Site icon Vistara News

ಫೈನಲ್ ಪಂದ್ಯದಲ್ಲಿ ವರ್ಣರಂಜಿತ ಕಾರ್ಯಕ್ರಮ; ಪಟ್ಟಿ ಬಿಡುಗಡೆಗೊಳಿಸಿದ ಬಿಸಿಸಿಐ

World Cup Closing Ceremony

ಅಹಮದಾಬಾದ್: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023(World Cup final) ಕೂಟದ ಉದ್ಘಾಟನ ಸಮಾರಂಭ ಮಾಡೆದೇ ಇದ್ದ ಬಿಸಿಸಿಐ(BCCI) ವಿರುದ್ಧ ಹಲವು ಟೀಕೆಗಳು ಕೇಳಿಬಂದಿತ್ತು. ಮೊದಲ ಬಾರಿಗೆ ಸಂಪೂರ್ಣವಾಗಿ ಕೂಟದ ಆತಿಥ್ಯ ಸಿಕ್ಕರೂ, ಅತ್ಯಂತ ಶ್ರೀಮಂತ ಕ್ರಿಕೆಟ್​ ಮಂಡಳಿ ಎನಿಸಿಕೊಂಡಿದ್ದರೂ ಬಿಸಿಸಿಐಗೆ ಉದ್ಘಾಟನ ಕಾರ್ಯಕ್ರಮ ನಡೆಸಲಾಗದಷ್ಟು ಕಷ್ಟ ಎದುರಾಯಿತೇ ಎಂಬ ಟಾಕ್​ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದು ಮಾಡಿತ್ತು. ಇದೀಗ ಸಮಾರೋಪ ಸಮಾರಂಭವನ್ನು ಅದ್ಧೂರಿಯಾಗಿ ನಡೆಸಲು ಬಿಸಿಸಿಐ ಸಕಲ ಸಿದ್ಧತೆ ಪೂರ್ಣಗೊಳಿಸಿದ್ದು ಸಮಾರೋಪ(World Cup 2023 closing ceremony) ಕಾರ್ಯಕ್ರಮದ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಭಾನುವಾರ ನಡೆಯುವ ಆಸ್ಟ್ರೇಲಿಯಾ ಮತ್ತು ಭಾರತ ನಡುವಣ ಫೈನಲ್(India vs Australia Final)​ ಪಂದ್ಯದ ವೇಳೆ ಹಲವು ಮನರಂಜನಾ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಬಿಸಿಸಿಐ ತನ್ನ ಅಧಿಕೃತ ಟ್ವೀಟರ್​ ಖಾತೆಯಲ್ಲಿ ಪ್ರಕಟಿಸಿದೆ. ಜತೆಗೆ ಈ ಕಾರ್ಯಕ್ರಮದ ಸಮಯವನ್ನೂ ನಿಗದಿಪಡಿಸಿದೆ.

ಟಾಸ್ ಬಳಿಕ ಏರ್​ ಶೋ

ಪಂದ್ಯದ ಟಾಸ್​ ಆದ 5 ನಿಮಿಷದಲ್ಲಿ ಅಂದರೆ 1.35ರಿಂದ 1.50ರವರೆಗೆ ಭಾರತೀಯ ವಾಯುಪಡೆಯ ಸೂರ್ಯಕಿರಣ್ ತಂಡದಿಂದ ಏರ್ ಶೋ ನಡೆಯಲಿದೆ. ನರೇಂದ್ರ ಮೋದಿ ಸ್ಟೇಡಿಯಂನ ಬಾನಂಗಳದಲ್ಲಿ ಲೋಹದ ಹಕ್ಕಿಗಳು ತಮ್ಮ ಚಕಮ್​ ತೋರಲಿದೆ. ಈಗಾಗಲೇ ಇದ್ದಕ್ಕೆ ಬೇಕಾದ ಪೂರ್ವ ಸಿದ್ಧತಾ ತಯಾರಿಯನ್ನು ಸೂರ್ಯಕಿರಣ್ ತಂಡ ನಡೆಸಿದೆ. ಕಳೆದ 2 ದಿನಗಳಿಂದ ಇಲ್ಲಿ ಪ್ರಾಯೋಗಿಕ ಹಾರಾಟ ನಡೆಸಿ ಸರ್ವ ಸನ್ನದ್ಧವಾಗಿ ನಿಂತಿದೆ.

ಮೊದಲ ಡ್ರಿಂಕ್ಸ್ ಬ್ರೇಕ್ ವೇಳೆ ಸಂಗೀತ ರಸಮಂಜರಿ

ಪಂದ್ಯದ ಮೊದಲು ಇನ್ನಿಂಗ್ಸ್​ನ ಡ್ರಿಂಕ್ಸ್ ಬ್ರೇಕ್ ವೇಳೆ ಆದಿತ್ಯ ಗಧ್ವಿ ಅವರಿಂದ ಗಾಯನ ಪ್ರದರ್ಶನ ನಡೆಯಲಿದೆ. ಇದಾದ ಬಳಿಕ ಅಮದರೆ ಮೊದಲು ಇನ್ನಿಂಗ್ ಮುಗಿದ ಬಳಿಕ ಸಿಗುವ ಸಮಯದಲ್ಲಿ ಪ್ರೀತಮ್ ಚಕ್ರವರ್ತಿ, ಜೋನಿತಾ ಗಾಂಧಿ, ನಕಾಶ್ ಅಜೀಜ್, ಅಮಿತ್ ಮಿಶ್ರಾ, ಅಕಾಸ ಸಿಂಗ್ ಮತ್ತು ತುಷಾರ್ ಜೋಶಿ ಇವರಿಂದ ಸಂಗೀತ ರಸಮಂಜರಿ ಇರಲಿದೆ.

ಇದನ್ನೂ ಓದಿ IND vs AUS: ಗಂಗೂಲಿ ಮಾಡಿದ ಎಡವಟ್ಟನ್ನು ರೋಹಿತ್​ ಶರ್ಮಾ ಮಾಡದಿರಲಿ…

2ನೇ ಡ್ರಿಂಕ್ಸ್ ಬ್ರೇಕ್ ವೇಳೆ ಲೇಸರ್ ಶೋ

ಈ ಬಾರಿಯ ಎಲ್ಲ ಲೀಗ್​ ಪಂದ್ಯದ ವೇಳೆಯೂ ಬಿಸಿಸಿಐ ಸ್ಟೇಡಿಯಂಗಳಲ್ಲಿ ವಿನೂತನ ಶೈಲಿಯ ಲಸರ್​ ಶೋಗಳ ಮೂಲಕ ನೆರದಿದ್ದ ಪ್ರೇಕ್ಷಕರನ್ನು ರಂಜಿಸಿತ್ತು. ಇದೀಗ ಫೈನಲ್​ ಪಂದ್ಯದಲ್ಲೂ ವಿಶಿಷ್ಠ ಶೈಲಿಯ ಲೇಸರ್ ಮತ್ತು ಲೈಟ್ ಶೋ ನಡೆಯಲಿದೆ. ಇದು ಎರಡನೇ ಇನ್ನಿಂಗ್ಸ್​ನ ಡ್ರಿಂಕ್ಸ್ ಬ್ರೇಕ್ ವೇಳೆ ಪ್ರದರ್ಶನಗೊಳ್ಳಲಿದೆ ಎಂದು ಬಿಸಿಸಿಐ ತನ್ನ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ.

ಇದನ್ನೂ ಓದಿ 2003ರ ವಿಶ್ವಕಪ್​ಗೂ 2023ಕ್ಕೂ ಇದೆ ಹಲವು ಸಾಮ್ಯತೆ; ಭಾರತ ಕಪ್​ ಗೆಲ್ಲುವುದು ನಿಶ್ಚಿತ!

ಮೋದಿ-ಅಲ್ಬನೀಸ್​ಗೆ ಆಹ್ವಾನ

ಫೈನಲ್​ ಪಂದ್ಯಕ್ಕೆ ಉಭಯ ದೇಶಗಳ ಪ್ರಧಾನಿಗಳಾದ ನರೇಂದ್ರ ಮೋದಿ ಮತ್ತು ಆಂಥೋನಿ ಅಲ್ಬನೀಸ್ ಅವರಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಆದರೆ ಇವರಿಬ್ಬರ ಉಪಸ್ಥಿತಿಯ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಸರಣಿಯ ನಾಲ್ಕನೇ ಟೆಸ್ಟ್​ ಪಂದ್ಯಕ್ಕೆ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಸಾಕ್ಷಿಯಾಗಿದ್ದರು. ಕ್ರೀಡಾಂಗಣಕ್ಕೆ ಭೇಟಿ ಎರಡೂ ತಂಡಗಳ ಆಟಗಾರರ ಜತೆ ಕುಶಲೋಪರಿ ನಡೆಸಿದ್ದರು.

ಇದನ್ನೂ ಓದಿ IND vs AUS: ಭಾರತ-ಆಸೀಸ್​ ವಿಶ್ವಕಪ್​ ಸಾಧನೆಯ ಅಂಕಿ ಅಂಶ ಹೇಗಿದೆ?

Exit mobile version