ಅಹಮದಾಬಾದ್: ಐಪಿಎಲ್ 16ನೇ ಆವೃತ್ತಿಯ ಫೈನಲ್ ಪಂದ್ಯದ ಆರಂಭಕ್ಕೆ ಕೆಲವೇ ಕ್ಷಣಗಳು ಬಾಕಿ ಇರುವಂತೆಯೇ ಅಹಮದಾಬಾದ್ನಲ್ಲಿ ಜೋರು ಮಳೆಯಾಗಿತ್ತು. ರಾತ್ರಿ 11 ಗಂಟೆಯ ತನಕವೂ ಗುಡುಗು ಸಹಿತ ಮಳೆ ಸುರಿದ ಕಾರಣ ಪಂದ್ಯವನ್ನು ಮುಂದೂಡಿಕೆ ಮಾಡಲು ರೆಫರಿಗಳು ನಿರ್ಧರಿಸಿದರು. ಅದಕ್ಕಿಂತ ಮೊದಲು 9 ಗಂಟೆಯ ವೇಳೆಗೆ ಮಳೆ ಸಂಪೂರ್ಣ ನಿಂತಿದೆ. ಹೀಗಾಗಿ ಪಂದ್ಯ ಆರಂಭಕ್ಕೆ ಮೈದಾನದ ಸಿಬ್ಬಂದಿ ಸಜ್ಜಾಗುತ್ತಿದೆ. ಪೂರ್ಣ 20 ಓವರ್ಗಳ ತನಕ ಪಂದ್ಯವನ್ನು ಆಡಿಸಲು ಸುಮಾರು 10 ಗಂಟೆಯ ತನಕ ಸಮಯವಿದೆ. ಹೀಗಾಗಿ ಮೈದಾನ ಒಣಗಿಸುವ ಕಾರ್ಯದಲ್ಲಿ ಸಿಬ್ಬಂದಿ ನಿರತರಾಗಿದ್ದಾರೆ.
ಈ ಪಂದ್ಯದಲ್ಲಿ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಹಾಲಿ ಚಾಂಪಿಯನ್ ಗುಜರಾತ್ ಜೈಂಟ್ಸ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಕಾದಾಡಲಿವೆ. ಹಾಲಿ ಆವೃತ್ತಿಯಲ್ಲಿ ಎರಡೂ ತಂಡಗಳು ಬಲಿಷ್ಠವಾಗಿದ್ದು ಜಿದ್ದಾಜಿದ್ದಿನ ಕಾದಾಟದ ನಿರೀಕ್ಷೆಯಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಮ್ ಎನಿಸಿಕೊಂಡಿರುವ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಪಂದ್ಯ ನಡೆಯಲಿದೆ.
ಫೈನಲ್ ಪಂದ್ಯಕ್ಕೆ ಮೊದಲು ವರ್ಣರಂಜಿತ ಸಮಾರೋಪ ಸಮಾರಂಭಗಳು ನಡೆಯಲಿವೆ. ದೇಶ ವಿದೇಶದ ಹಲವಾರು ಗಣ್ಯರು ಹಾಗೂ ಜಗದ್ವಿಖ್ಯಾತ ಕಲಾವಿದರು ಸಮಾರೋಪ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾರೆ. ಈ ಕ್ಷಣದ ವೀಕ್ಷಣೆಗಾಗಿ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ಕಾತರರಾಗಿ ಕುಳಿತಿದ್ದಾರೆ.
9. 40ಕ್ಕೆ ಪಂದ್ಯ ಆರಂಭಗೊಂಡರೆ ಪೂರ್ತಿ ಪಂದ್ಯ ನಡೆಯುತ್ತದೆ. ಒಂದು ವೇಳೆ 11.56ರ ಒಳಗೆ ಆರಂಭಗೊಂಡರೆ 5 ಓವರ್ಗಳ ಪಂದ್ಯ ಮಾತ್ರ ನಡೆಯುತ್ತದೆ.
ಪಂದ್ಯ 9.34ಕ್ಕೆ ಆರಂಭಗೊಂಡರೂ, 20 ಓವರ್ಗಳ ಪಂದ್ಯವೇ ನಡೆಯಲಿದೆ. ಒಂದು ವೇಳೆ 9.35 ರಬಳಿಕ ಆರಂಭಗೊಂಡರೆ ಓವರ್ಗಳ ಸಂಖ್ಯೆ ಇಳಿಕೆಯಾಗಲಿದೆ.
ಮೊಟೆರಾದಲ್ಲಿ ಇನ್ನೂ ಕಡಿಮೆಯಾಗದ ಮಳೆ. ನಿರಂತರವಾಗಿ ಸುರಿಯತ್ತಿರುವ ಕಾರಣ ಮೈದಾನದಲ್ಲಿ ನೀರು ತುಂಬಿಕೊಂಡಿದೆ..
ಮಳೆ ಬರುವುದಕ್ಕಿಂತ ಮೊದಲು ಟಾಸ್ ಗೆದ್ದ ತಂದ ಮೊದಲು ಬ್ಯಾಟ್ ಮಾಡಬಹುದು ಎಂದು ಅಂದಾಜಿಸಲಾಗಿತ್ತು. ಬದಲಾದ ಪರಿಸ್ಥಿತಿಯಲ್ಲಿ ಬೌಲಿಂಗ್ ಆಯ್ಕೆ ಮಾಡುವ ಸಾಧ್ಯತೆಗಳಿವೆ ಎನ್ನುತ್ತಾರೆ ಕ್ರಿಕೆಟ್ ಪಂಡಿತರು.
ಅಹಮದಾಬಾದ್ನಲ್ಲಿ ಮಳೆ ಬರಬಹುದು ಎಂದು ಹವಾಮಾನ ವರದಿಗಳು ಹೇಳಿದ್ದವು. ಅಂತೆಯೇ ಪಂದ್ಯ ಆರಂಭಕ್ಕೆ ಇನ್ನೇನು ಒಂದು ಗಂಟೆ ಬಾಕಿ ಇದೆ ಎನ್ನುವಷ್ಟರಲ್ಲಿ ಮಳೆ ಶುರುವಾಯಿತು. ಹೀಗಾಗಿ ಸಮಾರೋಪದ ಸಮಾರಂಭ ಸೇರಿದಂತೆ ಎಲ್ಲ ಚಟುವಟಿಕೆಗಳಿಗೆ ಅಡಚಣೆ ಉಂಟಾಯಿತು. ಸ್ಟೇಡಿಯಮ್ನ ಪಿಚ್ಗೆ ಟಾರ್ಪಾಲ್ ಹಾಕಿ ಮುಚ್ಚಲಾಗಿದೆ.