ಅಹಮದಾಬಾದ್: ಚೆನ್ನೈ ಸೂಪರ್ ಕಿಂಗ್ಸ್ ತಂಡ ಐದನೇ ಬಾರಿ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದೆ. 16ನೇ ಆವೃತ್ತಿಯ ಐಪಿಎಲ್ನ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 5 ವಿಕೆಟ್ಗಳಿಂದ ಸೋಲಿಸಿ ಚಾಂಪಿಯನ್ಪಟ್ಟ ಅಲಂಕರಿಸಿತು. ಚೆನ್ನೈ ತಂಡದ ಗೆಲುವಿಗೆ 15 ಓವರ್ಗಳಲ್ಲಿ 171 ರನ್ಗಳ ಗುರಿಯನ್ನು ನೀಡಲಾಗಿತ್ತು. ಚೆನ್ನೈ ತಂಡ ಕೊನೇ ಬಾಲ್ಗೆ ಆ ಗುರಿಯನ್ನು ಮುಟ್ಟಿತು.
ಅದಕ್ಕಿಂತ ಮೊದಲು ಸಾಯಿ ಸುದರ್ಶನ್ (96 ರನ್, 47 ಎಸೆತ, 8 ಫೋರ್, 6 ಸಿಕ್ಸರ್) ಹಾಗೂ ವೃದ್ಧಿಮಾನ್ ಸಾಹ (54), ಬಾರಿಸಿದ ಅರ್ಧ ಶತಕಗಳ ನೆರವು ಪಡೆದ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ಐಪಿಎಲ್ 16ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಎದುರಾಳಿ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 215 ರನ್ಗಳ ಸವಾಲು ನೀಡಿದೆ. ಆರಂಭದಿಂದಲೂ ಸರಾಗವಾಗಿ ರನ್ ಗಳಿಸುತ್ತಾ ಬಂದ ಗುಜರಾತ್ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.
ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯ ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟ ಮಾಡಿಕೊಂಡು 214 ರನ್ ಬಾರಿಸಿತು.
ಫೈನಲ್ ಪಂದ್ಯಕ್ಕೆ ಮೊದಲು ವರ್ಣರಂಜಿತ ಸಮಾರೋಪ ಸಮಾರಂಭಗಳು ನಡೆಯಲಿವೆ. ದೇಶ ವಿದೇಶದ ಹಲವಾರು ಗಣ್ಯರು ಹಾಗೂ ಜಗದ್ವಿಖ್ಯಾತ ಕಲಾವಿದರು ಸಮಾರೋಪ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾರೆ. ಈ ಕ್ಷಣದ ವೀಕ್ಷಣೆಗಾಗಿ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ಕಾತರರಾಗಿ ಕುಳಿತಿದ್ದಾರೆ.
ಸಾಯಿ ಸುದರ್ಶನ್ ಅವರ ಅಬ್ಬರ 96 ರನ್ ಹಾಗೂ ವೃದ್ಧಿಮಾನ್ ಸಾಹ ಅವರ ಅರ್ಧ ಶತಕದ ನೆರವು ಪಡೆದ ಗುಜರಾತ್ ತಂಡ ಬೃಹತ್ ಮೊತ್ತ ಪೇರಿಸಿದೆ.
ಮೊದಲ ಇನಿಂಗ್ಸ್ ಮುಕ್ತಾಯ. 20 ಓವರ್ಗಳಲ್ಲಿ 214 ರನ್ ಬಾರಿಸಿದ ಗುಜರಾತ್ ಟೈಟನ್ಸ್. ಚೆನ್ನೈಗೆ 215 ರನ್ಗಳ ಗೆಲುವಿನ ಗುರಿ.
ಸಾಯಿ ಸುದರ್ಶನ್ ಔಟ್. 47 ಎಸೆತಕ್ಕೆ 96 ರನ್ ಬಾರಿಸಿದ್ದ ಎಡಗೈ ಬ್ಯಾಟರ್. ಗುಜರಾತ್ 19.3 ಓವರ್ಗಳಲ್ಲಿ 212 ರನ್.
200 ರನ್ಗಳ ಗಡಿ ದಾಟಿದ ಗುಜರಾತ್. 19 ಓವರ್ನ ಕೊನೇಎಸೆತಕ್ಕೆ ಹಾರ್ದಿಕ್ ಸಿಕ್ಸರ್ ಬಾರಿಸುವ ಮೂಲಕ 200 ರನ್ ಪೂರೈಸಿದ ಜಟಿ.
ಅರ್ಧ ಶತಕ ಬಾರಿಸಿದ ಸಾಯಿ ಸುದರ್ಶನ್.. 33 ಎಸೆತಕ್ಕೆ 52 ರನ್.