ಅಹಮದಾಬಾದ್: ಐಪಿಎಲ್ 16ನೇ ಆವೃತ್ತಿಯ ಫೈನಲ್ ಪಂದ್ಯದ ಆರಂಭಕ್ಕೆ ಕೆಲವೇ ಕ್ಷಣಗಳು ಬಾಕಿ ಇರುವಂತೆಯೇ ಅಹಮದಾಬಾದ್ನಲ್ಲಿ ಜೋರು ಮಳೆಯಾಗಿತ್ತು. ರಾತ್ರಿ 11 ಗಂಟೆಯ ತನಕವೂ ಗುಡುಗು ಸಹಿತ ಮಳೆ ಸುರಿದ ಕಾರಣ ಪಂದ್ಯವನ್ನು ಮುಂದೂಡಿಕೆ ಮಾಡಲು ರೆಫರಿಗಳು ನಿರ್ಧರಿಸಿದರು. ಅದಕ್ಕಿಂತ ಮೊದಲು 9 ಗಂಟೆಯ ವೇಳೆಗೆ ಮಳೆ ಸಂಪೂರ್ಣ ನಿಂತಿದೆ. ಹೀಗಾಗಿ ಪಂದ್ಯ ಆರಂಭಕ್ಕೆ ಮೈದಾನದ ಸಿಬ್ಬಂದಿ ಸಜ್ಜಾಗುತ್ತಿದೆ. ಪೂರ್ಣ 20 ಓವರ್ಗಳ ತನಕ ಪಂದ್ಯವನ್ನು ಆಡಿಸಲು ಸುಮಾರು 10 ಗಂಟೆಯ ತನಕ ಸಮಯವಿದೆ. ಹೀಗಾಗಿ ಮೈದಾನ ಒಣಗಿಸುವ ಕಾರ್ಯದಲ್ಲಿ ಸಿಬ್ಬಂದಿ ನಿರತರಾಗಿದ್ದಾರೆ.
ಈ ಪಂದ್ಯದಲ್ಲಿ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಹಾಲಿ ಚಾಂಪಿಯನ್ ಗುಜರಾತ್ ಜೈಂಟ್ಸ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಕಾದಾಡಲಿವೆ. ಹಾಲಿ ಆವೃತ್ತಿಯಲ್ಲಿ ಎರಡೂ ತಂಡಗಳು ಬಲಿಷ್ಠವಾಗಿದ್ದು ಜಿದ್ದಾಜಿದ್ದಿನ ಕಾದಾಟದ ನಿರೀಕ್ಷೆಯಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಮ್ ಎನಿಸಿಕೊಂಡಿರುವ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಪಂದ್ಯ ನಡೆಯಲಿದೆ.
ಫೈನಲ್ ಪಂದ್ಯಕ್ಕೆ ಮೊದಲು ವರ್ಣರಂಜಿತ ಸಮಾರೋಪ ಸಮಾರಂಭಗಳು ನಡೆಯಲಿವೆ. ದೇಶ ವಿದೇಶದ ಹಲವಾರು ಗಣ್ಯರು ಹಾಗೂ ಜಗದ್ವಿಖ್ಯಾತ ಕಲಾವಿದರು ಸಮಾರೋಪ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾರೆ. ಈ ಕ್ಷಣದ ವೀಕ್ಷಣೆಗಾಗಿ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ಕಾತರರಾಗಿ ಕುಳಿತಿದ್ದಾರೆ.
ರಾತ್ರಿ 10.30 ಗಂಟೆಯಾದರೂ ನಿಲ್ಲದ ಮಳೆ. ಮೈದಾನ ತುಂಬೆಲ್ಲ ನೀರು. ಪಂದ್ಯ ಮೀಸಲು ದಿನಕ್ಕೆ ಮುಂದೂಡಿಕೆಯಾಗುವ ಸಾಧ್ಯತೆ.
ಮಳೆ ನಿಂತು ಪಂದ್ಯ ಪ್ರಾರಂಭವಾದರೆ, ವೇಳಾಪಟ್ಟಿಯನ್ನು ಮರು ನಿಗದಿಪಡಿಸಲಾಗುತ್ತದೆ. ರಾತ್ರಿ 9:45 (19 ಓವರ್ಗಳ ಆಟ), ರಾತ್ರಿ 10 (17 ಓವರ್ಗಳ ಆಟ), ರಾತ್ರಿ 10:30 (15 ಓವರ್ಗಳ ಆಟ) ನಡೆಯಲಿದೆ.
ನರೇಂದ್ರ ಮೋದಿ ಸ್ಟೇಡಿಯಮ್ ಬಳಿ ಮತ್ತೆ ಮಳೆ ಶುರು. ಅಭಿಮಾನಿಗಳಿಗೆ ಮತ್ತೆ ಆತಂಕ,
ಕ್ರಿಕೆಟ್ ಅಭಿಮಾನಿಗಳಿಗೆ ಶುಭ ಸುದ್ದಿ. ಮೊಟೆರಾದಲ್ಲಿ ಕಡಿಮೆಯಾದ ಮಳೆಯ ಅಬ್ಬರ.
9.40ರಿಂದ 11.56ರೊಳಗೆ ಪಂದ್ಯ ಆರಂಭಗೊಂಡರೆ ಓವರ್ಗಳ ಕಡಿತವಾಗುತ್ತದೆ. ಪಂದ್ಯ ಆರಂಭಗೊಂಡ ಸಮಯಕ್ಕೆ ಅನುಗುಣವಾಗಿ ಓವರ್ಗಳು ನಿರ್ಧಾರವಾಗಲಿವೆ. ಒಂದು ವೇಳೆ ಡಕ್ವರ್ತ್ ಲೂಯಿಸ್ ನಿಯಮ ಅನ್ವಯ ಮಾಡಬೇಕಾದರೆ ಕನಿಷ್ಠ ಪಕ್ಷ ಐದು ಓವರ್ಗಳ ಪಂದ್ಯ ನಡೆಯಬೇಕಾಗಿದೆ.