Site icon Vistara News

CSK vs GT IPL 2023 Final Live Score : ಸಿಎಸ್​ಕೆಗೆ ರೋಚಕ ಜಯ, ಧೋನಿ ಬಳಗ ಐದನೇ ಬಾರಿ ಚಾಂಪಿಯನ್​

Chennai Super Kings vs Gujarat Titans IPL Final

#image_title

ಅಹಮದಾಬಾದ್​​: ಚೆನ್ನೈ ಸೂಪರ್​ ಕಿಂಗ್ಸ್ ತಂಡ ಐದನೇ ಬಾರಿ ಐಪಿಎಲ್​ ಟ್ರೋಫಿ ಎತ್ತಿ ಹಿಡಿದಿದೆ. 16ನೇ ಆವೃತ್ತಿಯ ಐಪಿಎಲ್​ನ ಫೈನಲ್ ಪಂದ್ಯದಲ್ಲಿ ಗುಜರಾತ್​ ಟೈಟನ್ಸ್ ತಂಡವನ್ನು ಡಕ್​ವರ್ತ್​ ಲೂಯಿಸ್​ ನಿಯಮದ ಪ್ರಕಾರ 5 ವಿಕೆಟ್​ಗಳಿಂದ ಸೋಲಿಸಿ ಚಾಂಪಿಯನ್​ಪಟ್ಟ ಅಲಂಕರಿಸಿತು. ಚೆನ್ನೈ ತಂಡದ ಗೆಲುವಿಗೆ 15 ಓವರ್​ಗಳಲ್ಲಿ 171 ರನ್​ಗಳ ಗುರಿಯನ್ನು ನೀಡಲಾಗಿತ್ತು. ಚೆನ್ನೈ ತಂಡ ಕೊನೇ ಬಾಲ್​​ಗೆ ಆ ಗುರಿಯನ್ನು ಮುಟ್ಟಿತು.

ಅದಕ್ಕಿಂತ ಮೊದಲು ಸಾಯಿ ಸುದರ್ಶನ್​ (96 ರನ್​, 47 ಎಸೆತ, 8 ಫೋರ್, 6 ಸಿಕ್ಸರ್​) ಹಾಗೂ​ ವೃದ್ಧಿಮಾನ್​ ಸಾಹ (54), ಬಾರಿಸಿದ ಅರ್ಧ ಶತಕಗಳ ನೆರವು ಪಡೆದ ಹಾಲಿ ಚಾಂಪಿಯನ್​ ಗುಜರಾತ್​ ಟೈಟನ್ಸ್​ ತಂಡ ಐಪಿಎಲ್​ 16ನೇ ಆವೃತ್ತಿಯ ಫೈನಲ್​ ಪಂದ್ಯದಲ್ಲಿ ಎದುರಾಳಿ ನಾಲ್ಕು ಬಾರಿಯ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ 215 ರನ್​ಗಳ ಸವಾಲು ನೀಡಿದೆ. ಆರಂಭದಿಂದಲೂ ಸರಾಗವಾಗಿ ರನ್​ ಗಳಿಸುತ್ತಾ ಬಂದ ಗುಜರಾತ್​ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯ ಮೊದಲು ಬ್ಯಾಟ್​ ಮಾಡಿದ ಗುಜರಾತ್ ತಂಡ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟ ಮಾಡಿಕೊಂಡು 214 ರನ್​ ಬಾರಿಸಿತು.

ಫೈನಲ್ ಪಂದ್ಯಕ್ಕೆ ಮೊದಲು ವರ್ಣರಂಜಿತ ಸಮಾರೋಪ ಸಮಾರಂಭಗಳು ನಡೆಯಲಿವೆ. ದೇಶ ವಿದೇಶದ ಹಲವಾರು ಗಣ್ಯರು ಹಾಗೂ ಜಗದ್ವಿಖ್ಯಾತ ಕಲಾವಿದರು ಸಮಾರೋಪ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾರೆ. ಈ ಕ್ಷಣದ ವೀಕ್ಷಣೆಗಾಗಿ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ಕಾತರರಾಗಿ ಕುಳಿತಿದ್ದಾರೆ.

Sukhesha Padibagilu

ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮಾತನಾಡಿ, ನಾನೂ ಮೊದಲು ಬೌಲಿಂಗ್ ಮಾಡುತ್ತಿದ್ದೆ, ಆದರೆ ನನ್ನ ಹೃದಯವು ಬ್ಯಾಟಿಂಗ್ ಮಾಡಲು ಬಯಸಿತು. ಮಳೆ ಬರದು ಎಂದು ನಿರೀಕ್ಷಿಸಿದ್ದೇವೆ. ಯಾವ ತಂಡವು ಉತ್ತಮವಾಗಿ ಆಡುತ್ತದೆಯೋ ಅದು ಟ್ರೋಫಿ ಗೆಲ್ಲಲಿದೆ. ನನ್ನ ತಂಡದ ಆಟಗಾರರ ಸಂಭ್ರಮ ಹೆಚ್ಚಾಗಲಿ ಎಂದು ಬಯಸುವೆ. ಹಿಂದಿನ ಪಂದ್ಯದಲ್ಲಿ ಆಡಿದ ತಂಡದೊಂದಿಗೆ ಕಣಕ್ಕೆ ಇಳಿಯಲಿದ್ದೇವೆ ಎಂದು ಹೇಳಿದ್ದಾರೆ.

Sukhesha Padibagilu

ಟಾಸ್​ ಗೆದ್ದ ಬಳಿಕ ಮಾತನಾಡಿದ ಧೋನಿ, ಮಳೆಯ ಮುನ್ಸೂಚನೆ ಇರುವ ಕಾರಣ ಮೊದಲು ಫೀಲ್ಡಿಂಗ್ ಮಾಡಲು ನಿರ್ಧಾರ ಮಾಡಿದ್ದೇವೆ. ನಿನ್ನೆ ನಾವು ಡ್ರೆಸ್ಸಿಂಗ್ ರೂಮ್​​ನಲ್ಲಿಯೇ ಇರುವಂತಾಗಿತ್ತು. ಒಬ್ಬ ಕ್ರಿಕೆಟಿಗನಾಗಿ ನಾವು ಯಾವಾಗಲೂ ಪೂರ್ಣ ಪಂದ್ಯವನ್ನು ಆಡಲು ಬಯಸುತ್ತೇವೆ. ಭಾನುವಾರ ಅಭಿಮಾನಿಗಳು ಹೆಚ್ಚು ತೊಂದರೆ ಅನುಭವಿಸಿದರು. ಇಂದು ನಾವು ಅವರನ್ನು ರಂಜಿಸಲಿದ್ದೇವೆ. ಪಿಚ್ ಬಹಳ ದೀರ್ಘ ಅವಧಿಯಿಂದ ಮುಚ್ಚಿಡಲ್ಪಟ್ಟಿದೆ. ಆದರೆ ಪಂದ್ಯಾವಳಿಯುದ್ದಕ್ಕೂ ಪಿಚ್ ಉತ್ತಮವಾಗಿ ವರ್ತಿಸಿದೆ. ಪೂರ್ತಿ 20 ಓವರ್​ಗಳ ಪಂದ್ಯವನ್ನು ಆಡುವ ಮೂಲಕ ಪ್ರೇಕ್ಷಕರನ್ನು ರಂಚಿಸಲಿದ್ದೇವೆ ಎಂದರು.

Sukhesha Padibagilu

ಟಾಸ್​​ ಗೆದ್ದ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ. ಮೊದಲು ಬೌಲಿಂಗ್ ಆಯ್ಕೆ.

Sukhesha Padibagilu

ಪಿಚ್​ ಪರಿಸ್ಥಿತಿಯನ್ನು ಪರೀಕ್ಷಿಸಿದ ನಾಯಕ ಹಾರ್ದಿಕ್​ ಪಾಂಡ್ಯ ಹಾಗೂ ಚೆನ್ನೈ ತಂಡದ ನಾಯಕ ಧೋನಿ.

Sukhesha Padibagilu

ಸಿಂಗ್​ ಆಶ್​ ಕಿಂಗ್ ಅವರಿಂದ ಹಾಡುಗಳು ಆರಂಭ. ಅಹ್ಮದಾಬಾದ್ ನ ಕಿಕ್ಕಿರಿದು ತುಂಬಿರುವ ಕ್ರೀಡಾಂಗಣದ ಮುಂದೆ ಕಿಂಗ್ ತಮ್ಮ ಇತ್ತೀಚಿನ ಹಿಟ್ ಮಾನ್ ಮೇರಿ ಜಾನ್ ಹಾಡಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು.

Exit mobile version