Site icon Vistara News

Car Accident : ರೇಸ್ ವೇಳೆ ಪ್ರೇಕ್ಷಕರ ಮೇಲೆ ಹರಿದ ಕಾರು; 7 ಮಂದಿ ಸಾವು; ವಿಡಿಯೊ ಇದೆ

Car Crash

ಕೊಲಂಬೊ: ಶ್ರೀಲಂಕಾ ಸೇನೆ ಭಾನುವಾರ ಆಯೋಜಿಸಿದ್ದ ಮೋಟಾರ್ ಸ್ಪೋರ್ಟ್ ರೇಸ್ ವೇಳೆ ಕಾರೊಂದು ಪ್ರೇಕ್ಷಕರ (Car Crash ) ಮೇಲೆ ಹರಿದ ಪರಿಣಾಮ ಕನಿಷ್ಠ ಏಳು ಜನರು ಮೃತಪಟ್ಟಿದ್ದಾರೆ. 21 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶ್ರೀಲಂಕಾ ಸೇನೆಯು ನಿರ್ವಹಿಸುತ್ತಿರುವ ಫಾಕ್ಸ್ ಹಿಲ್ ಸರ್ಕೀಟ್​ನಲ್ಲಿ ಟ್ರ್ಯಾಕ್​​ ಅಸುರಕ್ಷಿತ ಎಕ್ಸ್​ಟೆನ್ಷನ್ ಬಳಿ ಚಾಲಕನೊಬ್ಬ ಜನಸಮೂಹಕ್ಕೆ ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಟ್ರ್ಯಾಕ್​ನಲ್ಲಿ ರೇಸ್​ ಕಾರೊಂದು ಪಲ್ಟಿಯಾಗಿತ್ತು. ಹೀಗಾಗಿ ಟ್ರ್ಯಾಕ್ ಮಾರ್ಷಲ್​​ಗಳು ಇತರ ಕಾರುಗಳ ಚಾಲಕರಿಗೆ ತಮ್ಮ ಕಾರುಗಳನ್ನು ನಿಧಾನಗೊಳಿಸುವಂತೆ ಎಚ್ಚರಿಸಲು ಹಳದಿ ಧ್ವಜಗಳನ್ನು ಬೀಸುತ್ತಿದ್ದರು. ಪಲ್ಟಿಯಾದ ಕಾರನ್ನು ನೋಡಲು ಪ್ರೇಕ್ಷಕರು ಟ್ರ್ಯಾಕ್ ಸಮೀಕ್ಕೆ ಬಂದಿದ್ದರು. ಈ ವೇಳೆ ಕಾರೊಂದ ನಿಯಂತ್ರಣ ತಪ್ಪಿ ಒಳಗೆ ಬಂದಿದೆ.

ಡರ್ಟ್​​ ರೇಸ್ ಆಗಿದ್ದ ಕಾರಣ ಕೆಂಪು ಕಾರು ಜನಸಮೂಹಕ್ಕೆ ಡಿಕ್ಕಿ ಹೊಡೆಯುವವರೆಗೂ ಕೆಂಪು ಧೂಳು ಆವರಿಸಿಕೊಂಡಿತ್ತು. ಹೀಗಾಗಿ ಜನರು ಇರುವುದನ್ನು ಅರಿಯದೇ ಅವರೆಲ್ಲರಿಗೂ ಗುದ್ದಿಗೊಂಡು ಕಾರು ವೇಗವಾಗಿ ಹೋಗಿದೆ. ಒಟ್ಟು 27 ಜನರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ವಕ್ತಾರ ನಿಹಾಲ್ ತಲ್ದುವಾ ಹೇಳಿದ್ದಾರೆ.

ಇದನ್ನೂ ಓದಿ: IPL 2024 : ಕೆಕೆಆರ್​ ವಿರುದ್ಧ ಆರ್​​ಸಿಬಿ ವೀರೋಚಿತ 1 ರನ್​ ಸೋಲು; ಫಾಫ್​ ಬಳಗಕ್ಕೆ ಏಳನೇ ಮುಖಭಂಗ

ಅಪಘಾತಕ್ಕೆ ಸ್ವಲ್ಪ ಮೊದಲು, ಸೇನಾ ಮುಖ್ಯಸ್ಥ ವಿಕುಮ್ ಲಿಯಾನಗೆ ಅವರು ಮೋಟಾರ್ ಸ್ಪೋರ್ಟ್ಸ್ ಅನ್ನು ಉತ್ತೇಜಿಸಲು ಪ್ರೇಕ್ಷಕರಿಗೆ ಉಚಿತ ಪ್ರವೇಶ ಎಂದು ಎಂದು ಘೋಷಿಸಿದರು, ಕೋವಿಡ್ ಸಾಂಕ್ರಾಮಿಕ ರೋಗ ಮತ್ತು ದ್ವೀಪದ ಆರ್ಥಿಕ ಬಿಕ್ಕಟ್ಟಿನಿಂದಾಗಿ ಐದು ವರ್ಷಗಳಲ್ಲಿ ಮೊದಲ ಬಾರಿಗೆ ಈ ರೇಸ್​ ನಡೆಸಲಾಗುತ್ತಿದೆ.

ಇಂದು ಬಹಳ ವಿಶೇಷವಾದ ದಿನ… ಕೊಲಂಬೊದಿಂದ ಪೂರ್ವಕ್ಕೆ 180 ಕಿಲೋಮೀಟರ್ (112 ಮೈಲಿ) ದೂರದಲ್ಲಿರುವ ಫಾಕ್ಸ್ ಹಿಲ್ ಸರ್ಕೀಟ್​ನಲ್ಲಿ ಸುಮಾರು 100,000 ಪ್ರೇಕ್ಷಕರು ಇದ್ದರು ಎಂದು ಲಿಯಾನೇಜ್ ಅದಕ್ಕಿಂತ ಮೊದಲು ತಿಳಿಸಿದ್ದರು.

ಶ್ರೀಲಂಕಾದ ರಸ್ತೆಗಳು ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆಗಳಲ್ಲಿ ಒಂದಾಗಿದೆ. 12,500 ಕಿಲೋಮೀಟರ್ (7,812 ಮೈಲಿ) ರಸ್ತೆಗಳಲ್ಲಿ ಪ್ರತಿದಿನ ಸರಾಸರಿ ಎಂಟು ಸಾವುನೋವುಗಳು ವರದಿಯಾಗುತ್ತಿವೆ.

Exit mobile version