INDvsBAN | ಎರಡನೇ ಟೆಸ್ಟ್​ ಪಂದ್ಯಕ್ಕೆ ಬಾಂಗ್ಲಾ ತಂಡ ಪ್ರಕಟ; ಶಕಿಬ್ ಅಲಭ್ಯ, ಯುವ ಆಟಗಾರನ ಸೇರ್ಪಡೆ - Vistara News

ಕ್ರಿಕೆಟ್

INDvsBAN | ಎರಡನೇ ಟೆಸ್ಟ್​ ಪಂದ್ಯಕ್ಕೆ ಬಾಂಗ್ಲಾ ತಂಡ ಪ್ರಕಟ; ಶಕಿಬ್ ಅಲಭ್ಯ, ಯುವ ಆಟಗಾರನ ಸೇರ್ಪಡೆ

ಪ್ರವಾಸಿ ಭಾರತ ತಂಡದ ವಿರುದ್ಧದ ಎರಡನೇ ಟೆಸ್ಟ್​​ಗೆ (INDvsBAN) ಬಾಂಗ್ಲಾದೇಶ ತಂಡ ಹೊಸ ತಂಡವನ್ನು ಪ್ರಕಟಿಸಿದೆ.

VISTARANEWS.COM


on

INDvsBAN
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಢಾಕಾ : ಪ್ರವಾಸಿ ಭಾರತ ತಂಡದ ವಿರುದ್ಧದ ಎರಡನೇ ಪಂದ್ಯಕ್ಕೆ (INDvsBAN) ಬಾಂಗ್ಲಾದೇಶ ತಂಡ ಭಾನುವಾರ ಪ್ರಕಟಗೊಂಡಿದೆ. ಮೊದಲ ಪಂದ್ಯ ಮುಕ್ತಾಯದ ಬೆನ್ನಲ್ಲೇ ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿ ತಂಡವನ್ನು ಪ್ರಕಟಿಸಿದೆ. ಹಿರಿಯ ಹಾಗೂ ಅನುಭವಿ ಆಲ್​ರೌಂಡರ್​ ಶಕಿಬ್​ ಅಲ್​ ಹಸನ್​ ಅಲಭ್ಯರಾಗಿದ್ದು, ಯುವ ಆಲ್​ರೌಂಡರ್​ ನಸುಮ್​ ಅಹ್ಮದ್​​ಗೆ ಮೊದಲ ಬಾರಿಗೆ ತಂಡದಿಂದ ಕರೆ ಹೋಗಿದೆ.

ಸರಣಿಯ ಮೊದಲ ಪಂದ್ಯದ ವೇಳೆ ಶಕಿಬ್​ ಅಲ್​ ಹಸನ್ ಅವರು ಭುಜದ ಗಾಯಕ್ಕೆ ಒಳಗಾಗಿದ್ದರು. ಹೀಗಾಗಿ ಎರಡನೇ ಇನಿಂಗ್ಸ್​ನಲ್ಲಿ ಅವರಿಗೆ ಬೌಲಿಂಗ್​ ಮಾಡಲು ಸಾಧ್ಯವಾಗಿರಲಿಲ್ಲ. ಅವರು ಮೊದಲ ಪಂದ್ಯ ಮುಗಿದ ತಕ್ಷಣ ಚಿಕಿತ್ಸೆಗಾಗಿ ತೆರಳಿದ್ದು ಹೀಗಾಗಿ ಇನ್ನೂ ಅಂತಾರಾಷ್ಟ್ರೀಯ ಟೆಸ್ಟ್​ ಪಂದ್ಯವಾಡದ ನಸುಮ್​ಗೆ ಅವಕಾಶ ನೀಡಲಾಗಿದೆ. ನಸುಮ್​ 26 ಟಿ20 ಪಂದ್ಯ ಹಾಗೂ ನಾಲ್ಕು ಏಕ ದಿನ ಪಂದ್ಯಗಳಲ್ಲಿ ಆಡಿದ್ದಾರೆ.

ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಎರಡನೇ ಪಂದ್ಯ ಡಿಸೆಂಬರ್​ 22ರಿಂದ 26ರವರೆಗೆ ಮೀರ್​ಪುರದ ಶೇರ್​ ಬಾಂಗ್ಲಾ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆಯಲಿದೆ. ಬಾಂಗ್ಲಾದೇಶ ಮತ್ತು ಭಾರತ ನಡುವಿನ ಮೊದಲ ಪಂದ್ಯ ಚತ್ತೋಗ್ರಾಮ್​ನಲ್ಲಿ ನಡೆದಿದ್ದು, ಭಾರತ 188 ರನ್​ಗಳ ಭರ್ಜರಿ ಜಯ ದಾಖಲಿಸಿದ್ದು, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಎರಡನೇ ಟೆಸ್ಟ್​ ಪಂದ್ಯಕ್ಕೆ ತಂಡ: ಮಹ್ಮುದುಲ್ ಹಸನ್ ಜಾಯ್, ನಜ್ಮುಲ್ ಹೊಸೈನ್ ಶಾಂಟೊ, ಮೊಮಿನುಲ್ ಹಕ್, ಯಾಸಿರ್ ಅಲಿ, ಮುಷ್ಪಿಕರ್​ ರಹೀಮ್, ಶಕಿಬ್ ಅಲ್ ಹಸನ್ (ಸಿ), ಲಿಟ್ಟನ್ ದಾಸ್, ನೂರುಲ್ ಹಸನ್, ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಟಸ್ಕಿನ್ ಅಹ್ಮದ್, ಖಲೀದ್ ಅಹ್ಮದ್, ನಸುಮ್​ ಅಹ್ಮದ್​, ರಾಜಾರ್ ಹಸನ್, ರೆಜಾರ್ ಹಸನ್.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024: ಐಪಿಎಲ್​ ವೇಳೆ ತಾಳ್ಮೆ ಕಳೆದುಕೊಂಡಿದ್ದ ಧೋನಿಗೂ ಬಿದ್ದಿತ್ತು ದಂಡದ ಬರೆ

2019ರಲ್ಲಿ(IPL 2019) ನಡೆದಿದ್ದ ಐಪಿಎಲ್(IPL 2024)​ ಪಂದ್ಯವೊಂದರಲ್ಲಿ ಧೋನಿ ಆ್ಯಂಗ್ರಿಮ್ಯಾನ್‌ಆಗಿ ಬದಲಾಗಿದ್ದರು. ಜತೆಗೆ ದಂಡದ ಶಿಕ್ಷೆಗೂ ಗುರಿಯಾಗಿದ್ದರು.

VISTARANEWS.COM


on

MS Dhoni
Koo

ಚೆನ್ನೈ: ಮಹೇಂದ್ರ ಸಿಂಗ್‌ ಧೋನಿ ಕ್ರಿಕೆಟ್‌ ಮೈದಾನದಲ್ಲಿ ಶಾಂತಿಯಿಂದ ವ‌ರ್ತಿಸುತ್ತಾರೆ. ಬ್ಯಾಟಿಂಗ್‌, ವಿಕೆಟ್‌ ಕೀಪಿಂಗ್‌ ಅಥವಾ ನಾಯಕನಾಗೇ ಇರಲಿ ಶಾಂತಚಿತ್ತ ಅವರ ಮುಖ್ಯ ಗುಣ. ಎಂತಹ ಸನ್ನಿವೇಶವಿದ್ದರೂ ಧೋನಿ(MS Dhoni) ತಾಳ್ಮೆ ಕಳೆದುಕೊಳ್ಳುವುದು ವಿರಳ. ಇದೇ ಕಾರಣಕ್ಕೆ ಅವರಿಗೆ ಕ್ಯಾಪ್ಟನ್‌ ಕೂಲ್‌ ಎಂಬ ಹೆಸರು ಕೂಡ ಇದೆ. ಆದರೆ 2019ರಲ್ಲಿ(IPL 2019) ನಡೆದಿದ್ದ ಐಪಿಎಲ್(IPL 2024)​ ಪಂದ್ಯವೊಂದರಲ್ಲಿ ಧೋನಿ ಆ್ಯಂಗ್ರಿಮ್ಯಾನ್‌ಆಗಿ ಬದಲಾಗಿದ್ದರು. ಜತೆಗೆ ದಂಡದ ಶಿಕ್ಷೆಗೂ ಗುರಿಯಾಗಿದ್ದರು.

ಹೌದು, 12ನೇ ಆವೃತ್ತಿಯ ಐಪಿಎಲ್​ನಲ್ಲಿ ಧೋನಿ ಅವರ ಪಿತ್ತ ನೆತ್ತಿಗೇರಿದ ಘಟನೆ ಸಂಭವಿಸಿತ್ತು. ಸವಾಯ್‌ ಮಾನ್‌ಸಿಂಗ್‌ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ(RR Vs CSK) ವಿರುದ್ಧ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಕೊನೆಯ ಎಸೆತದಲ್ಲಿ ಜಯ ಸಾಧಿಸಿ ಸಂಭ್ರಮಿಸಿತು. ಇದೇ ವೇಳೆ ಕ್ಯಾಪ್ಟನ್‌ ಕೂಲ್‌ ಭಾರೀ ಚರ್ಚೆಗೆ ಗುರಿಯಾದ್ದರು.

ಬೆನ್‌ ಸ್ಟೋಕ್ಸ್‌ ಎಸೆದ ಅಂತಿಮ ಓವರ್‌ನಲ್ಲಿ ಚೆನ್ನೈಗೆ 18 ರನ್‌ ಬೇಕಿತ್ತು. ಸ್ಟೋಕ್ಸ್‌ ಅವರ 4ನೇ ಎಸೆತ ನೋ ಬಾಲ್‌ ಆಗಿತ್ತು. ಪಂಪೈರ್​ ಉಲ್ಲಾಸ್‌ ಗಾಂದೆ ನೋಬಾಲ್‌ ನೀಡಿದ್ದರು. ಆದರೆ ಲೆಗ್‌ ಅಂಪಾಯರ್‌ ನೋಬಾಲ್‌ ನೀಡಿರಲಿಲ್ಲ. ಈ ಸನ್ನಿವೇಶ ಎಲ್ಲರನ್ನೂ ಗೊಂದಲಕ್ಕೀಡು ಮಾಡಿತ್ತು. ಈ ಎಸೆತದಲ್ಲಿ ಚೆನ್ನೈಆಟಗಾರರು 2 ರನ್‌ ಕಸಿದಿದ್ದರು. ಜಡೇಜ ಈ ಕುರಿತು ಅಂಪಾಯರ್‌ಗಳನ್ನು ಪ್ರಶ್ನಿಸಿದ್ದರೂ ಯಾವುದೇ ಧನಾತ್ಮಕ ಉತ್ತರ ದೊರೆಯಲಿಲ್ಲ. ಆಗ ಬೌಂಡರಿ ಗೆರೆ ಬಳಿ ನಿಂತು ಪಂದ್ಯ ವೀಕ್ಷಿಸುತ್ತಿದ್ದ ಧೋನಿ ಮೈದಾನಕ್ಕೆ ಓಡೋಡಿ ಬಂದು ಅಂಪಾಯರ್‌ಗಳ ಜತೆ ವಾಗ್ವಾದಕ್ಕಿಳಿದರು.

ಇದನ್ನೂ ಓದಿ IPL 2024 : ಐಪಿಎಲ್​ ಇನಿಂಗ್ಸ್​ ಒಂದರಲ್ಲಿ ಅತ್ಯಧಿಕ ಸಿಕ್ಸರ್​ಗಳನ್ನು ಬಾರಿಸಿದ ಆಟಗಾರರ ವಿವರ ಇಲ್ಲಿದೆ

ms dhoni 2019


ಆದರೆ, ಧೋನಿ ಮಾತನ್ನು ಯಾರೂ ಒಪ್ಪಲಿಲ್ಲ. ಥರ್ಡ್‌ ಅಂಪಾಯರ್‌ ಕೂಡ ಮನವಿ ನಿರಾಕರಿಸಿದ್ದರು. ಧೋನಿ ಈ ಹಿಂದೆ ಒಮ್ಮೆಯೂ ಕೂಡ ಮೈದಾನದಲ್ಲಿ ಇಷ್ಟೊಂದು ತಾಳ್ಮೆ ಕಳೆದುಕೊಂಡಿದನ್ನು ಯಾರು ಕೂಡ ನೋಡಿರಲಿಲ್ಲ. ಅಂದು ಧೋನಿಯನ್ನು ಕಂಡ ಅವರ ಅಭಿಮಾನಿಗಳು ಒಂದು ಕ್ಷಣ ದಂಗಾಗಿದ್ದರು. ಧೋನಿಯ ಈ ಅತಿರೇಕದ ವರ್ತನೆಗೆ ಪಂದ್ಯ ಶುಲ್ಕದ ಶೇಕಡಾ 50ರಷ್ಟು ದಂಡ ವಿಧಿಸಲಾಗಿತ್ತು.

ಇದನ್ನೂ ಓದಿ IPL 2024 : ಐಪಿಎಲ್​ನಲ್ಲಿ ಹ್ಯಾಟ್ರಿಕ್​ ವಿಕೆಟ್ ಸಾಧನೆ ಮಾಡಿದ ಬೌಲರ್​ಗಳ ವಿವರ ಇಲ್ಲಿದೆ

ms dhoni 2019


ಈ ಬಾರಿ ವಿದಾಯ


ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿ ಕೆಳವು ವರ್ಷಗಳಾಗಿವೆ. ಕೇವಲ ಐಪಿಎಲ್​ ಟೂರ್ನಿಯಲ್ಲಿ(IPL 2024) ಮಾತ್ರ ಆಡುತ್ತಿದ್ದಾರೆ. ಕಳೆದ ವರ್ಷವೇ ಅವರು ಐಪಿಎಲ್​ಗೆ ವಿದಾಯ ಹೇಳಬೇಕಿತ್ತು. ಆದರೆ, ಅಭಿಮಾನಿಗಳ ಒತ್ತಾಯಕ್ಕೆ ಮಣಿದು ತಮ್ಮ ನಿವೃತ್ತಿಯನ್ನು ಒಂದು ವರ್ಷ ಮುಂದಕ್ಕೆ ಹಾಕಿದ್ದರು. ಈ ಬಾರಿಯ ಟೂರ್ನಿ ಧೋನಿಗೆ ವಿದಾಯದ ಟೂರ್ನಿಯಾಗಿದೆ.

Continue Reading

ಕ್ರೀಡೆ

IPL 2024 : ಐಪಿಎಲ್​ನಲ್ಲಿ ಹ್ಯಾಟ್ರಿಕ್​ ವಿಕೆಟ್ ಸಾಧನೆ ಮಾಡಿದ ಬೌಲರ್​ಗಳ ವಿವರ ಇಲ್ಲಿದೆ

IPL 2024 : ಒಟ್ಟು 17 ಬೌಲರ್​ಗಳು ಐಪಿಎಲ್​ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದಾರೆ.

VISTARANEWS.COM


on

Amit Mishara
Koo

ಟಿ20 ಕ್ರಿಕೆಟ್​ನಲ್ಲಿ ಬ್ಯಾಟರ್​ಗಳದ್ದೇ ಅಬ್ಬರ. ಪ್ರೇಕ್ಷಕರನ್ನು ರಂಜಿಸುವುದು ಹಾಗೂ ಪಂದ್ಯದ ಗತಿಯನ್ನು ಬದಲಾಯಿಸುವವರೂ ಅವರೇ. ಆದರೆ, ಕೆಲವೊಂದು ಬೌಲರ್​ಗಳು ಬ್ಯಾಟರ್​ಗಳಿಗೆ ಸರಿಯಾದ ಸಮಯದಲ್ಲಿ ಟಕ್ಕರ್​ ಕೊಡುವುದಿದೆ. ಒಂದೇ ಓವರ್​ನಲ್ಲಿ ಹಲವು ವಿಕೆಟ್​ಗಳನ್ನು ತೆಗೆಯುವ ಮೂಲಕ ತಂಡಕ್ಕೆ ವಿಜಯ ತಂದುಕೊಡುವುದಿದೆ. ಆದಾಗ್ಯೂ ಟಿ20 ಮಾದರಿಯಲ್ಲಿ ಬೌಲರ್​ಗಳಿಗೆ ಸದಾ ಸವಾಲು ಎದುರಾಗುತ್ತದೆ. ಅಂಥ ಪರಿಸ್ಥಿತಿಯಲ್ಲಿಯೂ ಹ್ಯಾಟ್ರಿಕ್​ ವಿಕೆಟ್​ ಪಡೆದ ಹಲವು ಬೌಲರ್​ಗಳಿದ್ದಾರೆ. ಅಂದೇ ಸತತ ಮೂರು ಎಸೆತಗಳಿಗೆ ಮೂರು ಬ್ಯಾಟರ್​ಗಳನ್ನು ಅವರು ಪೆವಿಲಿಯನ್​ಗೆ ಕಳುಹಿಸಿರುತ್ತಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಕೂಡ ಹಲವಾರು ಬಾರಿ ಹ್ಯಾಟ್ರಿಕ್ ವಿಕೆಟ್​ಗಳಿಗೆ ಸಾಕ್ಷಿಯಾಗಿದೆ. ಕ್ರಿಕೆಟ್ ಜಗತ್ತಿನ ಅತ್ಯಂತ ಕಠಿಣ ಲೀಗ್ ತನ್ನ 12 ಯಶಸ್ವಿ ಋತುಗಳಲ್ಲಿ 16 ಆಟಗಾರರು ಒಟ್ಟು 19 ಹ್ಯಾಟ್ರಿಕ್​ ವಿಕೆಟ್​ ಸಾಧನೆಗೆ ಸಾಕ್ಷಿಯಾಗಿದೆ. 2008ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಪರ ಲಕ್ಷ್ಮೀಪತಿ ಬಾಲಾಜಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು.

ಐಪಿಎಲ್ ಮೊದಲ ಋತುವಿನಲ್ಲಿ (2008) ಮೂರು ಹ್ಯಾಟ್ರಿಕ್​​ ವಿಕೆಟ್ ಸಾಧನೆ ಮೂಡಿ ಬಂದಿತ್ತು. ಅದೇ 2017 ರ ಋತುವಿನಲ್ಲಿ ಮತ್ತೆ ಪುನರಾವರ್ತನೆಯಾಯಿತು. 2015, 2018 ಮತ್ತು 2023ರ ಐಪಿಎಲ್​ನಲ್ಲಿ ಒಂದೇ ಒಂದು ಹ್ಯಾಟ್ರಿಕ್ ಕೂಡ ದಾಖಲಾಗಿರಲಿಲ್ಲ.

ಇದನ್ನೂ ಓದಿ : ಪಾಕಿಸ್ತಾನದಲ್ಲೇ ಚಾಂಪಿಯನ್ಸ್​ ಟ್ರೋಫಿ; ಪಿಸಿಬಿ ಅಧ್ಯಕ್ಷ ನಖ್ವಿ ವಿಶ್ವಾಸ

ರೋಹಿತ್ ಶರ್ಮಾ ಕೂಡ ಈ ಪಟ್ಟಿಯಲ್ಲಿ

ನಗದು ಸಮೃದ್ಧ ಲೀಗ್​ನಲ್ಲಿ ಅರೆಕಾಲಿಕ ಬೌಲರ್ ಕೂಡ ಹ್ಯಾಟ್ರಿಕ್ ದಾಖಲಿಸಿದ್ದುಂಟು. ರೋಹಿತ್ ಶರ್ಮಾ ಅವರು ಮುಂಬಯಿ ಇಂಡಿಯನ್ಸ್​ ಪರ ಮೂರು ಎಸೆತಗಳಲ್ಲಿ ಮೂರು ವಿಕೆಟ್​ಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಹಿಟ್​ಮ್ಯಾನ್​ 2 ನೇ ಇನಿಂಗ್ಸ್​​ನ 16 ನೇ ಓವರ್ ಎಸೆದಿದ್ದರು. ಡೆಕ್ಕನ್ ಚಾರ್ಜರ್ಸ್​ ತಂಡದ ಮೂವರನ್ನು ಔಟ್ ಮಾಡಿದ್ದರು.

ಅಮಿತ್ ಮಿಶ್ರಾಗೆ ಅಗ್ರಸ್ಥಾನ

ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಇಲ್ಲಿಯವರೆಗೆ 3 ಹ್ಯಾಟ್ರಿಕ್​ಗಳ ಸಾಧನೆ ಮಾಡಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲಿ ಯಾವುದೇ ಆಟಗಾರನಿಂದ ಮೂಡಿ ಬಂದ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ. ಅವರು ಮೂರು ವಿಭಿನ್ನ ಫ್ರಾಂಚೈಸಿಗಳಿಗಾಗಿ ಎಲ್ಲಾ ಮೂರು ಹ್ಯಾಟ್ರಿಕ್​ಗಳನ್ನು ಪಡೆದಿದ್ದಾರೆ. 2008ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಮೊದಲ ಹ್ಯಾಟ್ರಿಕ್, 2011ರಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ಎರಡನೇ ಹಾಗೂ 2013ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಕೊನೆಯ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಅಮಿತ್ ಮಿಶ್ರಾ ನಂತರದ ಸ್ಥಾನದಲ್ಲಿ ಯುವರಾಜ್ ಸಿಂಗ್ ಎರಡು ಬಾರಿ ಹ್ಯಾಟ್ರಿಕ್​ ಸಾಧನೆ ಮಾಡಿದ್ದಾರೆ.

ಹ್ಯಾಟ್ರಿಕ್​ ವಿಕೆಟ್​ ಸಾಧನೆ ಮಾಡಿದ ಬೌಲರ್​ಗಳ ವಿವರ ಇಲ್ಲಿದೆ

ಅಮಿತ್ ಮಿಶ್ರಾ- 3 ಬಾರಿ

  • ಯುವರಾಜ್ ಸಿಂಗ್- 2 ಬಾರಿ
  • ಮಖಾಯಾ ಎನ್​ಟಿನಿ- 1 ಬಾರಿ
  • ಅಜಿತ್ ಚಾಂಡಿಲಾ- 1 ಬಾರಿ
  • ಸ್ಯಾಮ್ಯುಯೆಲ್ ಬದ್ರಿ- 1 ಬಾರಿ
  • ಸ್ಯಾಮ್ ಕರ್ರನ್- 1 ಬಾರಿ
  • ರೋಹಿತ್ ಶರ್ಮಾ- 1 ಬಾರಿ
  • ಆಂಡ್ರ್ಯೂ ಟೈ- 1 ಬಾರಿ
  • ಪ್ರವೀಣ್ ತಾಂಬೆ- 1 ಬಾರಿ
  • ಶ್ರೇಯಸ್ ಗೋಪಾಲ್- 1 ಬಾರಿ
  • ಲಕ್ಷ್ಮೀಪತಿ ಬಾಲಾಜಿ – 1 ಬಾರಿ
  • ಜಯದೇವ್ ಉನಾದ್ಕಟ್- 1 ಬಾರಿ
  • ಅಕ್ಷರ್ ಪಟೇಲ್- 1 ಬಾರಿ
  • ಶೇನ್ ವ್ಯಾಟ್ಸನ್- 1 ಬಾರಿ
  • ಪ್ರವೀಣ್ ಕುಮಾರ್- 1 ಬಾರಿ
  • ಸುನಿಲ್ ನರೈನ್- 1 ಬಾರಿ
  • ರಶೀದ್ ಖಾನ್- 1 ಬಾರಿ
Continue Reading

ಕ್ರೀಡೆ

Champions Trophy: ಪಾಕಿಸ್ತಾನದಲ್ಲೇ ಚಾಂಪಿಯನ್ಸ್​ ಟ್ರೋಫಿ; ಪಿಸಿಬಿ ಅಧ್ಯಕ್ಷ ನಖ್ವಿ ವಿಶ್ವಾಸ

ಚಾಂಪಿಯನ್ಸ್​ ಟ್ರೋಫಿ(Champions Trophy) ಕ್ರಿಕೆಟ್​ ಟೂರ್ನಿಯೂ ಪಾಕಿಸ್ತಾನದಲ್ಲೇ ನಡೆಯಲಿದೆ ಎಂದು ಪಾಕಿಸ್ತಾನ ಕ್ರಿಕೆಟ್(PCB) ಮಂಡಳಿ(Pakistan Cricket Board) ಮುಖ್ಯಸ್ಥ ಮೊಹ್ಸಿನ್ ನಖ್ವಿ(Mohsin Naqvi) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

VISTARANEWS.COM


on

IND vs PAK
Koo

ಕರಾಚಿ: ಮುಂದಿನ ವರ್ಷ(Champions Trophy 2025) ಪಾಕಿಸ್ತಾನದ(Pakistan) ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿ(Champions Trophy) ಕ್ರಿಕೆಟ್​ ಟೂರ್ನಿಯೂ ಪಾಕಿಸ್ತಾನದಲ್ಲೇ ನಡೆಯಲಿದೆ ಎಂದು ಪಾಕಿಸ್ತಾನ ಕ್ರಿಕೆಟ್(PCB) ಮಂಡಳಿ(Pakistan Cricket Board) ಮುಖ್ಯಸ್ಥ ಮೊಹ್ಸಿನ್ ನಖ್ವಿ(Mohsin Naqvi) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಸೂಪರ್ ಲೀಗ್ ಫೈನಲ್‌ನ ಪಂದ್ಯ ಮುಕ್ತಾಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಖ್ವಿ, ಕಳೆದ ವಾರ ದುಬೈನಲ್ಲಿ ನಡೆದ ಐಸಿಸಿ ಸಭೆಗಳಲ್ಲಿ ಟೂರ್ನಿಯ ಬಗ್ಗೆ ಚರ್ಚೆಗಳು ನಡೆದಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರೊಂದಿಗೆ ಮಾತನಾಡಿದ್ದೇನೆ. ಟೂರ್ನಿಯನ್ನು ತನ್ನ ದೇಶದಿಂದ ಸ್ಥಳಾಂತರಿಸುವ ಸಾಧ್ಯತೆಯನ್ನು ಮಂಡಳಿಯು ಪರಿಗಣಿಸುತ್ತಿಲ್ಲ ಎಂದು ನಖ್ವಿ ದೃಢವಾದ ಹೇಳಿಕೆ ನೀಡಿದ್ದಾರೆ.

“ಜಯ್ ಶಾ ಜತೆ ಸ್ವಲ್ಪ ಸಮಯದವರೆಗೆ ಮಾತನಾಡಿದ್ದೇವೆ. ಈ ಮಾತುಕತೆಯೂ ಸೌಹಾರ್ದಯುತವಾಗಿತ್ತು. ಆದರೆ, ಚರ್ಚಿಸಿದ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ” ಎಂದು ಮೊಹ್ಸಿನ್ ನಖ್ವಿ ಹೇಳಿದರು. ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ಒಪ್ಪದಿದ್ದರೆ ಪಂದ್ಯಾವಳಿಯನ್ನು ಪಾಕಿಸ್ತಾನದಿಂದ ಸ್ಥಳಾಂತರಿಸಲಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಖ್ವಿ,”ಆ ಮಾರ್ಗಗಳ ಬಗ್ಗೆ ನಾನು ಯೋಚಿಸುವುದಿಲ್ಲ, ನಾವು ಪಾಕಿಸ್ತಾನದಲ್ಲಿ ನಿಗದಿತ ಸಮಯದಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸುತ್ತೇವೆ ಎಂಬ ವಿಶ್ವಾಸವಿದೆ” ಎಂದು ಹೇಳಿದರು.

ನವೆಂಬರ್ 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಭಾರತವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಆಡಿಲ್ಲ. ಜೂನ್-ಜುಲೈ 2008 ರಲ್ಲಿ ಏಷ್ಯಾ ಕಪ್ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡವು ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿತ್ತು. ಭಾರತ ತಂಡವು ಪ್ರಯಾಣಿಸಲು ನಿರಾಕರಿಸಿದ ನಂತರ, ಕಳೆದ ವರ್ಷದ ಏಷ್ಯಾಕಪ್ ಅನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಯಿತ್ತು. ಕೇವಲ ನಾಲ್ಕು ಪಂದ್ಯಗಳನ್ನು ಪಾಕಿಸ್ತಾನದಲ್ಲಿ ನಡೆಸಿ ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದಿದ್ದವು. ಭಾರತ ಎಲ್ಲ ಪಂದ್ಯಗಳನ್ನು ಲಂಕಾದಲ್ಲಿ ಆಡಿತ್ತು.

ಇದನ್ನೂ ಓದಿ Champions Trophy : ಯುಎಇನಲ್ಲಿ ಚಾಂಪಿಯನ್ಸ್ ಟ್ರೋಫಿ, ಪಾಕಿಸ್ತಾನಕ್ಕೆ ಹಿನ್ನಡೆ

ಮುಂದಿನ ವರ್ಷ ನಡೆಯುವ ಚಾಂಪಿಯನ್ಸ್​ ಟ್ರೋಫಿಯ ಯಶಸ್ಸಿಗೆ ಪಿಸಿಬಿ ಬದ್ಧವಾಗಿದ್ದರೂ, ಭದ್ರತಾ ಕಾರಣಗಳಿಂದಾಗಿ ಭಾರತವು ಭಾಗವಹಿಸದಿದ್ದರೆ, ಆಗ ಏಷ್ಯಾ ಕಪ್​ನಂತೆ​ ಹೈಬ್ರಿಡ್ ಮಾದರಿಯ ಮೊರೆ ಹೋಗಬೇಕಿದೆ. ಆದರೆ ಸ್ವತಂತ್ರ ಏಜೆನ್ಸಿಯೊಂದಿಗೆ ಸಮಾಲೋಚಿಸಿ ಸಮಗ್ರ ಭದ್ರತಾ ಮೌಲ್ಯಮಾಪನವನ್ನು ನಡೆಸಿ ಪಾಕಿಸ್ತಾನದಲ್ಲಿಯೇ ಟೂರ್ನಿ ನಡೆಸಿ ಎಂದು ಪಿಸಿಬಿ ಹೇಳುವ ಸಾಧ್ಯತೆಗಳಿವೆ. ಐಸಿಸಿ ಈ ವಿನಂತಿಯನ್ನು ಒಪ್ಪಿಕೊಂಡಿದೆ ಎಂದು ಇತ್ತೀಚಿನ ವರದಿಗಳು ಹೇಳಿವೆ. ಭಾರತ ಪಾಕ್​ನಲ್ಲಿ ಆಡಲಿದೆಯಾ ಅಥವಾ ಬಿಸಿಸಿಐ ಒತ್ತಾಯಕ್ಕೆ ಮಣಿದು ಟೂರ್ನಿ ಪಾಕ್​ ನಿಂದ ಶಿಫ್ಟ್​ ಆಗಲಿದೆಯಾ ಎನ್ನುವುದನ್ನು ಕಾದು ನೋಡಬೇಕಿದೆ.

ಅರ್ಹತೆ ಪಡೆದ ತಂಡಗಳು

ಐಸಿಸಿ ನಿಯಮಗಳ ಪ್ರಕಾರ 2023ರ ಸಾಲಿನ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಅಂಕಪಟ್ಟಿಯ ಅಗ್ರ 7ರಲ್ಲಿ ಸ್ಥಾನ ಪಡೆಯುವ ತಂಡಗಳು ಟೂರ್ನಿಗೆ ಅರ್ಹತೆ ಪಡೆದಿದೆ. ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್​, ಅಫಘಾನಿಸ್ತಾನ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್​ ಮತ್ತು ಬಾಂಗ್ಲಾದೇಶ ಅರ್ಹತೆ ಪಡೆದ ತಂಡಗಳಾಗಿವೆ.

Continue Reading

ಕ್ರೀಡೆ

IPL 2024: ಎಲ್ಲ ಅನುಮಾನಗಳಿಗೂ ತೆರೆ; ಆರ್​ಸಿಬಿ ಸೇರಿದ ಇಂಗ್ಲೆಂಡ್​ ಆಲ್​ರೌಂಡರ್​

ಮೊಣಕಾಲಿನ( Knee Injury) ಗಾಯಕ್ಕೆ ತುತ್ತಾಗಿದ್ದ ಟಾಮ್​ ಕರನ್(Tom Curran) ಸಂಪೂರ್ಣ ಚೇತರಿಕೆ ಕಂಡು ಐಪಿಎಲ್​ ಆಡಲು ಆರ್​ಸಿಬಿ ತಂಡ ಸೇರಿದ್ದಾರೆ.

VISTARANEWS.COM


on

Tom Curran
Koo

ಬೆಂಗಳೂರು: ಬಿಗ್ ಬ್ಯಾಷ್ ಲೀಗ್​ನಲ್ಲಿ ಮೊಣಕಾಲಿನ( Knee Injury) ಗಾಯಕ್ಕೆ ತುತ್ತಾಗಿದ್ದ ಟಾಮ್​ ಕರನ್(Tom Curran) ಅವರು ಈ ಬಾರಿಯ ಐಪಿಎಲ್(IPL 2024) ಆಡುವುದು ಅನುಮಾನ ಎನ್ನಲಾಗಿತ್ತು. ಇದರಿಂದ ಆರ್​ಸಿಬಿ(RCB) ತಂಡಕ್ಕೆ ಆತಂಕವೊಂದು ಸೃಷ್ಟಿಯಾಗಿತ್ತು. ಆದರೆ. ಇದೀಗ ಈ ಆತಂಕ ದೂರ ಆಗಿದೆ. ಟಾಮ್​ ಕರನ್ ಅವರು ಫುಲ್​ ಫಿಟ್​ ಆ್ಯಂಡ್​ ಫೈನ್​ ಆಗಿ ತಂಡ ಸೇರಿದ್ದಾರೆ.

ಕಳೆದ ವರ್ಷ ಡಿಸೆಂಬರ್​ನಲ್ಲಿ ದುಬೈನಲ್ಲಿ ನಡೆದಿದ್ದ ಆಟಗಾರರ ಮಿನಿ ಹರಾಜಿನಲ್ಲಿ ಆರ್​ಸಿಬಿ ಫ್ರಾಂಚೈಸಿ ಕರನ್ ಅವರನ್ನು 1.5 ಕೋಟಿ ರೂ. ನೀಡಿ ಖರೀದಿ ಮಾಡಿತ್ತು. ಬಿಗ್ ಬ್ಯಾಷ್ ಲೀಗ್​ನಲ್ಲಿ ಮೊಣಕಾಲಿನ ಗಾಯಕ್ಕೆ ತುತ್ತಾಗಿ ಈ ಟೂರ್ನಿಯಿಂದ ಅವರು ಹೊರಬಿದ್ದಿದ್ದರು. ಈ ವೇಳೆ ಅವರು ಐಪಿಎಲ್​ನಿಂದಲೂ ಹೊರಬೀಳಲಿದ್ದಾರೆ ಎಂದು ವರದಿಯಾಗಿತ್ತು. ಅವರು ಆರ್​ಸಿಬಿ ತಂಡ ಸೇರುವ ಮೂಲಕ ಎಲ್ಲ ಅನುಮಾನಗಳಿಗೂ ತೆರೆ ಬಿದ್ದಿದೆ. ಸೋಮವಾರ ತಡರಾತ್ರಿ ಆರ್​ಸಿಬಿ ತಂಡ ಸೇರಿದ್ದಾರೆ. ಅವರನ್ನು ಫ್ರಾಂಚೈಸಿಯು ಕ್ಯಾಪ್​ ನೀಡಿ ಸ್ವಾಗತಿಸಿದ ಫೋಟೊ ವೈರಲ್​ ಆಗಿದೆ.

ಇದನ್ನೂ ಓದಿ Virat Kohli: ಧೋನಿಯ ಹೇರ್‌ಸ್ಟೈಲ್‌ ಕಾಪಿ ಮಾಡಿದ ವಿರಾಟ್​ ಕೊಹ್ಲಿ

ಹರಾಜಿನಲ್ಲಿ ಆರ್​ಸಿಬಿ ಖರೀದಿಸಿದ ಆಟಗಾರರು

ಅಲ್ಜಾರಿ ಜೋಸೆಫ್ (11.5 ಕೋಟಿ), ಯಶ್ ದಯಾಳ್ (5 ಕೋಟಿ), ಟಾಮ್ ಕರ್ರನ್ (1.5 ಕೋಟಿ), ಲಾಕಿ ಫರ್ಗುಸನ್ (2 ಕೋಟಿ), ಸ್ವಪ್ನಿಲ್ ಸಿಂಗ್ (0.2 ಕೋಟಿ), ಸೌರವ್ ಚೌಹಾಣ್ (0.2 ಕೋಟಿ).

ಆರ್​ಸಿಬಿ ತಂಡ


ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್​ವೆಲ್​, ವಿರಾಟ್ ಕೊಹ್ಲಿ, ಕ್ಯಾಮರಾನ್ ಗ್ರೀನ್, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಾಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಯಾಂಕ್ ದಾಗರ್, ಮಹಿಪಾಲ್ ಲೊಮ್ರೊರ್, ಕರಣ್ ಶರ್ಮಾ, ಮನೋಜ್ ಭಾಂಡಗೆ, ವೈಶಾಕ್ ವಿಜಯ್ ಕುಮಾರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟಾಪ್ಲೆ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರ್ರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್.

ಚೆನ್ನೈ ಮೊದಲ ಎದುರಾಳಿ


ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2024) 17ನೇ ಆವೃತ್ತಿ ಆರಂಭವಾಗಲು ಇನ್ನು ಕೇವಲ 3 ದಿನ ಮಾತ್ರ ಬಾಕಿ ಉಳಿದಿದೆ. ಮಾರ್ಚ್ 22ರಂದು ಲೀಗ್​ನ ಸಾಂಪ್ರದಾಯಿಕ ಬದ್ದ ಎದುರಾಳಿಗಳಾದ ಆರ್‌ಸಿಬಿ(Royal Challengers Bangalore) ಮತ್ತು ಸಿಎಸ್‌ಕೆ(rcb vs csk) ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ. ಈ ಪಂದ್ಯಕ್ಕೆ ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂ ಅಣಿಯಾಗಿದೆ. ಪಂದ್ಯವನ್ನು ಕಣ್ತುಂಬಿಕೊಳ್ಳಲು ಈಗಾಗಲೇ ಉಭಯ ತಂಡಗಳ ಅಭಿಮಾನಿಗಳು ಕಾದು ಕುಳಿತಿದ್ದಾರೆ.

Continue Reading
Advertisement
Hanuman Chalisa Accused
ಬೆಂಗಳೂರು2 mins ago

Hanuman Chalisa : ಹನುಮಾನ್‌ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಮಾಡಿದ ದುಷ್ಕರ್ಮಿಗಳು ಇವರೇ ನೋಡಿ..

MS Dhoni
ಕ್ರೀಡೆ11 mins ago

IPL 2024: ಐಪಿಎಲ್​ ವೇಳೆ ತಾಳ್ಮೆ ಕಳೆದುಕೊಂಡಿದ್ದ ಧೋನಿಗೂ ಬಿದ್ದಿತ್ತು ದಂಡದ ಬರೆ

Amit Mishara
ಕ್ರೀಡೆ13 mins ago

IPL 2024 : ಐಪಿಎಲ್​ನಲ್ಲಿ ಹ್ಯಾಟ್ರಿಕ್​ ವಿಕೆಟ್ ಸಾಧನೆ ಮಾಡಿದ ಬೌಲರ್​ಗಳ ವಿವರ ಇಲ್ಲಿದೆ

Sudha Kongara
ಕಾಲಿವುಡ್17 mins ago

Actor Suriya: `ಸುಧಾ ಕೊಂಗರ’ ನಿರ್ದೇಶನದ ಸಿನಿಮಾ ಇನ್ನೂ ಸೆಟ್ಟೇರಲೇ ಇಲ್ಲ! ಸೂರ್ಯ ಹೇಳಿದ್ದೇನು?

Pralhad Joshi attack on Karnataka Congress Government for Nagarthapet assault case
ಬೆಂಗಳೂರು19 mins ago

Hanuman Chalisa: ನಗರ್ತಪೇಟೆ ಹಲ್ಲೆ ಕೇಸ್‌; ರಾಜ್ಯದಲ್ಲಿ ಹೆಚ್ಚಿದ ಹಿಂದೂ ವಿರೋಧಿ ನಡೆ: ಪ್ರಲ್ಹಾದ್‌ ಜೋಶಿ ಆಕ್ರೋಶ

CAA Supreme court
ದೇಶ19 mins ago

‌CAA: ಸಿಎಎಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ, ಸರ್ಕಾರಕ್ಕೆ ಸ್ಪಂದಿಸಲು 3 ವಾರ ಗಡುವು

uniliver
ವಾಣಿಜ್ಯ28 mins ago

Unilever Comapny: ಐಸ್‌ಕ್ರೀಮ್‌ ಉದ್ಯಮದಿಂದ ಹಿಂದೆ ಸರಿದ ಯೂನಿಲಿವರ್ ಕಂಪೆನಿ; 7,500 ಉದ್ಯೋಗ ಕಡಿತದ ಸೂಚನೆ

MP Tejaswi surya participate at Nagarthapet protest and KPCC Legal Cell complaint against him
ಬೆಂಗಳೂರು43 mins ago

Hanuman Chalisa: ನಗರ್ತಪೇಟೆ ಹಲ್ಲೆ ಕೇಸ್‌; ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್‌ ದೂರು!

IND vs PAK
ಕ್ರೀಡೆ46 mins ago

Champions Trophy: ಪಾಕಿಸ್ತಾನದಲ್ಲೇ ಚಾಂಪಿಯನ್ಸ್​ ಟ್ರೋಫಿ; ಪಿಸಿಬಿ ಅಧ್ಯಕ್ಷ ನಖ್ವಿ ವಿಶ್ವಾಸ

Hanuman Chalisa Warning
ಪ್ರಮುಖ ಸುದ್ದಿ49 mins ago

Hanuman Chalisa : ಇವತ್ತು ಜೈಲ್, ನಾಳೆ ಬೇಲ್, ಮತ್ತೆ ಅದೇ ಖೇಲ್‌; ನಗರ್ತ ಪೇಟೆ ಕಿರಾತಕರ ಸ್ಟೇಟಸ್‌

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Nagarthpet protest by BJP
ಬೆಂಗಳೂರು3 hours ago

Hanuman Chalisa: ನಗರ್ತಪೇಟೆ ಉದ್ವಿಗ್ನ; ಜೈಶ್ರೀರಾಮ್‌ ಕೂಗಿದ ಹಿಂದು ಕಾರ್ಯಕರ್ತರು, ಶೋಭಾ ಕರಂದ್ಲಾಜೆ ಪೊಲೀಸ್‌ ವಶಕ್ಕೆ

dina Bhavishya
ಭವಿಷ್ಯ11 hours ago

Dina Bhavishya : ಈ ರಾಶಿಯವರು ಎಚ್ಚರ ವಹಿಸಿ; ಅಮೂಲ್ಯವಾದ ವಸ್ತುವೊಂದು ಕೈ ತಪ್ಪಬಹುದು

Tejaswi Surya About Hanuman Chalisa Issue
ಬೆಂಗಳೂರು22 hours ago

ಹನುಮಾನ್‌ ಚಾಲೀಸಾ ಕೇಸ್‌; ಆರೋಪಿಗಳು ಅರೆಸ್ಟ್ ಆಗದಿದ್ದರೆ ಪ್ರತಿಭಟನೆ- ತೇಜಸ್ವಿ ಸೂರ್ಯ ಎಚ್ಚರಿಕೆ

read your daily horoscope predictions for march 18 2024
ಭವಿಷ್ಯ1 day ago

Dina Bhavishya : ಈ ದಿನ ನೀವೂ ಮೋಸ ಹೋಗುವುದು ಗ್ಯಾರಂಟಿ; ಬೆನ್ನ ಹಿಂದೆಯೇ ನಡೆಯುತ್ತೆ ಪಿತೂರಿ

Lok Sabha Election 2024 Congress finalises list of 13 seats
Lok Sabha Election 20242 days ago

Lok Sabha Election 2024: ಕಾಂಗ್ರೆಸ್‌ನಲ್ಲಿ 13 ಕ್ಷೇತ್ರಗಳ ಪಟ್ಟಿ ಫೈನಲ್!‌ ಸಂಭಾವ್ಯ ಅಭ್ಯರ್ಥಿಗಳ ಲಿಸ್ಟ್‌ ಇಲ್ಲಿದೆ

dina Bhvishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಅತ್ತೆ ಮನೆಯಿಂದ ಸಿಗಲಿದೆ ಭರಪೂರ ಉಡುಗೊರೆ

Dina Bhavishya
ಭವಿಷ್ಯ3 days ago

Dina Bhavishya : ಇವತ್ತು ಈ ರಾಶಿಯವರು ಮೌನದಿಂದ ಇರುವುದು ಒಳಿತು

Lok Sabha Election 2024 Is Operation JDS Worker Behind DK Brothers Breakfast Meeting
Lok Sabha Election 20244 days ago

Lok Sabha Election 2024: ಡಿಕೆ ಬ್ರದರ್ಸ್‌ ಬ್ರೇಕ್‌ಫಾಸ್ಟ್‌ ಮೀಟಿಂಗ್ ಹಿಂದೆ ‘ಆಪರೇಷನ್‌ ಜೆಡಿಎಸ್‌ ಕಾರ್ಯಕರ್ತ’?

read your daily horoscope predictions for march 15 2024
ಭವಿಷ್ಯ4 days ago

Dina Bhavishya : ಕೆಲವು ರಹಸ್ಯ ವಿಷಯಗಳು ಈ ರಾಶಿಯವರಿಗೆ ಅಚ್ಚರಿ ತರಲಿದೆ

Lok Sabha Election 2024 Yaduveer talks about entering politics and Yaduveer Krishnadatta Chamaraja Wadiyar meets BY Vijayendra
ಕರ್ನಾಟಕ5 days ago

‌Lok Sabha Election 2024: ಮೆಣಸಿನಕಾಯಿಯನ್ನು ಜೀರ್ಣಿಸಿಕೊಳ್ತೇನೆ; ನನ್ನ ಮೇಲೆ ರಾಜಸ್ಥಾನದ ಪ್ರಭಾವ ಇಲ್ಲ: ಯದುವೀರ್

ಟ್ರೆಂಡಿಂಗ್‌