Site icon Vistara News

CSK vs GT IPL 2023 Final Live Score : ಸತತವಾಗಿ ಸುರಿದ ಮಳೆ, ಪಂದ್ಯ ಸೋಮವಾರಕ್ಕೆ ಮುಂದೂಡಿಕೆ

IPL 2023 Final Dhoni, Hardik pandya

#image_title

ಅಹಮದಾಬಾದ್​: ಐಪಿಎಲ್​ 16ನೇ ಆವೃತ್ತಿಯ ಫೈನಲ್​ ಪಂದ್ಯದ ಆರಂಭಕ್ಕೆ ಕೆಲವೇ ಕ್ಷಣಗಳು ಬಾಕಿ ಇರುವಂತೆಯೇ ಅಹಮದಾಬಾದ್​​ನಲ್ಲಿ ಜೋರು ಮಳೆಯಾಗಿತ್ತು. ರಾತ್ರಿ 11 ಗಂಟೆಯ ತನಕವೂ ಗುಡುಗು ಸಹಿತ ಮಳೆ ಸುರಿದ ಕಾರಣ ಪಂದ್ಯವನ್ನು ಮುಂದೂಡಿಕೆ ಮಾಡಲು ರೆಫರಿಗಳು ನಿರ್ಧರಿಸಿದರು. ಅದಕ್ಕಿಂತ ಮೊದಲು 9 ಗಂಟೆಯ ವೇಳೆಗೆ ಮಳೆ ಸಂಪೂರ್ಣ ನಿಂತಿದೆ. ಹೀಗಾಗಿ ಪಂದ್ಯ ಆರಂಭಕ್ಕೆ ಮೈದಾನದ ಸಿಬ್ಬಂದಿ ಸಜ್ಜಾಗುತ್ತಿದೆ. ಪೂರ್ಣ 20 ಓವರ್​​ಗಳ ತನಕ ಪಂದ್ಯವನ್ನು ಆಡಿಸಲು ಸುಮಾರು 10 ಗಂಟೆಯ ತನಕ ಸಮಯವಿದೆ. ಹೀಗಾಗಿ ಮೈದಾನ ಒಣಗಿಸುವ ಕಾರ್ಯದಲ್ಲಿ ಸಿಬ್ಬಂದಿ ನಿರತರಾಗಿದ್ದಾರೆ.

ಈ ಪಂದ್ಯದಲ್ಲಿ ನಾಲ್ಕು ಬಾರಿಯ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ಹಾಲಿ ಚಾಂಪಿಯನ್​ ಗುಜರಾತ್​ ಜೈಂಟ್ಸ್​ ತಂಡ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಕಾದಾಡಲಿವೆ. ಹಾಲಿ ಆವೃತ್ತಿಯಲ್ಲಿ ಎರಡೂ ತಂಡಗಳು ಬಲಿಷ್ಠವಾಗಿದ್ದು ಜಿದ್ದಾಜಿದ್ದಿನ ಕಾದಾಟದ ನಿರೀಕ್ಷೆಯಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಮ್​ ಎನಿಸಿಕೊಂಡಿರುವ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಪಂದ್ಯ ನಡೆಯಲಿದೆ.

ಫೈನಲ್ ಪಂದ್ಯಕ್ಕೆ ಮೊದಲು ವರ್ಣರಂಜಿತ ಸಮಾರೋಪ ಸಮಾರಂಭಗಳು ನಡೆಯಲಿವೆ. ದೇಶ ವಿದೇಶದ ಹಲವಾರು ಗಣ್ಯರು ಹಾಗೂ ಜಗದ್ವಿಖ್ಯಾತ ಕಲಾವಿದರು ಸಮಾರೋಪ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾರೆ. ಈ ಕ್ಷಣದ ವೀಕ್ಷಣೆಗಾಗಿ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ಕಾತರರಾಗಿ ಕುಳಿತಿದ್ದಾರೆ.

Sukhesha Padibagilu

ಮಹೇಂದ್ರ ಸಿಂಗ್​ ಧೋನಿಗೆ ಇದು ಐಪಿಎಲ್​ನಲ್ಲಿ 250ನೇ ಪಂದ್ಯ. ಈ ಮೈಲುಗಲ್ಲು ದಾಟುತ್ತಿರುವ ಹಿರಿಯ ಆಟಗಾರನಿಗೆ ಅಭಿಮಾನಿಗಳು ಸೇರಿದಂತೆ ಕ್ರಿಕೆಟ್​​ ಕ್ಷೇತ್ರದ ದಿಗ್ಗಜರೆಲ್ಲರೂ ಶುಭಾಶಯ ಕೋರುತ್ತಿದ್ದಾರೆ.

Sukhesha Padibagilu

41 ವರ್ಷದ ಮಹೇಂದ್ರ ಸಿಂಗ್​ ಧೋನಿಗೆ ಇದು ಐಪಿಎಲ್​ನ ಕೊನೇ ಆವೃತ್ತಿ ಎಂದು ಹೇಳಲಾಗುತ್ತಿರುವ ಕಾರಣ ಅಭಿಮಾನಿಗಳ ಕೌತುಕ ಹೆಚ್ಚಾಗಿದೆ. ತಮ್ಮ ನೆಚ್ಚಿನ ಆಟಗಾರನಿಗೆ ಟ್ರೋಫಿ ಸಿಗಲಿ ಎಂದು ಅವರೆಲ್ಲರೂ ಹಾರೈಸುತ್ತಿದ್ದಾರೆ.

Sukhesha Padibagilu

ಗುಜರಾತ್​ನಲ್ಲಿ ಪಂದ್ಯ ನಡೆಯುತ್ತಿರುವ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಅಭಿಮಾನಿಗಳೇ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಹೆಚ್ಚಾಗಿದ್ದಾರೆ. ಹಳದಿ ಬಣ್ಣದ ಜೆರ್ಸಿ ಧರಿಸಿಕೊಂಡಿರುವ ಅವರು ಧೋನಿ, ಧೋನಿ ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ.

Sukhesha Padibagilu

ಕಳೆದ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೊನೆಯಿಂದ ಎರಡನೇ ಸ್ಥಾನ ಪಡೆದಿತ್ತು, ಆದರೆ ಹಾಲಿ ಆವೃತ್ತಿಯ ಫೈನಲ್​ ಸ್ಥಾನವನ್ನು ಖಾತರಿಪಡಿಸಿಕೊಂಡ ಮೊದಲ ತಂಡ ಎನಿಸಿಕೊಂಡಿತು. ಪರಸ್ಪರ ನಂಬಿಕೆ ಇಡುವ ಮತ್ತು ಕ್ರಿಕೆಟ್​ ತಂತ್ರದೊಂದಿಗೆ ಈ ತಂಡ ಪ್ರತಿ ಬಾರಿಯೂ ಬಲಿಷ್ಠ ತಂಡ ಎನಿಸಿಕೊಳ್ಳುತ್ತಿದೆ.

Sukhesha Padibagilu

ಗುಜರಾತ್ ಜೈಂಟ್ಸ್​ ತಂಡ ಈ ಸ್ಟೇಡಿಯಮ್​ನಲ್ಲಿ ಹಾಲಿ ಆವೃತ್ತಿಯಲ್ಲಿ ಒಂಬತ್ತು ಪಂದ್ಯಗಳನ್ನು ಆಡಿದ್ದು ಆರರಲ್ಲಿ ಗೆದ್ದಿದೆ. ಹೀಗಾಗಿ ಗುಜರಾತ್​ ತಂಡಕ್ಕೆ ಹೆಚ್ಚಿನ ಅನುಕೂಲವಿದೆ.

Exit mobile version