IND vs AUS: ಭಾರತ-ಆಸೀಸ್​ ವಿಶ್ವಕಪ್​ ಸಾಧನೆಯ ಅಂಕಿ ಅಂಶ ಹೇಗಿದೆ? - Vistara News

ಕ್ರಿಕೆಟ್

IND vs AUS: ಭಾರತ-ಆಸೀಸ್​ ವಿಶ್ವಕಪ್​ ಸಾಧನೆಯ ಅಂಕಿ ಅಂಶ ಹೇಗಿದೆ?

48 ವರ್ಷಗಳ ಇತಿಹಾಸವುಳ್ಳ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಇದುವರೆ 13 ಸಲ ಮುಖಾಮುಖಿಯಾಗಿವೆ.

VISTARANEWS.COM


on

India vs Australia, Final
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ವಿಶ್ವಕಪ್​ನ ಮಹಾ ಸಮರಕ್ಕೆ ವೇದಿಕೆ ಸಿದ್ಧಗೊಂಡಿದೆ. ಭಾನುವಾರ ನಡೆಯುವ ಫೈನಲ್(India vs Australia Final)​ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ(IND vs AUS) ಪ್ರಶಸ್ತಿಗಾಗಿ ಹೋರಾಟ ನಡಸಲಿದೆ. ಇಲ್ಲಿ ಯಾರೇ ಗೆದ್ದರೂ ಮುಂದಿನ 4 ವರ್ಷಗಳ ಕಾಲ ವಿಶ್ವ ಚಾಂಪಿಯನ್​ ಪಟ್ಟವನ್ನು ಹೊತ್ತುಕೊಳ್ಳಲಿದ್ದಾರೆ. ಈ ತಂಡ ಯಾವುದು ಎನ್ನುವುದು ಸದ್ಯದ ಕುತೂಹಲ. ಇದಕ್ಕೂ ಮುನ್ನ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ವಿಶ್ವಕಪ್​ ಅಂಕಿ ಅಂಶದ ಹಿನ್ನೋಟವೊಂದು ಇಲ್ಲಿದೆ.

ವಿಶ್ವಕಪ್​ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡ ಯಾವುದೆಂದು ಕೇಳಿದರೆ ಇದಕ್ಕೆ ಸಿಗುವ ಉತ್ತರ ಆಸ್ಟ್ರೇಲಿಯಾ. ಐದು ಬಾರಿ ವಿಶ್ವ ಚಾಂಪಿಯನ್​ ಆಗಿರುವ ಆಸ್ಟ್ರೇಲಿಯಾ ತಂಡಕ್ಕೆ ಇದು ಎಂಟನೇ ವಿಶ್ವಕಪ್​ ಫೈನಲ್ ಪಂದ್ಯವಾಗಿದೆ. ಭಾರತದಕ್ಕೆ ಇದು ನಾಲ್ಕನೇ ಫೈನಲ್​ ಪಂದ್ಯ ಈ ಹಿಂದೆ ಆಡಿದ ಮೂರು ಫೈನಲ್​ಗಳಲ್ಲಿ ಕೇವಲ 2 ಗಲುವು ಒಲಿದಿದೆ. ಒಂದು ಸೋಲು ಕಂಡಿದ್ದು ಆಸೀಸ್​ ವಿರುದ್ಧವೇ.

ಇದನ್ನೂ ಓದಿ ಫೈನಲ್​ನಲ್ಲಿ ಆಸೀಸ್ ​2 ವಿಕೆಟ್​ಗೆ 450, ಭಾರತ 65ಕ್ಕೆ ಆಲೌಟ್​: ಭವಿಷ್ಯ ನುಡಿದ ಮಿಚೆಲ್​ ಮಾರ್ಷ್

ಭಾರತ-ಆಸ್ಟ್ರೇಲಿಯಾ​ ವಿಶ್ವಕಪ್​ ಮು​ಖಾಮುಖಿ

48 ವರ್ಷಗಳ ಇತಿಹಾಸವುಳ್ಳ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಇತ್ತಂಡಗಳು ಇದುವರೆ 13 ಸಲ ಎದುರಾಗಿದೆ. ಇದರಲ್ಲಿ ಭಾರತ 5, ಆಸ್ಟ್ರೇಲಿಯಾ 8 ಪಂದ್ಯಗಳನ್ನು ಗೆದ್ದಿದೆ. ನಾಕೌಟ್ ಹಂತದಲ್ಲಿ 3 ಬಾರಿ ಮುಖಾಮುಖಿ ಆಗಿದ್ದು, ಭಾರತ ಒಮ್ಮೆ ಮಾತ್ರ ಗೆದ್ದಿದ್ದರೆ. 2 ಸಲ ಸೋಲು ಕಂಡಿದೆ. ಈ ಬಾರಿ ಫೈನಲ್​ ಹಂತದಲ್ಲಿ ಉಭಯ ತಂಡಗಳು ಮುಖಾಮುಖಿ ಆಗುತ್ತಿದೆ.

2003ರಲ್ಲಿ ಮೊದಲ ಫೈನಲ್​ ಮುಖಾಮುಖಿ

2003ರ ವಿಶ್ವಕಪ್‌ ಟೂರ್ನಿಯಲ್ಲಿ ಒಟ್ಟು ಭಾರತ ಮತ್ತು ಆಸೀಸ್​ 2 ಬಾರಿ ಮುಖಾಮುಖಿಯಾಗಿತ್ತು. ಲೀಗ್​ ಹಂತದಲ್ಲಿ ಮತ್ತು ಫೈನಲ್​ ಪಂದ್ಯದಲ್ಲಿ. ಆದರೆ ಇಲ್ಲಿ ಎರಡರಲ್ಲೂ ಭಾರತ ಸೋಲು ಕಂಡಿತ್ತು. ಫೈನಲ್​ ಪಂದ್ಯದಲ್ಲಿ ಬ್ಯಾಟಿಂಗ್​ ಆಹ್ವಾನ ಪಡೆದ ಆಸ್ಟ್ರೇಲಿಯಾ ಆಕ್ರಮಣಕಾರಿ ಬ್ಯಾಟಿಂಗ್​ ನಡೆಸಿ 50 ಓವರ್​ಗೆ ಕೇವಲ 2 ವಿಕೆಟ್ ಕಳೆದುಕೊಂಡು 359 ರನ್ ಗಳಿಸಿತ್ತು. 360 ರನ್‌ಗಳ ಗುರಿ ಬೆನ್ನಟ್ಟಿದ್ದ ಭಾರತ ತಂಡ 39.2 ಓವರ್‌ಗಳಲ್ಲಿ 234 ರನ್‌ಗಳಿಗೆ ಆಲೌಟ್ ಆಯಿತು. ಸ್ಟಾರ್​ ಆಟಗಾರರಾಗಿದ್ದ ರಾಹುಲ್​ ದ್ರಾವಿಡ್​, ಸಚಿನ್​ ತೆಂಡೂಲ್ಕರ್​, ವಿವಿಎಸ್​ ಲಕ್ಷ್ಮಣ್​ ಬ್ಯಾಟಿಂಗ್​ ವೈಫಲ್ಯ ಕಂಡದದು ಸೋಲಿಗೆ ಪ್ರಮುಖ ಕಾರಣವಾಯಿತು. ಭಾರತ 125 ರನ್‌ಗಳಿಂದ ಸೋಲು 2ನೇ ಕಪ್​ ಗೆಲ್ಲುವ ಅವಕಾಶದಿಂದ ವಂಚಿತವಾಯಿತು.

2003 world cup final


2011ರ ಕ್ವಾರ್ಟರ್​ ಫೈನಲ್​ನಲ್ಲಿ ಭಾರತಕ್ಕೆ ಗೆಲುವು

2003ರ ವಿಶ್ವಕಪ್‌ ಫೈನಲ್​ ಪಂದ್ಯದ ಬಳಿಕ ಭಾರತ ಮತ್ತು ಆಸ್ಟ್ರೇಲಿಯಾ 2011ರ ವಿಶ್ವಕಪ್​ನ ಕ್ವಾರ್ಟರ್​ ಫೈನಲ್​​ ಪಂದ್ಯದಲ್ಲಿ ಮುಖಾಮುಖಿಯಾಗದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಆಸ್ಟ್ರೇಲಿಯಾ ರಿಕಿ ಪಾಂಟಿಂಗ್​ ಅವರ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 260 ರನ್‌ ಗಳಿಸಿತ್ತು. ಗುರಿ ಬೆನ್ನಟ್ಟಿದ ಭಾರತ ಸಚಿನ್​ ತೆಂಡೂಲ್ಕರ್(53)​, ಗೌತಮ್​ ಗಂಭೀರ್(50)​ ಮತ್ತು ಯುವರಾಜ್​ ಸಿಂಗ್(57*)​ ಅವರ ಅರ್ಧಶತಕದ ಸಾಹಸದಿಂದ 47.4 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಗೆಲುವು ದಾಖಲಿಸಿತು. ಭಾರತ ಈ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶಿಸಿತ್ತು. ಆಸೀಸ್​ ಟೂರ್ನಿಯಿಂದ ಹೊರಬಿದ್ದ ಸಂಕಟಕ್ಕೆ ಸಿಲುಕಿತ್ತು.

ಇದನ್ನೂ ಓದಿ ವಿಶ್ವ ಕಿರೀಟಕ್ಕೆ ಇನ್ನೊಂದೆ ಹೆಜ್ಜೆ; ಭಾರತದ 10 ಗೆಲುವಿನ ಸಿಹಿ ಮುತ್ತು ಹೇಗಿತ್ತು?

2011 world cup quarter final


2015ರ ವಿಶ್ವಕಪ್​ನಲ್ಲಿ ಸೇಡು ತೀರಿಸಿಕೊಂಡ ಆಸೀಸ್​

2011ರ ಕ್ವಾರ್ಟರ್​ ಫೈನಲ್​ ಸೋಲನ್ನು ಆಸ್ಟ್ರೇಲಿಯಾ 2015 ವಿಶ್ವಕಪ್​ ಸೆಮಿಫೈನಲ್​ ಪಂದ್ಯದಲ್ಲಿ ತೀರಿಸಿಕೊಂಡಿತು. ಹಾಲಿ ಚಾಂಪಿಯನ್​ ಆಗಿದ್ದ ಭಾರತವನ್ನು ಸೆಮಿ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೆಮಿಫೈನಲ್‌ನಲ್ಲಿ 95 ರನ್‌ಗಳಿಂದ ಮಣಿಸಿ ಫೈನಲ್​ ಪ್ರವೆಶಿಸಿತ್ತು. ಅಲ್ಲದೆ ಫೈನಲ್​ನಲ್ಲಿ ನ್ಯೂಜಿಲ್ಯಾಂಡ್​ ತಂಡವನ್ನು ಮಣಿಸಿ ಚಾಂಪಿಯನ್​ ಪಟ್ಟ ಅಂಕರಿಸಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 7 ವಿಕೆಟ್‌ಗೆ 328 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ ಭಾರತ 46.5 ಓವರ್‌ಗಳಲ್ಲಿ 233 ರನ್‌ಗಳಿಗೆ ಆಲೌಟ್ ಆಗಿ ಟೂರ್ನಿಯಿಂದ ಹೊರಬಿದ್ದಿತ್ತು. ಇದೀಗ ಈ ಸೋಲಿಗೆ ತವರಿನಲ್ಲಿ ಸೇಡು ತೀರಿಸಿಕೊಳ್ಳಲು ಭಾರತ ಕಾತರದಿಂದ ಕಾಯುತ್ತಿದೆ.

2015 world cup semi final
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Nathan Lyon: ವಿಂಡೀಸ್​ ದಿಗ್ಗಜ ವಾಲ್ಶ್ ದಾಖಲೆ ಮುರಿದ ನಥಾನ್​ ಲಿಯೋನ್

ನಥಾನ್​ ಲಿಯೋನ್(Nathan Lyon)​ ಅವರು ವೆಸ್ಟ್​ ಇಂಡೀಸ್​ ದಿಗ್ಗಜ ಬೌಲರ್​ ಕೊರ್ಟ್ನಿ ವಾಲ್ಶ್(Courtney Walsh) ಅವರ ಟೆಸ್ಟ್ ವಿಕೆಟ್ ದಾಖಲೆನ್ನು ಮುರಿದಿದ್ದಾರೆ.

VISTARANEWS.COM


on

nathan lyon
Koo

ಸಿಡ್ನಿ: ಗಾಯದ ಸಮಸ್ಯೆಯಿಂದಾಗಿ ಕೆಲವು ವರ್ಷ ಕ್ರಿಕೆಟ್​ನಿಂದ ದೂರ ಉಳಿದಿದ್ದ ಆಸ್ಟ್ರೇಲಿಯಾದ ಸ್ಪಿನ್ನರ್​ ನಥಾನ್​ ಲಿಯೋನ್(Nathan Lyon)​ ಅವರು ವೆಸ್ಟ್​ ಇಂಡೀಸ್​ ದಿಗ್ಗಜ ಬೌಲರ್​ ಕೊರ್ಟ್ನಿ ವಾಲ್ಶ್(Courtney Walsh) ಅವರ ಟೆಸ್ಟ್ ವಿಕೆಟ್ ದಾಖಲೆನ್ನು ಮುರಿದಿದ್ದಾರೆ. ಈ ಮೂಲಕ ಅತ್ಯಧಿಕ ಟೆಸ್ಟ್​ ವಿಕೆಟ್ ಕಿತ್ತ ಬೌಲರ್​ಗಳ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೇರಿದ್ದಾರೆ.

ನ್ಯೂಜಿಲ್ಯಾಂಡ್​ ವಿರುದ್ಧ ಸಾಗುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ನಾಲ್ಕು ವಿಕೆಟ್ ಕೀಳುವ ಮೂಲಕ ಲಿಯೋನ್ ಈ ಸಾಧನೆ ಮಾಡಿದರು. ಶ್ರೀಲಂಕಾದ ಮಾಜಿ ಆಟಗಾರ ಮುತ್ತಯ್ಯ ಮುರಳೀಧರನ್ ಮತ್ತು ಆಸ್ಟ್ರೇಲಿಯಾದ ಶೇನ್ ವಾರ್ನ್ ಈ ಸಾಧಕರ ಪಟ್ಟಿಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನ ಪಡೆದಿದ್ದಾರೆ. ಪ್ರಸಕ್ತ ಕ್ರಿಕೆಟ್​ ಆಡುತ್ತಿರುವ ಆಟಗಾರರ ಪೈಕಿ ಟೆಸ್ಟ್​ನಲ್ಲಿ ಅತಿ ಹೆಚ್ಚು ವಿಕೆಟ್​ ಕಿತ್ತ ದಾಖಲೆ ಕೂಡ ಜೇಮ್ಸ್ ಆಂಡರ್ಸನ್ ಹೆಸರಿನಲ್ಲಿದೆ.

ಕೊರ್ಟ್ನಿ ವಾಲ್ಶ್ ಅವರು 519 ವಿಕೆಟ್​ಗಳ ದಾಖಲೆಯೊಂದಿಗೆ ಇದುವರೆಗೆ 7ನೇ ಸ್ಥಾನದಲ್ಲಿದ್ದರು. ಆದರೆ ಇದೀಗ ನಥಾನ್​ ಲಿಯೋನ್ 521* ವಿಕೆಟ್​ ಪಡೆಯುವ ಮೂಲಕ ಈ ದಾಖಲೆಯನ್ನು ಹಿಂದಿಕ್ಕಿದ್ದಾರೆ. 36 ವರ್ಷದ ಲಿಯೋನ್ ಇದುವರೆಗೆ 128 ಟೆಸ್ಟ್ ಆಡಿದ್ದಾರೆ. ಅಚ್ಚರಿ ಎಂದರೆ 32440 ಎಸೆತ ಎಸೆದಿರುವ ಲಿಯಾನ್ 31608 ಎಸೆತಗಳವರೆಗೆ ಒಂದೇ ಒಂದು ನೋ ಬಾಲ್ ಎಸೆಯಲಿಲ್ಲ. 50 ರನ್​ಗೆ 8 ವಿಕೆಟ್​ ಉಡಾಯಿಸಿದ್ದು ಇವರ ವೈಯಕ್ತಿಕ ಗರಿಷ್ಠ ಸಾಧನೆಯಾಗಿದೆ. 23 ಬಾರಿ 5 ವಿಕೆಟ್​ ಗೊಂಚಲು ಪಡೆದಿದ್ದಾರೆ. 4 ಬಾರಿ 10 ವಿಕೆಟ್​ಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ Nathan Lyon: ಟೆಸ್ಟ್​ ಕ್ರಿಕೆಟ್​ನಲ್ಲಿ ನೂತನ ದಾಖಲೆ ಬರೆದ ನಥಾನ್​ ಲಿಯೋನ್

ಟೆಸ್ಟ್​ ಕ್ರಿಕೆಟ್​ನಲ್ಲಿ 700 ವಿಕೆಟ್​ಗಳ ಸನಿಹದಲ್ಲಿರುವ ಆ್ಯಂಡರ್ಸನ್​ಗೆ ಈ ಮೈಲುಗಲ್ಲು ನಿರ್ಮಿಸಲು ಇನ್ನು ಕೇವಲ 2 ವಿಕೆಟ್​ಗಳ ಅಗತ್ಯವಿದೆ. ಧರ್ಮಶಾಲಾದಲ್ಲಿ ನಡೆಯಲಿರುವ ಭಾರತ ವಿರುದ್ಧದ ಅಂತಿಮ ಟೆಸ್ಟ್​ನಲ್ಲಿ(India vs England 5th Test) ಅವರು ಈ ದಾಖಲೆ ಬರೆಯುವ ವಿಶ್ವಾಸದಲ್ಲಿದ್ದಾರೆ. ಭಾರತ ಪ್ರವಾಸದ ವೇಳೆಯೇ ಆ್ಯಂಡರ್ಸನ್ ಅವರು 700 ವಿಕೆಟ್​ ಸಾಧನೆ ಭಾರತದ ನೆಲದಲ್ಲೇ ಮಾಡುತ್ತೇನೆ ಎಂದು ಭವಿಷ್ಯ ನುಡಿದಿದ್ದರು. ಇದೀಗ ಕಾಲ ಸನ್ನಿಹಿತವಾದಂತಿದೆ.

ಟೆಸ್ಟ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಬೌಲರ್​ಗಳ ಪಟ್ಟಿ

ಆಟಗಾರದೇಶವಿಕೆಟ್​
ಮುತ್ತಯ್ಯ ಮುರಳೀಧರನ್ಶ್ರೀಲಂಕಾ800
ಶೇನ್ ವಾರ್ನ್ ಆಸ್ಟ್ರೇಲಿಯಾ708
ಜೇಮ್ಸ್ ಆಂಡರ್ಸನ್ ಇಂಗ್ಲೆಂಡ್​696*
ಅನಿಲ್ ಕುಂಬ್ಳೆಭಾರತ619
ಸ್ಟುವರ್ಟ್ ಬ್ರಾಡ್ಇಂಗ್ಲೆಂಡ್​604
ಗ್ಲೆನ್ ಮೆಕ್‌ಗ್ರಾತ್ಆಸ್ಟ್ರೇಲಿಯಾ563
ನಥಾನ್​ ಲಿಯೊನ್​ಆಸ್ಟ್ರೇಲಿಯಾ521*
ಕರ್ಟ್ನಿ ವಾಲ್ಷ್ ವೆಸ್ಟ್​ ಇಂಡೀಸ್​519
ರವಿಚಂದ್ರನ್ ಅಶ್ವಿನ್ಭಾರತ501*
ಡೇಲ್ ಸ್ಟೈನ್ದಕ್ಷಿಣ ಆಫ್ರಿಕಾ439
Continue Reading

ಪ್ರಮುಖ ಸುದ್ದಿ

T20 World Cup : ಟಿ20 ವಿಶ್ವ ಕಪ್​ನಲ್ಲಿ ಭಾರತಕ್ಕೆ ಎಷ್ಟು ಪಂದ್ಯಗಳಿವೆ?

T20 World Cup : ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವು ಜೂನ್​ 9ರಂದು ನ್ಯೂಯಾರ್ಕ್​ ನಗರದಲ್ಲಿ ನಡೆಯಲಿದೆ.

VISTARANEWS.COM


on

T20 World Cup
Koo

ಬೆಂಗಳೂರು: ಐಸಿಸಿ ಪುರುಷರ ಟಿ 20 ವಿಶ್ವಕಪ್​​ನ (T20 World Cup) ಒಂಬತ್ತನೇ ಆವೃತ್ತಿಯು ಜೂನ್ 2 ರಿಂದ 29 ರವರೆಗೆ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ಪಂದ್ಯಾವಳಿಯು ಅಮೆರಿಕದಲ್ಲಿ ನಡೆಯಲಿರುವ ಮೊದಲ ಐಸಿಸಿ ವಿಶ್ವಕಪ್ ಪಂದ್ಯಾವಳಿ. ಟೆಕ್ಸಾಸ್​​ನ ಗ್ರ್ಯಾಂಡ್ ಪ್ರೈರಿ ಸ್ಟೇಡಿಯಂನಲ್ಲಿ ಜೂನ್ 2ರಂದು ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ಅಮೆರಿಕ ಹಾಗೂ ಕೆನಡಾ ತಂಡಗಳು ಮುಖಾಮುಖಿಯಾಗಲಿವೆ.

ಪಂದ್ಯಾವಳಿಯಲ್ಲಿ 20 ಅರ್ಹ ತಂಡಗಳು ಭಾಗವಹಿಸಲಿದ್ದು, ಒಟ್ಟಾರೆ 55 ಪಂದ್ಯಗಳು ನಡೆಯಲಿವೆ. ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ ಐದು ತಂಡಗಳಿವೆ. ಪ್ರತಿ ಗುಂಪಿನಿಂದ ಟೇಬಲ್-ಟಾಪರ್ ಗಳು ಸೂಪರ್ 8 ರೌಂಡ್ ಗೆ ಪ್ರವೇಶಿಸುತ್ತಾರೆ. ಈ ಸುತ್ತಿನ ನಂತರ ಅರ್ಹ ತಂಡಗಳನ್ನು ನಾಲ್ಕು ಜನರ ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಈ ಗುಂಪುಗಳಿಂದ, ಉತ್ತಮ ಪ್ರದರ್ಶನ ನೀಡುವ ತಂಡಗಳು ನಾಕೌಟ್ ಹಂತಕ್ಕೆ ಹೋಗುತ್ತವೆ. ನಾಕೌಟ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡುವ ತಂಡಗಳು ಸೆಮಿಫೈನಲ್ ಮತ್ತು ಅಂತಿಮವಾಗಿ ಚಾಂಪಿಯನ್ ಶಿಪ್ ಪಂದ್ಯಕ್ಕೆ ಪ್ರವೇಶಿಸುತ್ತವೆ.

ಎರಡು ಅಭ್ಯಾಸ ಪಂದ್ಯಗಳು

ತಂಡದ ಆಗಮನದ ಸಮಯವನ್ನು ಅವಲಂಬಿಸಿ, 20 ತಂಡಗಳು ಐಸಿಸಿ ಪ್ರಮುಖ ಟೂರ್ನಿಗೆ ಮುಂಚಿತವಾಗಿ ಎರಡು ಅಭ್ಯಾಸ ಪಂದ್ಯಗಳನ್ನು ಆಡಬಹುದು. ಎರಡು ಪಂದ್ಯಗಳನ್ನು ಆಡಲು ಬಯಸುತ್ತಾರೆಯೇ ಅಥವಾ ಸ್ಪರ್ಧೆಗೆ ಮೊದಲು ಕೇವಲ ಒಂದು ಪಂದ್ಯವನ್ನು ಆಡಲು ಬಯಸುತ್ತಾರೆಯೇ ಎಂಬುದರ ಮೇಲೆ ತಂಡಗಳಿಗೆ ಆಯ್ಕೆ ನೀಡಲಾಗಿದೆ. ಏತನ್ಮಧ್ಯೆ, ಪ್ರತಿ ತಂಡದ ಪಟ್ಟಿಯಲ್ಲಿ 15 ಆಟಗಾರರನ್ನು ಒಳಗೊಂಡಿರಬಹುದು ಮತ್ತು ಮೇ 1 ರೊಳಗೆ ಘೋಷಿಸಬೇಕಾಗಿದೆ. ಮೇ 25 ರವರೆಗೆ ಮಾರ್ಪಾಡುಗಳನ್ನು ಅನುಮತಿಸಲಾಗಿದೆ. ಅದಕ್ಕಿಂತ ಹೆಚ್ಚಿನದಕ್ಕೆ ಐಸಿಸಿ ತಾಂತ್ರಿಕ ಸಮಿತಿಯ ಅನುಮೋದನೆ ಬೇಕು. ಸೂಕ್ತ ಸಮಯದಲ್ಲಿ, ಬಹುಮಾನದ ಮೊತ್ತವನ್ನು ಸಹ ಘೋಷಿಸಲಾಗುವುದು.

ಇದನ್ನೂ ಓದಿ : T20 World Cup : ಟಿ20 ವಿಶ್ವ ಕಪ್​ಗೆ ಭಾರತ ತಂಡ ಪ್ರಕಟವಾಗುವ ದಿನಾಂಕ ಬಹಿರಂಗ

ಗುಂಪು ಹಂತದಲ್ಲಿ ಭಾರತ ಪಾಕಿಸ್ತಾನ, ಐರ್ಲೆಂಡ್, ಕೆನಡಾ ಮತ್ತು ಸಹ-ಆತಿಥೇಯ ರಾಷ್ಟ್ರವಾದ ಯುನೈಟೆಡ್ ಸ್ಟೇಟ್ಸ್ ವಿರುದ್ಧ ಸೆಣಸಲಿದೆ. ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದು ಹಾರ್ದಿಕ್ ಪಾಂಡ್ಯ ಉಪನಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಪಂದ್ಯಾವಳಿಯಲ್ಲಿ ಬಹು ನಿರೀಕ್ಷಿತ ಹಣಾಹಣಿಯಾದ ದೀರ್ಘಕಾಲದಿಂದ ಕಟು ಎದುರಾಳಿಗಳಾಗಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಮುಖಾಮುಖಿಯಾಗಿದೆ. ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಮುಖಾಮುಖಿ ಜೂನ್ 9 ರಂದು ನ್ಯೂಯಾರ್ಕ್ ನಗರದಲ್ಲಿ ನಡೆಯಲಿದ್ದು, ಅವರ ಪೈಪೋಟಿಯಲ್ಲಿ ಮತ್ತೊಂದು ಮರೆಯಲಾಗದ ಅಧ್ಯಾಯವಾಗಲಿದೆ.

ಗ್ರೂಪ್ ಹಂತದ ಭಾರತದ ವೇಳಾಪಟ್ಟಿ

  • ಭಾರತ-ಐರ್ಲೆಂಡ್ ಜೂನ್ 5, ನ್ಯೂಯಾರ್ಕ್
  • ಭಾರತ-ಪಾಕಿಸ್ತಾನ ಜೂನ್ 9, ನ್ಯೂಯಾರ್ಕ್
  • ಭಾರತ-ಅಮೆರಿಕ ಜೂನ್ 12, ನ್ಯೂಯಾರ್ಕ್
  • ಭಾರತ-ಕೆನಡಾ ಜೂನ್ 15, ಲಾಡರ್ ಹಿಲ್
Continue Reading

ಪ್ರಮುಖ ಸುದ್ದಿ

T20 World Cup : ಟಿ20 ವಿಶ್ವ ಕಪ್​ಗೆ ಭಾರತ ತಂಡ ಪ್ರಕಟವಾಗುವ ದಿನಾಂಕ ಬಹಿರಂಗ

T20 World Cup : ಮುಂಬರುವ ಟಿ20 ವಿಶ್ವ ಕಪ್​ ಅಮೆರಿಕಾ ಹಾಗೂ ವೆಸ್ಟ್​ ಇಂಡೀಸ್​​ಲ್ಲಿ ಆಯೋಜನೆಗೊಳ್ಳಲಿದೆ.

VISTARANEWS.COM


on

team India
Koo

ಬೆಂಗಳೂರು : 2013ರ ಬಳಿಕ ಇದೇ ಮೊದಲ ಬಾರಿಗೆ ಐಸಿಸಿ ಟ್ರೋಫಿ ಗೆಲ್ಲುವ ಗುರಿ ಹೊಂದಿರುವ ಟೀಂ ಇಂಡಿಯಾ, ಮುಂಬರುವ ಟಿ20 ವಿಶ್ವಕಪ್​ಗೆ ಸಿದ್ಧತೆ ನಡೆಸಿದೆ. ಬಹುನಿರೀಕ್ಷಿತ ಐಸಿಸಿ ಟಿ 20 ವಿಶ್ವಕಪ್ 2024 (T20 World Cup) ಈ ವರ್ಷದ ಜೂನ್​ನಲ್ಲಿ ಕೆರಿಬಿಯನ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ನಡೆಯಲಿದೆ.

ಜೂನ್ 2 ರಿಂದ 29 ರವರೆಗೆ 20 ತಂಡಗಳ ಸ್ಪರ್ಧೆ ನಡೆಯಲಿದೆ. 20 ತಂಡಗಳನ್ನು ತಲಾ ಐದು ತಂಡಗಳ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಗುಂಪು ಹಂತದ ನಂತರ, ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೂಪರ್ ಎಂಟರ ಹಂತಕ್ಕೆ ಅರ್ಹತೆ ಪಡೆಯುತ್ತವೆ. ಸೂಪರ್ ಎಂಟರಲ್ಲಿ ಪ್ರತಿ ಗುಂಪಿನ ಎರಡು ಅಗ್ರ ತಂಡಗಳು ಕ್ರಮವಾಗಿ ಜೂನ್ 26 ಮತ್ತು ಗುರುವಾರ ಟ್ರಿನಿಡಾಡ್ ಮತ್ತು ಟೊಬಾಗೊ ಮತ್ತು ಗಯಾನಾದಲ್ಲಿ ನಡೆಯಲಿರುವ ಸೆಮಿಫೈನಲ್​ಗೆ ಪ್ರವೇಶಿಸಲಿವೆ.

2024ರ ಟಿ20 ವಿಶ್ವಕಪ್ ಟೂರ್ನಿಗೆ ಯಾವುದೇ ತಂಡ ಪ್ರಕಟಗೊಂಡಿಲ್ಲ. ಸ್ಪೋರ್ಟ್ಸ್ ತಕ್ ವರದಿಯ ಪ್ರಕಾರ, ಐಸಿಸಿ ಮೇ 1 ರಂದು ತಂಡವನ್ನು ಪ್ರಕಟಿಸಲು ಗಡುವು ನಿಗದಿಪಡಿಸಿದೆ. ಆದಾಗ್ಯೂ, ತಂಡಗಳಿಗೆ ಮೇ 25 ರವರೆಗೆ ತಮ್ಮ ತಂಡದಲ್ಲಿ ಬದಲಾವಣೆಗಳನ್ನು ಮಾಡಲು ಅವಕಾಶ ನೀಡಲಿದೆ.

ಮೇ 25 ರ ನಂತರ ತಂಡದಲ್ಲಿ ಯಾವುದೇ ಬದಲಾವಣೆಯನ್ನು ಐಸಿಸಿ ತಾಂತ್ರಿಕ ಸಮಿತಿ ಅನುಮೋದಿಸಬೇಕಾಗುತ್ತದೆ. ವಿಶ್ವಕಪ್​ಗೆ ಆಗಮಿಸುವುದನ್ನು ಅವಲಂಬಿಸಿ ತಂಡಗಳು ಎರಡು ಅಭ್ಯಾಸ ಪಂದ್ಯಗಳನ್ನು ಆಡುವ ಆಯ್ಕೆಯನ್ನು ಸಹ ಹೊಂದಿರುತ್ತವೆ ಎಂದು ವರದಿ ತಿಳಿಸಿದೆ.

ಈ ತಿಂಗಳ ಆರಂಭದಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು 2024 ರ ಐಸಿಸಿ ಟಿ 20 ವಿಶ್ವಕಪ್​​ನಲ್ಲಿ ರೋಹಿತ್ ಶರ್ಮಾ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ ಎಂದು ದೃಢಪಡಿಸಿದರು.

ಇದನ್ನೂ ಓದಿ :

ನಾವು 2023ರ ಏಕದಿನ ವಿಶ್ವಕಪ್ ಫೈನಲ್​ನಲ್ಲಿ ಸೋತಿರಬಹುದು. ಆದರೆ ನಾವು ಸತತ 10 ಪಂದ್ಯಗಳನ್ನು ಗೆಲ್ಲುವ ಮೂಲಕ ಹೃದಯಗಳನ್ನು ಗೆದ್ದಿದ್ದೇವೆ. ಬಾರ್ಬಡೋಸ್​ನಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ 2024 ರ ಟಿ 20 ವಿಶ್ವಕಪ್ ಅನ್ನು ಎತ್ತುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಜಯ್ ಶಾ ಹೇಳಿದರು.

2024ರ ಐಸಿಸಿ ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ

‘ಎ’ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಐರ್ಲೆಂಡ್, ಕೆನಡಾ ಹಾಗೂ ಆತಿಥೇಯ ಅಮೆರಿಕ ತಂಡಗಳಿವೆ. ಮೆನ್ ಇನ್ ಬ್ಲೂ ತಂಡ ಜೂನ್ 5ರಂದು ಐರ್ಲೆಂಡ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದ್ದು, ಜೂನ್ 9ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಇದರ ನಂತರ ಜೂನ್ 12 ಮತ್ತು 15 ರಂದು ಕ್ರಮವಾಗಿ ಯುಎಸ್ಎ ಮತ್ತು ಕೆನಡಾ ವಿರುದ್ಧ ಪಂದ್ಯಗಳು ನಡೆಯಲಿವೆ.

Continue Reading

ಕ್ರೀಡೆ

ಅನಂತ್‌ ಅಂಬಾನಿ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸ್ಟಾರ್​ ಕ್ರಿಕೆಟಿಗರು

ಅನಂತ್‌ ಅಂಬಾನಿ(Anant Ambani) ಹಾಗೂ ರಾಧಿಕಾ ಮರ್ಚೆಂಟ್‌ (Radhika Merchant) ಅವರ ವಿವಾಹಪೂರ್ವ ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್​, ಎಂ.ಎಸ್​ ಧೋನಿ, ರೋಹಿತ್ ಶರ್ಮ ಸೇರಿ ಹಲವು ಕ್ರಿಕೆಟಿಗರು ಪಾಲ್ಗೊಳ್ಳಲಿದ್ದಾರೆ.

VISTARANEWS.COM


on

Pre-wedding of Anand Ambani
Koo

ಮುಂಬಯಿ: ಮುಕೇಶ್‌ ಅಂಬಾನಿ(Mukesh Ambani) ಪುತ್ರ ಅನಂತ್‌ ಅಂಬಾನಿ(Anant Ambani) ಹಾಗೂ ರಾಧಿಕಾ ಮರ್ಚೆಂಟ್‌ (Radhika Merchant) ಅವರ ವಿವಾಹಪೂರ್ವ(Anant Ambani wedding) ಸಮಾರಂಭಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ಇಂದಿನಿಂದ ಪ್ರೀ ವೆಡ್ಡಿಂಗ್ ಸಮಾರಂಭ ಆರಂಭವಾಗಿದೆ. ಈ ಕಾರ್ಯಕ್ರಮಕ್ಕೆ ದೇಶ-ವಿದೇಶಗಳಿಂದ ಗಣ್ಯರು ಆಗಮಿಸುವುದರೊಂದಿಗೆ ಜಾಮ್​ ನಗರದಲ್ಲಿ (Jamnagar) ಸಂಭ್ರಮ ಜೋರಾಗಿದೆ. ಈ ಸಮಾರಂಭದಲ್ಲಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್​, ಎಂ.ಎಸ್​ ಧೋನಿ, ರೋಹಿತ್ ಶರ್ಮ, ಜಹೀರ್ ಖಾನ್​, ಡ್ವೇನ್​ ಬ್ರಾವೋ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್​, ಸೂರ್ಯಕುಮಾರ್​ ಯಾದವ್​, ಕೃನಾಲ್ ಪಾಂಡ್ಯ , ರಶೀದ್ ಖಾನ್​, ಸ್ಯಾಮ್ ಕರನ್​, ಗ್ರೇಮ್ ಸ್ಮಿತ್. ಮೂರು ದಿನಗಳ ಕಾಲ ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳು ನಡೆಯಲಿದೆ.

ಅತಿಥಿಗಳಿಗಾಗಿ 2,500 ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತಿದೆ. ಮಾ.1ರಿಂದ 3ರವರೆಗೆ ಗುಜರಾತ್‌ನ ಜಾಮ್‌ನಗರದಲ್ಲಿ ಸಮಾರಂಭಗಳು ನಡೆಯಲಿವೆ. ಸಮಾರಂಭದ ನೆನಪು ಸ್ಮರಣೀಯವಾಗಿಸಲು ವಿವಿಧ ರೀತಿಯ ಪಾಕ ಪದ್ದತಿಗಳಿರುವ 2,500 ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಈ ಪೈಕಿ ಬೆಳಗ್ಗೆ ಉಪಾಹಾರಕ್ಕೆ 70 ಬಗೆಯ ತಿನಿಸಿನ ಆಯ್ಕೆಗಳಿರಲಿದ್ದು, ಮಧ್ಯಾಹ್ನದ ಭೋಜನಕ್ಕೆ 250 ಬಗೆ, ರಾತ್ರಿಯ ಊಟಕ್ಕೆ 250 ಬಗೆ ಖಾದ್ಯಗಳು ಇರಲಿವೆ. ಸಮಾರಂಭ ನಡೆಯುವ ಯಾವುದೇ ದಿನದಲ್ಲೂ ಯಾವುದೇ ಖಾದ್ಯ ಪುನರಾವರ್ತಿತವಾಗುತ್ತಿಲ್ಲ ಎಂದು ತಿಳಿದು ಬಂದಿದೆ. ವಿಶೇಷವೆಂದರೇ ಈ 21 ಬಾಣಸಿಗರ ಪೈಕಿ ಒಬ್ಬರು ಮಾತ್ರ ಪುರುಷ ಬಾಣಸಿಗ, ಉಳಿದವರೆಲ್ಲಾ ಮಹಿಳೆಯರೇ ಆಗಿದ್ದಾರೆ.

ಮುಕೇಶ್‌ ಅಂಬಾನಿ ಕುಟುಂಬವು ಮುಂಬೈನಲ್ಲಿ ನೆಲೆಸಿದ್ದರೂ ಜಾಮ್‌ನಗರದಲ್ಲೇ ಏಕೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂಬುದಕ್ಕೆ ಉತ್ತರ ಸಿಕ್ಕಿದೆ. ಇದಕ್ಕೆ, ಅನಂತ್‌ ಅಂಬಾನಿ ಅಜ್ಜಿ, ಅಜ್ಜ ಹಾಗೂ ನರೇಂದ್ರ ಮೋದಿ (Narendra Modi) ಅವರ ನಂಟಿದೆ ಎಂಬುದು ಗಮನಾರ್ಹವಾಗಿದೆ.

ಇದನ್ನೂ ಓದಿ ಜಾಮ್‌ನಗರದಲ್ಲೇ ಅನಂತ್‌ ಅಂಬಾನಿ ವಿವಾಹಪೂರ್ವ ಕಾರ್ಯಕ್ರಮ ಏಕೆ? ಅಜ್ಜಿ, ಮೋದಿ ನಂಟೇನು?

ಹೌದು, ಈ ಕುರಿತು ಅನಂತ್‌ ಅಂಬಾನಿ ಅವರೇ ಮಾತನಾಡಿದ್ದಾರೆ. “ಜಾಮ್‌ನಗರದಲ್ಲೇ ವಿವಾಹ ಪೂರ್ವ ಕಾರ್ಯಕ್ರಮ ಆಯೋಜಿಸಲು ಬೇರೆ ದೇಶಗಳ ಬದಲು ದೇಶದಲ್ಲಿಯೇ ಮದುವೆಯಾಗಿ (Wed In India) ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದು ನನಗೆ ಸ್ಫೂರ್ತಿಯಾಯಿತು. ಇನ್ನು, ಜಾಮ್‌ನಗರವು ನನ್ನ ಅಜ್ಜಿಯ ಜನ್ಮಸ್ಥಳವಾಗಿದೆ. ಅಷ್ಟೇ ಅಲ್ಲ, ನನ್ನ ಅಜ್ಜ ಧೀರೂಭಾಯಿ ಅಂಬಾನಿ ಹಾಗೂ ಅಪ್ಪ ಮುಕೇಶ್‌ ಅಂಬಾನಿ ಅವರು ಜಾಮ್‌ನಗರದಿಂದಲೇ ಉದ್ಯಮ ಆರಂಭಿಸಿದ್ದಾರೆ. ಹಾಗಾಗಿ, ಜಾಮ್‌ನಗರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ” ಎಂದು ತಿಳಿಸಿದ್ದಾರೆ.

“ನಾನು ಇಲ್ಲಿಯೇ ಬೆಳೆದಿದ್ದೇನೆ. ನನ್ನ ಅಜ್ಜಿಯ ಜನ್ಮಭೂಮಿ, ನನ್ನ ಅಜ್ಜ, ತಂದೆಯ ಕರ್ಮಭೂಮಿಯಲ್ಲಿ ವಿವಾಹಪೂರ್ವ ಕಾರ್ಯಕ್ರಮ ಆಯೋಜಿಸುವ ಮೂಲಕ ಸಂತಸ ಹಂಚಿಕೊಳ್ಳಲು ತೀರ್ಮಾನಿಸಿದೆವು. ನನ್ನ ತಂದೆಯವರು ಕೂಡ, ಇದು ನನ್ನೂರು, ಇಲ್ಲಿ ಕಾರ್ಯಕ್ರಮ ಆಯೋಜಿಸೋಣ ಎಂದರು. ಮೋದಿ ಅವರು ಕೂಡ, ದೇಶದ ಶ್ರೀಮಂತರು, ಉದ್ಯಮಿಗಳು ವಿದೇಶದಲ್ಲಿ ಮದುವೆಯಾಗುವ ಬದಲು, ದೇಶದಲ್ಲಿಯೇ ಮದುವೆಯಾಗಿ ಎಂಬುದಾಗಿ ಕರೆ ನೀಡಿದರು. ಇದೆಲ್ಲ ಕಾರಣಗಳಿಗಾಗಿ ಜಾಮ್‌ನಗರವನ್ನೇ ಆಯ್ಕೆ ಮಾಡಿಕೊಂಡಿವೆ” ಎಂದು ಹೇಳಿದರು.

Continue Reading
Advertisement
Blast in Bengaluru Rameswaram Cafe BY Vijayendra demands NIA investigation
ರಾಜಕೀಯ3 mins ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್;‌ NIA ತನಿಖೆಗೆ ಈಗಲೇ ಕೊಡಿ; ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ

Blast in Bangalore Siddaramaiah
ಬೆಂಗಳೂರು12 mins ago

Blast in Bengaluru : ಬ್ಯಾಗ್‌ನಲ್ಲಿ ತಂದಿಟ್ಟ ಸ್ಫೋಟಕ ಬ್ಲಾಸ್ಟ್‌; ಸಣ್ಣದಾದರೂ ಡೇಂಜರಸ್‌ ಎಂದ ಸಿಎಂ ಸಿದ್ದರಾಮಯ್ಯ

Matrimony Couple
ದೇಶ27 mins ago

Matrimony Apps: ಮ್ಯಾಟ್ರಿಮೋನಿ ಆ್ಯಪ್ ಇನ್ನಿಲ್ಲ; ಆನ್‌ಲೈನ್‌ನಲ್ಲಿ ಇನ್ನು ಸಂಗಾತಿ ಸಿಗಲ್ಲ!

supreme
ದೇಶ42 mins ago

Gyanvapi Case: ಜ್ಞಾನವಾಪಿ ಮಸೀದಿ ವಿವಾದ: ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ ವಿಚಾರಣೆಗೆ ಸುಪ್ರೀಂ ಸಮ್ಮತಿ

Blast-in-Bangalore-Rameshwaram-Cafe-cc-tv
ಬೆಂಗಳೂರು48 mins ago

Blast in Bengaluru : ರಾಮೇಶ್ವರಂ ಕೆಫೆಯಲ್ಲಿ ನಿಜಕ್ಕೂ ಆಗಿದ್ದೇನು?; ಸ್ಫೋಟದ EXCLUSIVE ಸಿಸಿ ಟಿವಿ ಫೂಟೇಜ್‌ ಇದು

Kalaburgi has recorded the highest maximum temperature
ಮಳೆ51 mins ago

Karnataka Weather : ವಾರಾಂತ್ಯದಲ್ಲಿ ಇಲ್ಲೆಲ್ಲ ತಾಪಮಾನ ದುಪ್ಪಟ್ಟು

nathan lyon
ಕ್ರೀಡೆ55 mins ago

Nathan Lyon: ವಿಂಡೀಸ್​ ದಿಗ್ಗಜ ವಾಲ್ಶ್ ದಾಖಲೆ ಮುರಿದ ನಥಾನ್​ ಲಿಯೋನ್

500 notes
ಮನಿ-ಗೈಡ್56 mins ago

Money Guide: ಆಧಾರ್‌ ಕಾರ್ಡ್‌ ಅಪ್‌ಡೇಟ್‌ನಿಂದ ಐಡಿಬಿಐ ಬ್ಯಾಂಕ್‌ನ ವಿಶೇಷ ಎಫ್‌ಡಿವರೆಗೆ; ಈ ತಿಂಗಳಿನಿಂದ ಏನೆಲ್ಲ ಬದಲಾವಣೆ?

nbcc
ಉದ್ಯೋಗ1 hour ago

Job Alert: ಎನ್‌ಬಿಸಿಸಿಯಲ್ಲಿದೆ ಉದ್ಯೋಗಾವಕಾಶ; ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

Blast in Bengaluru Time bomb planted in rameshwaram cafe Important evidence found
ಬೆಂಗಳೂರು1 hour ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Blast in Bengaluru Time bomb planted in rameshwaram cafe Important evidence found
ಬೆಂಗಳೂರು1 hour ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು3 hours ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ4 hours ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ14 hours ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

dina bhavishya read your daily horoscope predictions for February 28 2024
ಭವಿಷ್ಯ2 days ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ3 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ3 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ3 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

read your daily horoscope predictions for february 27 2024
ಭವಿಷ್ಯ4 days ago

Dina Bhavishya : ಇಂದು ಆಪ್ತರಿಂದಲೇ ಈ ರಾಶಿಯವರಿಗೆ ಕಂಟಕ!

ಟ್ರೆಂಡಿಂಗ್‌