2003ರ ವಿಶ್ವಕಪ್​ಗೂ 2023ಕ್ಕೂ ಇದೆ ಹಲವು ಸಾಮ್ಯತೆ; ಭಾರತ ಕಪ್​ ಗೆಲ್ಲುವುದು ನಿಶ್ಚಿತ! Vistara News

ಕ್ರಿಕೆಟ್

2003ರ ವಿಶ್ವಕಪ್​ಗೂ 2023ಕ್ಕೂ ಇದೆ ಹಲವು ಸಾಮ್ಯತೆ; ಭಾರತ ಕಪ್​ ಗೆಲ್ಲುವುದು ನಿಶ್ಚಿತ!

ಭಾರತ ತಂಡ 2003ರ ವಿಶ್ವಕಪ್‌ ಫೈನಲ್‌(India vs Australia Final 2003) ಸೋಲಿಗೆ ಈ ಬಾರಿ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. ಅಂದಿನ ಟೂರ್ನಿಗೂ ಈ ಬಾರಿಯ ಟೂರ್ನಿಯೂ ಕೆಲ ಸಾಮ್ಯತೆಗಳಿವೆ.

VISTARANEWS.COM


on

2003 vs 2023 world cup
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಭಾರತ ಮತ್ತು ಆಸ್ಟ್ರೇಲಿಯಾ(India vs Australia Final) ತಂಡಗಳು ಏಕದಿನ ವಿಶ್ವಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ 20 ವರ್ಷಗಳ ಬಳಿಕ ಮುಖಾಮುಖಿಯಾಗುತ್ತಿದೆ. ಇತ್ತಂಡಗಳ ಈ ಫೈನಲ್​ ಕಾದಾಟ ಭಾನುವಾರ ವಿಶ್ವದ ಅತಿ ದೊಡ್ಡ ಕ್ರಿಕೆಟ್​ ಸ್ಟೇಡಿಯಂ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ಈ ಪಂದ್ಯಕ್ಕೆ ಉಭಯ ತಂಡಗಳ ಆಟಗಾರರು ಭರ್ಜರಿ ಅಭ್ಯಾಸ ನಡೆಸಿದ್ದಾರೆ. ಭಾರತ ತಂಡ 2003ರ ವಿಶ್ವಕಪ್‌ ಫೈನಲ್‌(India vs Australia Final 2003) ಸೋಲಿಗೆ ಈ ಬಾರಿ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. ಅಂದಿನ ಟೂರ್ನಿಗೂ ಈ ಬಾರಿಯ ಟೂರ್ನಿಯೂ ಕೆಲ ಸಾಮ್ಯತೆಗಳಿವೆ.

ಸತತ 10 ಪಂದ್ಯ ಗೆದ್ದಿದ್ದ ಆಸ್ಟ್ರೇಲಿಯಾ

2003ರ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಸತತ 10 ಪಂದ್ಯಗಳನ್ನು ಗೆದ್ದು ಅಗ್ರಸ್ಥಾನದೊಂದಿಗೆ ಫೈನಲ್‌ಗೇರಿತ್ತು. ಭಾರತ ತಂಡ 8 ಪಂದ್ಯ ಗೆದ್ದು ಪ್ರಶಸ್ತಿ ಸುತ್ತು ಪ್ರವೇಶಿಸಿತ್ತು. ಈ ಬಾರಿಯ ವಿಶ್ವಕಪ್​ನಲ್ಲಿ ಭಾರತ ತಂಡ ಸತತ 10 ಪಂದ್ಯಗಳನ್ನು ಗೆದ್ದು ಫೈನಲ್‌ಗೇರಿದೆ. ಆಸ್ಟ್ರೇಲಿಯಾ 8 ಜಯ ಸಾಧಿಸಿ ಫೈನಲ್​ ಪ್ರವೇಶಿಸಿದೆ. ಇನ್ನೊಂದು ಅಚ್ಚರಿ ಏನೆಂದರೆ 2003ರಲ್ಲಿ ಗೆದ್ದ ಟ್ರೋಫಿ ಆಸ್ಟ್ರೇಲಿಯಾ ಪಾಲಿಗೆ 3ನೇ ವಿಶ್ವಕಪ್‌ ಆಗಿತ್ತು. ಈ ಬಾರಿ ಭಾರತವೂ 3ನೇ ಟ್ರೋಫಿ ಗೆಲ್ಲುವ ಹಾದಿಯಲ್ಲಿದೆ. ಹಿಂದಿನ ಸಾಮತ್ಯೆಯ ಭವಿಷ್ಯವನ್ನು ನೋಡುವಾಗ ಭಾರತವೇ ಚಾಂಪಿಯನ್​ ಆಗುವ ಎಲ್ಲ ಸಾಧ್ಯತೆ ಇದೆ.

ಇದನ್ನೂ ಓದಿ IND vs AUS: ಗಂಗೂಲಿ ಮಾಡಿದ ಎಡವಟ್ಟನ್ನು ರೋಹಿತ್​ ಶರ್ಮಾ ಮಾಡದಿರಲಿ…

2 ಸೋಲಿಗೆ ಭಾರತ ಸೇಡು ತೀರಿಸಬೇಕಿದೆ

ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 2 ಫೈನಲ್‌ ಸೋಲಿನ ಸೇಡನ್ನು ತೀರಿಸಿಕೊಳ್ಳಬೇಕಿದೆ. ಒಂದು 2003ರ ಏಕದಿನ ವಿಶ್ವಕಪ್​ ಮತ್ತೊಂದು ಈ ವರ್ಷ ನಡೆದ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಸೋಲು. ಎರಡನ್ನೂ ಸೇರಿಸಿ ಭಾರತ ಈ ಪಂದ್ಯದಲ್ಲಿ ಲೆಕ್ಕ ಚುಕ್ತ ಮಾಡಬಹುದು.

ಇದನ್ನೂ ಓದಿ IND vs AUS: ಭಾರತ-ಆಸೀಸ್​ ವಿಶ್ವಕಪ್​ ಸಾಧನೆಯ ಅಂಕಿ ಅಂಶ ಹೇಗಿದೆ?

2003ರ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ ಭಾರತದ ಬೌಲರ್‌ಗಳ ಮೇಲೆ ಘಾತಕವಾಗೆರಗಿ ಫೈನಲ್‌ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ದಾಖಲಿಸಿತು. ನಾಯಕ ಪಾಂಟಿಂಗ್‌ ಅಜೇಯ 140, ಮಾರ್ಟಿನ್‌ ಅಜೇಯ 88, ಗಿಲ್‌ಕ್ರಿಸ್ಟ್‌ 57 ರನ್‌ ಬಾರಿಸಿ ತಂಡದ ಮೊತ್ತವನ್ನು ಎರಡೇ ವಿಕೆಟಿಗೆ 359ಕ್ಕೆ ಏರಿಸಿದರು. ಚೇಸಿಂಗ್‌ ವೇಳೆ ಸಚಿನ್​ ತೆಂಡೂಲ್ಕರ್‌ ಅವರನ್ನು ಮೊದಲ ಎಸೆತದಲ್ಲೇ ಕಳೆದುಕೊಂಡದ್ದು ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಹೋರಾಟ ಸಂಘಟಿಸಿದ್ದು ವೀರೇಂದ್ರ ಸೆಹವಾಗ್‌ ಮತ್ತು ಈಗಿನ ಭಾರತ ತಂಡದ ಕೋಚ್​ ರಾಹುಲ್​ ದ್ರಾವಿಡ್‌ ಮಾತ್ರ. ಭಾರತ 39.2 ಓವರ್​ಗಳಲ್ಲಿ 234ಕ್ಕೆ ಆಲೌಟಾಗಿ 125 ರನ್ನುಗಳ ಸೋಲಿಗೆ ತುತ್ತಾಯಿತು. 

ನಂ.1 ಅದೃಷ್ಟ

ವಿಶ್ವಕಪ್​ ಟೂರ್ನಿಗೂ ಮುನ್ನ ನಂ.1 ಸ್ಥಾನ ಅಲಂಕರಿಸಿ ಪಂದ್ಯಾವಳಿಗೆ ಕಾಲಿಟ್ಟರೆ ಆ ತಂಡವೇ ಕಪ್​ ಗೆಲ್ಲಲಿದೆ ಎನ್ನುವುದು ಹಿಂದಿನಿಂದಲೂ ನಡೆದು ಬಂದ ಒಂದು ಕಾಕತಾಳಿಯ ಲೆಕ್ಕಾಚಾರವಿದೆ. ಈ ಬಾರಿ ಭಾರತ ತಂಡ ನಂ.1 ಸ್ಥಾನದೊಂದಿಗೆ ವಿಶ್ವಕಪ್​ ಆಡಲಿಳಿದು ಇದೀಗ ಫೈನಲ್​ ತನ ಬಂದು ನಿಂತಿದೆ. ಹಿಂದಿನ ಎಲ್ಲ ಲೆಕ್ಕಾಚಾರದ ಪ್ರಕಾರ ನಂ.1 ಸ್ಥಾನ ಪಡೆದ ತಂಡವೇ ಕಪ್​ ಗೆದ್ದು ಮರೆದಾಡಿತ್ತು. ಇದು ಭಾರತದ ವಿಚಾರದಲ್ಲಿಯೂ ಸುಳ್ಳಾಗದು ಎನ್ನುವುದು ಕ್ರಿಕೆಟ್​ ಅಭಿಮಾನಿಗಳ ಅಚಲ ನಂಬಿಕೆಯಾಗಿದೆ.

2015ರ ಏಕದಿನ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್​ನಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ವಿಶ್ವಕಪ್​ಗೆ ಪ್ರವೇಶಿಸಿ, ಟ್ರೋಫಿಯನ್ನೂ ಗೆದ್ದುಕೊಂಡಿತ್ತು. ಹಾಗೆಯೇ 2019ರ ವಿಶ್ವಕಪ್​ನಲ್ಲಿ ಕ್ರಿಕೆಟ್​​ನಲ್ಲಿ ಇಂಗ್ಲೆಂಡ್ ಶ್ರೇಯಾಂಕದಲ್ಲಿ ನಂ 1 ಸ್ಥಾನವಾಗಿ ವಿಶ್ವಕಪ್​ಗೆ ಪ್ರವೇಶಿಸಿ ಚೊಚ್ಚಲ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿತು. ಈ ಸಂಖ್ಯಾ ಭವಿಷ್ಯದಲ್ಲಿ ಭಾರತವೇ ಚಾಂಪಿಯನ್​ ಆಗಬೇಕಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

ind vs aus : ಆಸ್ಟ್ರೇಲಿಯಾ- ಭಾರತ ಟಿ20 ಪಂದ್ಯದ ಅಂಪೈರ್​ ಮೇಲೆ ಮೋಸದ ಅರೋಪ!

ind vs aus : ಸರಣಿಯ ಕೊನೇ ಪಂದ್ಯದಲ್ಲಿ ಭಾರತ ತಂಡ 6 ರನ್​ಗಳ ರೋಚಕ ಗೆಲುವು ಸಾಧಿಸಿ ಸರಣಿಯನ್ನು 4-1 ಅಂತರದಿಂದ ತನ್ನದಾಗಿಸಿಕೊಂಡಿತ್ತು.

VISTARANEWS.COM


on

Cricket news
Koo

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ (ind vs aus) ಐದನೇ ಮತ್ತು ಅಂತಿಮ ಟಿ 20 ಪಂದ್ಯದಲ್ಲಿ ಭಾರತ ತಂಡವು ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ ಐದು ಪಂದ್ಯಗಳ ಸರಣಿಯನ್ನು 4-1 ರಿಂದ ಗೆದ್ದುಕೊಂಡು ಬೀಗಿದೆ. ಭಾರತ ತಂಡಕ್ಕೆ ಇದು ಉತ್ತಮ ಫಲಿತಾಂಶವಾಗಿದ್ದು, ವಿಶ್ವಕಪ್ ಫೈನಲ್ ಸೋಲಿನ ನಂತರ ನಿರಾಶೆಗೊಂಡ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಸ್ವಲ್ಪ ಉತ್ಸಾಹ ತಂದಿದೆ.

ಟಾಸ್ ಗೆದ್ದ ಆಸ್ಟ್ರೇಲಿಯಾದ ನಾಯಕ ಮ್ಯಾಥ್ಯೂ ವೇಡ್ ಅವರು ಮೊದಲು ಬ್ಯಾಟಿಂಗ್ ಮಾಡವಂತೆ ಭಾರತಕ್ಕೆ ಆಹ್ವಾನ ಕೊಟ್ಟಿತು/ ಶ್ರೇಯಸ್ ಅಯ್ಯರ್ 53 ರನ್ ಗಳಿಸಿದರೆ, ಅಕ್ಷರ್ ಪಟೇಲ್ 31 ರನ್ ಗಳಿಸಿದ್ದರಿಂದ ಭಾರತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ಅಂತೆಯೇ ಪಂದ್ಯದ ಕೊನೇ ಹಂತದಲ್ಲಿ ಬೌಲಿಂಗ್​ನಲ್ಲಿ ಮಿಂಚಿದ ಮುಕೇಶ್ ಕುಮಾರ್ (32ಕ್ಕೆ 3) ಹಾಗೂ ಅರ್ಷ್ದೀಪ್ ಸಿಂಗ್ (40ಕ್ಕೆ 2) ಭಾರತ ತಂಡವನ್ನು ಗೆಲ್ಲಿಸಿದರು. ಅದರಲ್ಲೂ ಅರ್ಶ್​ ದೀಪ್​ ಕೊನೇ ಓವರ್​ನಲ್ಲಿ ಬೇಕಾಗಿದ್ದ 10 ರನ್ ಕಾಪಾಡಿ ಭಾರತಕ್ಕೆ 6 ರನ್ ಗಳ ಜಯ ತಂದಕೊಟ್ಟಿದ್ದರು. ಈ ಓವರ್ ಅತ್ಯಂತ ರೋಚಕವಾಗಿತ್ತು. ಇದೀಗ ಆ ಓವರ್​ನ ಎರಡು ಎಸೆತಗಳು ವಿವಾದಕ್ಕೆ ಒಳಗಾಗಿದೆ. ಆಸ್ಟ್ರೇಲಿಯಾದ ಮಾಜಿ ಆಟಗಾರರು ಇದು ಮೋಸದಾಟ ಎಂಬಂತೆ ಅದನ್ನು ಬಿಂಬಿಸಿದ್ದಾರೆ. ಅಂಪೈರ್​ಗಳ ಮೇಲೆ ಪಕ್ಷಪಾತದ ಗೂಬೆ ಕೂರಿಸಿದ್ದಾರೆ.

ಹೇಡನ್ ವಿವಾದಾತ್ಮಕ ಹೇಳಿಕೆ

ಪಂದ್ಯದ ವೀಕ್ಷಕ ವಿವರಣೆಯ ಸಮಯದಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ನೀಡಿದ ಹೇಳಿಕೆ ಸ್ವಲ್ಪ ಕೋಲಾಹಲಕ್ಕೆ ಕಾರಣವಾಯಿತು. ಅರ್ಶ್​ದೀಪ್​ ಅವರು ಎಸೆದ ಬೌನ್ಸರ್ ಮ್ಯಾಥ್ಯೂ ವೇಡ್ ಅವರ ತಲೆಯ ಮೇಲೆ ಹಾರಿ ಹೋಗಿತ್ತು. ಬ್ಯಾಟರ್​ ಮನವಿಯ ಹೊರತಾಗಿಯೂ, ಲೆಗ್-ಅಂಪೈರ್ ಅದಕ್ಕೆ ವೈಡ್​ ನೀಡಲಿಲ್ಲ. ಇದು ವೇಡ್ ಅವರ ಕೋಪಕ್ಕೆ ಕಾರಣವಾಯಿತು.

ಇದನ್ನೂ ಓದಿ : Suryakumar Yadav : ಕೊಹ್ಲಿ ದಾಖಲೆ ಮುರಿಯಲು ಸಜ್ಜಾಗಿದ್ದಾರೆ ಸೂರ್ಯಕುಮಾರ್​

ಹೇಡನ್ ಈ ಕುರಿತು ವಿವರಣೆ ನೀಡಿ, ವೇಡ್​ ಕೋಪಗೊಂಡಿದ್ದು ಸರಿಯಾಗಿದೆ. ಅದು ಖಂಡಿತವಾಗಿಯೂ ವೈಡ್​ ಎಸೆತ. ಅವರ ತಲೆಯ ಮೇಲೆ ಹಾರಿ ಹೋಗಿದೆ. ಅವರು ತಮ್ಮ ಸ್ಥಾನದಲ್ಲಿ ನಿಂತಿದ್ದ ಹೊರತಾಗಿಯೂ ಚೆಂಡು ಮೇಲಕ್ಕೆ ಹಾರಿದೆ. ಹೀಗಾಗಿ ವೈಡ್​ ನೀಡಬೇಕಾಗಿತ್ತು ಎಂದು ವಾದಿಸಿದ್ದಾರೆ. ಇದು ಅಂಪೈರ್ ಮಾಡಿದ ಮೊದಲ ತಪ್ಪು ಎಂಬುದಾಗಿ ಹೇಡನ್ ಆರೋಪಿಸಿದ್ದಾರೆ.

ಅಂಪೈರ್​ ದೇಹಕ್ಕೆ ಬಡಿದಿತ್ತು ಚೆಂಡು

ಕೊನೆಯ 2 ಎಸೆತಗಳಲ್ಲಿ ಆಸೀಸ್​ ಬಳಗಕ್ಕೆ 8 ರನ್​ಗಳ ಅಗತ್ಯವಿತ್ತು. ನಥನ್ ಎಲ್ಲಿಸ್ ಸ್ಟ್ರೈಟ್​ ಬೌಂಡರಿಯನ್ನು ಗುರಿಯಾಗಿಸಿ ಬಾರಿಸಿದ ಚೆಂಡು ಬೌಲರ್ ಅರ್ಶ್​ದೀಪ್ ಅವರ ಕೈಸವರಿ ಅಂಪೈರ್​ನ ಮೈ ಮೇಲೆ ಬಿದ್ದಿತ್ತು. ಅಂಪೈರ್​ ಚೆಂಡಿನಿಂದ ತಪ್ಪಿಸಿಕೊಳ್ಳುವುದಕ್ಕೆ ನಾನಾ ರೀತಿ ಯತ್ನಿಸಿದರೂ ಅದು ಅವರ ತೊಡೆಗೆ ಬಡಿದಿತ್ತು. ಎಲ್ಲಿಸ್ ಸಂಭಾವ್ಯ ಬೌಂಡರಿಯನ್ನು ತಪ್ಪಿಸಿಕೊಂಡಿರುವ ಬಗ್ಗೆ ಸನ್ನೆ ಮಾಡಿದರೂ ಅಂಪೈರ್​ ಮರುತ್ತರ ಕೊಟ್ಟಿರಲಿಲ್ಲ.

ಈ ಎರಡೂ ಪ್ರಸಂಗವನ್ನು ನೋಡಿದ ಹೇಡನ್, ಅಂಪೈರ್ ಈ ಓವರ್​ನಲ್ಲಿ ಎರಡನೇ ಬಾರಿಗೆ ತಮ್ಮ ಕರ್ತವ್ಯ ಪೂರೈಸಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಈ ಮಾತು ಅಂಪೈರ್​ಗಳ ಮೋಸ ಹಾಗೂ ಸ್ವಜನಪಕ್ಷಪಾತ ಎಂಬ ಹೇಳಿಕೆಯಾಗಿತ್ತು.

ಹೇಡನ್ ಅವರ ಹೇಳಿಕೆಗಳು ಅನಗತ್ಯ ಎಂದು ನೆಟ್ಟಿಗರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಲಾಂಗ್ ಆನ್ ನಲ್ಲಿ ಫೀಲ್ಡರ್​ಗಳಿದ್ದರು. ಇದರಿಂದ ಯಾವುದೇ ವ್ಯತ್ಯಾಸ ಉಂಟಾಗುತ್ತಿರಲಿಲ್ಲ ಎಂದ ಹೇಳಿದ್ದಾರೆ. ಮೊದಲ ಎಸೆತವನ್ನು ವೈಡ್ ಕೊಟ್ಟಿದ್ದರೆ ಆಸ್ಟ್ರೇಲಿಯಾ ಐದು ರನ್​ನಿಂದ ಸೋಲುತ್ತಿತ್ತು ಎಂಬುದಾಗಿಯೂ ಅವರು ಹೇಳಿದ್ದಾರೆ.

Continue Reading

ಕ್ರಿಕೆಟ್

Rohit Sharma : ಫಾರಿನ್ ಟೂರ್​ ಮುಗಿಸಿ ಮರಳಿದ ರೋಹಿತ್​ ಶರ್ಮಾ ಫ್ಯಾಮಿಲಿ

Rohit Sharma: ರೋಹಿತ್ ಶರ್ಮಾ ಅವರು ಪತ್ನಿ ಮತ್ತು ಪುತ್ರಿಯೊಂದಿಗೆ ಬ್ರಿಟನ್​ಗೆ ಹೋಗಿ ಅಲ್ಲಿ ಸುತ್ತಾಡಿದ್ದರು.

VISTARANEWS.COM


on

Rohit Sharma
Koo

ಮುಂಬಯಿ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಅವರು ಪತ್ನಿ ರಿತಿಕಾ ಸಜ್ದೇ ಮತ್ತು ಮಗಳು ಸಮೈರಾ ಜತೆಗೆ ಸೋಮವಾರ ಮುಂಬೈಗೆ ಮರಳಿದರು. ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭಾರತೀಯ ನಾಯಕ ತನ್ನ ಕುಟುಂಬದೊಂದಿಗೆ ಕಾಣಿಸಿಕೊಂಡರು. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್​ನಲ್ಲಿ ಭಾರತ ತಂಡದ ಸೋಲಿನ ಬಳಿಕ ರೋಹಿತ್ ಮತ್ತು ಇತರ ಹಿರಿಯ ಆಟಗಾರರು ವಿರಾಮ ತೆಗೆದುಕೊಂಡಿದ್ದರು. ಈ ಅವಧಿಯಲ್ಲಿ ಅವರು ಬ್ರಿಟನ್​ಗೆ ಪ್ರವಾಸ ಹೋಗಿದ್ದರು ಎಂದು ಹೇಳಲಾಗಿದೆ. ಪ್ರವಾಸದಲ್ಲಿದ್ದ ಕಾರಣ ರೋಹಿತ್ ಶರ್ಮಾ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಟಿ 20 ಪಂದ್ಯಗಳಲ್ಲಿ ಪಾಲ್ಗೊಂಡಿರಲಿಲ್ಲ.

ಭಾರತದ ವಿಶ್ವಕಪ್ ಫೈನಲ್ ಸೋಲಿನ ನಂತರ ಭಾರತೀಯ ನಾಯಕ ಸಾರ್ವಜನಿಕ ದೃಷ್ಟಿಯಿಂದ ದೂರ ಉಳಿದಿದ್ದರು. ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪತ್ನಿಯೊಂದಿಗೆ ರಜಾದಿನಗಳನ್ನು ಕಳೆಯುವ ಚಿತ್ರವನ್ನು ಹಂಚಿಕೊಂಡಿದ್ದರು. ಹೀಗಾಗಿ ಅವರು ಬ್ರಿಟನ್​ನಲ್ಲಿ ತಿರುಗಾಟ ನಡೆಸುತ್ತಿದ್ದಾರೆ ಎಂಬುದು ಗೊತ್ತಾಗಿತ್ತು.

ಏಕದಿನ ವಿಶ್ವಕಪ್​ನಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್ ಮೂಲಕ ಅದ್ಭುತ ಪ್ರದರ್ಶನ ನೀಡಿದ್ದರು. ಅವರು ತಂಡವನ್ನು ಮುಂಚೂಣಿ ಸ್ಥಾನದಲ್ಲಿ ನಿಂತು ಮುನ್ನಡೆಸಿದ್ದರು. ಒಟ್ಟು 597 ರನ್​​ಗಳೊಂದಿಗೆ 2 ನೇ ಅತಿ ಹೆಚ್ಚು ರನ್ ಬಾರಿಸಿದ ಆಟಗಾರನಾಗಿ ಪ್ರವಾಸವನ್ನು ಕೊನೆಗೊಳಿಸಿದ್ದರು. ಏಕದಿನ ವಿಶ್ವಕಪ್​​ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯುವುದು ಸೇರಿದಂತೆ 11 ಪಂದ್ಯಗಳ ಅಭಿಯಾನದಲ್ಲಿ 36 ವರ್ಷದ ಬ್ಯಾಟರ್​​ ಅನೇಕ ದಾಖಲೆಗಳನ್ನು ಮುರಿದಿದ್ದಾರೆ.

ವಿಶೇಷವೆಂದರೆ, ಡಿಸೆಂಬರ್ 10 ರಿಂದ ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಟಿ 20 ಐ ಮತ್ತು ಏಕದಿನ ಸರಣಿಯಿಂದ ರೋಹಿತ್​ಗೆ ವಿಶ್ರಾಂತಿ ನೀಡಲಾಗಿದೆ. ಡಿಸೆಂಬರ್ 26 ರಿಂದ ಸೆಂಚೂರಿಯನ್​ನಲ್ಲಿ ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಲು ಭಾರತೀಯ ನಾಯಕ ಟೆಸ್ಟ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಬುಮ್ರಾಗೆ ಸಲಹೆ ಕೊಟ್ಟ ನೀರಜ್​

ಭಾರತದಲ್ಲಿ ಜಾವೆಲಿನ್ ಎಸೆತವನ್ನು ಜನಪ್ರಿಯಗೊಳಿಸಿದ ಕೀರ್ತಿಗೆ ಪಾತ್ರರಾಗಿರುವ ಹಾಲಿ ಒಲಿಂಪಿಕ್ ಚಾಂಪಿಯನ್ ಚಿನ್ನದ ಹುಡುಗ ನೀರಜ್ ಚೋಪ್ರಾ ತಮ್ಮ ನೆಚ್ಚಿನ ಮತ್ತು ಭಾರತದ ಸ್ಟಾರ್​ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ತಮ್ಮ ವೇಗವನ್ನು ಹೆಚ್ಚಿಸುವ ಕುರಿತು ಒಳನೋಟದ ಸಲಹೆ ನೀಡಿದ್ದಾರೆ. ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್​ ಪಂದ್ಯವನ್ನು ವೀಕ್ಷಿಸಿದ್ದ ನೀರಜ್, ಬುಮ್ರಾ ಅವರ ವಿಶಿಷ್ಟ ಬೌಲಿಂಗ್ ಶೈಲಿಯನ್ನು ಶ್ಲಾಘಿಸಿದ್ದಾರೆ. ಇದೇ ವೇಳೆ ಅವರನ್ನು ತಮ್ಮ ಆದ್ಯತೆಯ ವೇಗದ ಬೌಲರ್ ಎಂದು ಹೇಳಿದ್ದಾರೆ.

“ನಾನು ಜಸ್ಪ್ರೀತ್ ಬುಮ್ರಾ ಅವರನ್ನು ಸಾಕಷ್ಟು ಇಷ್ಟಪಡುತ್ತೇನೆ. ಅವರ ಬೌಲಿಂಗ್​ ಶೈಲಿಯನ್ನು ವಿಶೇಷವಾಗಿ ಆಸ್ವಾದಿಸುತ್ತೇನೆ ” ಎಂದು ನೀರಜ್ ಇಂಡಿಯನ್ ನ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ವಿಶ್ವಕಪ್​​ನಲ್ಲಿ ಬುಮ್ರಾ ಅವರ ಅಸಾಧಾರಣ ಪ್ರದರ್ಶನದಿಂದಾಗಿ ಅವರಿಗೆ 20 ವಿಕೆಟ್​ಗಳನ್ನು ಗಳಿಸಲು ಸಹಾಯ ಮಾಡಿತು. ಚೆಂಡನ್ನು ಎರಡೂ ರೀತಿಯಲ್ಲಿ ಸ್ವಿಂಗ್ ಮಾಡುವ ಅವರ ಅಸಾಧಾರಣ ಸಾಮರ್ಥ್ಯವು ಭಾರತದ ಯಶಸ್ಸಿಗೆ ಕೊಡುಗೆ ನೀಡಿದೆ. ಬುಮ್ರಾ ಅವರ ಅದ್ಭುತ ಪ್ರದರ್ಶನದ ಹೊರತಾಗಿಯೂ, ಚೋಪ್ರಾ ಅವರ ವೇಗವನ್ನು ಹೆಚ್ಚಿಸಬೇಕು ಎಂಬ ಸಣ್ಣ ಬದಲಾವಣೆಯನ್ನೂ ಸೂಚಿಸಿದ್ದಾರೆ.

ಹೆಚ್ಚು ದೂರ ಓಡಲಿ

ತಮ್ಮ ಎಸೆತಗಳಿಗೆ ಇನ್ನಷ್ಟು ವೇಗ ನೀಡಲು ಬುಮ್ರಾ ತಮ್ಮ ರನ್-ಅಪ್ ಅನ್ನು ಹೆಚ್ಚಿಸಬೇಕು ಎಂದು ನಾನು ಭಾವಿಸುತ್ತೇನೆ. ಜಾವೆಲಿನ್ ಎಸೆತಗಾರರಾಗಿ ನಾನು ಹೇಳುವುದಾದರೆ ಬೌಲರ್​ಗಳು ತಮ್ಮ ರನ್-ಅಪ್ ಅನ್ನು ಸ್ವಲ್ಪ ಹಿಂದಿನಿಂದ ಪ್ರಾರಂಭಿಸಿದರೆ ವೇಗವನ್ನು ವೃದ್ದಿಸಲು ಸಾಧ್ಯವಿದೆ ಎಂದು ಹೇಳುತ್ತೇನೆ. ಆದರೆ, ಬುಮ್ರಾ ಅವರ ಬೌಲಿಂಗ್​ ಶೈಲಿಯನ್ನು ನಾನು ಇಷ್ಟಪಡುತ್ತೇನೆ, “ಎಂದು ಅವರು ಹೇಳಿದರು.

Continue Reading

ಕ್ರಿಕೆಟ್

Suryakumar Yadav : ಕೊಹ್ಲಿ ದಾಖಲೆ ಮುರಿಯಲು ಸಜ್ಜಾಗಿದ್ದಾರೆ ಸೂರ್ಯಕುಮಾರ್​

ಟಿ20 ಕ್ರಿಕೆಟ್​ ಮಾದರಿಯಲ್ಲಿ ಅತಿ ವೇಗದ ರನ್​ ಗಳಿಕೆ ದಾಖಲೆ ವಿರಾಟ್​ ಕೊಹ್ಲಿಯ ಹೆಸರಲಿನಲ್ಲಿದ್ದು ಅದನ್ನು ಅಳಿಸಿ ಹಾಕುವ ಅವಕಾಶ ಸೂರ್ಯಕುಮಾರ್​ಗೆ ಇದೆ.

VISTARANEWS.COM


on

Virat kohli
Koo

ಬೆಂಗಳೂರು: ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿನ ಮೂರು ಪಂದ್ಯಗಳ ಟಿ 20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav) ದಾಖಲೆ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಸೇರಿಸುವ ಅವಕಾಶವಿದೆ. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ವೇಗದಲ್ಲಿ 2000 ರನ್ ಪೂರೈಸಿದ ಭಾರತೀಯ ಬ್ಯಾಟರ್​ ಎಂಬ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿಯಲು ಭಾರತ ತಂಡದ ಹಂಗಾಮಿ ನಾಯಕನಿಗೆ ಅವಕಾಶವಿದೆ. ಪ್ರಸ್ತುತ, ಸೂರ್ಯ 55 ಇನ್ನಿಂಗ್ಸ್ಗಳಲ್ಲಿ 1985 ರನ್ ಗಳಿಸಿದ್ದಾರೆ ಮತ್ತು 56 ಇನಿಂಗ್ಸ್​​ಗಳಲ್ಲಿ 2000 ರನ್ ಗಳಿಸಿದ ಕೊಹ್ಲಿಯ ದಾಖಲೆಯನ್ನು ಮುರಿಯಲು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ 20 ಐನಲ್ಲಿ ಕೇವಲ 15 ರನ್​ಗಳ ಅಗತ್ಯವಿದೆ.

ಪಾಕಿಸ್ತಾನದ ಡೈನಾಮಿಕ್ ಜೋಡಿ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಕೇವಲ 52 ಇನಿಂಗ್ಸ್​ಗಳಲ್ಲಿ 2000 ಟಿ 20 ರನ್ ಪೂರೈಸುವ ಮೂಲಕ ಮೊದಲ ಮತ್ತು ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ಬ್ಯಾಟರ್​​ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಕೆಎಲ್ ರಾಹುಲ್ (58) ಮತ್ತು ರೋಹಿತ್ ಶರ್ಮಾ (77) ಮಾತ್ರ ಟಿ 20 ಐನಲ್ಲಿ ವೇಗವಾಗಿ 2000 ರನ್ ಗಳಿಸಿದ ಭಾರತೀಯ ಬ್ಯಾಟರ್​ಗಳ ಪಟ್ಟಿಯಲ್ಲಿದ್ದಾರೆ.

ಈ ಎಲೈಟ್ ಪಟ್ಟಿಗೆ ಸೇರಲು ಸೂರ್ಯಕುಮಾರ್​​ಗೆ ಸುವರ್ಣಾವಕಾಶವಿದೆ. ಟಿ 20 ಐನಲ್ಲಿ ವೇಗವಾಗಿ 2000 ರನ್ ಗಳಿಸಿದ ಭಾರತೀಯ ಬ್ಯಾಟರ್​​ ಎಂಬ ಕೊಹ್ಲಿಯ ದೀರ್ಘಕಾಲದ ದಾಖಲೆ ಮುರಿಯಲು ಅವಕಾಶವಿದೆ.

ಟಿ20 ಕ್ರಿಕೆಟ್ ಸ್ಟಾರ್​

ಸೂರ್ಯಕುಮಾರ್ ಆಟದ ಕಿರು ಸ್ವರೂಪದಲ್ಲಿ ಅಬ್ಬರಿಸುತ್ತಿದ್ದಾರೆ. 2021 ರಲ್ಲಿ ಇಂಗ್ಲೆಂಡ್ ವಿರುದ್ಧ ಪಾದಾರ್ಪಣೆ ಮಾಡಿದಾಗಿನಿಂದ 33 ವರ್ಷದ ಆಟಗಾರ ತಮ್ಮ 360 ಡಿಗ್ರಿ ಬ್ಯಾಟಿಂಗ್​ ಮೂಲಕ ಎದುರಾಳಿಗಳ ಮೇಲೆ ಪ್ರಾಬಲ್ಯ ಸಾಧಿಸಿದ್ದಾರೆ. ಮೈದಾನದ ಪೂರ್ತಿ ಶಾಟ್​ಗಳು ಮಾತ್ರವಲ್ಲದೆ, ಟಿ 20 ಐನಲ್ಲಿ ಕನಿಷ್ಠ 1000 ರನ್ ಗಳಿಸಿದ ಬ್ಯಾಟರ್​ಗಳಲ್ಲಿ ಅತ್ಯುತ್ತಮ ಸ್ಟ್ರೈಕ್ ರೇಟ್​ ಹೊಂದಿದ್ದಾರೆ. ಪ್ರಸ್ತುತ, ಭಾರತದ ಸ್ಟ್ಯಾಂಡ್-ಇನ್ ನಾಯಕನ ಸ್ಟ್ರೈಕ್ ರೇಟ್ 171.71 ಆಗಿದೆ.

ಇದನ್ನೂ ಓದಿ : Ravi Bishnoi : ರವಿ ಬಿಷ್ಣೋಯಿಯನ್ನು ಕೊಂಡಾಡಿದ ಲೆಜೆಂಡರಿ ಸ್ಪಿನ್ನರ್​

ಬಲಗೈ ಬ್ಯಾಟ್ಸ್ಮನ್ 58 ಟಿ20 ಪಂದ್ಯಗಳಲ್ಲಿ 16 ಅರ್ಧಶತಕಗಳು ಮತ್ತು 3 ಶತಕಗಳನ್ನು ಗಳಿಸಿದ್ದಾರೆ. ಅವರ ಸರಾಸರಿ 44.11 ಭಾರತೀಯ ಬ್ಯಾಟರ್​ಗಳಲ್ಲಿ ಎರಡನೇ ಅತ್ಯುತ್ತಮವಾಗಿದೆ. ಕಣ್ಣು ಮಿಟುಕಿಸುವ ಸಮಯದಲ್ಲಿ ಆಟವನ್ನು ಬದಲಾಯಿಸುವ ಮತ್ತು ಭಾರತಕ್ಕಾಗಿ ಏಕಾಂಗಿಯಾಗಿ ಪಂದ್ಯಗಳನ್ನು ಗೆಲ್ಲುವ ಸೂರ್ಯ ಅವರ ಸಾಮರ್ಥ್ಯವು ಅವರನ್ನು ಆಟದ ಕಿರು ಸ್ವರೂಪದಲ್ಲಿ ತಂಡದಲ್ಲಿ ಅಗತ್ಯ ಆಟಗಾರನನ್ನಾಗಿ ಮಾಡಿದೆ.

Continue Reading

ಕ್ರಿಕೆಟ್

Ravi Bishnoi : ರವಿ ಬಿಷ್ಣೋಯಿಯನ್ನು ಕೊಂಡಾಡಿದ ಲೆಜೆಂಡರಿ ಸ್ಪಿನ್ನರ್​

Ravi Bishnoi : ರವಿ ಬಿಷ್ಳೋಯಿ ಟಿ20 ಕ್ರಿಕೆಟ್​ ಮಾದರಿಯಲ್ಲಿ ಇದುವರೆಗೆ 34 ವಿಕೆಟ್​ಗಳನ್ನು ಉರುಳಿಸಿದ್ದಾರೆ.

VISTARANEWS.COM


on

Ravi Bishnoi
Koo

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ (ಡಿಸೆಂಬರ್ 03) ನಡೆದ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ 6 ರನ್​ಗಳ ರೋಚಕ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತ್ತು. ಅಂತಿಮವಾಗಿ ಆಸ್ಟ್ರೇಲಿಯಾ 20 ಓವರ್​ಗೆ 8 ವಿಕೆಟ್ ಕಳೆದುಕೊಂಡು 154 ರನ್ ಗಳಿಸಲಷ್ಟೇ ಶಕ್ತಗೊಂಡು ಸೋಲೊಪ್ಪಿಕೊಂಡಿತು. ಇದರೊಂದಿಗೆ ಸರಣಿ 4-1 ಅಂತರದಿಂದ ಭಾರತದ ಪಾಲಾಯಿತು. ವಿಶ್ವ ಕಪ್​ನಲ್ಲಿ ಭಾರತ ತಂಡ ಸೋತಿದ್ದ ಹಿನ್ನೆಲೆಯಲ್ಲಿ ಈ ಸರಣಿ ಅಭಿಮಾನಿಗಳಿಗೆ ಸ್ವಲ್ಪ ಸಮಾಧಾನವನ್ನು ಉಂಟು ಮಾಡಿತು.

ಭಾರತದ ಪರ ಸರಣಿಯಲ್ಲಿ ಹಲವರು ಮಿಂಚಿದ್ದಾರೆ. ಅವರಲ್ಲಿ ಪ್ರಮುಖರು ಮಣಿಕಟ್ಟು ಸ್ಪಿನ್ನರ್ ರವಿ ಬಿಷ್ಣೋಯ್. ಐದು ಪಂದ್ಯಗಳಿಂದ 9 ವಿಕೆಟ್ ಪಡೆಯುವ ಮೂಲಕ ಸರಣಿಯ ಪ್ರಮುಖ ವಿಕೆಟ್ ಟೇಕರ್ ಎನಿಸಿಕೊಂಡರು. ಐದನೇ ಟಿ 20 ಐನಲ್ಲಿ ಬಿಷ್ಣೋಯ್ ಮತ್ತೊಮ್ಮೆ ನಾಲ್ಕು ಓವರ್​ಗಳ ಸ್ಪೆಲ್​ನಲ್ಲಿ 29 ರನ್​ಗೆ 2 ವಿಕೆಟ್​ ಪಡೆದರು. ಸರಣಿಯಲ್ಲಿ ಅವರ ಅದ್ಭುತ ಪ್ರದರ್ಶನದ ಬಗ್ಗೆ ಶ್ರೀಲಂಕಾದ ಲೆಜೆಂಡರಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಬಿಷ್ಣೋಯ್​ ಇತರರಿಗಿಂತ ವೇಗವಾಗಿ ಬೌಲಿಂಗ್ ಮಾಡುವ ಅವರ ವಿಶಿಷ್ಟ ಸಾಮರ್ಥ್ಯ ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.

ಹೊಸ ಪೀಳಿಗೆಯ ಬೌಲರ್​

“ಭಾರತವು ಯಾವಾಗಲೂ ಆಯಾಯ ಪೀಳಿಗೆಯಲ್ಲಿ ಉತ್ತಮ ಸ್ಪಿನ್ ಬೌಲರ್​ಗಳನ್ನು ಸೃಷ್ಟಿಸುತ್ತದೆ. ಅನಿಲ್ ಕುಂಬ್ಳೆಯಿಂದ ಹಿಡಿದು ರವಿ ಅಶ್ವಿನ್ ವರೆಗೆ ಈಗ ಬಂದಿರುವ ಯುವ ಆಟಗಾರರೆಲ್ಲರೂ ಇದಕ್ಕೆ ಸಾಕ್ಷಿ. ಆದರೆ ಬಿಷ್ಣೋಯ್ ಇತರ ಲೆಗ್ ಸ್ಪಿನ್ನರ್​​ಗಳಿಗಿಂತ ಭಿನ್ನರಾಗಿದ್ದಾರೆ. ಅವರು ವೇಗವಾಗಿ ಬೌಲಿಂಗ್ ಮಾಡುತ್ತಾರೆ ಮತ್ತು ಅವರು ಚೆಂಡನ್ನು ಸಾಕಷ್ಟು ಸ್ಲೈಡ್ ಮಾಡುತ್ತಾರೆ. ಅಕ್ಷರ್ ಪಟೇಲ್​ ಕೂಡ ತುಂಬಾ ವೇಗ ಹಾಗೂ ನಿಖರ ಬೌಲಿಂಗ್ ಮಾಡುತ್ತಾರೆ. ಅವರು ಚೆಂಡನ್ನು ಹೆಚ್ಚು ತಿರುಗಿಸುವುದಿಲ್ಲ. ಅದೇ ರೀತಿ ವಾಷಿಂಗ್ಟನ್​ ಕೂಡ ಒಂದೇ ರೀತಿ ಇದ್ದಾರೆ ನಿಖರ ಮತ್ತು ವೇಗವಾಗಿ ಬೌಲಿಂಗ್ ಮಾಡುತ್ತಾರೆ ಎಂದು ಮುರಳೀಧರನ್ ಜಿಯೋ ಸಿನೆಮಾ ಮಾತುಕತೆಯಲ್ಲಿ ಹೇಳಿದರು.

ಇದನ್ನೂ ಓದಿ : Amazon Prime : ಅಮೆಜಾನ್ ಪ್ರೈಮ್​ನಲ್ಲಿ ನೋಡಬಹುದು ಟಿ20 ವಿಶ್ವ ಕಪ್

ಟಿ20 ಕ್ರಿಕೆಟ್​ನಲ್ಲಿ 34 ವಿಕೆಟ್ ಪಡೆದ ಬಿಷ್ಣೋಯ್​

2022ರ ಫೆಬ್ರವರಿಯಲ್ಲಿ ಈಡನ್ ಗಾರ್ಡನ್ಸ್​​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಪಂದ್ಯವನ್ನಾಡಿದ್ದ 23ರ ಹರೆಯದ ಬಿಷ್ಣೋಯ್​​ 21 ಪಂದ್ಯಗಳಿಂದ 17.38ರ ಸರಾಸರಿಯಲ್ಲಿ 34 ವಿಕೆಟ್​​ಗಳನ್ನು ಕಬಳಿಸಿದ್ದಾರೆ. ರಾಜಸ್ಥಾನ ಮೂಲದ ಸ್ಪಿನ್ನರ್ 2022 ರ ಟಿ 20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವ ಸ್ಪರ್ಧೆಯಲ್ಲಿದ್ದರು. ಆದಾಗ್ಯೂ, ಮತ್ತೊಬ್ಬ ಮಣಿಕಟ್ಟು ಸ್ಪಿನ್ನರ್ ಯಜುವೇಂದ್ರ ಚಹಲ್ ಈಗಾಗಲೇ ತಂಡದಲ್ಲಿ ಇರುವುದರಿಂದ ಆಯ್ಕೆದಾರರು ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರೊಂದಿಗೆ ಮುಂದುವರಿಯಲಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮುಂದಿನ ಟಿ 20 ಐ ಸರಣಿಗೆ ಚಹಲ್ ತಂಡದಲ್ಲಿ ಇಲ್ಲದಿರುವುದರಿಂದ, ಬಿಷ್ಣೋಯ್ ತಮ್ಮ ಗಮನಾರ್ಹ ಫಾರ್ಮ್ ಅನ್ನು ಮುಂದುವರಿಸುವ ಅವಕಾಶ ಹೊಂದಿದ್ದಾರೆ. ಆ ಮೂಲಕ ಮುಂದಿನ ವರ್ಷದ ಟಿ 20 ವಿಶ್ವಕಪ್​​ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಉತ್ತಮ ಅವಕಾಶ ಪಡೆಯಲಿದ್ದಾರೆ.

Continue Reading
Advertisement
Shirshendu Mukhopadhyay
ಕರ್ನಾಟಕ2 hours ago

Shirshendu Mukhopadhyay: ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಶೀರ್ಷೇಂಧು ಮುಖ್ಯೋಪಧ್ಯಾಯ ಆಯ್ಕೆ

Bangalore Bulls
ಕ್ರೀಡೆ3 hours ago

Pro Kabaddi : ಬೆಂಗಳೂರು ತಂಡಕ್ಕೆ ಸತತ ಎರಡನೇ ಸೋಲು

Siddaramaiah
ಕರ್ನಾಟಕ3 hours ago

CM Siddaramaiah: ಹಜರತ್ ಬಾದ್ ಶಾ ಪೀರಾನ್ ದರ್ಗಾ ಅಭಿವೃದ್ಧಿಗೆ ಅಗತ್ಯ ಅನುದಾನ: ಸಿದ್ದರಾಮಯ್ಯ

WhatsApp new feature lets you search users by their username Says Report
ಗ್ಯಾಜೆಟ್ಸ್4 hours ago

WhatsApp: ವಾಟ್ಸಾಪ್‍ನಲ್ಲಿ ಬಳಕೆದಾರರನ್ನು ಅವರ ಯೂಸರ್‌ನೇಮ್ ಮೂಲಕವೇ ಹುಡುಕಬಹುದು!

Top 10 news
ಕರ್ನಾಟಕ4 hours ago

VISTARA TOP 10 NEWS : ಮೋದಿ ಗೆಲ್ಲಿಸಿದ ಮಹಿಳೆಯರು, ಭವಾನಿ ದರ್ಪಕ್ಕೆ ಎಲ್ಲೆಡೆ ಆಕ್ರೋಶ ಮತ್ತಿತರ ದಿನದ ಪ್ರಮುಖ ಸುದ್ದಿಗಳು

Dasara Elephant Arjuna
ಕರ್ನಾಟಕ5 hours ago

Dasara Elephant Arjuna: ಅರ್ಜುನನ ನಿಧನಕ್ಕೆ ಸಿಎಂ, ಡಿಸಿಎಂ, ನಟ ದರ್ಶನ್ ಸೇರಿ ಗಣ್ಯರ ಸಂತಾಪ

]cashless medical treatment for accident victims by central Government
ದೇಶ5 hours ago

ರಸ್ತೆ ಅಪಘಾತದ ಗಾಯಾಳುಗಳಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆ! ಕೇಂದ್ರದಿಂದ ರಾಷ್ಟ್ರಾದ್ಯಂತ ಜಾರಿ

Cricket news
ಕ್ರಿಕೆಟ್5 hours ago

ind vs aus : ಆಸ್ಟ್ರೇಲಿಯಾ- ಭಾರತ ಟಿ20 ಪಂದ್ಯದ ಅಂಪೈರ್​ ಮೇಲೆ ಮೋಸದ ಅರೋಪ!

Hori festival in maavali at soraba taluk
ಶಿವಮೊಗ್ಗ5 hours ago

Shivamogga News: ಮಾವಲಿ ಗ್ರಾಮದಲ್ಲಿ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬ

Shakti Scheme Effect, In Uttara Kannada district locals and students are facing problems without buses
ಉತ್ತರ ಕನ್ನಡ5 hours ago

Sirsi News: ಶಕ್ತಿ ಯೋಜನೆ ಎಫೆಕ್ಟ್‌: ಉ.ಕ ಜಿಲ್ಲೆಯಲ್ಲಿ ಸ್ಥಳೀಯರಿಗೆ ಬಸ್‌ ಇಲ್ಲದೇ ಪರದಾಟ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

ead your daily horoscope predictions for december 4th 2023
ಪ್ರಮುಖ ಸುದ್ದಿ22 hours ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ2 days ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ2 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ2 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ4 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ4 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ4 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ5 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ6 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

ಟ್ರೆಂಡಿಂಗ್‌