಿದೆ. ಇದರಲ್ಲಿ ಲ್ಯಾಂಗರ್​ ಅವರು ತಾವಾಗಿಯೇ ಕೋಚಿಂಗ್​ ಬಗ್ಗೆ ಆಸಕ್ತಿ ತೋರಿರುವ ಕಾರಣ ಬಿಸಿಸಿಐ ಅವರಿಗೆ ಮಣೆ ಹಾಕಿದರೂ ಅಚ್ಚರಿಯಿಲ್ಲ. ಲ್ಯಾಂಗರ್ ಮಾರ್ಗದರ್ಶನದಲ್ಲಿ ಆಸೀಸ್ ತಂಡ ಟಿ20 ವಿಶ್ವಕಪ್, ಇಂಗ್ಲೆಂಡ್​ ಎದುರಿನ ಪ್ರತಿಷ್ಠಿತ ಆ್ಯಶಸ್​ ಟೆಸ್ಟ್​ ಸರಣಿ ಗೆದ್ದಿತ್ತು. ಮೂರು ವರ್ಷಗಳ ಕಾಲ ಅವರು ಆಸೀಸ್​ ತಂಡದ ಕೋಚ್​ ಆಗಿ ಕರ್ತವ್ಯ ನಿರ್ವಹಿಸಿದ್ದರು. ಒಟ್ಟಾರೆಯಾಗಿ ಟಿ20 ವಿಶ್ವಕಪ್​ ಮುಗಿದ ಬಳಿಕ ಭಾರತ ತಂಡದ ಕೋಚ್​ ಯಾರಾಗಲಿದ್ದಾರೆ ಎನ್ನುವ ಸ್ಪಷ್ಟ ಚಿತ್ರಣ ಸಿಗಲಿದೆ.

ಆಯ್ಕೆ ಪ್ರಕ್ರಿಯೆ ಅರ್ಜಿಗಳ ಸಂಪೂರ್ಣ ಪರಿಶೀಲನೆಯನ್ನು ನಡೆಸಿ ನಂತರ ವೈಯಕ್ತಿಕ ಸಂದರ್ಶನಗಳು ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನ ಒಳಗೊಂಡಿರುತ್ತದೆ ಎಂದು ಬಿಸಿಸಿಐ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಆಯ್ಕೆಯಾದ ಹೊಸ ಕೋಚ್‌ ವಿಶ್ವಕಪ್‌ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ನೂತನ ಕೋಚ್​ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್​ ಟೂರ್ನಿಯೂ ಈ ಕೋಚ್​ಗೆ ಸಿಗಲಿದೆ. ದ್ರಾವಿಡ್ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಬಳಿಕವೇ ಕೋಚ್​ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದರು. ಆದರೆ, ಬಿಸಿಸಿಐ ಟಿ20 ವಿಶ್ವಕಪ್​ ತನಕ ಅವರನ್ನು ಮುಂದುವರಿಯುವಂತೆ ಒತ್ತಾಯ ಮಾಡಿತ್ತು. ಹೀಗಾಗಿ ದ್ರಾವಿಡ್​ ಟಿ20 ವಿಶ್ವಕಪ್ ತನಕ ಈ ಹುದ್ದೆಯಲ್ಲಿ ಮುಂದುವರಿದರು.

Continue Reading

ಕ್ರಿಕೆಟ್

Crazy MS Dhoni fan: 2100 ಕಿ.ಮೀ ದೂರ ಸೈಕಲ್​ ತುಳಿದು ದಿಲ್ಲಿಯಿಂದ ಚೆನ್ನೈಗೆ ಬಂದ ಧೋನಿ ಅಭಿಮಾನಿ; 23 ದಿನಗಳಲ್ಲಿ ಮಿಷನ್​ ಕಂಪ್ಲೀಟ್​

Crazy MS Dhoni fan: ಬಿಹಾರ ಮೂಲದ ಧೋನಿ ಅಭಿಮಾನಿಯೊಬ್ಬ (Crazy MS Dhoni fan) ತನ್ನ ನೆಚ್ಚಿನ ಆಟಗಾರನ ಆಟ ನೋಡಲೆಂದೇ ದಿಲ್ಲಿಯಿಂದ ಬರೋಬ್ಬರಿ 2100 ಕಿ.ಮೀ ದೂರ ಸೈಕಲ್​ ತುಳಿದು ಚೆನ್ನೈಗೆ ಬಂದು ತನ್ನ ಆಸೆಯನ್ನು ಈಡೇರಿಸಿಕೊಂಡಿದ್ದಾನೆ.

VISTARANEWS.COM


on

Crazy MS Dhoni fan
Koo

ಚೆನ್ನೈ: ಕೆಲವು ದಿನಗಳ ಹಿಂದಷ್ಟೇ ಶತಾಯುಷಿ 103 ವರ್ಷದ(103-year-old CSK fan) ಎಸ್ ರಾಮದಾಸ್(S Ramdas) ಅವರು ಧೋನಿಯನ್ನು(MS Dhoni) ನೋಡಲು ಚೆನ್ನೈಯಿಂದ ದೆಹಲಿಯವರೆಗೂ ನಡೆದುಕೊಂಡು ಹೋಗಲು ಸಿದ್ಧ ಎಂದು ಹೇಳಿದ್ದರು. ಇದೀಗ ಧೋನಿಯ ಕ್ರೇಜಿ ಅಭಿಮಾನಿಯೊಬ್ಬ(Crazy MS Dhoni fan) ತನ್ನ ನೆಚ್ಚಿನ ಆಟಗಾರನ ಆಟ ನೋಡಲೆಂದೇ ಬರೋಬ್ಬರಿ 2100 ಕಿ.ಮೀ ದೂರ ಸೈಕಲ್​ ತುಳಿದು ಬಂದು ತನ್ನ ಆಸೆಯನ್ನು ಈಡೇರಿಸಿಕೊಂಡಿದ್ದಾನೆ.

ಹೌದು, ಬಿಹಾರ ಮೂಲದ ಧೋನಿ ಅಭಿಮಾನಿಯಾಗಿರುವ ಈತ ಡೆಲ್ಲಿಯಲ್ಲಿ ನೆಲೆಸಿದ್ದಾನೆ. ಈ ಬಾರಿ ಧೋನಿ ಐಪಿಎಲ್​ಗೆ ವಿದಾಯ ಹೇಳಲಿದ್ದಾರೆ. ಹೀಗಾಗಿ ತಮ್ಮ ನೆಚ್ಚಿನ ಆಟಗಾರನ ಕೊನೆಯ ಆಟವನ್ನು ಕಣ್ತುಂಬಿಕೊಳ್ಳಲು ಪ್ರತಿ ಪಂದ್ಯದಲ್ಲಿಯೂ ಕಾದು ಕುಳಿತಿರುತ್ತಾರೆ.

ಬಿಹಾರ ಮೂಲದ ಧೋನಿ ಅಭಿಮಾನಿ ಕೂಡ ಹೇಗಾದರೂ ಮಾಡಿ ಧೋನಿಯ ಆಟವನ್ನು ನೋಡಲೇಬೇಕೆಂದು ಆಸೆ ಪಟ್ಟಿದ್ದರು. ಆದರೆ, ಆರ್ಥಿಕ ಸಮಸ್ಯೆಯೂ ದೊಡ್ಡ ಸವಾಲಾಗಿ ಪರಿಣಮಿಸಿತು. ಇದೇ ವೇಳೆ ಸೈಕಲ್ ಆಯ್ಕೆ ಮಾಡಿಕೊಂಡು ದಿಲ್ಲಿಯಿಂದ 23 ದಿನಗಳಲ್ಲಿ ಚೆನ್ನೈಗೆ ತಲುಪಿದರು. ಈ ಪಯಣದ ವೇಳೆ ಅವರು ಬರೋಬ್ಬರಿ 2100 ಕಿ.ಮೀ ​ಸೈಕಲ್​ ತುಳಿದಿದ್ದಾರೆ. ಕೊನೆಗೂ ಅವರು ಚೆನ್ನೈ ಪಂದ್ಯವನ್ನು ವೀಕ್ಷಿಸಿದ್ದಾರೆ. ಈ ರೋಚಕ ಜರ್ನಿಯ ಕಥೆಯನ್ನು ಈ ಅಭಿಮಾನಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ವಿಡಿಯೊವನ್ನು ಚೆನ್ನೈ ಸೂಪರ್​ ಕಿಂಗ್ಸ್​ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ. ಇತ್ತೀಚೆಗೆ ಅಭಿಮಾನಿಯೊಬ್ಬ ತನ್ನ ಗೆಳತಿಯ ಹೆಸರಿನಲ್ಲಿ 7 ಅಕ್ಷರಗಳಿಲ್ಲದ ಕಾರಣ ಬ್ರೇಕಪ್ ಮಾಡಿಕೊಂಡಿದ್ದ.

ಇದನ್ನೂ ಓದಿ MS Dhoni : ಧೋನಿಗೆ ದೇವಸ್ಥಾನ; ಸಿಎಸ್​​ಕೆ ತಂಡದ ಮಾಜಿ ಆಟಗಾರ ಅಭಿಮಾನದ ನುಡಿ

ಎಂ.ಎಸ್.ಧೋನಿ(MS Dhoni), ಕ್ಯಾಪ್ಟನ್‌ ಕೂಲ್‌, ಮಾಹಿ, ತಾಲಾ… ಎಂದೆಲ್ಲ ಪ್ರೀತಿಯಿಂದ ಕರೆಸಿಕೊಳ್ಳುವ ಮಹೇಂದ್ರ ಸಿಂಗ್‌ ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಸಿಎಸ್‌ಕೆಗಾಗಿ ಧೋನಿ ಆಡುತ್ತಿದ್ದಾರೆ. ಅವರ ಈ ಪ್ರದರ್ಶನವನ್ನು ಪರಿಗಣಿಸಿ, ಚೆನ್ನೈಯಲ್ಲಿ ಧೋನಿಯ ದೇವಾಲಯವನ್ನು ನಿರ್ಮಿಸಲಾಗುವುದು ಎಂದು ಅಂಬಾಟಿ ರಾಯುಡು ಹೇಳಿದ್ದಾರೆ. ಧೋನಿ ಚೆನ್ನೈನ ದೇವರು ಎಂದ ರಾಯುಡು, ಮುಂಬರುವ ವರ್ಷದಲ್ಲಿ ಚೆನ್ನೈನಲ್ಲಿ ಎಂಎಸ್ ಧೋನಿಯ ಮಂದಿರ ನಿರ್ಮಾಣವಾಗುವುದು ಖಚಿತ ಎಂದು ಹೇಳಿದ್ದಾರೆ.

ಪ್ಲೇ ಆಫ್​ ಪ್ರವೇಶಿಸಬೇಕಿದ್ದರೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಮೇ 18ರಂದು ನಡೆಯುವ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇ ಬೇಕು. ಒಂದೊಮ್ಮೆ ಚೆನ್ನೈ ಸೋತರೆ ಇದುವೇ ಧೋನಿಗೆ ವಿದಾಯ ಪಂದ್ಯವಾಗಲಿದೆ.

Continue Reading

ಕ್ರೀಡೆ

Rishabh Pant: ಬಿಸಿಸಿಐ ನಿಯಮದ ಬಗ್ಗೆ ಅಸಮಾಧಾನ ಹೊರಹಾಕಿದ ರಿಷಭ್​ ಪಂತ್​

Rishabh Pant: ಲಕ್ನೋ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ಪಂತ್​, ‘ಆರ್​ಸಿಬಿ ವಿರುದ್ಧ ನಾನು ಮೈದಾನದಲ್ಲಿದ್ದರೆ ನಿರ್ಣಾಯಕ ಪಂದ್ಯವನ್ನು ಗೆಲ್ಲುವ ಉತ್ತಮ ಅವಕಾಶವನ್ನು ಹೊಂದಿದ್ದೆವು ಎಂದು ಹೇಳಿದರು. ಲಕ್ನೋ ವಿರುದ್ಧ ಡೆಲ್ಲಿ ಗೆದ್ದರೂ ಕೂಡ ಪ್ಲೇ ಆಫ್​ ಗೇರಲು ಸಾಧ್ಯವಾಗಿಲ್ಲ. ಕಳೆದ ಆವೃತ್ತಿಗೆ ಹೋಲಿಸಿದರೆ ಈ ಬಾರಿ ಡೆಲ್ಲಿ(Delhi Capitals) ಪ್ರದರ್ಶನ ಉತ್ತಮವಾಗಿತ್ತು.

VISTARANEWS.COM


on

Rishabh Pant
Koo

ನವದೆಹಲಿ: ಮೂರನೇ ಬಾರಿಗೆ ನಿಧಾನಗತಿಯ ಓವರ್​ ಕಾಯ್ದುಕೊಂಡ ತಪ್ಪಿಗೆ ಒಂದು ಪಂದ್ಯದ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ರಿಷಭ್​ ಪಂತ್(Rishabh Pant)​ ಬಿಸಿಸಿಐ(BCCI) ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಆರ್​ಸಿಬಿ(RCB) ವಿರುದ್ಧ ನಾನು ಆಡುತ್ತಿದ್ದರೆ ಇಂದು ಪ್ಲೇ ಆಫ್​ ಟಿಕೆಟ್​ ಪಡೆಯುವ ಎಲ್ಲ ಸಾಧ್ಯತೆಯೂ ಇತ್ತು ಎಂದು ಹೇಳಿದ್ದಾರೆ.

ನಿನ್ನೆ(ಮಂಗಳವಾರ) ಲಕ್ನೋ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ಪಂತ್​, ‘ಆರ್​ಸಿಬಿ ವಿರುದ್ಧ ನಾನು ಮೈದಾನದಲ್ಲಿದ್ದರೆ ನಿರ್ಣಾಯಕ ಪಂದ್ಯವನ್ನು ಗೆಲ್ಲುವ ಉತ್ತಮ ಅವಕಾಶವನ್ನು ಹೊಂದಿದ್ದೆವು ಎಂದು ಹೇಳಿದರು. ಲಕ್ನೋ ವಿರುದ್ಧ ಡೆಲ್ಲಿ ಗೆದ್ದರೂ ಕೂಡ ಪ್ಲೇ ಆಫ್​ ಗೇರಲು ಸಾಧ್ಯವಾಗಿಲ್ಲ. ಕಳೆದ ಆವೃತ್ತಿಗೆ ಹೋಲಿಸಿದರೆ ಈ ಬಾರಿ ಡೆಲ್ಲಿ(Delhi Capitals) ಪ್ರದರ್ಶನ ಉತ್ತಮವಾಗಿತ್ತು.

ಮೇ 07, 2024 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ತಂಡ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿತ್ತು. ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದ ಐಪಿಎಲ್​​ನ ನೀತಿ ಸಂಹಿತೆಯ ಅಡಿಯಲ್ಲಿ ಇದು ಡೆಲ್ಲಿ ತಂಡದ 3ನೇ ಅಪರಾಧವಾಗಿತ್ತು. ಹೀಗಾಗಿ ತಂಡದ ನಾಯಕ ಪಂತ್​ಗೆ 30 ಲಕ್ಷ ರೂ.ಗಳ ದಂಡ ಮತ್ತು ಒಂದು ಪಂದ್ಯದ ನಿಷೇಧ ಹೇರಲಾಗಿತ್ತು. ಜತೆಗೆ ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ಪ್ಲೇಯಿಂಗ್ ಇಲೆವೆನ್ ನ ಉಳಿದ ಸದಸ್ಯರಿಗೆ ತಲಾ 12 ಲಕ್ಷ ರೂಪಾಯಿ ಅಥವಾ ಆಯಾ ಪಂದ್ಯದ ಶುಲ್ಕದ ಶೇಕಡಾ 50 ರಷ್ಟು ದಂಡ ವಿಧಿಸಲಾಗಿತ್ತು.

ಇದನ್ನೂ ಓದಿ IPL 2024: ಲಕ್ನೋಗೆ ಸೋಲು; ಪ್ಲೇ ಆಫ್​ ಪ್ರವೇಶಿಸಿದ ರಾಜಸ್ಥಾನ್​ ರಾಯಲ್ಸ್​

ಲಕ್ನೋ ವಿರುದ್ಧ ಗೆಲುವು

ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 204 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಲಕ್ನೊ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 9 ವಿಕೆಟ್ ನಷ್ಟಕ್ಕೆ 189 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

ಡೆಲ್ಲಿಯ ಪಿಚ್​ನಲ್ಲಿ ಲಕ್ನೊ ತಂಡಕ್ಕೆ ಇದು ದೊಡ್ಡ ಮೊತ್ತವಾಗಿರಲಿಲ್ಲ. ಆದರೆ, ಆ ತಂಡದ ಬ್ಯಾಟರ್​​ಗಳು ಗೆಲುವಿಗಾಗಿ ಹೆಚ್ಚಿನ ಉತ್ಸಾಹ ತೋರಲಿಲ್ಲ. ಇಶಾಂತ್ ಶರ್ಮಾ (34 ರನ್​ಗೆ 3 ವಿಕೆಟ್​​) ಮತ್ತು ಡೆಲ್ಲಿಯ ಬೌಲರ್​ಗಳ ಘಾತಕ ದಾಳಿಗೆ ಲಕ್ನೋ ಬ್ಯಾಟರ್​ಗಳು ಒಬ್ಬೊಬ್ಬರಾಗಿಯೇ ಪೆವಿಲಿಯನ್ ಹಾದಿ ಹಿಡಿದರು. ಆದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ನಿಕೋಲಸ್​​ ಪೂರನ್​ (27 ಎಸೆತಕ್ಕೆ 61 ರನ್​) ಹಾಗೂ ಅರ್ಶದ್​ ಖಾನ್​ (33 ಎಸೆತಕ್ಕೆ 58 ರನ್​) ಅವರ ಹೋರಾಟದಿಂದಾಗಿ ಗುರಿಯ ಸನಿಹಕ್ಕೆ ಬಂದು ಮರ್ಯಾದೆ ಉಳಿಸಿಕೊಂಡಿತು. ಕ್ವಿಂಟನ್ ಡಿ ಕಾಕ್​ (12), ಕೆ. ಎಲ್​ ರಾಹುಲ್​ (05), ಮಾರ್ಕಸ್​ ಸ್ಟೊಯಿನಿಸ್​​ (05), ದೀಪಕ್ ಹೂಡ (0) ಆಯುಷ್​ ಬದೋನಿ (06), ಅವರ ಅಸಮರ್ಥತೆ ತಂಡವನ್ನು ಸೋಲಿನ ಸುಳಿಗೆ ತಳ್ಳಿತು.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ಕೆಕೆಆರ್​139319 (+1.428)
ರಾಜಸ್ಥಾನ್​ ರಾಯಲ್ಸ್​​​128416 (+0.349)
ಚೆನ್ನೈ​​137614 (+0.528)
ಹೈದರಾಬಾದ್​127514 (+0.406)
ಡೆಲ್ಲಿ147714 (-0.377)
ಆರ್​ಸಿಬಿ136712 (+0.387)
ಲಕ್ನೋ136712 (-0.787)
ಗುಜರಾತ್​135711 (-1.063)
ಮುಂಬೈ13498 (-0.271)
ಪಂಜಾಬ್​​12488 (-0.423)
Continue Reading

ಕ್ರೀಡೆ

IPL 2024: ಲಕ್ನೋಗೆ ಸೋಲು; ಪ್ಲೇ ಆಫ್​ ಪ್ರವೇಶಿಸಿದ ರಾಜಸ್ಥಾನ್​ ರಾಯಲ್ಸ್​

IPL 2024:ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಲಕ್ನೋ ಸೂಪರ್​ ಜೈಂಟ್ಸ್​(Lucknow Super Giants) ಸೋಲು ಕಂಡ ಪರಿಣಾಮ ರಾಜಸ್ಥಾನ್ ರಾಯಲ್ಸ್​(Rajasthan Royals) ಇನ್ನೆರಡು ಪಂದ್ಯಗಳು ಬಾಕಿ ಇರುವಂತೆಯೇ ಪ್ಲೇ ಆಫ್​ಗೆ ಅಧಿಕೃತ ಪ್ರವೇಶ ಪಡೆದಿದೆ. ಒಂದೊಮ್ಮೆ ಲಕ್ನೋ ಗೆಲುವು ಸಾಧಿಸುತ್ತಿದ್ದರೆ, ರಾಜಸ್ಥಾನ್​ ಇನ್ನೊಂದು ಗೆಲುವು ಸಾಧಿಸಬೇಕಿತ್ತು.

VISTARANEWS.COM


on

IPL 2024
Koo

ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್​(IPL 2024) ಟೂರ್ನಿಯಲ್ಲಿ ಈಗಾಗಲೇ ಪಂಜಾಬ್​ ಕಿಂಗ್ಸ್​, ಮುಂಬೈ ಇಂಡಿಯನ್ಸ್​ ಮತ್ತು ಗುಜರಾತ್​ ಟೈಟಾನ್ಸ್​ ತಂಡಗಳು ಎಲಿಮಿನೇಟ್ ಆಗಿವೆ. ನಿನ್ನೆ (ಮಂಗಳವಾರ) ನಡೆದ ​ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಲಕ್ನೋ ಸೂಪರ್​ ಜೈಂಟ್ಸ್​(Lucknow Super Giants) ಸೋಲು ಕಂಡ ಪರಿಣಾಮ ರಾಜಸ್ಥಾನ್ ರಾಯಲ್ಸ್​(Rajasthan Royals) ಇನ್ನೆರಡು ಪಂದ್ಯಗಳು ಬಾಕಿ ಇರುವಂತೆಯೇ ಪ್ಲೇ ಆಫ್​ಗೆ ಅಧಿಕೃತ ಪ್ರವೇಶ ಪಡೆದಿದೆ. ಒಂದೊಮ್ಮೆ ಲಕ್ನೋ ಗೆಲುವು ಸಾಧಿಸುತ್ತಿದ್ದರೆ, ರಾಜಸ್ಥಾನ್​ ಇನ್ನೊಂದು ಗೆಲುವು ಸಾಧಿಸಬೇಕಿತ್ತು.

ರಾಜಸ್ಥಾನ್​ ಮತ್ತು ಕೆಕೆಆರ್​ ಪ್ಲೇ ಆಫ್​ ಟಿಕೆಟ್​ ಗಿಟ್ಟಿಸಿಕೊಂಡ ಕಾರಣ ಉಳಿದ 2 ಸ್ಥಾನಗಳಿಗೆ 5 ತಂಡಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಅಚ್ಚರಿ ಎಂದರೆ 7 ಪಂದ್ಯಗಳನ್ನು ಸೋತು ಕೊನೆಯ ಸ್ಥಾನಿಯಾಗಿದ್ದ ಆರ್​ಸಿಬಿ ಇನ್ನೇನು ಟೂರ್ನಿಯಿಂದ ಹೊರಬೀಳುತ್ತದೆ ಎನ್ನುವ ಸ್ಥಿತಿಯಿಂದ ಸತತ ಗೆಲುವಿನೊಂದಿಗೆ ಕಮ್​ಬ್ಯಾಕ್​ ಮಾಡಿ ಇದೀಗ 6ನೇ ಸ್ಥಾನಿಯಾಗಿದೆ. ಚೆನ್ನೈ ವಿರುದ್ಧ ಗೆದ್ದರೆ 4ನೇ ತಂಡವಾಗಿ ಪ್ಲೇ ಆಫ್ ಪ್ರವೇಶ ಪಡೆಯಲಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ಕೆಕೆಆರ್​139319 (+1.428)
ರಾಜಸ್ಥಾನ್​ ರಾಯಲ್ಸ್​​​128416 (+0.349)
ಚೆನ್ನೈ​​137614 (+0.528)
ಹೈದರಾಬಾದ್​127514 (+0.406)
ಡೆಲ್ಲಿ147714 (-0.377)
ಆರ್​ಸಿಬಿ136712 (+0.387)
ಲಕ್ನೋ136712 (-0.787)
ಗುಜರಾತ್​135711 (-1.063)
ಮುಂಬೈ13498 (-0.271)
ಪಂಜಾಬ್​​12488 (-0.423)

ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 204 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಲಕ್ನೊ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 9 ವಿಕೆಟ್ ನಷ್ಟಕ್ಕೆ 189 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

ಇದನ್ನೂ ಓದಿ IPL 2024 : ನಾಯಕರಾಗಿ ನೀವೇನು ಮಾಡಿದ್ರಿ? ಪಾಂಡ್ಯನನ್ನು ಟೀಕಿಸಿದ್ದ ವಿಲಿಯರ್ಸ್​ಗೆ ತಿರುಗೇಟು ಕೊಟ್ಟ ಗಂಭೀರ್​

ಡೆಲ್ಲಿಯ ಪಿಚ್​ನಲ್ಲಿ ಲಕ್ನೊ ತಂಡಕ್ಕೆ ಇದು ದೊಡ್ಡ ಮೊತ್ತವಾಗಿರಲಿಲ್ಲ. ಆದರೆ, ಆ ತಂಡದ ಬ್ಯಾಟರ್​​ಗಳು ಗೆಲುವಿಗಾಗಿ ಹೆಚ್ಚಿನ ಉತ್ಸಾಹ ತೋರಲಿಲ್ಲ. ಇಶಾಂತ್ ಶರ್ಮಾ (34 ರನ್​ಗೆ 3 ವಿಕೆಟ್​​) ಡೆಲ್ಲಿಯ ಬೌಲರ್​ಗಳ ಅಬ್ಬರಕ್ಕೆ ಒಬ್ಬೊಬ್ಬರಾಗಿಯೇ ಪೆವಿಲಿಯನ್ ಹಾದಿ ಹಿಡಿದರು. ಆದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ನಿಕೋಲಸ್​​ ಪೂರನ್​ (27 ಎಸೆತಕ್ಕೆ 61 ರನ್​) ಹಾಗೂ ಅರ್ಶದ್​ ಖಾನ್​ (33 ಎಸೆತಕ್ಕೆ 58 ರನ್​) ಅವರ ಹೋರಾಟದಿಂದಾಗಿ ಗುರಿಯ ಸನಿಹಕ್ಕೆ ಬಂದು ಮರ್ಯಾದೆ ಉಳಿಸಿಕೊಂಡಿತು. ಕ್ವಿಂಟನ್ ಡಿ ಕಾಕ್​ (12), ಕೆ. ಎಲ್​ ರಾಹುಲ್​ (05), ಮಾರ್ಕಸ್​ ಸ್ಟೊಯಿನಿಸ್​​ (05), ದೀಪಕ್ ಹೂಡ (0) ಆಯುಷ್​ ಬದೋನಿ (06), ಅವರ ಅಸಮರ್ಥತೆ ತಂಡವನ್ನು ಸೋಲಿನ ಸುಳಿಗೆ ತಳ್ಳಿತು.

Continue Reading
Advertisement
private hospitals heads and health department officers Meeting at vijayanagara DC office
ವಿಜಯನಗರ1 min ago

Vijayanagara News: ಖಾಸಗಿ ಆಸ್ಪತ್ರೆಗಳು ಚಿಕಿತ್ಸಾ ಲೋಪ ಎಸಗಿದರೆ ಕಾನೂನು ಕ್ರಮ: ಡಿಸಿ ಎಚ್ಚರಿಕೆ

Ram Pothineni Double iSmart teaser with Sanjay Dutt
ಟಾಲಿವುಡ್3 mins ago

Ram Pothineni: ಡೈನಾಮಿಕ್ ಸ್ಟಾರ್ ರಾಮ್‌ – ಸಂಜಯ್ ದತ್ ಭರ್ಜರಿ ಜುಗಲ್ಬಂದಿ: `ಡಬಲ್ ಇಸ್ಮಾರ್ಟ್‘ ಟೀಸರ್‌ ಔಟ್‌!

Prajwal Revanna Case Deve Gowda lashes out at Bhavani
ರಾಜಕೀಯ5 mins ago

Prajwal Revanna Case: ಭವಾನಿ ವಿರುದ್ಧ ದೇವೇಗೌಡ ಗರಂ; ಮತ್ತೆ ಹೀಗಾಗದಂತೆ ಎಚ್ಚರಿಕೆ ನೀಡಲು ರೇವಣ್ಣಗೆ ತಾಕೀತು!

Wedding men's jewel Fashion Artificial pearl necklace has entered
ಫ್ಯಾಷನ್5 mins ago

Wedding men’s jewel Fashion: ವೆಡ್ಡಿಂಗ್‌ ಮೆನ್ಸ್‌ ಜ್ಯುವೆಲರಿ ಫ್ಯಾಷನ್‌ಗೆ ಕಾಲಿಟ್ಟ ಆರ್ಟಿಫಿಶಿಯಲ್‌ ಪರ್ಲ್‌ ಹಾರ!

Team India Coach Applications
ಕ್ರೀಡೆ9 mins ago

Team India Coach Applications: ಭಾರತ ತಂಡದ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ ಸಾವಿರಾರು ಅಭಿಮಾನಿಗಳು; ಪಜೀತಿಗೆ ಸಿಲುಕಿದ ಬಿಸಿಸಿಐ

CAA
ದೇಶ14 mins ago

CAA: ಸಿಎಎ ಅಡಿಯಲ್ಲಿ 14 ಜನರಿಗೆ ಭಾರತದ ಪೌರತ್ವ ನೀಡಿದ ಮೋದಿ ಸರ್ಕಾರ; ಸರ್ಟಿಫಿಕೇಟ್‌ ಕೂಡ ಹಸ್ತಾಂತರ!

Kannada New Movie swapna mantapa shooting compleated
ಸ್ಯಾಂಡಲ್ ವುಡ್36 mins ago

Kannada New Movie: ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಸ್ವಪ್ನ ಮಂಟಪ’ ಚಿತ್ರೀಕರಣ ಮುಕ್ತಾಯ

ಫ್ಯಾಷನ್36 mins ago

Star saree fashion: ಯುವತಿಯರನ್ನು ಸೆಳೆಯುತ್ತಿದೆ ನಟಿ ಭಾವನಾ ರಾವ್‌ ಸ್ಯಾಟೀನ್‌ ಸಿಲ್ಕ್‌ ಸೀರೆ

Google
ವಿದೇಶ50 mins ago

Google: 10 ಲಕ್ಷ ಕೋಟಿ ರೂ. ಮೌಲ್ಯದ ಪಿಂಚಣಿ ಡೇಟಾ ಡಿಲೀಟ್‌ ಮಾಡಿ Sorry ಎಂದ ಗೂಗಲ್; ಮುಂದೇನು?

Crazy MS Dhoni fan
ಕ್ರಿಕೆಟ್50 mins ago

Crazy MS Dhoni fan: 2100 ಕಿ.ಮೀ ದೂರ ಸೈಕಲ್​ ತುಳಿದು ದಿಲ್ಲಿಯಿಂದ ಚೆನ್ನೈಗೆ ಬಂದ ಧೋನಿ ಅಭಿಮಾನಿ; 23 ದಿನಗಳಲ್ಲಿ ಮಿಷನ್​ ಕಂಪ್ಲೀಟ್​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ9 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ12 hours ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ22 hours ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20241 day ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20241 day ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ1 day ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು1 day ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ2 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ2 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌