Site icon Vistara News

CSK vs GT IPL 2023 Final Live Score : ಸಿಎಸ್​ಕೆಗೆ ರೋಚಕ ಜಯ, ಧೋನಿ ಬಳಗ ಐದನೇ ಬಾರಿ ಚಾಂಪಿಯನ್​

Chennai Super Kings vs Gujarat Titans IPL Final

#image_title

ಅಹಮದಾಬಾದ್​​: ಚೆನ್ನೈ ಸೂಪರ್​ ಕಿಂಗ್ಸ್ ತಂಡ ಐದನೇ ಬಾರಿ ಐಪಿಎಲ್​ ಟ್ರೋಫಿ ಎತ್ತಿ ಹಿಡಿದಿದೆ. 16ನೇ ಆವೃತ್ತಿಯ ಐಪಿಎಲ್​ನ ಫೈನಲ್ ಪಂದ್ಯದಲ್ಲಿ ಗುಜರಾತ್​ ಟೈಟನ್ಸ್ ತಂಡವನ್ನು ಡಕ್​ವರ್ತ್​ ಲೂಯಿಸ್​ ನಿಯಮದ ಪ್ರಕಾರ 5 ವಿಕೆಟ್​ಗಳಿಂದ ಸೋಲಿಸಿ ಚಾಂಪಿಯನ್​ಪಟ್ಟ ಅಲಂಕರಿಸಿತು. ಚೆನ್ನೈ ತಂಡದ ಗೆಲುವಿಗೆ 15 ಓವರ್​ಗಳಲ್ಲಿ 171 ರನ್​ಗಳ ಗುರಿಯನ್ನು ನೀಡಲಾಗಿತ್ತು. ಚೆನ್ನೈ ತಂಡ ಕೊನೇ ಬಾಲ್​​ಗೆ ಆ ಗುರಿಯನ್ನು ಮುಟ್ಟಿತು.

ಅದಕ್ಕಿಂತ ಮೊದಲು ಸಾಯಿ ಸುದರ್ಶನ್​ (96 ರನ್​, 47 ಎಸೆತ, 8 ಫೋರ್, 6 ಸಿಕ್ಸರ್​) ಹಾಗೂ​ ವೃದ್ಧಿಮಾನ್​ ಸಾಹ (54), ಬಾರಿಸಿದ ಅರ್ಧ ಶತಕಗಳ ನೆರವು ಪಡೆದ ಹಾಲಿ ಚಾಂಪಿಯನ್​ ಗುಜರಾತ್​ ಟೈಟನ್ಸ್​ ತಂಡ ಐಪಿಎಲ್​ 16ನೇ ಆವೃತ್ತಿಯ ಫೈನಲ್​ ಪಂದ್ಯದಲ್ಲಿ ಎದುರಾಳಿ ನಾಲ್ಕು ಬಾರಿಯ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ 215 ರನ್​ಗಳ ಸವಾಲು ನೀಡಿದೆ. ಆರಂಭದಿಂದಲೂ ಸರಾಗವಾಗಿ ರನ್​ ಗಳಿಸುತ್ತಾ ಬಂದ ಗುಜರಾತ್​ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯ ಮೊದಲು ಬ್ಯಾಟ್​ ಮಾಡಿದ ಗುಜರಾತ್ ತಂಡ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟ ಮಾಡಿಕೊಂಡು 214 ರನ್​ ಬಾರಿಸಿತು.

ಫೈನಲ್ ಪಂದ್ಯಕ್ಕೆ ಮೊದಲು ವರ್ಣರಂಜಿತ ಸಮಾರೋಪ ಸಮಾರಂಭಗಳು ನಡೆಯಲಿವೆ. ದೇಶ ವಿದೇಶದ ಹಲವಾರು ಗಣ್ಯರು ಹಾಗೂ ಜಗದ್ವಿಖ್ಯಾತ ಕಲಾವಿದರು ಸಮಾರೋಪ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾರೆ. ಈ ಕ್ಷಣದ ವೀಕ್ಷಣೆಗಾಗಿ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ಕಾತರರಾಗಿ ಕುಳಿತಿದ್ದಾರೆ.

Sukhesha Padibagilu

11 ಓವರ್​ಗಳ ಮುಕ್ತಾಯ 1 ವಿಕೆಟ್ ನಷ್ಟಕ್ಕೆ 91 ರನ್ ಬಾರಿಸಿದ ಗುಜರಾತ್​ ಟೈಟನ್ಸ್​

Sukhesha Padibagilu

9 ಓವರ್​ಗಳ ಆಟ ಮುಕ್ತಾಯ. ಮೊದಲ ಟೈಮ್​ ಔಟ್​. 1 ವಿಕೆಟ್​ ನಷ್ಟಕ್ಕೆ 90 ರನ್ ಬಾರಿಸಿದ ಗುಜರಾತ್​.

Sukhesha Padibagilu

ಶುಭಮನ್ ಗಿಲ್​ ಔಟ್​. 19 ಎಸೆತಕ್ಕೆ 39 ರನ್​ ಬಾರಿಸಿ ಪೆವಿಲಿಯನ್​ಗೆ ಮರಳಿದ ಗಿಲ್​. ಧೋನಿಯ ಕ್ಷಿಪ್ರ ಸ್ಟಂಪ್​ಗೆ ಗಿಲ್​ ವಿಕೆಟ್​ ಪತನ. ಮತ್ತೊಂದು ಶತಕ ಬಾರಿಸುವ ಅವಕಾಶ ಮಿಸ್​.ಜಡೇಜಾ ಎಸೆತಕ್ಕೆ ಮುಂದೆ ಹೋಗಿ ರನ್​ ಗಳಿಸಲು ಯತ್ನಿಸಿದ್ದ ಗಿಲ್​. ಗುಜರಾತ್​ 67ಕ್ಕೆ 1

Sukhesha Padibagilu

ಪವರ್ ಪ್ಲೇ ಅವಧಿ ಮುಕ್ತಾಯ. ವಿಕೆಟ್ ನಷ್ಟವಿಲ್ಲದೇ 62 ರನ್​ ಬಾರಿಸಿದ ಗುಜರಾತ್​. ಶುಭಮನ್ ಗಿಲ್​ 17 ಎಸೆತಕ್ಕೆ 36 ರನ್​. ವೃದ್ಧಿಮಾನ್​ ಸಾಹ 19 ಎಸೆತಕ್ಕೆ 26 ರನ್​.

Sukhesha Padibagilu

3 ಓವರ್​ಗಳ ಅಂತ್ಯಕ್ಕೆ 24 ರನ್ ಬಾರಿಸಿದ ಗುಜರಾತ್​ ಟೈಟನ್ಸ್​

Exit mobile version