ಅಹಮದಾಬಾದ್: ಚೆನ್ನೈ ಸೂಪರ್ ಕಿಂಗ್ಸ್ ತಂಡ ಐದನೇ ಬಾರಿ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದೆ. 16ನೇ ಆವೃತ್ತಿಯ ಐಪಿಎಲ್ನ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 5 ವಿಕೆಟ್ಗಳಿಂದ ಸೋಲಿಸಿ ಚಾಂಪಿಯನ್ಪಟ್ಟ ಅಲಂಕರಿಸಿತು. ಚೆನ್ನೈ ತಂಡದ ಗೆಲುವಿಗೆ 15 ಓವರ್ಗಳಲ್ಲಿ 171 ರನ್ಗಳ ಗುರಿಯನ್ನು ನೀಡಲಾಗಿತ್ತು. ಚೆನ್ನೈ ತಂಡ ಕೊನೇ ಬಾಲ್ಗೆ ಆ ಗುರಿಯನ್ನು ಮುಟ್ಟಿತು.
ಅದಕ್ಕಿಂತ ಮೊದಲು ಸಾಯಿ ಸುದರ್ಶನ್ (96 ರನ್, 47 ಎಸೆತ, 8 ಫೋರ್, 6 ಸಿಕ್ಸರ್) ಹಾಗೂ ವೃದ್ಧಿಮಾನ್ ಸಾಹ (54), ಬಾರಿಸಿದ ಅರ್ಧ ಶತಕಗಳ ನೆರವು ಪಡೆದ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ಐಪಿಎಲ್ 16ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಎದುರಾಳಿ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 215 ರನ್ಗಳ ಸವಾಲು ನೀಡಿದೆ. ಆರಂಭದಿಂದಲೂ ಸರಾಗವಾಗಿ ರನ್ ಗಳಿಸುತ್ತಾ ಬಂದ ಗುಜರಾತ್ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.
ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯ ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟ ಮಾಡಿಕೊಂಡು 214 ರನ್ ಬಾರಿಸಿತು.
ಫೈನಲ್ ಪಂದ್ಯಕ್ಕೆ ಮೊದಲು ವರ್ಣರಂಜಿತ ಸಮಾರೋಪ ಸಮಾರಂಭಗಳು ನಡೆಯಲಿವೆ. ದೇಶ ವಿದೇಶದ ಹಲವಾರು ಗಣ್ಯರು ಹಾಗೂ ಜಗದ್ವಿಖ್ಯಾತ ಕಲಾವಿದರು ಸಮಾರೋಪ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾರೆ. ಈ ಕ್ಷಣದ ವೀಕ್ಷಣೆಗಾಗಿ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ಕಾತರರಾಗಿ ಕುಳಿತಿದ್ದಾರೆ.
11ನೇ ಓವರ್ ವೇಳೆ ಸಣ್ಣದಾಗಿ ಮಳೆ ಹನಿಯಿತು. ಗ್ರೌಂಡ್ ಸಿಬ್ಬಂದಿಗಳು ಹೊದಿಕೆಯೊಂದಿಗೆ ಸಜ್ಜಾಗಿ ನಿಂತಿದ್ದರು. ಆದರೆ, ತಕ್ಷಣದಲ್ಲೇ ಮಳೆ ನಿಂತಿತು. ಪಂಧ್ಯ ಮುಂದುವರಿಯಿತು.
ಗುಜರಾತ್ ತಂಡದ ಎರಡನೇ ವಿಕೆಟ್ ಪತನ. ವೃದ್ಧಿಮಾನ್ ಸಾಹ (54ರನ್) ಔಟ್. ದೀಪಕ್ ಚಾಹರ್ ಎಸೆತಕ್ಕೆ ಧೋನಿಗೆ ಕ್ಯಾಚಿತ್ತು ನಿರ್ಗಮನ ಗುಜರಾತ್ 2 ವಿಕೆಟ್ಗೆ 131 ರನ್
2014ನೇ ಋತುವಿನ ಫೈನಲ್ ಪಂದ್ಯದಲ್ಲೂ ಅರ್ಧ ಶತಕ ಬಾರಿಸಿದ್ದ ಸಾಹ.
ಅರ್ಧ ಶತಕ ಬಾರಿಸಿದ ವೃದ್ಧಿಮಾನ್ ಸಾಹ. 36 ಎಸೆತಕ್ಕೆ 56 ರನ್ ಬಾರಿಸಿದ ಸಾಹ.
12 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 109 ರನ್ ಬಾರಿಸಿದ ಗುಜರಾತ್.