Site icon Vistara News

World Cup 2023 : ಮೋದಿ ಸ್ಟೇಡಿಯಂ ಅಂದ್ರೆನೆ ಪಾಕ್​ ತಂಡಕ್ಕೆ ಭಯ! ಅಲ್ಲಿ ಆಡುವುದಿಲ್ಲ ಎಂದು ರಚ್ಚೆ ಹಿಡಿದ ಪಿಸಿಬಿ

India Pakistan Cricket

#image_title

ಲಂಡನ್​: ಭಾರತ ಆತಿಥ್ಯದಲ್ಲಿ ಮುಂದಿನ ಅಕ್ಟೋಬರ್ ಮತ್ತು ನವೆಂಬರ್​ನಲ್ಲಿ ನಡೆಯಲಿರುವ 2023ರ ವಿಶ್ವಕಪ್ ವೇಳಾಪಟ್ಟಿ ಅಂತಿಮಗೊಂಡಿದೆ. ಮುಂದಿನ 48 ಗಂಟೆಗಳಲ್ಲಿ ಅಂತಿಮ ವೇಳಾಪಟ್ಟಿ ಹೊರಬರಲಿದ್ದು, ಐಸಿಸಿ ಸಭೆಯಲ್ಲಿ ಅಂತಿಮ ವಿವರಗಳನ್ನು ಅಂತಿಮಗೊಳಿಸಲಾಗುವುದು ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಕ್ರೀಡಾ ವೆಬ್​ಸೈಟ್​ ಒಂದಕ್ಕೆ ಮಾಹಿತಿ ನೀಡಿದ್ದಾರೆ. ಆದರೆ, ಟೂರ್ನಿಯ ಅತ್ಯಂತ ರೋಚಕ ವಿಷಯವೆಂದರೆ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಸ್ಥಳ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಮ್​ನ ಅನ್ನು ವಿರೋಧಿಸುತ್ತಿರುವುದರಿಂದ, ಚೆನ್ನೈನಲ್ಲಿ ಈ ಬಿಗ್​ ಫೈಟ್​ ನಡೆಯಲಿದೆ. ಪಾಕ್​ ತಂಡದ ಇತರ ಲೀಗ್​ ಪಂದ್ಯಗಳು ಚೆನ್ನೈ, ಬೆಂಗಳೂರು ಮತ್ತು ಕೋಲ್ಕತ್ತಾದಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಚೆನ್ನೈ ಆತಿಥ್ಯ ವಹಿಸುವ ಸಾಧ್ಯತೆಯಿದೆ. ಒಂದು ವೇಳೆ ಪಾಕಿಸ್ತಾನ ಸೆಮಿಫೈನಲ್ ಅಥವಾ ಫೈನಲ್ ಪ್ರವೇಶಿಸಿದರೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯಗಳನ್ನು ಆಡಲೇಬೇಕಾಗುತ್ತದೆ.

ಇದನ್ನೂ ಓದಿ: WTC Final 2023 : ಡಬ್ಲ್ಯುಟಿಸಿ ಫೈನಲ್​ ಮ್ಯಾಚ್​ ಟಿವಿ ರೀಚಾರ್ಚ್​ ಮಾಡದೇ ನೋಡಬೇಕೇ? ಹೀಗೆ ಮಾಡಿ

ವೇಳಾಪಟ್ಟಿಯನ್ನು ಅಂತಿಮಗೊಳಿಸಲು ನಾವು ಐಸಿಸಿ ಅಧಿಕಾರಿಗಳನ್ನು ಭೇಟಿಯಾಗುತ್ತಿದ್ದೇವೆ. ಅದು ಮುಗಿದ ನಂತರ ನಾವು ಪಟ್ಟಿಯನ್ನು ಪ್ರಕಟಿಸಲಿದ್ದೇವೆ. ಸೋಮವಾರದ ವೇಳೆಗೆ ನಾವು ಅಂತಿಮ ವೇಳಾಪಟ್ಟಿಯು ಬಿಡುಗಡೆಗೊಳ್ಳಬಹುದು ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಇನ್​ಸೈಡ್​ ಸ್ಪೋರ್ಟ್ಸ್​​ಗೆ ತಿಳಿಸಿದ್ದಾರೆ.

ವೇಳಾಪಟ್ಟಿ ಬಿಡುಗಡೆ ತಡವೇಕೆ?

“ಫೈನಲ್​​ ಸೇರಿದಂಥೆ ನಾಕೌಟ್ ಪಂದ್ಯವಾಗದ ಹೊರತು ಪಾಕಿಸ್ತಾನವು ಅಹಮದಾಬಾದ್​​ನಲ್ಲಿ ತನ್ನ ಪಂದ್ಯಗಳನ್ನು ಬಯಸುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಮುಖ್ಯಸ್ಥ ನಜಾಮ್​ ಸೇಥಿ ಐಸಿಸಿಗೆ ತಿಳಿಸಿದ್ದಾರೆ. ಪಾಕಿಸ್ತಾನ ಸರ್ಕಾರದಿಂದ ರಾಷ್ಟ್ರೀಯ ತಂಡಕ್ಕೆ ಅನುಮತಿ ಸಿಕ್ಕರೆ ಚೆನ್ನೈ, ಬೆಂಗಳೂರು ಮತ್ತು ಕೋಲ್ಕೊತಾದಲ್ಲಿ ತಮ್ಮ ಪಂದ್ಯಗಳನ್ನು ನಿಗದಿಪಡಿಸುವಂತೆ ಅವರು ಐಸಿಸಿಗೆ ವಿನಂತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Exit mobile version