Site icon Vistara News

IPL 2023 : ಫೈನಲ್​ ಪಂದ್ಯದಲ್ಲಿ ಟಾಸ್ ಗೆದ್ದ ಧೋನಿ, ಮೊದಲು ಫೀಲ್ಡಿಂಗ್ ಮಾಡಲು ನಿರ್ಧಾರ

IPL 2023 fianal dohoni, hardik pandya

#image_title

ಅಹಮದಾಬಾದ್​: ಐಪಿಎಲ್ 16ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಟಾಸ್​ ಗೆದ್ದಿರುವ ಚೆನ್ನೈ ತಂಡ ಮೊದಲು ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿದೆ. ಈ ಮೂಲಕ ಹಾರ್ದಿಕ್​ ನೇತೃತ್ವದ ತಂಡ ಮೊದಲು ಫೀಲ್ಡಿಂಗ್​ ಮಾಡಬೇಕಾಗಿದೆ. ಈ ಸ್ಟೇಡಿಯಮ್​ನಲ್ಲಿ ಮೊದಲು ಬ್ಯಾಟ್ ಮಾಡಿದ ತಂಡಗಳೇ ಹೆಚ್ಚು ಗೆಲುವು ದಾಖಲಿಸಿತ್ತು. ಆದಾಗ್ಯೂ ಮಳೆಯ ಸೂಚನೆ ಇರುವ ಕಾರಣ ಸಿಎಸ್​ಕೆ ನಾಯಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

ಅಹಮದಾಬಾದ್​​ನಲ್ಲಿಯೇ ಮಾರ್ಚ್​ 31ರಂದು ಟೂರ್ನಿ ಉದ್ಘಾಟನೆಗೊಂಡಿತ್ತು. ಅದಾಗಿ ಸುಮಾರು ಎರಡು ತಿಂಗಳುಗಳು ಕಳೆದಿವೆ. 70 ಲೀಗ್ ಪಂದ್ಯಗಳು, ಮೂರು ಪ್ಲೇಆಫ್​ ಪಂದ್ಯಗಳು ನಡೆದಿವೆ. ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉದ್ಘಾಟನಾ ಪಂದ್ಯದಲ್ಲಿಯೇ ಆಡಿದ್ದ ತಂಡಗಲೇ ಫೈನಲ್ ಪಂದ್ಯದಲ್ಲಿ ಆಡುತ್ತಿವೆ.

ಹಾಲಿ ಆವೃತ್ತಿಯ ಐಪಿಎಲ್​ನಲ್ಲಿ ನೆನಪಿಸಿಕೊಳ್ಳಬೇಕಾದ ಅನೇಕ ವಿಷಯಗಳಿವೆ. ಶುಬ್ಮನ್ ಗಿಲ್ ಅವರ ಅದ್ಭುತ ಪ್ರದರ್ಶನಗಳು ಆ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಅವರು ತಮ್ಮ ಕೊನೆಯ ನಾಲ್ಕು ಪಂದ್ಯಗಳಲ್ಲಿ ಮೂರು ಶತಕಗಳನ್ನು ಗಳಿಸಿದ್ದಾರೆ, ಒಟ್ಟಾರೆಯಾಗಿ 851 ರನ್ ಪೇರಿಸಿದ್ದು, ಆರೆಂಜ್​ ಕ್ಯಾಪ್​ ಬಹುತೇಕ ಅವರ ಮುಡಿಗೇರಲಿದೆ. ಐಪಿಎಲ್ 2023 ರಲ್ಲಿ ಅವರು ಪ್ರತಿ 16 ಎಸೆತಗಳಿಗೆ ಒಂದು ಸಿಕ್ಸರ್ ಬಾರಿಸಿದ್ದಾರೆ. ಹಿಂದಿನ ಆವೃತ್ತಿಯಲ್ಲಿ ಅವರು ಪ್ರತಿ 33 ಎಸೆತಗಳಿಗೆ ಒಂದು ಸಿಕ್ಸರ್​ ಬಾರಿಸಿದ್ದರು.

ಟಾಸ್​ ಗೆದ್ದ ಬಳಿಕ ಮಾತನಾಡಿದ ಧೋನಿ, ಮಳೆಯ ಮುನ್ಸೂಚನೆ ಇರುವ ಕಾರಣ ಮೊದಲು ಫೀಲ್ಡಿಂಗ್ ಮಾಡಲು ನಿರ್ಧಾರ ಮಾಡಿದ್ದೇವೆ. ನಿನ್ನೆ ನಾವು ಡ್ರೆಸ್ಸಿಂಗ್ ರೂಮ್​​ನಲ್ಲಿಯೇ ಇರುವಂತಾಗಿತ್ತು. ಒಬ್ಬ ಕ್ರಿಕೆಟಿಗನಾಗಿ ನಾವು ಯಾವಾಗಲೂ ಪೂರ್ಣ ಪಂದ್ಯವನ್ನು ಆಡಲು ಬಯಸುತ್ತೇವೆ. ಭಾನುವಾರ ಅಭಿಮಾನಿಗಳು ಹೆಚ್ಚು ತೊಂದರೆ ಅನುಭವಿಸಿದರು. ಇಂದು ನಾವು ಅವರನ್ನು ರಂಜಿಸಲಿದ್ದೇವೆ. ಪಿಚ್ ಬಹಳ ದೀರ್ಘ ಅವಧಿಯಿಂದ ಮುಚ್ಚಿಡಲ್ಪಟ್ಟಿದೆ. ಆದರೆ ಪಂದ್ಯಾವಳಿಯುದ್ದಕ್ಕೂ ಪಿಚ್ ಉತ್ತಮವಾಗಿ ವರ್ತಿಸಿದೆ. ಪೂರ್ತಿ 20 ಓವರ್​ಗಳ ಪಂದ್ಯವನ್ನು ಆಡುವ ಮೂಲಕ ಪ್ರೇಕ್ಷಕರನ್ನು ರಂಚಿಸಲಿದ್ದೇವೆ ಎಂದರು.

ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮಾತನಾಡಿ, ನಾನೂ ಮೊದಲು ಬೌಲಿಂಗ್ ಮಾಡುತ್ತಿದ್ದೆ, ಆದರೆ ನನ್ನ ಹೃದಯವು ಬ್ಯಾಟಿಂಗ್ ಮಾಡಲು ಬಯಸಿತು. ಮಳೆ ಬರದು ಎಂದು ನಿರೀಕ್ಷಿಸಿದ್ದೇವೆ. ಯಾವ ತಂಡವು ಉತ್ತಮವಾಗಿ ಆಡುತ್ತದೆಯೋ ಅದು ಟ್ರೋಫಿ ಗೆಲ್ಲಲಿದೆ. ನನ್ನ ತಂಡದ ಆಟಗಾರರ ಸಂಭ್ರಮ ಹೆಚ್ಚಾಗಲಿ ಎಂದು ಬಯಸುವೆ. ಹಿಂದಿನ ಪಂದ್ಯದಲ್ಲಿ ಆಡಿದ ತಂಡದೊಂದಿಗೆ ಕಣಕ್ಕೆ ಇಳಿಯಲಿದ್ದೇವೆ ಎಂದು ಹೇಳದಿರು.

ಫೈನಲ್​ನಲ್ಲಿ ಆಡುವ ತಂಡಗಳು ಇಂತಿವೆ

ಗುಜರಾತ್ ಟೈಟನ್ಸ್ : ವೃದ್ಧಿಮಾನ್ ಸಹಾ (ವಿಕೆ), ಶುಭಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ.

ಚೆನ್ನೈ ಸೂಪರ್ ಕಿಂಗ್ಸ್ : ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯೀನ್ ಅಲಿ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಎಂಎಸ್ ಧೋನಿ, ದೀಪಕ್ ಚಹರ್, ಮಥೀಶಾ ಪತಿರಾನಾ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಾನಾ.

Exit mobile version