Site icon Vistara News

IPL 2024 : ಐಪಿಎಲ್​ ಹರಾಜಿನಲ್ಲಿ ಆರ್​ಸಿಬಿ ಆಯ್ಕೆಮಾಡಿದ ಅತ್ಯುತ್ತಮ ಆಟಗಾರರ ವಿವರ ಇಲ್ಲಿದೆ

RCB Team

ಬೆಂಗಳೂರು: ಈ ಹಿಂದಿನ ಐಪಿಎಲ್ ಹರಾಜುಗಳಲ್ಲಿ (IPL 2024) ರಾಯಲ್ ಚಾಲೆಂಜರ್ಸ್ (RCB) ಗೆ ಅದ್ಭುತಗಳನ್ನು ಮಾಡಿದ ಆಟಗಾರರನ್ನು ಆಯ್ಕೆ ಮಾಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್​​ನ ಕಳೆದ 16 ಆವೃತ್ತಿಗಳಲ್ಲಿ, ಹಲವಾರು ಆಟಗಾರರು ಈ ತಂಡಕ್ಕೆ ತಮ್ಮ ಮೌಲ್ಯಕ್ಕಿಂತ ಹೆಚ್ಚಿನ ಮೌಲ್ಯವನ್ನು ನೀಡಿದ್ದಾರೆ. ಈ ಆಟಗಾರರು ತಮಗೆ ನೀಡಲಾದ ಬೆಲೆಯನ್ನು ಸಮರ್ಥಿಸಿಕೊಂಡಿದ್ದಾರೆ. ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್​ನ ಅತ್ಯಂತ ಜನಪ್ರಿಯ ಫ್ರಾಂಚೈಸಿಗಳಲ್ಲಿ ಆರ್​ಸಿಬಿ ಒಂದಾಗಲು ಅವರೆಲ್ಲರೂ ಸಹಾಯ ಮಾಡಿದ್ದಾರೆ. ಆದ್ದರಿಂದ, ಐಪಿಎಲ್ ಹರಾಜು ಇತಿಹಾಸದಲ್ಲಿ ಆರ್​ಸಿಬಿಯ ಅತ್ಯುತ್ತಮ ಆಯ್ಕೆಗಳು ಯಾವುದೆಂದು ನೋಡೋಣ.

ಯಾವ ವರ್ಷ ಯಾವ ಆಟಗಾರ

ವಿರಾಟ್ ಕೊಹ್ಲಿ: ಕೇವಲ 30 ಸಾವಿರ ಡಾಲರ್​​ಗೆ ಆಯ್ಕೆಯಾದ ಕೊಹ್ಲಿ ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಶ್ರೇಷ್ಠ ಆಟಗಾರ ಹಾಗೂ ಅವಿಭಾಗ್ಯ ಅಂಗ. ಆರ್​ಸಿಬಿ ಎಂದರೆ ಕೊಹ್ಲಿ, ಕೊಹ್ಲಿ ಎಂದರೆ ಆರ್​​ಸಿಬಿ ಎನ್ನುವಷ್ಟು ಮಟ್ಟಕ್ಕಿದೆ. ಅವರು ತಂಡಕ್ಕೆ ಕೊಟ್ಟ ಹಣವನ್ನು ಬಡ್ಡಿಯೊಂದಿಗೆ ಮರುಪಾವತಿ ಮಾಡಿದ್ದಾರೆ ಎನ್ನಬಹುದು. ಲೀಗ್​ನ 16 ಆವೃತ್ತಿಗಳಲ್ಲಿ ಆಡಿರುವ ಕೊಹ್ಲಿ ಈ ಬಾರಿಯೂ ಅದೇ ಫ್ರಾಂಚೈಸಿಯನ್ನು ಪ್ರತಿನಿಧಿಸುತ್ತಿದ್ದಾರೆ. 237 ಪಂದ್ಯಗಳನ್ನಾಡಿರುವ ಕೊಹ್ಲಿ 6, 624 ರನ್ ಬಾರಿಸಿದ್ದಾರೆ. ಇದರಲ್ಲಿ ಐದು ಶತಕಗಳು ಹಾಗೂ 44 ಫೋರ್​ಗಳು ಸೇರಿಕೊಂಡಿವೆ.

ಎಬಿ ಡಿವಿಲಿಯರ್ಸ್: ಸಾರ್ವಕಾಲಿಕ ಅತ್ಯುತ್ತಮ ಟಿ 20 ಬ್ಯಾಟರ್​​ ಎಂದು ಪರಿಗಣಿಸಲ್ಪಟ್ಟ ಎಬಿ ಡಿವಿಲಿಯರ್ಸ್ 2011 ರಿಂದ 2021 ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 157 ಪಂದ್ಯಗಳನ್ನು ಆಡಿದ್ದಾರೆ. 360 ಡಿಗ್ರಿ ಬ್ಯಾಟ್ಸ್ಮನ್ ತಮ್ಮ ಐಪಿಎಲ್ ವೃತ್ತಿಜೀವನವನ್ನು ಈ ಫ್ರಾಂಚೈಸಿಯಲ್ಲಿಯೇ ಕೊನೆಗೊಳಿಸಿದ್ದಾರೆ. 158.33 ಸ್ಟ್ರೈಕ್ ರೇಟ್​ನಲ್ಲಿ ಅವರು 4522 ರನ್ ಗಳಿಸಿದ್ದಾರೆ.

ಕ್ರಿಸ್ ಗೇಲ್: ಯೂನಿವರ್ಸಲ್ ಬಾಸ್ ಟಿ 20 ಕ್ರಿಕೆಟ್​​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಗೇಲ್ 2011 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡರು ಮತ್ತು ಮುಂದಿನ 7 ಋತುಗಳಲ್ಲಿ ಎಲ್ಲ ತಂಡಗಳ ಬೌಲರ್​ಗಳ ಮೇಲೆ ಪ್ರಾಬಲ್ಯ ಸಾಧಿಸಿದರು. 43.29ರ ಸರಾಸರಿಯಲ್ಲಿ 154.40ರ ಸ್ಟ್ರೈಕ್ ರೇಟ್​ನಲ್ಲಿ ಅವರು 3420 ರನ್ ಗಳಿಸಿದ್ದಾರೆ. ಅವರು ಕೊನೆಯಲ್ಲಿ ಪಂಜಾಬ್​ ಕಿಂಗ್ಸ್​ ಸೇರಿಕೊಂಡರು. ಅಲ್ಲಿಂದ ಅವರು ನಿವೃತ್ತಿ ಪಡೆದುಕೊಂಡರು.

ಯಜುವೇಂದ್ರ ಚಹಲ್: 2011 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಯುಜ್ವೇಂದ್ರ ಚಹಲ್ ಅವರನ್ನು ಖರೀದಿಸಿತು. ಆ ವೇಳೆ ಅವರು ಕೇವಲ 10 ಲಕ್ಷ ರೂಪಾಯಿ ಪಡೆದುಕೊಂಡಿದ್ದರು. ಲೆಗ್ ಸ್ಪಿನ್ನರ್​ ಫ್ರಾಂಚೈಸಿಯ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 100ಕ್ಕೂ ಹೆಚ್ಚು ಪಂದ್ಯಗಳನ್ನಾಡಿ 100ಕ್ಕೂ ಹೆಚ್ಚು ವಿಕೆಟ್ ಪಡೆದ ಆರ್​ಸಿಬಿ ಬೌಲರ್ ಎಂಬ ಹೆಗ್ಗಳಿಕೆಗೆ ಚಹಲ್ ಪಾತ್ರರಾಗಿದ್ದಾರೆ. ಆದರೆ, ಅವರು ಬಳಿಕ ಕೈಬಿಡಲಾಯಿತು. ಅವರು ರಾಜಸ್ಥಾನ್ ರಾಯಲ್ಸ್ ತಂಡ ಸೇರಿಕೊಂಡು ಮಿಂಚುತ್ತಿದ್ದಾರೆ. ಅವರನ್ನು ತಂಡ ಕೈಬಿಟ್ಟಿರುವುದು ದೊಡ್ಡ ಮಟ್ಟದ ಅಚ್ಚರಿಕೆ ಕಾರಣವಾಗಿತ್ತು. ಹಿರಿಯ ಆಟಗಾರನಾದ ವಿರಾಟ್​ ಕೊಹ್ಲಿ ಅಸಮಾಧಾನಕ್ಕೂ ಕಾರಣವಾಗಿತ್ತು.

ಇದನ್ನೂ ಓದಿ : IPL 2024 : ರೋಹಿತ್​, ಪಾಂಡ್ಯ ಅಲ್ಲ; ಮುಂಬಯಿ ಇಂಡಿಯನ್ಸ್​ ತಂಡಕ್ಕೆ ಈ ಬಾರಿ ಹೊಸ ನಾಯಕ?

ಗ್ಲೆನ್ ಮ್ಯಾಕ್ಸ್ವೆಲ್: ಆಕ್ರಮಣಕಾರಿ ಮಧ್ಯಮ ಕ್ರಮಾಂಕದ ಬ್ಯಾಟರ್​​ 2021 ರಲ್ಲಿ ಫ್ರಾಂಚೈಸಿಗೆ ಸೇರಿದರು. ಕೇವಲ 42 ಪಂದ್ಯಗಳನ್ನು ಆಡಿರುವ ಮ್ಯಾಕ್ಸ್​ವೆಲ್ ಈಗಾಗಲೇ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಅವರ 1214 ರನ್​ಗಳ ದಾಖಲೆಯ 161.43 ಸ್ಟ್ರೈಕ್ ರೇಟ್​ನ ಬ್ಯಾಟಿಂಗ್​ನಲ್ಲಿ ಬಂದಿವೆ. ಇದು ಆರ್​ಸಿಬಿ ತಂಡದ ಇತಿಹಾಸಲ್ಲಿಯೇ ಅತಿ ಹೆಚ್ಚು.

Exit mobile version